ರಾತ್ರಿ ಚಳಿಯಲ್ಲಿ ಮಿತ್ರನೊಂದಿಗೆ ಟೀ ಕುಡಿಯಹೋಗಿದ್ದೆ. ನಶೆಯಲೊಬ್ಬ ಸವಾಲುಗಳ ಹಾಕುತ್ತಿದ್ದ,
ಅಂಗಡಿಯವನಿಂದ ಪುಕ್ಕಟೆ ಬೀಡಿ ಪಡೆಯಲು
"ಹೇಳು ಒಂದು ಒಳಹೋದರೆರಡಾಚೆ ಬರುವುವುದದೆನೆಂದು"
ಅಂಗಡಿಯವ ಪೋಲಿನಗೆನಕ್ಕ
ಹೋಗುಹೋಗೆಂದು ಬರಿಕೈಯಾಡಿಸಿದ
ಉತ್ತರನೀಡು ಯಾ ಬೀಡಿನೀಡು ಉತ್ತರಿಸುವೆ ಎಂದ
ಚಹಾ ಹೀರುತಿದ್ದ ನಾನೂ ಕಾಯುತ್ತಿದ್ದೆ ಅದೇನೆಂದು
ಕೊನೆಗೂಮಣಿದಂಗಡಿಯವ
ಒಂದು ಬೀಡಿ ನೀಡಿದ
ನಶೆಯ ಕುಡುಕ
ಕಡ್ಡಿಗೀರಿ ಹೊಗೆಯೊಂದಿಗುಗುಳಿದ
"ಹೆಣ ಭೂಮಿಯೊಳ ಹೋಗುತಲು
ಆವ್ಯಕ್ತಿಯ ಗುಣಾವಗುಣ
ಎರಡಾಚೆ ಬರುವುದೆಂದು"
(1995ಡಿಸೆಂಬರ್ ನಲ್ಲಿ ಘಟಿಸಿದ್ದು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ