ಹೆಚ್ಚೇನು ಬೇಡದ ಕೂಸು
ನಾಲ್ಕು ಚಮಚೆ ಅನ್ನ
ಜೊತೆಗಾಡಲು ಸೊಳ್ಳೆ ಬ್ಯಾಟು
ಬಣ್ಣದ ಕಾಗದ
ಸಣ್ಣ ಚೆಂಡು
ಮೊನ್ನೆ ಅಮೆಝೋನ್ ನಿಂದ ಪ್ಯಾಕಲ್ಲಿ ಬಂದ ಸ್ಪಂಜಿನ ತುಣುಕು
ಆರತಿಯ ತಟ್ಟೆ
ಅಲ್ಲಲ್ಲೇ ಬಿದ್ದಿರುವ ಹಳೆ ಇನ್ವಿಟೇಶನ್ ಕಾರ್ಡು
ಸಮಾರಂಭದಲ್ಲಿ ಉಡುಗೊರೆಯಾಗಿ ಬಂದ ಟೆಡ್ಡಿ
ಹಳೆ ಪಾತ್ರೆ ,
ಆಭರಣದ ಪರ್ಸು,
Atm ಕಾರ್ಡು,
ಮಾತ್ರೆಯ ಸಣ್ಣ ಕವರ್ರು,
ಉಂಗುರದ ಡಬ್ಬ,
ಟಿವಿ ರಿಮೋಟ್,
ಊಟದ ಡಬ್ಬಿಯ ಮುಚ್ಚಳ ,
ಪ್ರತಿಯೊಂದನ್ನು
ಸರದಿಯಲ್ಲಿ ಕಣ್ಣಮುಂದೆ ಹಿಡಿದು
ಒಂದು ಗುಟುಕ ನಿನ್ನ ಗಂಟಲಲ್ಲಿ ಇಳಿಸುವಳು
ಹಸಿದರೆ ಉಂಡಾಳು ಬಿಡು ಎನುವ ನನಗೆ
ಕೂಸಿಗದೆಲ್ಲ ತಿಳಿದೀತೆ
ಎಂದು ಗದರುತ್ತಾ
ಬರದ ಹಾಡ ಗುನುಗುತ್ತ ಕಾರ್ಡಬೋರ್ಡ್ ಡಬ್ಬದಲ್ಲಿ ಸದ್ದು ಮಾಡುತ್ತಾ
ಗಾಳಿಬೀಸುತ್ತ
ಮತ್ತೆ ಗಮನವ ತಪ್ಪಿಸಲು ನನ್ನ ಚಾಲೀಸಿನ ಮತ್ತೊಂದು ಬತ್ತಳಿಕೆ
ಅವಳೆಂದು ಓದದ ವಾರ ಪತ್ರಿಕೆ
ಹೀಗೆ ಊಟದ ಪಯಣ
ಅದರೊಂದಿಗೆ ನಿನ್ನ ಆಟ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ