ಭಾನುವಾರ, ನವೆಂಬರ್ 22, 2009

ಸ್ನೇಹೋಪಾಸನೆ



ಗೆಳೆಯನ ಅಂಗಳದಲಿ
ನಲಿಯುತಿಹ ಲತೆನೋಡಿ
ಸರಿದಿಹುದು ಕವಿದಿದ್ದ ಮೋಡ
ಅಂಗಳದಿ ಹರಡಿ ಬರಕೇ
ಬರ ಎಳೆದಿಹನು ನೋಡ

ಮದ್ದಿಗೇಮದ್ದಿಡುತ
ಜಡತೆಯನು ಝಾಡಿಸುತ
ಜೊತೆಗೆ : ಪ್ರೀತಿಯಾ ಮುಚ್ಚಳಿಕೆ,

ಮಂಗಳವಾರ, ನವೆಂಬರ್ 10, 2009

ನೆಮ್ಮದಿ

ನಿನ್ನ ಹುಡುಕಿದೆ
ನಿನ್ನ ಹುಡುಕಿದೆ.... ಪ್ರಿಯಾ
ಹುದುಗಿದ ನೆನಪಿನೊಳಗೆ
ಜೀವನದ ಪುಟದಲಿ,
ಕಳೆದ ಸಮಯದಲಿ,
ನಿಸ್ತಂತು ಪಿಸುಮಾತಲಿ,
ಖಾಲಿ ವಿಸ್ಕಿ ಸೀಸೆಯಲಿ,
ಕಳೆದ ಸಿಗರೇಟು ಧೂಮದಲಿ,
ನೆನಪಿನಲಿಇರಿದು
 ಕೊಯ್ವ ನಿನ್ನ ಸೆಲೆ
ನನ್ನಬದುಕನ್ನೇ
ಅಂತರ್ಮುಖಿಯಾಗಿಸುತ್ತಿರುವುದ
ನಾನೇಕೆ ತಿಳಿಯಲಿಲ್ಲವೇ
ಧಂದ್ವಗಳ ಗೂಡಾಗಿಸಿ
 ನೀಹೋದುದಾರು ಎಲ್ಲಿಗೆ
ಅರುಹೆ ಗೆಳತಿ?

ಸೋಮವಾರ, ಸೆಪ್ಟೆಂಬರ್ 14, 2009

ನೆನಪು

ಮತ್ತೆ ಮತ್ತೆ ನಿನದೆ ನೆನಪು
ಕೊರೆವ ಕೊರಗು ತಲೆಯೊಳಿಹುದು
ಮಮತೆಗಂಜಿ ದೂರ ಸರಿದೆ,
ನಾನು ಇಲ್ಲಿ ಹಲುಬುತಿಹೆನು
ಬೇರೆಪಾಡು ಇಲ್ಲ ನೋಡು
ಎಲ್ಲ ನಿನ್ನ ನೆನಪು ನೋವು
ಆದರೂ ಕಾಯುತಿಹೆನು
...ದನಿಗೆ ಸಿಗದ ಉತ್ತರ

ಮಂಗಳವಾರ, ಸೆಪ್ಟೆಂಬರ್ 8, 2009

ಚುಟುಕ

ಕಳೆದು ಕೊಂಡದ್ದು
ಕಳೆದು ಕೊಳ್ಳುತ್ತಿರುವುದು
ಕಳೆದು ಕೊಳ್ಳಬೇಕಿರುವುದು
ಕಳೆಯಂತೆ ಕಳೆಯಿಂದ
ಕಳಕಳಿಸುತ್ತಿದೆ

ಗುರುವಾರ, ಸೆಪ್ಟೆಂಬರ್ 3, 2009

ವರ್ತುಲ

ವರ್ತುಲಗಳ ನೋಡುತ
ಅದ ಸುತ್ತಿಕೊಂಡು ಸುಖಿಸುತ್ತ
ವರ್ತುಲಗಳ ಗಾಳಿಯಲಿ ಹಾರಿಸುತ
ಇದುವೇ ಜೀವ , ಇದೆ ಜೀವನ
ಎಂಬ ವ್ರತ್ತದ ವ್ರತಮಾಡಿದರೆ
ವ್ರತ್ತದಾಚೆ ಎಂದುಬರುವೆ?
ಬರುವ ತವಕ ಯಾರಿಗಿಲ್ಲ
ಹೊರಗೆ ಎಲ್ಲ ಸಿಗುವುದಿಲ್ಲ
ಉಸಿರು ಕಟ್ಟುವುದೆನಗೆ ಇಲ್ಲಿ
ತೋರು ಬೆರಳು ಹಿಡಿದು ಬಾರ
ನಿನಗೆ ಜಗ ತೋರುವೆ
ಮುದುಡಿ ಅಂಜಿ ದೂರ ಸರಿದು
ಅಂತರ್ಮುಖಿಯೀಕಾಗುವೆ?
ಜೊತೆಗೆ ಇರುವೆ ಅಷ್ಟೆ ಸಾಕು
ಕವಚ ನೀನೆ ಒಡೆಯಬೇಕು
ಅದರ ಒಡೆಯನಲ್ಲ ನಾನು
ಅದು ನಿನ್ನ ಕವಚವೋ

ಸೋಮವಾರ, ಆಗಸ್ಟ್ 24, 2009

ಜಲ ಸಮಾಧಿ

ಪ್ರೀತಿಸುವೆ ನಿನ್ನ ಎಂದರೂ
ನಂಬದೆ ಮುಸಿನಗುವೆ ನೀನು
ಹಾಡುತಲೇ ನನ್ನ ತೇಲಿಸಿಬಿಡುವೆ
ಬಿದುವಿಲ್ಲದಾ ನಿಸ್ತಂತು ಮಾತು
ಹೇಳಿದ್ದೆಷ್ಟೋ ಕೇಳಿದ್ದೆಷ್ಟೋ!
ಅಂತೂ ಇಂತೂ 
ಜಲಸಮಾಧಿಯಾಯಿತು 
ಕಣ್ಣೀರಲೇ ನನ್ನ ಪ್ರೇಮ

ಬುಧವಾರ, ಜುಲೈ 22, 2009

ಜಲಜ ನೀನೆಲ್ಲಿರುವೆ
ನಾ ಭಾಗೀರಥನಲ್ಲ ನಿನ್ನ ಕರೆತರಲು,
ಆಟಿಗೆ ತಿಳಿದಿತ್ತು ನಿನ್ನ ವಿಳಾಸ
ನಾ ಪಡೆದೇ ಇಲ್ಲ ನಿನ್ನ ವಿಳಾಸ
ಎಂದು ಬಂದು ನೊಂದ ನನಗೆ
ಮುಕ್ತಿ ಹಾರವಾಕುವೆ?
ಇದು ಮರೀಚಿಕೆಯೇ...ಮುಚ್ಚಳಿಕೆಯೇ...
....ಬ್ರಹ್ಮನೇ ಬಲ್ಲ
ನಲ್ಲೆಯಿಲ್ಲ ಲಳನೆಯರಿಲ್ಲವೇ ಇಲ್ಲ
ನಲ್ಮೆಯ ಮಾತುಗಳಿಲ್ಲ
ಆಗುತಿಹುದೇ
ಆಗುತಿಹುದೆ ಪುನಾಪಿ ಜನನಂ
ಪುನರಪಿ ಮರಣಂ...
-ದೀಪಕ್

ಹೆಣದ ಮಾತು

ಆಹಾ ನಾನು ನನ್ನ ಹೆಣ ನನಗೀಗ ಬಹಳ ಸಂತೋಷವಾಗುತ್ತಿದೆ.ನಾನು........
---------
ಇಂದಿಗೆ ನಾನು ಸತ್ತು ಮೂರು ದಿನಗಳಾದವು. ನಾನು ಜೀವನದಲಿ ಜಿಗುಪ್ಸೆಗೊಂದು ಆತ್ಮಹತ್ಯೆ ಮಾಡಿಕೊಂಡೆ. ತುಂಬ ಆತ್ಮೀಯರಾದ ತಂದೆ ತಾಯಂದಿರಿಗೆ ಕೆಲವು ಗೆಳೆಯರಿಗೆ ವಿದ್ಯಾರ್ಥಿಗಳಿಗೆ ಬೇಸರವಾಗಿದೆ. ಉಳಿದವರು ಹೇಡಿ ಎಂದು ಕರೆಯುತ್ತಿದ್ದಾರೆ. ನನ್ನ ಜೆವಿತಾವಧಿಯಲ್ಲಿ ಬೇಸರವಾಗಿ ನಾನು ನಿದ್ರೆಮಾತ್ರೆಗಳ ವಶನದೆ. ವೈದ್ಯ ನಾನು ಸತ್ತಿರುವೆ ಎಂದು ಘೋಷಿಸಿದ. " ೨೩ ವರ್ಷದ ಯುವಕ ಏಕೆ ಸತ್ತ? ಏನಾದರು ಪ್ರೇಮ ಪ್ರಕರನದಲಿ ಸಿಲುಕಿದ್ದನೋ?" ಎಂದು ಕೇಳಿ ನಂತರ ಹೊರ ನಡೆದ. ಇಂತಹ ಸಾವು ಗಳನ್ನು ಬಹಳ ಕಂಡಿದ್ದ.
ನನ್ನ ಸಾವಿನ ನಂತರ ನನ್ನ ಒಳ್ಳೆಯ ಹಾಗು ಕೆಟ್ಟ ಗುಣಗುಣಗಳು ಹೊರಬರಲಾರಂಭಿಸಿದವು. ನನ್ನ ವಿದ್ಯಾರ್ಥಿಗಳು " ನಮಗೆ ಎಷ್ಟು ತರಗತಿಗಳನ್ನು ತೆಗೆದುಕೊಂಡರು ಕೇವಲ ೩೦ ದಿನಗಳಲ್ಲಿ ಇಡೀ ಪುಸ್ತಕವನ್ನೇ ತೆಗೆದುನಮ್ಮ ಮುಂದಿಟ್ಟಿದ್ದರು ಇಂಥ ಪ್ರತಿಭಾವಂತ ಆತ್ಮಹತ್ಯೆಯನ್ನೇಕೆ ಮಾಡಿಕೊಂಡ? ಅದು ಹೆದಿತನವೆಂದು ತಿಳಿದಿರಲಿಲ್ಲವೇ ಈತನಿಗೆ?" ಎಂದರು. ಇನ್ನೂ ಕೆಲವು ವಿದ್ಯಾರ್ಥಿಗಳು ನಾನು ತರಗತಿಯಲ್ಲಿ ಮಾಡಿದ ಗೇಲಿಗಳನ್ನು ಮೆಲುಕುಹಾಕಿದರು. ಕೆಲವು ವಿದ್ಯಾರ್ಥಿಗಳು ಉದ್ಗರಿಸಿದರು " ನಾವು ಪರೀಕ್ಷೆ ಮುಂದೂಡಿ" ಎಂದು ಘೆರಾವು ಮಾಡಿದಾಗ ಎಷ್ಟು ಅಚಲ ಹಾಗು ನಿಷ್ಟುರತೆಯಿಂದ "ಆಗುವುದಿಲ್ಲ " ಎಂದಿದ್ದರು. ಅಂಥ ಗಟ್ಟಿನಿರ್ಧಾರದ ವ್ಯಕ್ತಿ ಜೀವನಕ್ಕೆ ಅಂಜುತ್ತಾನೆ ಎಂದೆನೆಸಿರಲಿಲ್ಲ ಎಂದು ಎಲ್ಲ ವಿದ್ಯಾರ್ಥಿಗಳು ನನ್ನಬಗ್ಗೆ ಸಹಾನುಭೂತಿತೋರಿಸುವವರೇ!
ಇತ್ತ ನನ್ನಸಹಪಾಟಿಗಳು ಮನುಷ್ಯ ಒಳ್ಳೆಯವನಿದ್ದ ಮಾರಾಯ, ಅವನಲ್ಲಿದ್ದ ಋಣಾ೦ಶ ಎಂದರೆ ಮುಂಗೋಪ, ಸ್ವಲ್ಪ ಕುಡಿತದ ಚಟವಿತ್ತು ಅದು ಅವರವ ಸ್ವಂತ ವಿಷಯ ಅದರ ಬಗ್ಗೆ ನಾವು ಮಾತಾಡಬಾರದು. ಎಲ್ಲರಿಗೂ ಬಹಳ ಸಹಾಯ ಮಾಡುತ್ತಿದ್ದ ಆದರು ಅವನಿಗೆ ಬೇಕಾದಾಗ ಯಾರು ಸಹಾಯ ಮಾಡಲಿಲ್ಲ :ಅದನ್ನು ನಮ್ಮೆದುರು ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದ ಮಾರಾಯ ಅವನು ಹೋದಬಾರಿ ಅದೆಷ್ಟು ತರಗತಿಗಳನ್ನು ತೆಗೆದುಕೊಂಡಿದ್ದು ಬೇರೆಯವರು ಅಷ್ಟು ಮಾಡಿಲ್ಲ, ಕೆಲವುಸಲ ಬಹಳ ತಲೆ ತಿನ್ನುತ್ತಿದ ಅವನು ತಿಳಿದಿಲ್ಲಅನ್ನುವ ವಿಷಯಗಳೇ ಇರಲಿಲ್ಲ. ಹುಚ್ಚ ಸುಮ್ಮನೆ ತನ್ನ ಜೀವವನ್ನು ತೆಗೆದುಕೊಂಡ ತಿಳುವಳಿಕೆ ಇಲ್ಲ ಎಂದು ಹೇಳುತ್ತಿದ್ದಾರೆ.
ನನ್ನ ತಂದೆ ತಾಯಂದಿರು ದುಖ್ಖಿತರಾಗಿರುವರು. ಅವರಿಗೆ ನನ್ನ ಸಾವು ಅಘಾತನೀಡಿದೆ. ಮನದಲ್ಲೆಯಚಿಸುತ್ತಿದ್ದರೆ ಅವನಿಗೆ ಬೇಕದುದೆಲ್ಲವನು ನಾವು ನೀಡಿದೆವು ಸೋತಾಗ ಹುರಿದುಂಬಿಸಿ ಕಷ್ಟಬಿದ್ದು ಓದಿಸಿದೆವು ಅವನು ನಮ್ಮನ್ನು ನಿರಾಸೆ ಗೊಳಿಸದೆ ಓದಿದ್ದ. ಅವನಲ್ಲಿ ಅಪಾರಜ್ಞ್ಯಾಪಕ ಶಕ್ತಿ ಒಮ್ಮೆಕೆಲಿದ್ದನ್ನು ಮರೆಯುತ್ತಿರಲಿಲ್ಲ ಇನ್ನೇನು ತನ್ನ ಕಾಲಮೇಲೆ ಮಗನಿಂತ ಎಂದುಕೊಲ್ಲುವಹೊತ್ತಿಗೆ ಸಾವು, ನಾವು ಅವನನ್ನು ಬೆಳೆಸುವಲ್ಲಿ ಏನಾದರು ತಪ್ಪಾಯಿತೇ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ
---------------
ವೈದ್ಯ ಪ್ರೆಮಪ್ರಕರನದಲಿ ಸಿಲುಕಿದ್ದನೆ? ಎಂದ ಅಂದರೆ ನಾನು ಪ್ರೇಮಿಸಲು ಅರ್ಹ!ನಾನು ಪ್ರೆಮಿಸಬಲ್ಲೆ
ನನ್ನ ವಿದ್ಯಾರ್ಥಿಗಳು ಕಿಲಾಡಿಗಳು ಬದುಕಿದ್ದಾಗ ಪರೀಕ್ಷೆಗಳನ್ನು ಪ್ರಕಟಿಸಿದಾಗ ನನ್ನನ್ನು ಬಯ್ದಿದ್ದೆಷ್ಟು
ನನ್ನ ಮಿತ್ರರು ಮಾತು ಮಾತಿಗೂ ತಲೆತಿನ್ನಬೇಡ ಎನ್ನುತ್ತಿದ್ದವರು ಈಗ ಅದನ್ನೇ ಎಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದ ಎನ್ನುತ್ತಾರೆ. ನನ್ನ ಜೀವಿತಾವಧಿಯಲ್ಲಿ ಮರೆಗುಲಿಎಂದ ತಂದೆತಾಯಂದಿರು ಅಪಾರ ಜ್ಞ್ಯಾಪಕ ಶಕ್ತಿ ಇತ್ತೆನ್ನುತ್ತಾರೆ.
ನನ್ನಲ್ಲಿ ಸತ್ಯವಾಗಲು ಪ್ರತಿಭೆ ಇತ್ತು ಜನ ಬಾಯಿಬಿಟ್ಟು ಹೇಳುತ್ತಿರಲಿಲ್ಲ ಸಧ್ಯ ಈಗಲಾದರೂ ಹೇಳುತ್ತಿದ್ದಾರಲ್ಲ. ಜನರೇ ಹೀಗೇನೋ ಬದುಕಿದ್ದಾಗ ಸುಮ್ಮನಿರುವುದು ಸತ್ತಾಗ ತೆಗಳುತ್ತ ಹೊಗಳುವುದು ನಾನು ಬದುಕಿದ್ದಾಗಲೇ ಹೊಗಳಿದರೆ ನಾನು ಸಾಯುತ್ತಿರಲಿಲ್ಲವೇನೋ! ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.