ಬುಧವಾರ, ಫೆಬ್ರವರಿ 27, 2019

ಯುದ್ಧ

ಯುದ್ಧ ಯಾರಿಗೆ ಬೇಕು
ಹೊಲದಲ್ಲಿ ದುಡಿವ ರೈತನಿಗೆ?
ಕೂಲಿ ಮಾಡುವ ಕಾರ್ಮಿಕನಿಗೆ?
ಮನೆಮನೆ ಅಲೆಯುವ ಮಾರಾಟಗಾರನಿಗೆ?
ಶಾಲೆಗೆ ಹೋಗುವ ಕಂದನಿಗೆ?
ಸಾಲಿನಲ್ಲಿ ಚಿಕೆತ್ಸೆಗೆ ಕಾಯ್ದಿಹ ರೋಗಿಗೆ
ಚಿಕಿತ್ಸೆ ನೀಡುವ ವೈದ್ಯನಿಗೆ?
ಕಟ್ಟಡಕೂಲಿ ಕಾರ್ಮಿಕನಿಗೆ?
ಕಾರಕೂನನಿಗೆ?
ಸೇತುವೆ ಸೇತುವೆ ಗಳ ಯೋಜನೆ ಸಿದ್ಧಪಡಿಸುವ ಇಂಜಿನಿಯರ್ ಗಳ  ಸಂಸ್ಥೆಗಳಿಗೆ?
ಗಡಿಕಾಯುವ ಯೋಧರಿಗೆ ?

ಯಾರಿಗೆ ಬೇಕು ಯುದ್ಧ
ಫುಡಾರಿಗಳನು ಹೊರತುಪಡಿಸಿ
ಧರ್ಮಾಂಧರನು ಹೊರತುಪಡಿಸಿ
ವಿವೇಚನಾರಹಿತರನ್ನು ಹೊರತುಪಡಿಸಿ ಇನ್ನಾರಿಗೆ ಬೇಕಿದೆ ಯುದ್ಧ?

ಮಂಗಳವಾರ, ಫೆಬ್ರವರಿ 26, 2019

ಆಟ ಊಟ

ಹೆಚ್ಚೇನು ಬೇಡದ ಕೂಸು
ನಾಲ್ಕು ಚಮಚೆ ಅನ್ನ
ಜೊತೆಗಾಡಲು ಸೊಳ್ಳೆ ಬ್ಯಾಟು
ಬಣ್ಣದ ಕಾಗದ
ಸಣ್ಣ ಚೆಂಡು
ಮೊನ್ನೆ ಅಮೆಝೋನ್ ನಿಂದ ಪ್ಯಾಕಲ್ಲಿ ಬಂದ ಸ್ಪಂಜಿನ ತುಣುಕು
ಆರತಿಯ ತಟ್ಟೆ
ಅಲ್ಲಲ್ಲೇ ಬಿದ್ದಿರುವ ಹಳೆ ಇನ್ವಿಟೇಶನ್ ಕಾರ್ಡು
ಸಮಾರಂಭದಲ್ಲಿ ಉಡುಗೊರೆಯಾಗಿ ಬಂದ ಟೆಡ್ಡಿ
ಹಳೆ ಪಾತ್ರೆ ,
ಆಭರಣದ ಪರ್ಸು,
Atm ಕಾರ್ಡು,
ಮಾತ್ರೆಯ ಸಣ್ಣ ಕವರ್ರು,
ಉಂಗುರದ ಡಬ್ಬ,
ಟಿವಿ ರಿಮೋಟ್,
ಊಟದ ಡಬ್ಬಿಯ ಮುಚ್ಚಳ ,
ಪ್ರತಿಯೊಂದನ್ನು
ಸರದಿಯಲ್ಲಿ ಕಣ್ಣಮುಂದೆ ಹಿಡಿದು
ಒಂದು ಗುಟುಕ ನಿನ್ನ ಗಂಟಲಲ್ಲಿ ಇಳಿಸುವಳು

ಹಸಿದರೆ ಉಂಡಾಳು ಬಿಡು  ಎನುವ ನನಗೆ
ಕೂಸಿಗದೆಲ್ಲ ತಿಳಿದೀತೆ
ಎಂದು ಗದರುತ್ತಾ
ಬರದ ಹಾಡ ಗುನುಗುತ್ತ ಕಾರ್ಡಬೋರ್ಡ್ ಡಬ್ಬದಲ್ಲಿ ಸದ್ದು ಮಾಡುತ್ತಾ
ಗಾಳಿಬೀಸುತ್ತ
ಮತ್ತೆ  ಗಮನವ ತಪ್ಪಿಸಲು ನನ್ನ ಚಾಲೀಸಿನ ಮತ್ತೊಂದು ಬತ್ತಳಿಕೆ
ಅವಳೆಂದು ಓದದ ವಾರ ಪತ್ರಿಕೆ
ಹೀಗೆ ಊಟದ ಪಯಣ
ಅದರೊಂದಿಗೆ ನಿನ್ನ ಆಟ

ಶುಕ್ರವಾರ, ಫೆಬ್ರವರಿ 22, 2019

ಗುಲಾಬಿ

ಗುಲಾಬಿ ಮಾದಕತೆಯವಳೇ
ಹೇಳಿಬಿಡು
ಎಲ್ಲಿಹುದು ನಿನ್ನ ಮುಳ್ಳುಗಳು?

ಕಳೆದ ದಿನಗಳ ನಶೆಯಲಿ
ನಿನ ನೆನೆಯುತ್ತಿದೆ ಈ ಹೃದಯ
ಹೇಳಿಬಿಡು ನಿನ್ನ ನೆನಪುಗಳ ಸರಕನೆಲ್ಲಿಳಿಸಲಿ?
ಆ ಭ್ರಮೆಯ ದಿನಗಳನು
ಈ ಹೃದಯ
ನೆನೆನೆನೆದು ಬಳಲಿದೆ
ದೀಪಕ್

ಗಾಡಿ


ನೋಡಿರಿ ಇದುವೇ ನನ್ನಯ ಗಾಡಿ
ಇದರಲ್ಲಿ ಕುಳಿತು ಹೋಗುವುದೊಂದು ಮೋಡಿ
ನನ್ನಾನಂದ ಹರಿದಿದೆ ಕೋಡಿ
ಎತ್ತಿಕೊಳ್ಳುವ ಜಂಝಾಟವಿಲ್ಲ ನೋಡಿ
ಇಹುದು ಎರಡು ಚಕ್ರಗಳ ಜೋಡಿ
ತಳ್ಳಲು ಮುಂದಕ್ಕೆ ಹೋಗುವುದು ಬಂಡಿ
ಒಳಗೆ ಕೂರಲು ನಲಿವೆನು ಆಡಿ
ಅಮ್ಮಅಪ್ಪ ಅರಿತಿಹರು ನನ್ನೆದೆಬಡಿತ ನಾಡಿ

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.