ಇಲ್ಲದ ಬದುಕಲಿ
ನಾನೆಂಬುದನ ತೂರಿಸಿ
ಎಲ್ಲವ,ತುರಿದು
ಭುಜಿಸಿ
ಹೆಚ್ಚಿದಾಗ ಕಕ್ಕಿ
ಗಂಟಿಟ್ಟು
ಅಜೀರ್ಣತೆಯನೂ ಜೀರ್ಣಿಸಿಕೊಂಡು
ಉಣಲು
ಮಕ್ಕಳು ಮರಿಗಳಿಗೆ
ಹಳಸಿದನು ಉಳಿಸಿ,
ಆ ಮರಿ
ಥೂ ಎಂದುಗಿದು,
ಆಸ್ತಿಯ ಕರಗಿಸಿ
ತುಚ್ಛಿಸಿದಾಗ
ಸಮಾಧಿಯೊಳು ನನ್ನಸ್ಥಿ ಆಳಲಾಗದೆ ಇರಲಾರದೆ
ನಿರ್ಜಿವ
ನಿಮಿತ್ತವೀ ಬದುಕು
ಇಲ್ಯಾವ ಉದ್ದೇಶಗಳಿಲ್ಲ
ಕಾಲಾಹರಣ ,,,
ಮತ್ತೆ ಮಸಣ
ದೀಪಕ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ