ನಡೆದುಬಿಡಲಿ ಯುದ್ಧ ನನ್ನ ನಿನ್ನ ನಡುವೆ
ಸೋತು ಮಣ್ಣಾಗುವೆ
ಯಾ ಗೆದ್ದು ನಾ ಬೀಗುವೆ
ಸಾಕು ನಿನ್ನ ಹೆಸರಿನಲ್ಲಿ ಅಂಜಿ ದೂಡುವ ದಿನಗಳು
ನಿತ್ಯ sanitization ಗೋಳು
ಸಾಲದೆಂಬಂತೆ ಸಹಕರಿಸದ ಪತ್ನಿಯಳಲು
ಮೈಮೇಲೆ ಹೇರಿಕೊಳ್ಳುವ PPE ಬೆವರು
ಚರ್ಮರೋಗಗಳ ಸಂಭವೀಯ ಭೀತಿ
ಸಾಕು ಮಾಡು ನಿನ್ನ ಭಯದ ಜೀವನ
ಬಾ ಒಮ್ಮೆ ಅಪ್ಪಿಬಿಡು