ಹಾವುಗಳನ್ನು ಸಂರಕ್ಷಿಸುವುದು ಅಪಾಯಕರವೇ? ಹೌದೆಂದಾದರೆ ಅಪಾಯವನ್ನು ಹೇಗೆ ಕಡಿಮೆಮಾಡುವುದು?
ಮಾನವ ಉರಗಗಳ ಸಂಘರ್ಷವನ್ನು ಹೇಗೆ ನಿವಾರಿಸಬಹುದು?
ನನ್ನ ಅನುಭವದ ಹಿನ್ನೆಲೆಯಲ್ಲಿ ಈ ಮೇಲಿನ ಪ್ರಶ್ನೆಗಳನ್ನು , ಮುಂದಿನ ಸಾಲುಗಳಲ್ಲಿ ಉತ್ತರಿಸುವ ಪ್ರಯತ್ನ ಮಾಡಿರುವೆ. ಮಾನವ ಹಾಗೂ ಹಾವುಗಳ ಸಂಘರ್ಷ ಕೊನೆಮಾಡಲು ಯಾವಾಗಲೂ ಹಾವುಗಳ ಸ್ಥಳಾಂತರ ಮಾಡುವುದು ಪರಿಹಾರವಲ್ಲ. ಪ್ರತಿ ಸಂದರ್ಭದಲ್ಲೂ ಯಾವುದಾದರೂ ಕಾರಣದಿಂದ ಸಂರಕ್ಷಣಾಕಾರ್ಯ ಕೈಗೊಳ್ಳ ಬೇಕಾಗುತ್ತದೆ . ಸಂರಕ್ಷಣೆಗೆ ಒಂದು ನಿಯಮ , ಸಂಶೋಧನೆ,ರೀತಿ ರಿವಾಜುಗಳನ್ನು ಅನುಸರಿಸಬೇಕು .ಅದರಲ್ಲಿ ಸಂರಕ್ಷಣೆ ಹಾಗೂ ಸುರಕ್ಷಿತವಾಗಿ ಹಾವುಗಳ ಬಿಡುಗಡೆ ಮುಖ್ಯ. ಹಾವುಗಳ ಬಗ್ಗೆ ಸರಿಯಾದ ತಿಳುವಳಿಕೆ ಇದ್ದರೆ ಅವಶ್ಯಕತೆ ಇರುವಲ್ಲಿ ಮಾತ್ರ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳುತ್ತೇವೆ ಅದರಿಂದ ಅನವಶ್ಯಕ ಕಾರ್ಯಾಚರಣೆ ತಪ್ಪುತ್ತದೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ