ಕವಿತೆಯೆಂದರೆ
ಗೆಳೆಯರ ನೆನಪನ್ನು ಆಟೋಗ್ರಾಫಿನಲ್ಲಿ ಸೆರೆ ಹಿಡಿದು ನೆನೆದು
ಅದರ ಪುಟಗಳ ತಿರುವುವುದು
ಹೃದಯದಲಿ ಅವರಸಿರಾಗುವುದು
ಕವಿತೆಯೆಂದರೆ
ಮೊದಲ ಪುಟದಲ್ಲೊಂದು ಉದ್ದನೆ ಗೆರೆ
ಮೂಡುವುದು ಕಲೆಯ ನೆನಪ ಬರೆ
ಕವಿತೆಯೆಂದರೆ
ಒಲುಮೆಯ ಗೆಳೆಯರ ಹೂ ಪಕಳೆ
ಅದರಲಿನ್ನೂ ನೆನಪಾಗಿ ಅಗಲಿದವಳಕಳೆ
ಕವಿತೆಯೆಂದರೆ
ಪುಟ ಪುಟದಲ್ಲೂ ಒಲುಮೆಯ ಗೆಳತಿ
ನನಗವಳ ನೆನಪು ತುಸು ಅತಿ
ಕವಿತೆಯೆಂದರೆ
ಭೂಷಣನ ನೆನಪು
ಮನಸಿಗೆ ಇಂಪು
ಸೂಸುತಿಹುದು ನಂಬುಗೆಯ ಕಂಪು
ಕವಿತೆಯೆಂದರೆ
ಮುಂದಿಹನೆನ್ನ ತುಂಟ ಗೆಳೆಯ
ಬರೆದಿರುವನೆನ್ನ ಶ್ರಮ ಜೀವನದೆಳೆಯ
ಕವಿತೆಯೆಂದರೆ
ನೀ ವಿಚಿತ್ರ ವಾಚಾಳಿ
ಇಹುದು ತಲೆ ತಿನ್ನುವ ಚಾಳಿ
ರಸ ಶಾಸ್ತ್ರ ನಿನಗೆ ಪ್ರಿಯ
ಆದರೂ ನಿನಗಿಹುದು ಪ್ರೀತಿಸುವ ಹೃದಯ
ಕವಿತೆಯೆಂದರೆ
ತಾಳ್ಮೆ ಕಳೆದು ಕೊಳ್ಳಬೇಡ ಎನ್ನುವ ಅಪರಂಜಿ
ನೀಡುತಿಹಳು ಬರಹ ಪರಿಹಾರ ನನಗಂಜಿ
ಕವಿತೆಯೆಂದರೆ
ಬಿಡದು ಯಾರನಂಟು
ಎಲ್ಲ ಗೆಳೆಯರ ಬರಹದ ಗಂಟು
ಕವಿತೆಯೆಂದರೆ
ಪುಟ ಪುಟ ತೆರೆದಂತೆ ಉಕ್ಕುವ ಪ್ರೀತಿ
ಹಾಲು ಕಾದು ಉಕ್ಕುವ ರೀತಿ
ದೀಪಕ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ