ಹಾವುಗಳೊಂದಿಗಿನ ವ್ಯವಹಾರ ಅಪಾಯಕಾರಿಯೇ, ಹೌದೆಂದಾದರೆ ಅಪಾಯವನ್ನು ಹೇಗೆ ಕಡಿಮೆ ಮಾಡಬಹುರ್ಪ ಸಂಘರ್ಷವನ್ನು ಹೇಗೆ ತಗ್ಗಿಸಬಹುದು ?
ಮೇಲಿನ ಪ್ರಶ್ನೆಯನ್ನು ನನ್ನ ಅನುಭವದ ಮೇಲೆ ಉತ್ತರಿಸಲು ಪ್ರಯತ್ನಿಸಿದ್ದೇನೆ . ಹಾವು ಮಾನವನ ಪರಿಸರದಲ್ಲಿದೆ ಎಂದಾಕ್ಷಣ ಆ ಎಲ್ಲಾ ಹಾವುಗಳನ್ನು ಹಿಡಿದು ಕಾಡು, ಊರಾಚೆಯ ಪ್ರದೇಶದಲ್ಲಿ ಬಿಡುವುದು ಮಾನವ ಹಾವು ಸಂಘರ್ಷಕ್ಕೆ ಪ್ರತಿ ಬಾರಿಯೂ ಉತ್ತರವಲ್ಲ. ಪ್ರತಿಬಾರಿ ಮಾನವ ಕಾಡು ಪ್ರಾಣಿಗಳ ಸಂಘರ್ಷದಲ್ಲಿ ಪರಿಣಿತರ ಮಧ್ಯಪ್ರವೇಶ ಅನಿವಾರ್ಯ . ಮುಖ್ಯವಾದ ವಿಷಯ ಏನೆಂದರೆ ಪರಿಣಿತ ವ್ಯಕ್ತಿ ಯು ಸಂಶೋಧಿತ, ಪರಿಶೀಲಿತ, ಪ್ರಮಾಣಿತ ವಿಧಾನವನ್ನು ಹಾವುಗಳ ಸಂರಕ್ಷಣೆ ಹಾಗೂ ಬಿಡುಗಡೆಯ ವೇಳೆಯಲ್ಲಿ ಅನುಸರಿಸಬೇಕು. ಜನರಲ್ಲಿ ಹಾವುಗಳ ಬಗ್ಗೆ ತಿಳುವಳಿಕೆ ಇದ್ದರೆ ಸಂರಕ್ಷಣೆಕಾರ್ಯ ಬಹಳಷ್ಟು ಸಮಯದಲ್ಲಿ ಬೇಕಾಗುವುದಿಲ್ಲ. ನನ್ನ ದಿನಚರಿಯ ಅನುಭವದಲ್ಲಿ ಯಾವಾಗ ಸಂರಕ್ಷಣೆಕಾರ್ಯ ಬೇಕಾಗಬಹುದು ಹಾಗೂ ಯಾವಾಗ ಸೂಕ್ಷ್ಮವಾಗಿ ಸಂವೇದಿಸುವ ಅವಶ್ಯಕತೆ ಇದೆ ಎಂಬುದನ್ನು ಹೇಳುವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ