ನಿನ್ನ ನೆನಪು ಕನವರಿಕೆಯಾಗಿ
ಭಾದಿಸುತ್ತಿದೆ ನನ್ನ,
ದರುಶನವ ನೀಡಿ
ಪಾವನನಾಗಿಸು ನನ್ನ
ನಿನ್ನ ನೆನಪು ನಿರ್ವಾತವಾಗಿ
ಉಸಿರಮುಕುತಿದೆ ನನ್ನ
ಗಾಳಿಯಾಗಿ ಉಸಿರ ನೀಡಿ
ಆಹ್ಲಾದಿಸು ನೀ
ನಿನ್ನ ನೆನಪು ನೆಪವಾಗಿ
ಬಾಧಿಸುತ್ತಿದೆ ನನ್ನ
ನೆನಪಿನಿಂದ ಮರೆಯಾಗಿ
ಬದುಕಿಸು ನೀ ನನ್ನ
***
ಹೃದಯದ ಹಾಡು
ಎನ್ನೆದೆನೋವನ್ನು ಹೆಗರುಹಲಿ
ಹೇಳೇ ಸಖಿ
ತಿರುಗಿಬಾರದು ಹೃದಯ
ನುಡಿದೈದು ಪದಗಳಲಿ
ಹೃದಯ ವೈದ್ಯನು ಬೇಡ
ಹೃದಯ ಚೋರಿಯೂ ಬೇಡ
ಉಳಿವೆ ನಾ ಪವಾಡಿಸುತ
ಪದಗಳೊಂದಿಗಾಟವಾಡುತ
ಹೃದಯ ಬಡಿದು
ನಲಿವು ಹೊತ್ತಿ
ದೆಹಕೆಲ್ಲ ಮುದವನಿಟ್ಟು.
ಅವಳ ನೆನಪು ಇವಳ ನೆನಪು
ಹೊಗೆಯ ರೂಪದಿ
ದೇಹ ಸೇರಿ..
ಹೆಪ್ಪ ರೂಪದಿ ಹೃದಯ ಕಟ್ಟಿ
ನಾಲ್ಕು ತಜ್ಞರ ತಂಡ ಕಟ್ಟಿ..
ಹೆಪ್ಪ ಚುಚ್ಚಿ ದೇಹ ಕುಕ್ಕಿ
ಉಳಿದ ಜೀವ
ನೋಯುತಿಹುದು...
ದಾರಿ ಮುಗಿವ ಭ್ರಾಂತಿ ಇಹುದು
ಮುಗಿಯುತಿಹುದೀ ಬಾಳ ಪಯಣ...😊
*ದೀಪಕ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ