ನಿರ್ದಿಷ್ಟ ಗುರಿಯಿಲ್ಲ
ಸಾಧನೆಯ ಹಠ ವಿಲ್ಲ
ಬದುಕಿಗೆ ಉದ್ದೇಶವಿಲ್ಲ
ನೀಲಿನಕ್ಷೆಗಳ ಗೊಂಚಲು
ಆದರೆ ಸಾಧನೆ ;
ಶೂನ್ಯ
ಆಸೆ ಆಕಾಂಕ್ಷೆಗಳು ನೂರಾರು
ಬದುಕಿಗೆ ದಿಕ್ಕಿಲ್ಲ ಹಲವರಿಗೆ
ದಿಕ್ಕಿಗೆ ಬದುಕಿಲ್ಲ ಕೇವಲರಿಗೆ
ತತ್ವ ಮೀಮಾಂಸೆ
ತರ್ಕ ಬದ್ಧತೆಗಳಗೂಡು
ಮಳೆಬಂದರೆ ಸೋರುವ ಮಾಡು
ಆದರೂ ನಿಲ್ಲದು ಈ ಅಸಂಬದ್ಧ ಹಾಡು
ಇದು ಒಂದು ಬದುಕಿನ ಪರಿ
ದಿಕ್ಕು ದೆಸೆ ಗುರಿ ಉದ್ದೇಶಗಳಿಲ್ಲ
ಉಂಡು ಮಲಗೇಳುವುದು
ಉಸಿರು ನಿಲ್ಲುವತನಕ
ಸಾವಿಗೆ ಮೊದಲೇ ಸಮಾಧಿಯ ಚಿಂತೆ
ಸುತ್ತಸೇರುವ ಮಂದಿಗಳ ಎಣಿಕೆ
ಬೇಡದ ಪಾಡು
ಇದು ಬದುಕಿನ ಕಾಡು
ಮಲಗಿದರೆ ನಿದ್ರೆಯ ಚಿಂತೆ
ಎದ್ದರೆ ಉಂಡುಡುವ ಚಿಂತೆ
ಉಟ್ಟ ಮೇಲೆ ಧನಕನಕದ ಚಿಂತೆ
ನಂತರ
ದಾಯಾದಿ ಹೊಂಚು
ಅದಮುರಿಯಲೊಂದು ಸಂಚು
ಅಲೆದಾಟ ಪರದಾಟ
ಉಂಡ ಹಿಡಿಯನ್ನವ ಮೀರಿ ದಕ್ಕಿದ್ದೆನಗೇನು ಇಲ್ಲ
ಆದರೂ ಅಂತಸ್ತುಗಳ
ಬಂಧಕೇನು
ಕೊರತೆಗಳಿಲ್ಲ
ಪ್ರತಿಷ್ಠೆ ಒಣ ನಿಷ್ಠೆಗಳ
ದೊಂಬರಾಟ,
ಉದ್ದೇಶ ತನಗೆ ಅಸ್ಪಷ್ಟ
ಆದರೂ ಬದುಕು ನೀಗದ ಕಷ್ಟ
ಸಂತಸವಿಲ್ಲಿ ಮರೀಚಿಕೆಯ ಸುಂದರಿ,
ಬಾಗಿಲಿಗೆ ಬಂದದ್ದು ಒಳಗೆ ಬಾರದು ಎಲ್ಲು.
ಕೈ ಬೀಸಿ ಕರೆಯುವುದು ಬಾ ಹೊರಗೆ ಅಪ್ಪು ನೀನನ್ನ ,
ನಾ ಹೇಳಿದೆ
"ಹೀಗೆ ಮಾಡಿದರೆ ಯಾರು ಒಪ್ಪರು ನಿನ್ನ"
ಜೀವ ಮುಗಿಯದಾ ದ್ರೌಪದಿ ಸೀರೆ
ಗೋಪಾಲ ಹಸ್ತ
ಅಸ್ತಮಾನದ ನಂತರ
ಎಲ್ಲ ಬೆತ್ತಲೆ ಕತ್ತಲೆ
ಜ್ಞಾನ ದೀವಿಗೆ ಹುಚ್ಚಲ್ಲೆ
ಎಲ್ಲ ಮಂಗಮಾಯ
ಉಳಿದದ್ದು ಶೂನ್ಯ
ದೊಡ್ಡ ಶೂನ್ಯ
ಸಣ್ಣ ಶೂನ್ಯ ಗ್ರಹಿಕೆಯದ್ದು
"ಶೂನ್ಯ"ಗ್ರಹಿಕೆ ಆಚೆಯದ್ದು.
Deepak
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ