ಶನಿವಾರ, ಜುಲೈ 30, 2016

ಕನಸು

ನಿನ್ನ ಕನಸುಗಳ
ಕಾವಲುಗಾರ
ನಾನಲ್ಲ
ಆದರ
ಆಕಾಂಕ್ಷೆ ನನಗಿಲ್ಲ
ಆದರೂ ಕಾಯುತ್ತಿದ್ದೇನೆ
ನಿದ್ರೆ
ಮುಗಿಯಲೆಂದು
ಕನಸು
ಹರಿಯಲೆಂದು
ದೀಪಕ್

ಬುಧವಾರ, ಜುಲೈ 6, 2016

ಹೀಗೇ

ಇದು ಹಿಂಗಾ ಎಂದು
ಹ್ಯಾಂಗೆ ಹೆಳೋದೇ ಗೆಳತಿ
ಚಣಚಣವು ಕಣಕಣಕೆ
ವರ್ಷಗಳಾದಿಯಾಗಿ ಬಿದ್ದಾ
ಬೆಸುಗೆ,
ಮರು ಚಣಕೇ ಅದು ಬಿರುಕಿ
ಕಿತ್ತಿದ್ದಾದರೂ ಹೇಗೆಂದು
ಮುಸುಕಾಗುಳಿದಿದೆಯೆ ಗೆಳತಿ

ಒಲವು ಪ್ರೀತಿಗಳನ್ನು
ಎತ್ತರ ಎತ್ತರಕೊಯ್ದು
ಎಲ್ಲರಿಗೂ  ಕಾಣ ಕೊಚ್ಚಿದ್ದು
ಎಂದು  ನಿಂಗ
ಹೇಗರುಹೋದೇ ಗೆಳತಿ

ಸೋಮವಾರ, ಜುಲೈ 4, 2016

ಫಿಲಾsuffer

ರಾತ್ರಿ ಚಳಿಯಲ್ಲಿ ಮಿತ್ರನೊಂದಿಗೆ ಟೀ ಕುಡಿಯಹೋಗಿದ್ದೆ. ನಶೆಯಲೊಬ್ಬ ಸವಾಲುಗಳ ಹಾಕುತ್ತಿದ್ದ,
ಅಂಗಡಿಯವನಿಂದ ಪುಕ್ಕಟೆ ಬೀಡಿ ಪಡೆಯಲು
"ಹೇಳು ಒಂದು ಒಳಹೋದರೆರಡಾಚೆ ಬರುವುವುದದೆನೆಂದು"
ಅಂಗಡಿಯವ ಪೋಲಿನಗೆನಕ್ಕ
ಹೋಗುಹೋಗೆಂದು ಬರಿಕೈಯಾಡಿಸಿದ
ಉತ್ತರನೀಡು ಯಾ ಬೀಡಿನೀಡು ಉತ್ತರಿಸುವೆ ಎಂದ
ಚಹಾ ಹೀರುತಿದ್ದ ನಾನೂ ಕಾಯುತ್ತಿದ್ದೆ ಅದೇನೆಂದು
ಕೊನೆಗೂಮಣಿದಂಗಡಿಯವ
ಒಂದು ಬೀಡಿ ನೀಡಿದ
ನಶೆಯ ಕುಡುಕ
ಕಡ್ಡಿಗೀರಿ ಹೊಗೆಯೊಂದಿಗುಗುಳಿದ
"ಹೆಣ ಭೂಮಿಯೊಳ ಹೋಗುತಲು
ಆವ್ಯಕ್ತಿಯ ಗುಣಾವಗುಣ
ಎರಡಾಚೆ ಬರುವುದೆಂದು"

(1995ಡಿಸೆಂಬರ್ ನಲ್ಲಿ ಘಟಿಸಿದ್ದು)

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.