ಬಿಲಿಯಂತರ ವರ್ಷಗಳ ಹಿಂದೆ ಸಯನೊಬ್ಯಾಕ್ಟೆರಿಯ ಎಂಬ ಕೋಶ ಜೀವಿಯು ಫೋಟೋಸಿಂಥಸಿಸ್ ಮೂಲಕ ಆಮ್ಲಜನಕ ಹಾಗೂ ಇತರ ರಾಸಾಯನಿಕಗಳನ್ನು ಹೊರಸೂಸುತ್ತಿತ್ತು. ಪರಿಣಾಮ ಇತರೆ ರಾಸಾಯನಿಕದಲ್ಲಿ ಸುಣ್ಣದಕಲ್ಲು ರೂಪಿತವಾಯಿತು. ಇದರಮೇಲೆ ಬಿದ್ದ ನೀರು ಸುಣ್ಣದ ಕೆಲ ಭಾಗವನ್ನು ಕರಗಿಸಿ ಅಲ್ಲಲ್ಲೇ ಕುಳಿಗಳಾದವು. ಭೂಮಿಯ ಹೊರಪದರದ ಚಲನೆಯಿಂದ ಇವು ಸಮುದ್ರದಾಚಿನ ನೆಲದ ಮೇಲೆ ಬಂದವು. ಸಮಯ ಕಳೆದಂತೆ ಮಳೆನೀರಿಗೆ ಸುಣ್ಣ ಪ್ರತಿಕ್ರಿಯಿಸುತ್ತ ಕಾರ್ಬಾನಿಕ್ ಆಮ್ಲ ಸೂಸಿ ತನ್ನ ರೂಪವನ್ನು ನಿರಂತರವಾಗಿ ಬದಲಾಯಿಸಿಕೊಳ್ಳುತ್ತಲೇಇದೆ. ಇಂದು ಅಂಡಮಾನಿನಲ್ಲಿ ಗುಹೆಯಾಕಾರವಾಗಿ ನಿಂತಿದೆ.
ಇದನ್ನು ನೋಡಲು ನಾವು ಬೆಳಿಗ್ಗೆ 1.30 ಕ್ಕೆ ತಯಾರಿ ಆರಂಭಿಸಿದೆವು. ಪಾಪು ಹಾಗು ನಮಗೆ ಎಂದು ಬೆಳಗಿನ ತಿಂಡಿಯನ್ನು ಅಪರಾತ್ರಿಯಲ್ಲೇ ಸುಷ್ಮಾ ತಯಾರಿಸಿದಳು. 2.30 ರ ಸುಮಾರಿಗೆ ಸುಣ್ಣದಕಲ್ಲಿನ ಗುಹೆಗಳಿರುವ ಬರತಂಗ ದ್ವೀಪಕ್ಕೆ ಪೋರ್ಟ್ ಬ್ಲೇರಿನಿಂದ ಕಾರಿನಲ್ಲಿ ಹೊರಟೆವು. ರಾತ್ರಿ ನಿರ್ಜನ ಹಾದಿಯಲ್ಲಿ ಕಾರು ಕತ್ತಲನ್ನು ಸೀಳಿಕೊಂಡು ಸುಮಾರು 100ಕಿಲೋಮೀಟರ್ ಕ್ರಮಿಸಿದ ನಂತರ 4.30ರ ಸುಮಾರಿಗೆ ಕಾರು ಟ್ರಕ್ಕುಗಳು ಸಾಲಾಗಿ ನಿಂತಿದ್ದ ಚೆಕ್ ಪೋಸ್ಟ್ ತಲುಪಿದೆವು. ಗೇಟ್ 6 ಗಂಟೆಗೆ ತೆರೆಯುತ್ತಾರೆ, ಆಗ ಸಾಲಿನಲ್ಲಿ ಜರವಾ ಬುಡಕಟ್ಟಿಗೆ ಮೀಸಲಿರುವ ಕಾಡನ್ನು ದಾಟಿ ಅತ್ತ ಇರುವ ಬರತಂಗ ಸೇರಬೇಕು. ಬೆಳಿಗ್ಗೆ 6ಗಂಟೆಯಿಂದ ದಿನಕ್ಕೆ ನಾಲ್ಕು ಬಾರಿ ಮಾತ್ರ ಗೇಟನ್ನು ತೆಗೆದು ವಾಹನಗಳನ್ನು ಬಿಡುತ್ತಾರೆ. ಅಲ್ಲಿರುವ ಜರವಾ ಬುಡಕಟ್ಟು ಜನರನ್ನು ಸಂರಕ್ಷಿಸಲುಈ ಪರಿಯ ಕಟ್ಟುಪಾಡು. ಜರವಾ ಬುಡಕಟ್ಟು ಜನ ಸುಮಾರು 300 ರಷ್ಟಿರುವರು ಎಂದು ತಿಳಿಯಿತು. ನಾನಿರುವುದು ಮೈಸೂರು, ಬಂಡೀಪುರದಿಂದ ತಮಿಳುನಾಡಿಗೆ ಹಾಗೂ ಕೇರಳಕ್ಕೆ ಹೋಗುವ ರಸ್ತೆ ನನ್ನ ಜಿಲ್ಲೆಯ ಗಡಿಯಿಂದಲೇ ಹೋಗುವುದು. ಅಪಾರ ವನ್ಯ ಸಂಪತ್ತು ಹಾಗೂ ಕಾಡು ಪ್ರಾಣಿಗಳಿವೆ. ಅವನ್ನು ಕಾಪಾಡಲು ರಾತ್ರಿ ಸಮಯ ವಾಹನಗಳನ್ನು ನಿರ್ಬಂಧಿಸಿರುವುದಕ್ಕೆ ತೆರವು ಮಾಡಿಎಂದು ಅಪಾರ ಹೋರಾಟಗಳು ನಡೆಯುತ್ತಿವೆ. ಇಲ್ಲಿ 300 ಜನ ಬುದಕಟ್ಟಿನವರನ್ನು ಕಾಪಾಡಲು ಪ್ರಶಂಸನೀಯ ಕ್ರಮ ತೆಗೆದುಕೊಂಡಿದ್ದಾರೆ ಎಂದು ಸಂತೋಷವಾಟಯಿತು. ಸ್ವವಿವರಗಳಿರರುವ ಅರ್ಜಿಯನ್ನು ಗುರುತುಪತ್ರಗಳೊಂದಿಗೆ ಚೆಕ್ ಪೋಸ್ಟಿನಲ್ಲಿ ನೀಡಿದೆವು. ಕಾಡಿನೊಳಗೆ ಉಳಿದ ವಾಹಣಗಳೊಂಸಿಗೆ ನಮ್ಮ ಪ್ರಯಾಣ ಆರಂಭವಾಯಿತು. ಮುಂದುಗಡೆ ಒಬ್ಬ ವನರಕ್ಷಕ ಕೆಂಪು ಬಾವುಟದೊಂದಿಗೆ ಹೊರಟರೆ ಕೋಣೆಗೊಬ್ಬ ವನರಕ್ಷಕ ಹಸಿರು ಬಾವುಟ ದೊಂದಿಗೆ ಹೊರಡುತ್ತಾನೆ ಮಧ್ಯದಲ್ಲಿ ಪರವಾನಿಗೆ ಹೊಂದಿರುವ ಕಾರು ಬಸ್ಸು ಲಾರಿಗಳು. ಹೀಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರಯಾಣಿಸಿದ ನಂತರ ಬರತಂಗ ತಲುಪಲು ಸಮುದ್ರದ ಕೊಲ್ಲಿ ದಾಟಬೇಕು. ಬೃಹತ್ ದೋಣಿಯಲ್ಲಿ ಲಾರಿ ಬಸ್ಸುಗಳಜೊತೆಗೆ ಕೊಲ್ಲಿಯನ್ನು ದಾಟಿದೆವು. ಅಟ್ಟಲಿನ ಜಾಗವನ್ನು
ನೀಲಾಂಬರು ಎಂದು ಕರೆಯುತ್ತಾರೆ. ನೀಲಾಂಬರುವಿನಲ್ಲಿ ಒಂದು ವೇಗದ ಸಣ್ಣ ದೋಣಿಯನ್ನು ಬಾಡಿಗೆ ಪಡೆದು ನಾಯೆದರ ಎಂಬ ಸ್ಥಳಕ್ಕೆ ಹೊರಟೆವು. ಮ್ಯಾಂಗ್ರೋವ್ ಕಾಡುಗಳು ದಟ್ಟವಾಗಿ ಕಾಣುತ್ತದೆ ದೋಣಿಯಲ್ಲಿ ಹೋಗುವಾಗ. ದೋಣಿಯಲ್ಲಿ ನಮ್ಮ ಬೆಳಗಿನ ಉಪಹಾರವನ್ನು ಮುಗಿಸಿ ನಾಯೆದರ ದಲ್ಲಿ ಇಳಿದೆವು. ಅಲ್ಲಿಂದ ಸು ನದಕಲ್ಲಿನ ಗುಹೆ ತಲುಪಲು ಕಾಡಿನಲ್ಲಿ ಎರಡು ಕಿಲೋಮೀಟರ್ ನಷ್ಟು ನಡೆಯಬೇಕು. ಜನ ಸಾಗಿ ರಸ್ತೆಯ ಗುರುತು ಸಿಗುವುದು ಕಷ್ಟವಾಗಲಿಲ್ಲ. ಅಲ್ಲಲ್ಲಿ ಸಣ್ಣ ಫಲಕಗಳು ದಾರಿ ತೋರಿದವು. ನಂತರ ಕಂಡ ಸುನ್ನಡಗುಹೆಯನ್ನು ಹೇಳಲು ನನಗೆ ಪದಗಳು ಸಾಲದು. ಕ್ವುಏಳಗಿ ಆ ಚಿತ್ರಗಳು ನಿಮ್ಮನ್ನು ಒಮ್ಮೆ ಹೋಗಿ ನೋಡಲು ಪ್ರೇರೇಪಿಸುವುದು ಎಂದು ನಂಬಿರುವೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ