ಆರಂಭಿಗರಿಗೆ ಪಕ್ಷಿಗಳ ಪರಿಚಯ ಮೊದಲ ಭಾಗ
ಈ ಸಣ್ಣ ಬರಹವು ನಿಮಗೆ ಪಕ್ಷಿಗಳು ಹಾಗೂ ಅವುಗಳ ಛಾಯಾಚಿತ್ರಣದ ಬಗ್ಗೆ ತಿಳಿಸುತ್ತದೆ,, ಇದರ ಮೂಲಕ ನಿಮ್ಮಹಕ್ಕಿಗಳಭೇಟಿ, ಬೇಟೆಯು ಉಲ್ಲಾಸದಾಯಕವಾಗುವುದು ಎಂದು ಆಶಿಸುತ್ತೇನೆ. ನಾವು ಮಾನಸಿಕವಾಗಿ ದಣಿದಿದ್ದು ಒತ್ತಡ ಹೆಚ್ಚಾಗಿದ್ದರೆ ಪಕ್ಷಿ ಪ್ರಪಂಚ ಅವುಗಳನ್ನು ನಿವಾರಿಸುತ್ತದೆ.
ಪಕ್ಷಿಗಳು ರೆಕ್ಕೆ ಪುಕ್ಕವಿದ್ದು ಮೊಟ್ಟೆ ಇಟ್ಟು ಮರಿಮಾಡುವ ಬಿಸಿರಕ್ತ ಕಶೇರುಕ ಪ್ರಾಣಿಗಳು.
ಪಕ್ಷಿಗಳ ಮುಂಗಾಲುಗಳು ರೆಕ್ಕೆಯಾಗಿ ಪರಿವರ್ತನೆ ಹೊಂದಿದ್ದುಮುಂಗಾಲಾನ ಮೂಳೆಗಳು ಟೊಳ್ಳಾಗಿದ್ದು ಹಾರಾಟದಲ್ಲಿ ಸಹಾಯ ಮಾಡುತ್ತದೆ .
ಪಕ್ಷಿಗಳು ಎಂದೊಡನೆ ಮನ ಪಠಲದಲ್ಲಿ ಹಾರುತ್ತಿರುವ ಪಕ್ಷಿಯ ಚಿತ್ರಣ ಮೂಡಿದರೂ ಎಲ್ಲಾ ಹಕ್ಕಿಗಳು ಹಾರಲಾರವು.
ನಿಕೋಬಾರ್ ದ್ವೀಪದಲ್ಲಿ ಇತ್ತೀಚೆಗೆ ಪತ್ತೆಮಾಡಿದ ಗ್ರೇಟ್ ನಿಕೋಬಾರ್ ಕ್ರೇಕ್ (2011)ನ ಮೇಲೆ ನಡೆದಿರುವ ಅಧ್ಯಯನಗಳು ದೃಢ ಪಟ್ಟರೆ ಗ್ರೇಟ್ ನಿಕೋಬಾರ್ ಕ್ರೇಕ್
ಭಾರತದ ಏಕೈಕ ಹಾರಲಾಗದ ಹಕ್ಕಿಯಾಗುವ ಸಂಭವವಿದೆ .
ಪಕ್ಷಿವೀಕ್ಷಣೆ; ಪಕ್ಷಿಪರಿವೀಕ್ಷಕರಿಗೆ ವ್ಯತಿರಿಕ್ತವಾಗಿ ಪಕ್ಷಿವೀಕ್ಷಕರುಹೆಚ್ಚೆಚ್ಚು ಹಕ್ಕಿ ಪ್ರಭೇದಗಳನ್ನು ಗುರುತಿಸಿ ತಾವು ನೋಡಿರುವ,ಹಕ್ಕಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.
ಪಕ್ಷಿ ಪರಿಛಾಯಾಚಿತ್ರಣ ; ಪಕ್ಷಿಯ ಉತ್ತಮ ಛಾಯಾಚಿತ್ರ ,ಸುತ್ತಲಿನ ವಾತಾವರಣ, ಹಕ್ಕಿ ಹಾರಾಟದಲ್ಲಿರುವಾಗಿನ ಚಿತ್ರಣ,ಗೂಡು, ಆಹಾರ ಕ್ರಮಗಳ,ಚಿತ್ರಣ ಮುಂತಾದವುಗಳು ಸೇರುತ್ತವೆ ಇದರಲ್ಲಿ.
ಹಕ್ಕಿ ಚಿತ್ರಣ; ಇದು ಹಕ್ಕಿ ವೀಕ್ಷಣೆಯಂತೆಯೇ, ಹಕ್ಕಿಗಳ ಛಾಯಾಚಿತ್ರ ಸಂಗ್ರಹ
ನಾವು ಯಾವುದಾದರೂ ಒಂದು ಕ್ರಮವನ್ನು ಅನುಸರಿಸಬೇಕೆಂಬ ನಿಯಮವಿಲ್ಲ ,ಅನುಸರಿಸಿದರೆ ಉತ್ತಮ . ನಾನು ಮೇಲೆ ಹೇಳಿದ ಎಲ್ಲಾ ಕಾರ್ಯದಲ್ಲೂ ತೊಡಗಿ ಕೊಂಡಿದ್ದೇನೆ. ನನ್ನ ಆಸಕ್ತಿ ಇರುವುದು ಹಕ್ಕಿಪರಿವೀಕ್ಷಣಾ ಛಾಯಾಚಿತ್ರಣ ದಲ್ಲಿ. ಹಕ್ಕಿಪರಿವೀಕ್ಷಣೆ ನನಗೆ ಹಕ್ಕಿಗಳ ಸ್ವಭಾವ ತಿಳಿಸುತ್ತದೆ,ಅದರ ಮೂಲಕ ನನ್ನ ಛಾಯಾಚಿತ್ರಗಳು ಉತ್ತಮವಾಗುತ್ತವೆ.
ನಮಗೆ ಪಕ್ಷಿಗಳು ಎಲ್ಲಿ ಕಾಣುತ್ತದೆ ಎನ್ನುವುದಕ್ಕಿಂತ ನಮ್ಮ ಪರಿಸರದಲ್ಲಿ ಎಲ್ಲೆಡೆಯೂ ಕಾಣಬಹುದು . ಅದೇ ಕಾರಣದಿಂದ ವನ್ಯ ಮೃಗ ಛಾಯಾಚಿತ್ರಗಳನ್ನು ತೆಗೆಯ,ಹೊರಟವರುಸುಲಭವಾಗಿ ಪಕ್ಷಿಪರಿವೀಕ್ಷಣೆ ಛಾಯಾಚಿತ್ರಣ ದಲ್ಲಿ ತೊಡಗಿ ಕೊಳ್ಳುತ್ತಾರೆ. ಪಕ್ಷಿಗಳೋ ನಮ್ಮ ಮನೆಯ ಹಿತ್ತಲಿನಿಂದ ಆರಂಭಿಸಿ ದಟ್ಟ ಕಾಡಿನಲ್ಲೂ ಕಾಣುತ್ತವೆ. ಹಕ್ಕಿಪರಿವೀಕ್ಷಣೆ ಆರಂಭಿಸಲು ನಮ್ಮ ಮನೆಯ ಹಿತ್ತಿಲೇ ಸೂಕ್ತವಾದ ಸ್ಥಳ ಎಂದು ಬಲು ಜನರ ಅನುಭವ ಹೇಳುತ್ತದೆ. ಮನೆಯ,ಹಿತ್ತಿಲಿಗೆ ಲಗ್ಗೆ ಇಡುವ ಹಕ್ಕಿಗಳನ್ನು ನೀವು ಗಮನಿಸಿದರೆ,ಅವುಗಳ ವಿಭಿನ್ನತೆ ನಿಮ್ಮ ಕುತೂಹಲವನ್ನು ಖಂಡಿತಾ ಹೆಚ್ಚಿಸುವುದು . ಇಷ್ಟು ದಿನ ಎಲ್ಲಿದ್ದವವು ಎನ್ನುವುದೂ ಮತ್ತೊಂದು,ನಾ ನೋಡಿರಲೇ ಇಲ್ಲ ಎನ್ನುವ ಸಾಮಾನ್ಯ ಉದ್ಗಾರವೂ ಬರುವುದು .
ಹಿತ್ತಿಲಲ್ಲಿ ಕಂಡುಬರುವ ಸಾಮಾನ್ಯ ಪಕ್ಷಿಗಳ ಪಟ್ಟಿ ಇಲ್ಲಿದೆ.
Jungle Myna, House Sparrow, Jungle Crow, Purple Rumped Sunbird, Pied Bushchat, White Breasted Kingfisher, Asian Koel, Common Tailorbird, Scaly Breasted Munia, Oriental Magpie Robin, White Browed Fantail Flycatcher, Red Vented Bulbul, Rose ringed parakeet, Coppersmith Barbet, Brahminy Starling, Southern Coucal, Laughing Dove, Black Drongo and Large Grey Babbler.
ಇವುಗಳನ್ನು ನನ್ನ ಆಂಟಿಯವರು ಕೇವಲ ಒಂದು ವಾರದಲ್ಲಿ ತಮ್ಮ ಮನೆಯ ಹಿತ್ತಲಿನಲ್ಲಿ ನೋಡಿರುವುದು. ಅವರ ಮನೆಯ ಸುತ್ತಲೂ ಸುಮಾರು 35ರಿಂದ 40ಪ್ರಭೇದದ ಹಕ್ಕಿಗಳಿವೆ.
ನಮ್ಮ common man ಜನಕ ಆರ್.ಕೆ. ಲಕ್ಷ್ಮಣ್ ಕಾಗೆಗಳನ್ನು ನೋಡುತ್ತಾ ಅವುಗಳ ಚಿತ್ರಣ ಮಾಡುತ್ತಿದ್ದರು.
ಒಮ್ಮೆ ಅವರು ಹೇಳಿದ್ದು
" ಸಾಮಾನ್ಯ ಕಾಗೆಯು ಒಂದು ಅಸಮಾನ್ಯ ಪಕ್ಷಿ " . ಕಾಗೆಗಳನ್ನು ನೋಡಿದರೆ ಎಲ್ಲವೂ ಒಂದೇ ಎನ್ನುವಹಾಗೆ ಕಾಣುತ್ತವೆ, ಗಮನಿಸಿದರೆ ಕೆಲವು ಕಾಗೆಗಳು ಪೂರ್ಣ ಕಪ್ಪು ಕೆಲವು ಕಾಗೆಗಳ ಕತ್ತಿನ ಭಾಗದಲ್ಲಿ ಕಂದು ಬಣ್ಣ ಇರುತ್ತದೆ. ಮೊದಲನೆಯದು ಕಾಮನ್ ಕ್ರೋ ಇನ್ನೊಂದು ಜಂಗಲ್ ಕ್ರೋ,
ಹಕ್ಕಿಗಳ ಬಗ್ಗೆ ಇನ್ನೂ ಹೆಚ್ಚಿನ ವಿಷಯವನ್ನು ಮುಂದಿನ ಭಾಗದಲ್ಲಿ ತಿಳಿಸುವೆ ,ಈಗ ಹೊರಗೆ ಹೋಗಿ ಕೆಳಗಿನ ಪಟ್ಟಿಯಲ್ಲಿರುವ ಎಷ್ಟು ಪಕ್ಷಿಗಳು ನಿಮ್ಮ ಸುತ್ತಲೂ ಇವೆ ಎಂದು ನೋಡಿ ಹಾಗೂ ನಮಗೆ ಬರೆದು ತಿಳಿಸಿ. ನಮ್ಮ ಇ ವಿವಿಳಾಸ
Ashy Prinia
Asian Koel
Black Kite
Black Drongo
Brahminy Kite
Cattle Egret
Common Myna
Common Tailorbird
Coppersmith Barbet
Coucal
House Crow
House Sparrow
Jungle Myna
Little Cormorant
Little Egret
Magpie Robin
Pond Heron
Purple Rumped Sunbird
Purple Sunbird
Red Vented Bulbul
Rock Pigeon
Rose Ringed Parakeet
Spotted Dove
White Breasted Kingfisher