ಅದು ಬೇಡ ಎಣ್ಣೆ
ಇದು ಬೇಡ ಜಿಡ್ಡು
ಹೆಚ್ಚು ತಿನ್ನಬೇಡ
ಅಯ್ಯೋ ಗುಳಿಗೆ ನು಼ಂಗು
ಸಿಹಿ ಮೈದಾ ತಿನಿಸು ಬೇಡ
ಹೆಚ್ಚು ಊಟ ಮಾಡಬೇಡ
ಉಪ್ಪಿನಕಾಯಿ ಬೇಡ
ಕರಿದ ತಿನಿಸು ಬೇಡ ನೋಡು
ಅಯ್ಯೋ ವೈನ್ ಸಂಸ್ಕಾರವಲ್ಲ
ಖಾರ ತಿನ್ನುವುದಾರೋಗ್ಯವಲ್ಲ
ಇದು ನಿತ್ಯ ಸಾವಿನ ಇನ್ನೊಂದು ಹೆಸರು
ಬೇಡವೆಂದರೆ ,
ಸಿಗರೇಟು ನಿಲ್ಲಿಸುವುದು ಲೇಸು
ನಿನಾದರೆ ಹಾರ್ಟ್ ಕೇಸು
ಬದುಕಿಗಿಂತ ಸಾವೇ ಲೇಸು
ದೀಪಕ್
ಮಂಗಳವಾರ, ಡಿಸೆಂಬರ್ 29, 2015
ಸಿಗ(ದ )ರೇಟು
ಶುಕ್ರವಾರ, ಡಿಸೆಂಬರ್ 11, 2015
ಅಮ್ಮ ಮಗಳು
ಹೊಂಟರು ನೋಡಿ ಪ್ರಭಾತಫೇರಿ
ಅಮ್ಮಮಗಳು ಗಾಡಿಯನೇರಿ
ಗಡಿ ಗಡಿಯಾರದ ಪರಿವೆಯು ಇಲ್ಲ
ಖಾಲಿ ಮನೆಯ ಲೆಕ್ಕವು ಇಲ್ಲ
ಕುಂತರು ಹಿಂದೆಮುಂದೆ ಇಬ್ಬರು
ಮಳೆ ಬರುವುದ ಕಂಡರು ಹೊರಟರು
ಊಟ ತಿಂಡಿಗಳಾವುದು ಇಲ್ಲ
ನಾಲಿಗೆಗೆ ರುಚಿ ಹತ್ತುವುದಿಲ್ಲ
ಹೋಟೇಲ್ ತಿ಼ಂಡಿಯ ರುಚಿ ಇದೆನೋಡಿ
ಇವರನು ಮಾಡಿದೆ ಬಲು ಕಿಡಗೇಡಿ
ಕೆಲಸದ ಗಂಡ ಇವ ಬಲು ಭಂಡ
ಬಾಯಾಬಿಟ್ಟರೆ ಅದೆ ಬ್ರಹ್ಮಾಂಡ
ಉಳಿಕೆಯೂ ದುಡಿಮೆ ಎಂದು ಬೋಧಿಸಿದ
ಬರಿ ಹಿಡಿ ಅನ್ನದಿ ಹೊಟ್ಟೆತುಂಬಿಸಿದ
ತಮ್ಮನು ಪೋರ ಅವನೊಬ್ಬ ಚೋರ
ಮನೆ ಮಂದಿಗೆ ತಿಳಿಯದ ದಗಾಕೋರ
ಅವನ ಹುಡುಗಿ ಖುದ್ದು ತುಂಬಾ ಮೊದ್ದು
ಇವನಾ ಆಟಕೆ ಆದಳು ಪೆದ್ದು
ಹುಡುಗಿನಿದ್ರೆ ಯನು ಹಾಳು ಮಾಡಿದ
ಹುಡುಗಿಯಪ್ಪನ ಗಂಟು ಕರಗಿಸಿದ
ಬುಧವಾರ, ನವೆಂಬರ್ 18, 2015
ಭಾವಗಳಭಾವದಲಿ
ಕ್ಯಾಮೆರಾ ತುಂಬಿಕೊಂಡು
ಸೈಕಲ್ ನಲಿ
ಏರಿ ತಲುಪಿದೊಡೆ
ಕೊಳೆತ ಕಮ್ಮಟು ಸ್ವಗತ
ಬೆಂಡು ರಟ್ಟಿನ ತುಂಡು
ಕಟ್ಟಡದ ಅಸ್ಥಿಗಳು
ಹರಿದ ತಂತಿಯಬೇಲಿ
ಮೇಲೆ ನೊಣಹಿಡುಕ
ನೀರೊಳಗೆತೇಲುತಿತ್ತು
ಮುರಿದ ಪ್ಲಾಸ್ಟಿಕ್
ಆದರ ಪಕ್ಕದಲಿ
ನಾಮಗೋಳಿಗಳು
ರವಿಯ ಬೆಳಕು ಝಳಿಸಿ
ನೀರು ಪೂರಾ
ಫಳ ಫಾಳ
ಅಲ್ಲೊಂದು ಹಾವಕ್ಕಿ
ಇಲ್ಲೊಂದು ಓತಿಕ್ಯಾತ
ನೋಡುತ ನೆತ್ತಿ ಬಿಸಿ
ಕ್ಲಿಕ್ಕಿಸಿದ್ದೆಷ್ಟೊ ದಕ್ಕಿದ್ದೇಷ್ಟೊ
ಕಂಪ್ಯೂಟರ್ ಬ್ರಹ್ಮನೇ ಬಲ್ಲ
ಹೇಳೆ
ಹೇಳು ಗೆಳತಿ
ಹುಣ್ಣಿಮೆ
ನೋಟ ಎಂದು
ನಿನಗಾಯಿತು
ಸುಡುವಾಗ್ನಿ
ಅನಂತ ಸಾಗರದ
ಶಾಂತತೆ
ನಿನಮನವ
ಹೇಗೆಕದಡಿತು ಗೆಳತಿ?
ಹೂ ಚುಂಬನವೆಂದು
ಸೂಜಿ ಮೂನೆಯಾಯಿತು?
ಹೀಗ ಗುಣಗಳವಗುಣ
ವಾದರೆ,
ಕವಳ ನಂಜೇರೀತು
ಜಲವುವಿಷವಾದೀತು
ಗಾಳಿ ಘಾಟಾದೀತು
ಮಂಗಳವಾರ, ಅಕ್ಟೋಬರ್ 6, 2015
ಚಾಪೆ
ನಾ ಬರೀ
ಚಾಪೆಯಲ್ಲವೇ ಗೆಳತಿ
ನಾಮನೆಯ
ಮೊದಲ ಫರ್ನೀಚರ್
ನನ್ನಿ಼ಂದ ನಿದ್ರೆ
ಮನೆಯ ಸಭೆಗೂ
ನಾನೆ
ಎಲೆ ಅಡಿಕೆಮೆದ್ದಲೂ
ನಾನೆ
ನೀರೆ ಸಂಗೀತಕೂ
ನಾನೆ
ಬಡಾವನಾಸಿಗೆಯು
ನಾನೆ
ಲಘುವಿರಾಮಕೆ
ನಾನು
ಬೆನ್ನು ನೋವಿಗೆ
ನಾ ರಾಮಬಾಣ
ಭಡಾವನತುಂಟಾಟಕೂ
ಬೇಕು ನಾನೇ,,,
ಪದಕನ್ಯೆ
ಹೊಸಿಲಲೇ ನಿ಼ಂತ ಪದಕನ್ಯೆ
ಏನೇ ನಿನ್ನಯ
ಮನಸಿನ ಮುನಿಸು
ವಯಸಿನ ಬಯಕೆಗಳ
ಮೀರಿದವಳೇ
ನನ್ನೆದೆ ಬಡಿತ
ಹಾರಿಸುವವಳೆ
ನನ್ನ ತೆಕ್ಕೆಯೆಂದರೆ
ನಿನಗೆ ಸೊಕ್ಕೆ?
ಹೇಳಿಬಿಡೆ ಬಿನ್ನಾಣಿ
ನಾನಲ್ಲ ಕಾಯ್ವಮಾಣಿ
ದೀಪಕ್
ಶನಿವಾರ, ಅಕ್ಟೋಬರ್ 3, 2015
ಯಾತ್ರೆ ಹಾಡು
ನನ್ನೂರು ಮೈಸೂರು
ನಿನ್ನೂರು ನಂಜೂರು
ಇವು ಭಾರಿದೂರವೇನೆ
ಹತ್ತುರೂ ತೆತ್ತು
ಬಂಡಿಯನೇರಾಲು
ಬೇಗನೆ ನೀಸೇರುತೀಯೆ
ಬಂಡಿ ಶುರುವಾದಾಗ
ಬ್ರಿಡ್ಜನು ಹಾಯ್ವಾಗ
ಕಬಿನಿ ಬೈ ಹೇಳುತಾಳೆ
ಪಕ್ಕದಲೆ ಭತಗದ್ದೆ
ಬಳುಕುವಾ ಕಾಲುವೆ
ಡೈನಮೈಟ ಸೀಳ್ದ ಬೆಟ
ಕಣ್ಣನು ತುಂಬುತಾವೆ
ಅತ್ತಿತ್ತ ಕರಿಕಲ್ಲನು ಫಳಫಳಿಸುವ ಮಂದೀ
ಕಸದಿಕಾಗದ ತೆಗೆವವರ ದಾಟುತಲೆ ತಾಂಡವಾಪುರ
ಅಲ್ಲಿ ಪಡುವಣಕೆ ಸಾಗುತಲೇ
ಸಿಗುವುದು ಕಡದಕೊಳವು
ಅದದಾಟೇ ಮುಂಬರಲು ಎಣ್ಣೆಯಾಹೊಳೆ ತಂಪು
ತೆಂಗು,ನವಿಲಾ ಇಂಪೂ
ದಾಟುತಲೆ
ವಿಸ್ತಾರ ಏರ್ ಪೋರ್ಟ್ ದೂರದಲೇ
ತಾಯಿಬೆಟ್ಟ
ಇದ ಕಣ್ಣಲೆ ತುಂಬಿರಲು
ನಾಗಾಲೋಟದ ರೈಲು ಮೈಸೂರ
ಸೇರಿಹುದುನೋಡೆ ಜಾಣೆ
ಮಂಗಳವಾರ, ಸೆಪ್ಟೆಂಬರ್ 22, 2015
ಮಳೆಯಾಗಿ ನೀ ಬಂದೆ
ನೆಲದೊಳಗೆ ಮಾಯವಾದೆ
ಹುಡುಕ ಹೊರಟೆನಗೆ
ಸಾಗರಾವಾಗೆದುರಾದೆ
ನಿವೇದಿಸಲು
ಪಸೆಯುಳಿಸದೆ
ಮಾಯವಾದೆ
ದೇವಕನ್ನೆ
***
ಕ್ಷಮೆಯಿರಲಿ ದೇಹವೇ
ನಿನ್ನೊಳಗೆ ನಾನಿರುವೆ
ನೀನಿಲ್ಲದ ನಾನಿಲ್ಲ
ಆದರೂ ನಿನ ಶಿಕ್ಷಿಸಿಹೆ
ಧೂಮ ಕುಡಿತ ಮಾತ್ರೆ
ಮಾಯೆಯಿಂದ
ಉಪ ಭೋಗಗಳಿಂದ
ಮಲಿನಿಸಿ
ನಿನತೊರೆವೆನು ನನು
ಮಣ್ಣು ಸೇರುವೆ ನೀನು
ನಿನ್ನುಪಕಾರಕೆ
ಸ್ವಾರ್ಥಿಯಾಗಿ
ಮತ್ತೊಂದು
ದೇಹ ಭೋಗಿಸಿರುವೆ
ಮತ್ತೆ ನಾನೆ
ಅದ ಸೇರುವೆ
ನಾ ನಿನಗೆ ಋಣಿ
ಸೋಮವಾರ, ಸೆಪ್ಟೆಂಬರ್ 21, 2015
Life
ನಿತ್ಯ ಬಾಳಿನುತ್ಸವ
ಜೀವಜೆನಿನುದ್ಭವ
ಹೃದಯ ತುಡಿಸಿ
ದೇಹ ದಣಿಸಿ
ಮನವ ತಣಿಸೊ ಕಾಯಕ
ನೋಡಿರಿ ಬಲು ಮನಮೋಹಕ
ಹಕ್ಕಿ ಕಲರವದಿ
ದಾರಿಸವೆಸಿ
ಉಬ್ಬುತಗ್ಗು
ಎಲ್ಲಕಂಡು
ದಕ್ಕಿದೆದೆಯು ರೋಚಕ
ಕಂಡವನಷ್ಟೇ ಬಲ್ಲ
ಈ ಕಾಯದಾ ಸುಖ
ಕಂಕಣ ಭಾಗ್ಯ
ಆಂತೂ ಇಂತೂ 30ರಲ್ಲಿ
ತಿಮ್ಮನಿಗೆ
ಹಸೆಯನೇರುವ
ಭಾಗ್ಯವು ಬಂತು
ತೆಳ್ಳನೆ ಬೆಳ್ಳನೆ
ಬಳುಕುವ ಸುಂದರಿ
ನೋಡಿ ಮರುಳಾದ
ಹೊರಟಿತು ಸವಾರಿ
ಅಂಗಡಿ ಯೆಡೆಗೆ
ಕೊಳ್ಳಲು ಬಟ್ಟೆ ಸೀರೆ ಸಫಾರಿ
ಅಂಗಡಿ ತುಂಬಾ ಕನ್ನೆಯರ
ಕಂಡ
ಇದ್ದರೆಲ್ಲಿ ಮುಂಚೆ ಎಂದುಕೊಂಡ
ಕಪ್ಪುಗಾಜಲಿ ನೋಟ
ತಪ್ಪಿಸಿದ
ವಧು ಕೋಪಿಷ್ಠಿಯಾಗೂವುದರಿಂ ಪಾರಾದ
ನವವಧು ಹುಡುಕಿದಳ್
ಬಣ್ಣದ ಸೀರೆ ಪಟ್ಟೆಯಸೀರೆ
ಝರಿಯಸೀರೆ ಜರತಾರಿ ಸೀರೆ
ಇದಿರಲಿ ಮತ್ತೊಂದು ತೋರೆನ್ನುತ
ಉಟ್ಟಳಲವು ಸೀರೆ
ಎಲ್ಲವೂ ಚಂದ
ಆದರೇಕೋ ಬಾರದು ಬಂಧ
ಕೊನೆಗೆ ಕೊಂಕಲಿ
ಹೊರಟಿತು ಪ್ರಭಾತಪೇರಿ
pairಆಗ ಹೊರಟವರ
ದುಮ್ಮಾನದ ಪರಿ
ನೋಡಹೋದರು
ವೆಡ್ಡಿಂಗು ರಿಂಗು,
ಡಿಸೈನು ಬೆಲೆಗೆ
ತಿಮ್ಮನು ರಂಗು
ಇಷ್ಟದುಂಗುರ ಅಂಗುಷ್ಟ
ಸೇರದು
ಸೆರಿದುಂಗುರ
ಮನಮುದ ನೀಡದು
ತಿರುಗದಂಗಡಿ
ಯಾವುದೂ ಇಲ್ಲ
ಮನದನ್ನೆಯಾಎದೆ
ಮಿಡಿಯಲೆ ಇಲ್ಲ
ಶನಿವಾರ, ಸೆಪ್ಟೆಂಬರ್ 19, 2015
ಅಳು ನಗು
ಅಳು ಸಮುದ್ರವಾಗುವ
ಮುನ್ನ
ಅತ್ತು ಬಿಡಬೇಕೊಮ್ಮೆ
ಹೆಪ್ಪುಗಟ್ಟಿಹ ನೋವು ಕಲ್ಲಾಗುವ ಮುನ್ನ
ಹಿಂಗಿ ಹೆಕ್ಕಳದಂತೆದೆಗ಼ಂಟುವ ಮುನ್ನ
ಚಣಚಣವೂ ಭೂತವಾಗಿ
ಹೃದಯ ಕೊಲ್ಲುವಮುನ್ನ
ಪದಪದವೂ ಈಟಿಯಾಗಿ ಜೀವವಿರಿಯುವ ಮುನ್ನ
ಗಳಿಗೆಗಳು ವರುಷವಾಗಿ ಕಾರ್ಮೋಡವಾಗುವ ಮುನ್ನ
ಕಣ್ಣೋಟ ಕೆಂಡವಾಗಿ ಜೀವ ಸುಡುವ ಮುನ್ನ
ಹಿತರಾತ್ರಿಗಳು
ವಿರಹಕ್ಕೆದೂಡುವಮುನ್ನ
ಚುಂಬನಗಳು ವಿಷವಾಗುವ ಮುನ್ನ
ಅಪ್ಪುಗೆಗಳು ಧೃತರಾಷ್ಟ್ರ ಆಲಿಂಗನವಾಗುವಮುನ್ನ
ಅತ್ತುಬಿಡಬೇಕೊಮ್ಮೆ...
-ಕಂದನ ನೋಡಿದೊಡೆ
ನಕ್ಕು ಬಿಡಬೇಕೊಮ್ಮೆ
ಆಟದಲಿ ಘಾಸಿಯಾದಾಗ
ಗೆಳತಿ ಕಾಯ್ದು ಸುಣ್ಣವಾದಾಗ
ಮಗ್ಗಿಯ ಲೆಕ್ಕ ತಪ್ಪಿದಾಗ
ಅಮ್ಮನ ಮುದ್ದು ನೆನಪಾದಾಗ
ಜೀವ ಘೋರತೆಯು ಕವಿದಾಗ
ನಡು ರಾತ್ರಿಯೊಳು ಹಾದಿ ತಪ್ಪಿದಾಗ
ಹೃದಯದ ಗೆಳೆಯರು ಭೆಟ್ಟಿಯಾದಾಗ
ಹಣಕೊಡದೆ ಪೀಡಿಸಿದಾಗ
ಕೆಲಸನಡು ನಿಂತಾಗ
ತೂತು ಜೇಬಾದಾಗ
ದುಃಖದಿ ಎದೆ ತುಂಬಿ ಬಂದಾಗ
ಅತ್ತು ,,,
ನಕ್ಕಿ ಬಿಡಬೇಕೊಮ್ಮೆ
--ದೀಪಕ್
ಶುಕ್ರವಾರ, ಸೆಪ್ಟೆಂಬರ್ 18, 2015
He hates
He hates people
from time unknown
Though none knows
why he did so
Except
the queen of his
heart
Who blocked
his beats with
less of air
He gasped for the breath
like a dieing pray
but the queen
never cared
to nourish his soul
From that day
he started
hating people
No one knows the reason
Except
queen of his heart
ಗುರುವಾರ, ಸೆಪ್ಟೆಂಬರ್ 17, 2015
There he sleeps
There he sleeps
in his grave,
with all the glory of life
in face.
Life is so simple lived
that he doesn't need an epitome,
needs no coffin to sleep ,
Or a candle light to
charm the soul.
Silent pray of friend rests him,
His memory in others
Nourishes his soul.
ಬ್ಲಾಗ್ ಆರ್ಕೈವ್
ನನ್ನ ಬಗ್ಗೆ
Its blog I have created to enter my day to day search & feel like sharing the same with like minded people. I solicit a comment from all my friends.