81 82 ನೆ ಇಸವಿ ಇರಬೇಕು ನಾನು ಅಣ್ಣ ಅಮ್ಮನ ಜೊತೆ ಬೆಂಗಳೂರಿಗೆ ಹೋಗಿದ್ದೆ ಸಣ್ಣ ಮನೆ ಅಡಿಗೆ ಮನೆ ಹಾಗೂ ಒಂದು ಹಾಲು ಮತ್ತು ಕೋಣ ಇತ್ತು ಪ್ರತ್ಯೇಕ ದೇವರ ಕೋಣೆ ಇರಲಿಲ್ಲ ಗೋಡೆಗೆ ನೇತು ಹಾಕಿರುವ ಪಟ್ಟಕ್ಕೆ ಗಂಧದ ಕಡ್ಡಿ ಹಚ್ಚಿ ಕೈ ಮುಗಿಯುತ್ತಿದ್ದರು ಹೀಗೆ ಒಂದು ಸಂಜೆ ಕೊನೆಯಲ್ಲಿ ದೊಡ್ಡಪ್ಪ ಅಜ್ಜಿ ಹಾಗೂ ಇನ್ನೊಂದಿಬ್ಬರು ಗಂಧದ ಕಡ್ಡಿ ಯನ್ನು ಹೆಚ್ಚು ಸಮಯ ಉರಿಯುವಂತೆ ಹೇಗೆ ಮಾಡಬಹುದು ಎಂದು ಪ್ರಚಾರ ಮಾಡು ತ್ತಿದ್ದರು ಒಬ್ಬರು ಫ್ಯಾನ್ ಗಾಳಿಗೆ ಬೇಗ ಉರಿದು ಹೋಗುತ್ತದೆ ಬಾಗಿಲು ತೆರೆದಿದ್ದಾರೆ ಗಾಳಿಗೆ ಬೇಗ ಉರಿದು ಹೋಗುತ್ತದೆ ಎಂದು ವಿಚಾರ ಮಾಡುತ್ತಿದ್ದರು ದೊಡ್ಡಪ್ಪ ಗಂಧದ ಕಡ್ಡಿ ಯನ್ನು ನೀರಿನಲ್ಲಿ ಅದ್ದಿ ನಂತರ ಉಳಿಸಿದರೆ ಹೆಚ್ಚು ಸಮಯ ಉಳಿಯುತ್ತದೆ ಎಂದು ಪ್ರತಿಪಾದಿಸಿದರು ಅಷ್ಟೇ ಅಲ್ಲ ಒಂದು ಗಂಧದ ಕಡ್ಡಿ ಯನ್ನು ನೀರಿನಲ್ಲಿ ನೆನಸಿ ಇನ್ನೊಂದನ್ನು ನೆನೆಸದೆ ಎರಡನ್ನು ಒಟ್ಟಿಗೆ ಹತ್ತಿಸಿ ನೀರಿನಲ್ಲಿ ನಂದ ಗಂಧದ ಕಡ್ಡಿ ಹೆಚ್ಚು ಸಮಯ ಉಳಿಯುತ್ತದೆ ಎನ್ನುವುದನ್ನು ನಿರೂಪಿಸಿದರು ಇಂದು ಬೆಳಗ್ಗೆ ದೇವರ ಮನೆಯಲ್ಲಿ ಗಂಧದ ಕಟ್ಟಿಗೆ ಬೆಂಕಿ ಸಾಗಿಸುವಾಗ ಹೀಗೆ ನೆನಪಾಯಿತು.
ಭಾನುವಾರ, ಏಪ್ರಿಲ್ 28, 2019
ಶುಕ್ರವಾರ, ಏಪ್ರಿಲ್ 26, 2019
ಸಮಾಧಿ
ಮಸಣದ ಸಮಾಧಿಮೇಲೆ ನಡೆಯಬೇಡವೋ ಗೆಳೆಯ
ಆಸ್ಪತ್ರೆಯಲ್ಲಿ ದಣಿದವರು
ಒಳಗೆ ಮಲಗಿದ್ದಾರೆ
***
ಪ್ರೀತಿ ಇದ್ದೂ ಕಾಣದಾಯಿತು
ಕರ್ತವ್ಯ ಪೂರೈಕೆಯಾತುರದಲ್ಲಿ
ವಾರದೊಳೆಲ್ಲವೂ ಮುಗಿದು ಬಿಟ್ಟವು
ತುರ್ತು ಘಟಕದಿಂ
ತಿಥಿಯವರೆಗೂ
ಯಾರನಾರೂ ಕಾಯರು
ಮಂಗಳವಾರ, ಏಪ್ರಿಲ್ 23, 2019
ಯಾಕಳುವೆ
ಯಾಕಳುವೆ ಹೇಳು ಮಗು
ಅಮ್ಮನಾ ಬೇಡುವೆ ನೀ
ಹೇಳಿಬಿಡು
ನಿನ್ನಪ್ಪನ ತಪ್ಪೇನು
ಅಳಬೇಡ ಸುಮ್ಮನಿರು
ಅಪ್ಪ ಮುದ್ದಾಡುವನು
ಕೇಳಿದಾಗ ನಿನ್ನಹೊರಒಯ್ವ
ಅವನ ತಲೆಮೇಲಿಹುದು
ನಿನ್ನಸಿಂಹಾಸನವು
ನೀ ತೋರಿದುದ ತರುವಲ್ಲಿ
ಅವನ ಸುಖವು
ಅವನಲ್ಲ ನಿನ್ನಮ್ಮ
ನವಮಾಸ ಹೋರದವ
ಹೇರದವ
ಹಸಿದಾಗ ನಿನಗೆ ಹಾಲುಣಿಸದವನು
ಅವನಿಗಿಲ್ಲದ ಭಾಗ್ಯ
ಆಡಿ ಹಂಗಿಸಬೇಡ
ನಕ್ಕು ತಬ್ಬಿಬಿಡು
ನಿನಗೆ ನೆಮ್ಮದಿಯ
ಉಸಿರಾಗುವನು
ತನ್ನ ತೃಪ್ತಿಯ ಭಾವ
ನಿನ್ನ ನಗುವಿನಲೇ
ಕಾಣುವನು
ಸಾಯ್ವವರೆಗೂ ಹರಸಿ
ಕಾಪಾಡುವನು-
ನೀ ನಕ್ಕರೆ ಪ್ರೀತಿಯಲಿ
ಇಲ್ಲದಿರೆ ಕರ್ತವ್ಯದಲಿ
-ನಿನ್ನಪ್ಪ
ಗುರುವಾರ, ಏಪ್ರಿಲ್ 4, 2019
ಆರಂಭ
ಕಾರಿನಲ್ಲಿ ಒಟ್ಟಿಗೆ ಕುಳಿತಿದ್ದೆವು ಸ್ನೇಹಿತ ಚಲಾಯಾಸುತ್ತಿದ್ದ. ಎಲ್ಲಿಂದ ಆಕೆಯನ್ನು ಹಿಡಿದು ತಂದನೋ ತಿಳಿಯದು, ಸಹೋದ್ಯೋಗಿಯೇ?
ಅಷ್ಟರಲ್ಲಿ ಬ್ಯಾಂಕ್ ಎದುರು ಕಾರ್ ನಿಂತು ಆಕೆ ಇಳಿದುಹೋದಳು
***
ಚುನಾವಣಾ ತಪಾಸಣೆ ನಡೆಯುತ್ತಿತ್ತು . ಪೇದೆ ಕಾರಿನ ಡಿಕ್ಕಿ ತೆಗೆಸುವಾಗ ಕೇಳಿದ ಡಾಕ್ಟ್ರಾ?
"ಹ್ಹೂಂ "
ಎಂದೊಡನೆ ತಪಾಸಣೆ ಕೊನೆಗೊಂಡಿತು !
ಬ್ಲಾಗ್ ಆರ್ಕೈವ್
ನನ್ನ ಬಗ್ಗೆ
Its blog I have created to enter my day to day search & feel like sharing the same with like minded people. I solicit a comment from all my friends.