,
ಬುದ್ಧ ಹೇಳಿದ ಆಸೆಯೇ ದುಃಖಕ್ಕೆ ಮೂಲ
ಗೆಳೆಯರು ಎಂಬ ಮೋಹ ತೊಡೆಯಲೊಲ್ಲದು, ಬಾಲಿಶತನಕೆ ಕೊನೆಯು ಎಲ್ಲಿದೆ ?
ಬಹುಶಃ ಇಲ್ಲೇ ನನ್ನವರ ನಡುವೆ; ಮೆರೆವೆನು ಅಳಿದೇನು ಎಂಬುದರಲ್ಲಿದೆ.
ಹೀಗೆ ಸ್ವಗತವಿ ಜೀವನ
ನಾನು ನನ್ನವರು ನನ್ನದು ಎಂಬ ಭ್ರಮೆಯೆರಡು ದಿನವೋ,
ಸಮಯದ ಪುಟದಲ್ಲಿ ನಾ ಚುಕ್ಕಿಯ ಒಂದು ಭಾಗವಷ್ಟೇ,
ಸಮಷ್ಟಿಯಲ್ಲಿ ಇನ್ನೆಷ್ಟು ನಾನುಗಳು ತುಂಬಿರಬಹುದು?
ಸೃಷ್ಟಿ ಅದೇನನ್ನೆಲ್ಲ ಹೊತ್ತು ನಡೆದಿರಬಹುದು..
ಸೃಷ್ಟಿಗೇ ಗೊತ್ತು
ಅದರಾಘಾದತೆ,
ಆದರೂ ನಾನು ಎಂಬ ಹಮ್ಮಿನೊಳಗೆ ಮತ್ತೆ...
ನಿಮಗ್ಯಾರಿಗೂ ನೆನಪಿಲ್ಲ, ಅದು ನಿಮ್ಮ ತಪ್ಪಲ್ಲ ನನ್ನದು
-ಡಾ.ದೀಪಕ್ ಭ