ಎಲ್ಲೆಡೆ ಹನನ
ಗಡಿಯಲ್ಲಿ 20 ಜನ ಸತ್ತರು
ನಾಡಲ್ಲಿ ಒಂದೆದಿನಕೆ 200
ರೋಗದ ಭೀತಿ ಯುದ್ಧದ ನೀತಿ
ಇನ್ನೊಬ್ಬರದು ಕಸಿದು ತಿನ್ನುವರೀತಿ
ಪುಟದ ತುಂಬೆಲ್ಲ ವೀರ ದೇಶಭಕ್ತರು
ಏನಾಯಿತಲ್ಲಿ ತುಂಬಿಹ ದೊನ್ನೆ ಭಕ್ತರು
ಎಡ ದೇಶಕ್ಕೆ ಶಸ್ತ್ರ ಚಿಕಿತ್ಸೆ
ಬೆರೆದೇಶಕ್ಕೆ ಎಡೆಯ ಚಿಕಿತ್ಸೆ
ಪ್ರಕ್ಷುಬ್ಧ ಮನಗಳ ಮಾರಾಮಾರಿ
ನಮ್ಮದ ಕೊಳ್ಳಿರಿ ನಿಮ್ಮದ ಬಿಸಾಡಿರಿ
ಅತಿರೇಖಗಳ ಖಿನ್ನ ಚಿತ್ರಣ
ಜಂಗಮವಾಣಿಯ ಮಾಯೆಯು ನೋಡಿ
ಬೀಸುವ ಗಾಳಿ ಸುರಿವ ಮಳೆಯೊಳು
ತೇಲುತಿದೆ ನೋಡಿ ಪ್ರೀತಿಯ ಘಮಲು
ನಾನು ನೀನೆಂಬ ಇಬ್ಬಗೆ ತೊರೆದು
ಎಲ್ಲವೂ ಸಮವೆಂಬ ಸಂದೇಶವ ಪೊರೆದು