ಇಂದಿಗೆ ನಾನು ಸತ್ತು ಮೂರು ದಿನಗಳಾದವು. ನಾನು ಜೀವನದಲಿ ಜಿಗುಪ್ಸೆಗೊಂದು ಆತ್ಮಹತ್ಯೆ ಮಾಡಿಕೊಂಡೆ. ತುಂಬ ಆತ್ಮೀಯರಾದ ತಂದೆ ತಾಯಂದಿರಿಗೆ ಕೆಲವು ಗೆಳೆಯರಿಗೆ ವಿದ್ಯಾರ್ಥಿಗಳಿಗೆ ಬೇಸರವಾಗಿದೆ. ಉಳಿದವರು ಹೇಡಿ ಎಂದು ಕರೆಯುತ್ತಿದ್ದಾರೆ. ನನ್ನ ಜೆವಿತಾವಧಿಯಲ್ಲಿ ಬೇಸರವಾಗಿ ನಾನು ನಿದ್ರೆಮಾತ್ರೆಗಳ ವಶನದೆ. ವೈದ್ಯ ನಾನು ಸತ್ತಿರುವೆ ಎಂದು ಘೋಷಿಸಿದ. " ಈ ೨೩ ವರ್ಷದ ಯುವಕ ಏಕೆ ಸತ್ತ? ಏನಾದರು ಪ್ರೇಮ ಪ್ರಕರನದಲಿ ಸಿಲುಕಿದ್ದನೋ?" ಎಂದು ಕೇಳಿ ನಂತರ ಹೊರ ನಡೆದ. ಇಂತಹ ಸಾವು ಗಳನ್ನು ಬಹಳ ಕಂಡಿದ್ದ.
ನನ್ನ ಸಾವಿನ ನಂತರ ನನ್ನ ಒಳ್ಳೆಯ ಹಾಗು ಕೆಟ್ಟ ಗುಣಗುಣಗಳು ಹೊರಬರಲಾರಂಭಿಸಿದವು. ನನ್ನ ವಿದ್ಯಾರ್ಥಿಗಳು " ನಮಗೆ ಎಷ್ಟು ತರಗತಿಗಳನ್ನು ತೆಗೆದುಕೊಂಡರು ಕೇವಲ ೩೦ ದಿನಗಳಲ್ಲಿ ಇಡೀ ಪುಸ್ತಕವನ್ನೇ ತೆಗೆದುನಮ್ಮ ಮುಂದಿಟ್ಟಿದ್ದರು ಇಂಥ ಪ್ರತಿಭಾವಂತ ಆತ್ಮಹತ್ಯೆಯನ್ನೇಕೆ ಮಾಡಿಕೊಂಡ? ಅದು ಹೆದಿತನವೆಂದು ತಿಳಿದಿರಲಿಲ್ಲವೇ ಈತನಿಗೆ?" ಎಂದರು. ಇನ್ನೂ ಕೆಲವು ವಿದ್ಯಾರ್ಥಿಗಳು ನಾನು ತರಗತಿಯಲ್ಲಿ ಮಾಡಿದ ಗೇಲಿಗಳನ್ನು ಮೆಲುಕುಹಾಕಿದರು. ಕೆಲವು ವಿದ್ಯಾರ್ಥಿಗಳು ಉದ್ಗರಿಸಿದರು " ನಾವು ಪರೀಕ್ಷೆ ಮುಂದೂಡಿ" ಎಂದು ಘೆರಾವು ಮಾಡಿದಾಗ ಎಷ್ಟು ಅಚಲ ಹಾಗು ನಿಷ್ಟುರತೆಯಿಂದ "ಆಗುವುದಿಲ್ಲ " ಎಂದಿದ್ದರು. ಅಂಥ ಗಟ್ಟಿನಿರ್ಧಾರದ ವ್ಯಕ್ತಿ ಜೀವನಕ್ಕೆ ಅಂಜುತ್ತಾನೆ ಎಂದೆನೆಸಿರಲಿಲ್ಲ ಎಂದು ಎಲ್ಲ ವಿದ್ಯಾರ್ಥಿಗಳು ನನ್ನಬಗ್ಗೆ ಸಹಾನುಭೂತಿತೋರಿಸುವವರೇ!
ಇತ್ತ ನನ್ನಸಹಪಾಟಿಗಳು ಮನುಷ್ಯ ಒಳ್ಳೆಯವನಿದ್ದ ಮಾರಾಯ, ಅವನಲ್ಲಿದ್ದ ಋಣಾ೦ಶ ಎಂದರೆ ಮುಂಗೋಪ, ಸ್ವಲ್ಪ ಕುಡಿತದ ಚಟವಿತ್ತು ಅದು ಅವರವ ಸ್ವಂತ ವಿಷಯ ಅದರ ಬಗ್ಗೆ ನಾವು ಮಾತಾಡಬಾರದು. ಎಲ್ಲರಿಗೂ ಬಹಳ ಸಹಾಯ ಮಾಡುತ್ತಿದ್ದ ಆದರು ಅವನಿಗೆ ಬೇಕಾದಾಗ ಯಾರು ಸಹಾಯ ಮಾಡಲಿಲ್ಲ :ಅದನ್ನು ನಮ್ಮೆದುರು ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತಿದ್ದ ಮಾರಾಯ ಅವನು ಹೋದಬಾರಿ ಅದೆಷ್ಟು ತರಗತಿಗಳನ್ನು ತೆಗೆದುಕೊಂಡಿದ್ದು ಬೇರೆಯವರು ಅಷ್ಟು ಮಾಡಿಲ್ಲ, ಕೆಲವುಸಲ ಬಹಳ ತಲೆ ತಿನ್ನುತ್ತಿದ ಅವನು ತಿಳಿದಿಲ್ಲಅನ್ನುವ ವಿಷಯಗಳೇ ಇರಲಿಲ್ಲ. ಹುಚ್ಚ ಸುಮ್ಮನೆ ತನ್ನ ಜೀವವನ್ನು ತೆಗೆದುಕೊಂಡ ತಿಳುವಳಿಕೆ ಇಲ್ಲ ಎಂದು ಹೇಳುತ್ತಿದ್ದಾರೆ.
ನನ್ನ ತಂದೆ ತಾಯಂದಿರು ದುಖ್ಖಿತರಾಗಿರುವರು. ಅವರಿಗೆ ನನ್ನ ಸಾವು ಅಘಾತನೀಡಿದೆ. ಮನದಲ್ಲೆಯಚಿಸುತ್ತಿದ್ದರೆ ಅವನಿಗೆ ಬೇಕದುದೆಲ್ಲವನು ನಾವು ನೀಡಿದೆವು ಸೋತಾಗ ಹುರಿದುಂಬಿಸಿ ಕಷ್ಟಬಿದ್ದು ಓದಿಸಿದೆವು ಅವನು ನಮ್ಮನ್ನು ನಿರಾಸೆ ಗೊಳಿಸದೆ ಓದಿದ್ದ. ಅವನಲ್ಲಿ ಅಪಾರಜ್ಞ್ಯಾಪಕ ಶಕ್ತಿ ಒಮ್ಮೆಕೆಲಿದ್ದನ್ನು ಮರೆಯುತ್ತಿರಲಿಲ್ಲ ಇನ್ನೇನು ತನ್ನ ಕಾಲಮೇಲೆ ಮಗನಿಂತ ಎಂದುಕೊಲ್ಲುವಹೊತ್ತಿಗೆ ಸಾವು, ನಾವು ಅವನನ್ನು ಬೆಳೆಸುವಲ್ಲಿ ಏನಾದರು ತಪ್ಪಾಯಿತೇ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ
ವೈದ್ಯ ಪ್ರೆಮಪ್ರಕರನದಲಿ ಸಿಲುಕಿದ್ದನೆ? ಎಂದ ಅಂದರೆ ನಾನು ಪ್ರೇಮಿಸಲು ಅರ್ಹ!ನಾನು ಪ್ರೆಮಿಸಬಲ್ಲೆ
ನನ್ನ ವಿದ್ಯಾರ್ಥಿಗಳು ಕಿಲಾಡಿಗಳು ಬದುಕಿದ್ದಾಗ ಪರೀಕ್ಷೆಗಳನ್ನು ಪ್ರಕಟಿಸಿದಾಗ ನನ್ನನ್ನು ಬಯ್ದಿದ್ದೆಷ್ಟು
ನನ್ನ ಮಿತ್ರರು ಮಾತು ಮಾತಿಗೂ ತಲೆತಿನ್ನಬೇಡ ಎನ್ನುತ್ತಿದ್ದವರು ಈಗ ಅದನ್ನೇ ಎಷ್ಟು ವಿಚಾರಗಳನ್ನು ತಿಳಿದುಕೊಂಡಿದ್ದ ಎನ್ನುತ್ತಾರೆ. ನನ್ನ ಜೀವಿತಾವಧಿಯಲ್ಲಿ ಮರೆಗುಲಿಎಂದ ತಂದೆತಾಯಂದಿರು ಅಪಾರ ಜ್ಞ್ಯಾಪಕ ಶಕ್ತಿ ಇತ್ತೆನ್ನುತ್ತಾರೆ.
ನನ್ನಲ್ಲಿ ಸತ್ಯವಾಗಲು ಪ್ರತಿಭೆ ಇತ್ತು ಜನ ಬಾಯಿಬಿಟ್ಟು ಹೇಳುತ್ತಿರಲಿಲ್ಲ ಸಧ್ಯ ಈಗಲಾದರೂ ಹೇಳುತ್ತಿದ್ದಾರಲ್ಲ. ಜನರೇ ಹೀಗೇನೋ ಬದುಕಿದ್ದಾಗ ಸುಮ್ಮನಿರುವುದು ಸತ್ತಾಗ ತೆಗಳುತ್ತ ಹೊಗಳುವುದು ನಾನು ಬದುಕಿದ್ದಾಗಲೇ ಹೊಗಳಿದರೆ ನಾನು ಸಾಯುತ್ತಿರಲಿಲ್ಲವೇನೋ! ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ