ಯಾಕಳುವೆ ಹೇಳು ಮಗು
ಅಮ್ಮನಾ ಬೇಡುವೆ ನೀ
ಹೇಳಿಬಿಡು
ನಿನ್ನಪ್ಪನ ತಪ್ಪೇನು
ಅಳಬೇಡ ಸುಮ್ಮನಿರು
ಅಪ್ಪ ಮುದ್ದಾಡುವನು
ಕೇಳಿದಾಗ ನಿನ್ನಹೊರಒಯ್ವ
ಅವನ ತಲೆಮೇಲಿಹುದು
ನಿನ್ನಸಿಂಹಾಸನವು
ನೀ ತೋರಿದುದ ತರುವಲ್ಲಿ
ಅವನ ಸುಖವು
ಅವನಲ್ಲ ನಿನ್ನಮ್ಮ
ನವಮಾಸ ಹೋರದವ
ಹೇರದವ
ಹಸಿದಾಗ ನಿನಗೆ ಹಾಲುಣಿಸದವನು
ಅವನಿಗಿಲ್ಲದ ಭಾಗ್ಯ
ಆಡಿ ಹಂಗಿಸಬೇಡ
ನಕ್ಕು ತಬ್ಬಿಬಿಡು
ನಿನಗೆ ನೆಮ್ಮದಿಯ
ಉಸಿರಾಗುವನು
ತನ್ನ ತೃಪ್ತಿಯ ಭಾವ
ನಿನ್ನ ನಗುವಿನಲೇ
ಕಾಣುವನು
ಸಾಯ್ವವರೆಗೂ ಹರಸಿ
ಕಾಪಾಡುವನು-
ನೀ ನಕ್ಕರೆ ಪ್ರೀತಿಯಲಿ
ಇಲ್ಲದಿರೆ ಕರ್ತವ್ಯದಲಿ
-ನಿನ್ನಪ್ಪ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ