ಕತ್ತಲಾದ ಕಣ್ಣಿಗೆ ಒಲವಿನದೀಪ ಹಚ್ಚುವೆಯೇಕೆ, ನಿಟ್ಟುಸಿರಲಿ ಚೆಲ್ಲಿದ ಕಂಬನಿಗಳ ಮುತ್ತಾಗಿಸುವ ಹುಂಬತನವೇಕೆ, ಅನಾಥವಾದ ದುಃಖಗಳಿಗೆ ಸಾಂತ್ವನದ ಮುಲಾಮು ಹಚ್ಚುವೆಯೇಕೆ, ಹುಳಿಗಟ್ಟಿದ ಮನಸ್ಸಿದು ಪ್ರೀತಿಯ ಜೇನು ಸುರಿಸುವೆಯೇಕೆ, ಮುಡಿಕಟ್ಟದ ತುರುಬಿದು ಆಸೆಯ ಮಲ್ಲಿಗೆಯ ಮುಡಿಸುವೆಯೇಕೆ, ರಾಗ ಮಿಡಿತಗಳಿಲ್ಲದ ದೇಹವಿದು ಚಿಟಿಕೆ ಸಿಂಧೂರವಿಟ್ಟು ಗರತಿಯ ಮಾಡಲೇಕೆ, ನಿರ್ಮೋಹಿಯಾಗಿರುವೆ ಬದುಕಿಗೆ ಮಧುರ ಭಾವಗಳ ಓಕುಳಿ ಎರಚುವಯೇಕೆ, ಅಲೆಮಾರಿ ಬಾಳಿದು ಭರವಸೆಯ ಗೂಡು ಕಟ್ಟುವೆಯೇಕೆ, ಆತ್ಮದ ಹಸಿವಿಗೆ ಕಾಯದ ಜೋಳಿಗೆ ಹಿಡಿದು ಹೊರಟಿರುವೆ ಮಮಕಾರದ ಭಿಕ್ಷೆ ನೀಡುವೆಯೇಕೆ ??? ........................... ...............#ಶ್ರೀಗೌರಿ .............. ......... .........
ನಿನ್ನ ಕಣ್ಣು ದೀವಿಗೆ
ನಿನದು ಬೆಳಕಿನ ನೆರಳು
ಸುತ್ತ ಜಗವ ಬೆಳಗುವಳು ನೀನೆ,
ನಿನ್ನ ಕಂಬನಿಗಳ ಹಿಡಿಯಲು ಬಾಯ್ದೆರೆದಿರುವ ಚಿಪ್ಪು ನಾನು
ಮುತ್ತ ನೀಡದೆ ಏನು ಮಾಡಲಿ ತುಡುಗಿ,
ದುಃಖಕಿಲ್ಲ ಯಾರು ನಾಥ ಗೆಳತಿ
ದುಃಖಿಸಬೆಡ ಪ್ರಿಯೆ,
ಹುಳಿಯೆ ಸಿಹಿಯಾಗುವುದು ಸಮಯದಲ್ಲಿ ,
ನೋಡಾ ಮಾವನ್ನು ಅದು ಅಷ್ಟೇ ಮಾಗುತ್ತ ಸಿಹಿ ಪಡೆಯುವುದು ಹುಡುಗಿ,
ನೀನನ್ನ ಪ್ರಿಯೆ
ಹೇಗಿದ್ದರೂ ಚನ್ನ ಅದಕೆ ಮುಡಿಸುವೆ ಮಲ್ಲಿಗೆ ,
ಚಿಟಿಕೆ ಸಿಂಧೂರ ಅಡುಗೆ ಉಪ್ಪಿನಂತೆ ಕಣೆ,
ನಿನ್ನ ಸೌಂದರ್ಯದಡುಗೆಗೆ
ಸಿಂಧೂರ ಉಡುಗೆಕಣೆ
ಮೋಹವ ತೊರೆಯಲಾನುಭವಿಸಬೇಕೇ ಗೆಳತಿ
ಅದಕೆ ಕಾಮನೆಗಳ ಓಕುಳಿಯಾಟ...
ಯಾರಿಲ್ಲ ಅಲೆಮಾರಿ ಇಲ್ಲಿ ಹೇಳು ಮನದನ್ನೆ,
ನಾ ನೀ ಎಲ್ಲ ಭವಾಭಾವದಲಿ ಅಲೆಮಾರಿಗಳೆ,
ಆತ್ಮಕೆ ಹಸಿವಿಲ್ಲ ಕಣೆ
ಮಮಕಾರ ತಾಯಿಯಾಸ್ತಿ
ದೀಪಕ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ