ಮಂಗಳವಾರ, ಮಾರ್ಚ್ 16, 2021

ಇಂದಿನ ಮಳೆ

ಅಂತರ್ಜಾಲದ ಈ ಮಳೆಯಲ್ಲಿ ಚಳಿಯಲ್ಲಿ ಪೆನ್ನು ಕಾಗದಗಳು ಕಮರಿ ಹೋದವು
ಪುಸ್ತಕಗಳು ಧೂಳು ತಿಂದವು

ಮೋಡಗಳ ತುಂಬುತ್ತಾ
ಜನರ ಸಮಯವನ್ನು ತಿನ್ನುತ್ತ
ಜನಕ್ಕೆ ಜಗಳದ ಸರಕನೀಡಿ
ಕೆಲಸ ಕಿತ್ತು ಭ್ರಮೆಯ ಹಚ್ಚಿ  ಗುಂಡಿ ಬಂದ್ ಆಗಲು ಎಲ್ಲ ನಿಸ್ತೇಜ
ಕಳೆದದ್ದೇನೆಂದು ಎಂದೂ ತಿಳಿಯದು
ಪಡೆದ ಭ್ರಮೆಯ ಸರಕ ಇಟ್ಟು ಕೊಳ್ಳಲಾಗದೆ ಮಾರಲಾಗದೆ ಮತಿಭ್ರಮಿಸುವ ಮುನ್ನ 

ಎಚ್ಚೆತ್ತು ಕೊಳ್ಳಬೇಕು

ಪುಟ್ಟ ಪ್ರಪಂಚದ ಪುಟಾಣಿ

ಭಾನುವಾರ ಕೆಲಸಕ್ಕೆ ರಜೆ. ತಿಂಡಿ ಮುಗಿಸಿ ಕ್ಯಾಮೆರಾ ಹಿಡಿದು ಮನೆ ಮುಂದಿನ ಹೂಕುಂಡ ಗಳಲ್ಲಿರುವುದನ್ನು ತ್ರಿಪಾದಿ ಸಹಾಯದಿಂದ ಚಿತ್ರಿಸುತ್ತಿದ್ದೆ.  ಆರೋಗ್ಯಕಳೆದು ಕೊಳ್ಳುತ್ತಿರುವ ವೀಳ್ಯದೆಲೆ ಬಳ್ಳಿಯ ಕೊಂಬೆ ಮೇಲೆ ಏನೋ ಓಡಿದಂತಾಯಿತು. ಕ್ಯಾಮೆರಾದಿಂದ ಕಣ್ಣುಕಿತ್ತು ಗಿಡದೆಡೆಗೆ ನೋಡಿದೆ. ಏನೂ ಕಾಣಲಿಲ್ಲ. ಕಣ್ಣಾಮುಚ್ಚಾಲೆಯಾಡುತ್ತಿರಬಹುದೇ ಎಂದು ಎಲೆಗಳನ್ನು ಅತ್ತಿತ್ತ ಸರಿಸಿ ನೋಡಿದೆ. ಟಿಸಿಲಿನಲ್ಲಿ ಈ ಭೂಪ!
 ಚಿತ್ರಿಸಿ ವಿಡಿಯೋ ಮಾಡಿದೆ ಇದರದ್ದು. ಅದೇನು ಚಟುವಟಿಕೇರಿ ಈ ಜೇಡದ್ದು ಅಬ್ಬಾ! ಒಂದು ಕಡೆ ನಿಲ್ಲೋದಿಲ್ಲ. ಅತ್ತಿತ್ತ ಒಡೆಲ್ ಕೆಳಗೆ ಅವಿತು ಬಿಡೋದು ಕೆಲವೊಮ್ಮೆಬಳ್ಳಿಯ ಟಿಸಿಲ ಮೇಲೆ ಓಡಾಡೋದು. , ನಾನು ವರ್ಣ ರಂಜಿತವಾಗಿ ಗೂಗಲ್ ಗಾಗಲ್ ಸಹಾಯದಿಂದ bhageera ಅಂದುಕೊಂಡಿದ್ದೆ. ಗೆಳೆಯ ವಿಪಿನ್  ಇದನ್ನು carrhotus species ಅಂತ ತಿಳಿಸಿದರು.  Carrhotus ನೆಗೆ ಜೇಡದಲ್ಲಿ 32 ವಿವಿಧ ಪ್ರಭೇಧಗಳಿರುವುದಂತೆ. 
ಹಂಬಲಿಸಿ ಪಡೆದ ನೀನು
Humble ಆಗಿಸಲು
ಬೇಡ ಬರಬೇಡ ಎಂದೇಯ

ಒಳಗ ತಿವಿತಿವಿದು 

ಸೋಮವಾರ, ಮಾರ್ಚ್ 15, 2021

ಶಾಯಿ

ಒರೆಸಿಬಿಡು ಅಳಿಸಿಬಿಡು 
ಗುರುತಿರದ ಹಾಗೆ,
ಹುಡುಕಿದರು ಕೆದಕಿದರು ಮತ್ತೆ ಸಿಗದಹಾಗೆ,
ದಂಡವಾದದು ಮತ್ತೆ 
ನೆನಪಾಗದ ಹಾಗೆ

ಮಂಗಳವಾರ, ಡಿಸೆಂಬರ್ 15, 2020

ಬದುಕೇ


ಬದುಕೇ 
ನೀನೆಂತಹ ಮರೀಚಿಕೆ!
ಇಹುದನ್ನು ಕಸಿದು,
ನೆನಪಾಗಿಸಿ
 ಕಣ್ಣ ಅಂಚಿನಲಿ ಜಿನುಗಿಸಿ,
ಮತ್ತೆ ಆವಿಯಾಗಿಸುವ
 ಮಾಯಾವಿ
ಏನು ನಿನ್ನುದ್ದೇಶ,
ನೀಡಿದಷ್ಟೇ 
ಅರ್ಥವ ಪಡೆಯುವ 
ನೀನು ಯಾರು?

ಶುಕ್ರವಾರ, ನವೆಂಬರ್ 6, 2020

ಕರೊನ

ಕೊರೊನ ಬಾ ಒಮ್ಮೆ ಅಪ್ಪಿಬಿಡು
ನಡೆದುಬಿಡಲಿ ಯುದ್ಧ ನನ್ನ ನಿನ್ನ ನಡುವೆ
ಸೋತು ಮಣ್ಣಾಗುವೆ
ಯಾ ಗೆದ್ದು ನಾ ಬೀಗುವೆ
ಸಾಕು ನಿನ್ನ ಹೆಸರಿನಲ್ಲಿ ಅಂಜಿ ದೂಡುವ  ದಿನಗಳು 
ನಿತ್ಯ sanitization ಗೋಳು
 ಸಾಲದೆಂಬಂತೆ ಸಹಕರಿಸದ ಪತ್ನಿಯಳಲು
ಮೈಮೇಲೆ ಹೇರಿಕೊಳ್ಳುವ PPE ಬೆವರು
ಚರ್ಮರೋಗಗಳ ಸಂಭವೀಯ ಭೀತಿ
ಸಾಕು ಮಾಡು ನಿನ್ನ ಭಯದ ಜೀವನ
ಬಾ ಒಮ್ಮೆ ಅಪ್ಪಿಬಿಡು
 

ಯಾಕ ಮುನಿಸು ಮಗಳ
ಹಿಡಿ ತಗ ತಿನಿಸು ಹಾಲು ಪಗಳ
ನಿಟ್ಟುಸಿರ ಬಿಡಬ್ಯಾಡ ತಿನ್ನು ಅಗಳ
ನೀ ಮಾಡಬ್ಯಾಡ ಜಗಳ
ಕಿರಿಕಿರಿ ಬೇಡವೆಂಬ ರಗಳ
ನಕ್ಕು ಸೂಸು ನೀ ಹರುಷದ ಪರಿಮಳ


ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.