ಗುಲಾಬಿ ಮಾದಕತೆಯವಳೇ
ಹೇಳಿಬಿಡು
ಎಲ್ಲಿಹುದು ನಿನ್ನ ಮುಳ್ಳುಗಳು?
ಕಳೆದ ದಿನಗಳ ನಶೆಯಲಿ
ನಿನ ನೆನೆಯುತ್ತಿದೆ ಈ ಹೃದಯ
ಹೇಳಿಬಿಡು ನಿನ್ನ ನೆನಪುಗಳ ಸರಕನೆಲ್ಲಿಳಿಸಲಿ?
ಆ ಭ್ರಮೆಯ ದಿನಗಳನು
ಈ ಹೃದಯ
ನೆನೆನೆನೆದು ಬಳಲಿದೆ
ದೀಪಕ್
ಗುಲಾಬಿ ಮಾದಕತೆಯವಳೇ
ಹೇಳಿಬಿಡು
ಎಲ್ಲಿಹುದು ನಿನ್ನ ಮುಳ್ಳುಗಳು?
ಕಳೆದ ದಿನಗಳ ನಶೆಯಲಿ
ನಿನ ನೆನೆಯುತ್ತಿದೆ ಈ ಹೃದಯ
ಹೇಳಿಬಿಡು ನಿನ್ನ ನೆನಪುಗಳ ಸರಕನೆಲ್ಲಿಳಿಸಲಿ?
ಆ ಭ್ರಮೆಯ ದಿನಗಳನು
ಈ ಹೃದಯ
ನೆನೆನೆನೆದು ಬಳಲಿದೆ
ದೀಪಕ್
ನೋಡಿರಿ ಇದುವೇ ನನ್ನಯ ಗಾಡಿ
ಇದರಲ್ಲಿ ಕುಳಿತು ಹೋಗುವುದೊಂದು ಮೋಡಿ
ನನ್ನಾನಂದ ಹರಿದಿದೆ ಕೋಡಿ
ಎತ್ತಿಕೊಳ್ಳುವ ಜಂಝಾಟವಿಲ್ಲ ನೋಡಿ
ಇಹುದು ಎರಡು ಚಕ್ರಗಳ ಜೋಡಿ
ತಳ್ಳಲು ಮುಂದಕ್ಕೆ ಹೋಗುವುದು ಬಂಡಿ
ಒಳಗೆ ಕೂರಲು ನಲಿವೆನು ಆಡಿ
ಅಮ್ಮಅಪ್ಪ ಅರಿತಿಹರು ನನ್ನೆದೆಬಡಿತ ನಾಡಿ
ಹಕ್ಕಿಗಳ ಸದ್ದಿಗೆ
ಸಡ್ಡು ಹೊಡೆದು
ಕಂಬಳಿಯ
ಮುಖದಮೇಲೆಳೆದು
ಕತ್ತಲ ಮಾಡಿ ಮಲಗಿದಾಗ
ಏನೋ ಸಾಧಿಸಿದ ಸುಖ
ಎದ್ದು ಸಾಧಿಸಲು ರಾಶಿ ಇರುವಾಗ!
ಎದ್ದಾಗ ಸಾಧಿಸಲು ತಲೆ ಉಪಯೋಗಿಸಬೇಕು
ಕಷ್ಟಬೀಳಬೇಕು
ಯಾಕವೆಲ್ಲ ಉಸಬಾರಿ ?
ನೆತ್ತಿ ಮೇಲೇರಿದಾಗ
ತಡವೆಂದು ತಡಬಡಾಯಿಸಿ
ಗಬಗಬ ತಿನ್ನುತ್ತಾ
ತೆಗಿದಾಗ
ರಾತ್ರಿ ತಿಂದ ಪನ್ನೀರ ವಾಸನೆ
ಹೊಟ್ಟೆಯಲ್ಲಿ ಝುಳು ಝುಳು!
ಕೆಲಸಕ್ಕೆ ಬಂದೊಡನೆ ಗೋಣಗಾಟವಿಲ್ಲದೆ
ಕಾಯ್ದ ಕೆಲಸಗಳನ್ನು ಮುಗಿಸಿ
ರಾತ್ರಿಯ ಬಣ್ಣಕೆ ತಯಾರಿ
ಮತ್ತೆ ಆಕಡೆ ಓಣಿಯತ್ತ ದೌಡು
ಎರಡು ಚಣ
ಅತ್ತು ನಕ್ಕು
ಜೋಗುಳ ಹಾಡಿ
ಹಿಂತಿರುಗುವ ಹೊತ್ತಿಗೆ
ಎಲ್ಲ ನೀರವ, ಮೌನ
ಮನದಲಿ ಹೆಪ್ಪುಗಟ್ಟಿದ ದಿನವನು
ರಾತ್ರಿ ಚಮಚೆಯ ಹಿಡಿದು
ಐಸ್ ಕ್ರೀಮ್ ನಂತೆ ಮೆಲ್ಲುತ್ತಾ
ಮೆತ್ತ ಅಪ್ಪುಗೆಯಲ್ಲಿ
ವಕ್ರವಾಗಿ ತಲೆಯನ್ನು ತೂರಿಸಿ
ಮತ್ತಷ್ಟು ಈಡೇರದ ಕನಸುಗಳ ಕಾಣುವ ದುಸ್ಸಾಹಾಸ...
ದೀಪಕ್
ಶಿರದಿ ಕಿರೀಟ ನವಿಲುಗರಿ,
ಹೂ ಮಾಲೆ ತೊಳ್ಬಂದಿ,
ಬೆತ್ತಲೆದೆ ಬಾಸುರಿ
ನಿನ್ನ ಕೃಷ್ಣ ಮಾಡದು
ನಿನ್ನ ಯೋಚನೆ ಯೋಜನೆಗಳು ಯೋಜನ ಯೋಜನವಾಗಲಿ
ಮೀರು ನೀ ಕೃಷ್ಣ ಸಾಧನೆ
ಬೆಳೆದಮೇಲೆ ನಿನಗಿಹುದು ಕೃಷ್ಣಲೆಕ್ಕದ ಕಾಟ
ಸುತ್ತ ದುರುಳರ ಕೂಟ
ನೀ ಕಂಡೂ ಕಾಣದಂತಿರಬೇಕು
ಜನರು ಮಾಡುವ ಮಾಟ
ಹಸಿದು ಉಂಡಂತಿರಬೇಕು,
ಉಂಡವಗೆ ಹಸಿದವನೆಂದು ಮತ್ತೆ ನೀಡುತ್ತಿರಬೇಕು,
ಕೃಷ್ಣನಿಗಿರಲಿಲ್ಲ ಈ ಕಷ್ಟ ಕೊಟಲೆಗಳು
ನಗುಮೊಗದ ದ್ರೋಹಿಗಳು
ಗೋಸುಂಬೆ ಗೋಪಿಕೆಯರು
ನೀ ಕೃಷ್ಣನ ಮೀರಿ ಬೆಳೆಕಂದ
ಇನ್ನು ಯೋಚಿಸುತ್ತಿರುವೆ,
ಸಮಯ ಹೇಗೆ ಉರುಳಿತೆಂದು?
ಬಾಲ್ಯದ ಸಮಯ
ನೆನಪ ಬುಟ್ಟಿಯನೆಂದು
ಸೇರಿತೆಂದು?
ನನಾಗಿನ್ನೂ ನೆನಪಿದೆ ಜೊತೆಗಲೆದ ಸಮಯ,
ಬಾಳೆಹಣ್ಣು, ಪಾನಿಪುರಿ, ಐಸ್ ಕ್ರೀಮ್,
ಕಳೆದ ರೂಪಾಯಿ...
ನೆನ್ನೆ ಮೊನ್ನೆಯವರೆಗೂ ನೀ
ಈ ಊರಿನಿಂದಾವೂರಿಗೆ
ಸುತ್ತುತ್ತಿದ್ದ ನೆನಪು,
ಮಾತಿನಲ್ಲಿ ಕೊಚ್ಚಿಹೋದ ರಾತ್ರಿಗಳ ನೆನಪು,
ಜೊತೆಗೆ ನೋಡಿದಾ ಪರದೇಶ
ಅರೆ ಮತ್ತೆ ನೋಡಬೇಕೇನುವ ಹೊತ್ತಿಗೆ
ನೀನೇ ಪರದೇಶದಲ್ಲಿ!
ನೆನಪುಗಳು, ನೆನಪುಗಳು
ಬರೀ ನೆನಪುಗಳು
ಕಣ್ಣ ತುಂಬಿ ಒಸರುವ ನೀರಿನಂತೆ
ಎಲ್ಲಿಹೋಯಿತಾ ಸುಂದರ ಚಣಗಳು?
ಹೃದಯನುಡಿವ ಸದ್ದೇ
ಮಧುರ ಮೌನ
***
ಶತ್ರುಗಳ ಮೇಲಿರುವ ಪ್ರೇಮವನ್ನು ಸ್ವಲ್ಪ ಪ್ರೇಮಿಗೂ ನೀಡು ಅವರು ಬೆಳೆಯಲಿ
***
ಹಣ ಹರಿಯುತ್ತಿದೆ
ಹೇಳವನೆಂದು
ದುಡಿಯಲಾರನೆಂದು
ಆತ್ಮಹೀನನಿಗೆ
ಹಣವೇ ಎಲ್ಲ
ಬೇರೆ ಗೊಡವೆ ಇಲ್ಲ
ಕಷ್ಟ ಅರಿಯಾದವರಾರಿಹರು
ಈಸಬೇಕು ಈಸಿ ಜೈಸಬೇಕು
ಇದ್ದಾಗ ಮುಷ್ಟಿ ಕೂಳ ನೀಡಬೇಕು
ಹಸಿದವಗೇ ನೀಡಬೇಕು
ಅನಾರ್ಹರಿಗೆ
ನೀಡುವುದು ಸುಲಭ ಅದಕರ್ಹರಾಗುವುದು
ಬಲುಕಷ್ಟಬಲು ಕಷ್ಟ
Its blog I have created to enter my day to day search & feel like sharing the same with like minded people. I solicit a comment from all my friends.