ನಿನ್ನಯಹಂಕಾರಕೆ
ಬಗ್ಗದ ನಾನು
ನಿನ್ನ ಕಂದ
ರೊಚ್ಚಿಗೆ ಬಿದ್ದು ಅಳುವುದ
ನಾ ಕಲಿತಿದ್ದು ನಿನ್ನಿಂದ
ನಿನ್ನ ಬೇಡಗಳೆ
ನನ್ನ ಬೇಕುಗಳು
ಹೇಗೆಂಬ ಪ್ರಶ್ನೆಗೆ ಉತ್ತರ
ನಾನೂ ಹುಡುಕುತಿರುವೆ.
ನಾವಲ್ಲ ಶತ್ರು
ಆದರೂ ಪೈಪೋಟಿ
ನಾನಿನಗೆ ಮೇಲೆಂಬ
ಸೋಗು
ಒಳ ಮನಕೆ ಗೊತ್ತು
ನೀನೆ ಮೇಲು,
ನೀನಲ್ಲವೆ ನನ್ನಪ್ಪ
ಜಗದ ಜನಕೆಲ್ಲ
ಆದರ್ಶ ನೀನು
ನನಗೆ ನೀ ಕರ್ಕಶ ಭಾಸ
ಒಳಗೆ
ಮಾತೃ ವಾತ್ಸಲ್ಯ
ಹೊರಗೆ
ನಿಷ್ಕರುಣಿ
ಕಟುಕ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ