ಶುಕ್ರವಾರ, ಏಪ್ರಿಲ್ 15, 2016

ನೆನಪಿನಲ್ಲಿ

ಕೊಟ್ಟು ಸಾವಿರ ನೆನಪು
ನನ ಬಿಟ್ಟು ಹೊರಟೆ
ಎಲ್ಲಿಗೆಅವ್ವ
ಸಂತೆಯಲಿ
ನಾ ಕದ್ದ ಹಣ್ಣ
ನನಗೆ ಕೊಡಿಸಿ
ಕದಿಿಯಬೇಡ
ಎಂದು ಪಾಠ
ಕಲಿಸಿ
***
ಹೀಗೆ ತೊರೆದರೆ
ನಮ್ಮ ಪಾಡೇನು
ಬದುಕ ದಾರಿ ದುರ್ಗಮ
ಸವೆಸಲು
ನೀನಿದ್ದೆ ಸಾಥ್
ಇಲ್ಲಿವರೆಗೂ
ನೀನ್ನಿಲ್ಲದ ಬದುಕ ಬಿಕೋ

***
ಬದುಕೇ
ಹೋದಮೇಲೇಕೆ
ಮಜ್ಜನವೋ?
ಶುಚಿಬೇಕು ಆತ್ಮಕೆ
ದೆಹಕಲ್ಲ ತಾಯಿ

***
ನಿಂತಿಹರೆಲ್ಲ ಮಸಣ
ಹಾದಿಯ
ಸರದಿಯಲ್ಲಿ
ಸರದಿ ಬರುವವರೆಗೂ
ಅಲ್ಲಿಲ್ಲಿ ಅಲೆದಾಟ
***
ಅಳುವೆಯೆಕೆ
ನಿನ್ನ ಸರದಿ
ಬರುವುದೆಂದೋ
ಹುಟ್ಟಿನೊಂದಿಗೆ
ಬರುವ ಏಕೈಕ
ಪ್ಯಾಕಜಿದು ಕಂದಾ
ಬೆಡವೆನುವಂತಿಲ್ಲ

ಗೋರಿ

ಮೈ ಸುಡುವ
ಬಿಸಿಲ ನಡುವೆ
ಆಳದ ಬಂದು ತೆಗೆಸಿ
ಒಳ ಮಲಗಿಸಿ
ನಾ ಬೆವರ ಒರೆಸುತ
ತಣ್ಣೀರಲಿ ಮಿಂದು
ಪಂಕ ದ ಕೆಳಗೆ ಕುಳಿತೆ
ನೀನಲ್ಲಿ ಒಂಟಿ
ಗೋರಿಯೊಳಗೆ

ಮಂಗಳವಾರ, ಏಪ್ರಿಲ್ 12, 2016

ಅಪ್ಪ

ನಿನ್ನಯಹಂಕಾರಕೆ
ಬಗ್ಗದ ನಾನು
ನಿನ್ನ ಕಂದ
ರೊಚ್ಚಿಗೆ ಬಿದ್ದು ಅಳುವುದ
ನಾ ಕಲಿತಿದ್ದು ನಿನ್ನಿಂದ
ನಿನ್ನ ಬೇಡಗಳೆ
ನನ್ನ ಬೇಕುಗಳು
ಹೇಗೆಂಬ ಪ್ರಶ್ನೆಗೆ ಉತ್ತರ
ನಾನೂ ಹುಡುಕುತಿರುವೆ.

ನಾವಲ್ಲ ಶತ್ರು
ಆದರೂ ಪೈಪೋಟಿ
ನಾನಿನಗೆ ಮೇಲೆಂಬ
ಸೋಗು
ಒಳ ಮನಕೆ ಗೊತ್ತು
ನೀನೆ ಮೇಲು,
ನೀನಲ್ಲವೆ ನನ್ನಪ್ಪ
ಜಗದ ಜನಕೆಲ್ಲ
ಆದರ್ಶ ನೀನು
ನನಗೆ ನೀ ಕರ್ಕಶ ಭಾಸ
ಒಳಗೆ
ಮಾತೃ ವಾತ್ಸಲ್ಯ
ಹೊರಗೆ
ನಿಷ್ಕರುಣಿ
ಕಟುಕ

ಸೋಮವಾರ, ಏಪ್ರಿಲ್ 11, 2016

Vayaasu

ವಯಸ್ಸು ಸವೆಯುತ್ತ
ನಾಲಿಗೆ ಹರಿತವಾಗಿತ್ತಾ
ದೇಹ ಬಡವಾಗಿತ್ತಾ
ಸರಿ ತಪ್ಪುಗಳ ವಿಮರ್ಶೆ
ತುಫಾಕಿ ಮಾತುಗಳು
ನೂವಾದೀತವಾಗೆ
ಎಂಬ ಚಿಂತಿಲ್ಲ
ಕಾಲ ಹರಣಕೆ ದಾರಿ ತಿಳಿಯುವುದಿಲ್ಲ
ಮಾತಿರುವುದು
ಮಮತೆಗೆಂಬುದ
ಮರೆಯದಿರು ಗೆಳತಿ
ವಯಸೇನಾದರೆನು
-ದೀಪಕ್

ಭಾನುವಾರ, ಏಪ್ರಿಲ್ 10, 2016

ನೆನಪುಗಳೇ ಹಾಗೆ

ನೆನಪುಗಳೇ ಹಾಗೆ
ಚಳಿಗೆ ಹೊದ್ದು
ಮಲಗಿರುವ ಅಜ್ಜನಂತೆ
ಎದ್ದು ಬರುತ್ತವೆ
ಭಾವುಕತೆಗೆ

ಶನಿವಾರ, ಏಪ್ರಿಲ್ 2, 2016

ಬದುಕು2

ವೇಷ ಭೂಷಣ
ಇರುವವವರೆಗೆ
ಜೀವನೋತ್ಸಾಹ ದ್ರವ್ಯ
ಬದುಕು ಭವ್ಯ
ನಾ ನೋಡಿದರೆ,
ಇಲ್ಲದಿರೆ ಅದೇ ಇರುತ್ತದೆ
ಇರುವವರೆಗೆ ಅದಕೆ
ಬೇಕಿಲ್ಲ ನನ್ನ ಚಿಂತೆ

ಹುಟ್ಟು ಸಾವುಗಳು
ಯಾರಾಸೆಗೂ
ಆಸರೆಯಾಗಿ ಬಾರದು
ಆಸೆ ನಮದಷ್ಟೆ
ಜೀವ ಪ್ರಕೃತಿಯದು
ಕೊಟ್ಟು ತೆಗೆವುದದರಾಟ
ಬದುಕ ಸ್ವಾದಿಸುವುದೆಮ್ಮಾಟ

ಬದುಕು1

ಬದುಕು
ಬರಡು ಭೂಮಿಯಲ್ಲಿ
ದೊರಕಿದ ಓಯಸಿಸ್ ನಂತೆ
ಬಾಯಾರಿದವನಿಗೆ ಗೊತ್ತು
ಬಾಯಾರಿಕೆ ಏನೆಂದು
ಬೆಂದವಗೆ ಗೊತ್ತು
ನೋವೆನೆಂದು
ನೊಂದವಗೆ ಗೊತ್ತು
ಬದುಕೇನೆಂದು

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.