ಸೋಮವಾರ, ಜುಲೈ 30, 2018

ಚುಟುಕು


ಪರಕೀಯರ
ತನ್ನವರಾಗಿಸಿಕೊಳ್ಳುತ್ತಾ
ತನ್ನವರ ಪರಕೀಯ
ಮಾಡಿದೆಯಲ್ಲ
ಗಾಲಿಬ್
ಎನಿದರ ಮರ್ಮ?
***

ಕೋಟ್ಯಾನು ಕೋಟಿ ವರ್ಷಗಳ ಕೋಟ್ಯಾನು ಕೋಟಿ ಸಂಯೋಜನೆಯ ಒಂದು ಫಲ ಈ ಬದುಕು ನೀರಮೇಲಿನ ಗುಳ್ಳೆಯಂತೆ

***

ಬೆತ್ತಲಿನ ಭ್ರಮೆ ನೀಡುವ ಉನ್ಮಾದ ಬೆತ್ತಲು ನೀಡದು

***

ತೀರದ ನೆನಪು ನದಿಗಿಂತ ಆಗಾಧ
ಎಲ್ಲೂ ಮುಗಿಯುವುದಿಲ್ಲ
***

ಓಡಿಹೋಗಿ
ಮದುವೆಯಾದ
ಗುಲಾಮನಾಗಲು

***

ಈಗ ಸಂಬಂಧಗಳನ್ನು ಕಡಿಯುವುದು ಸುಲಭ,

ಒಮ್ಮೆ ಜಂಗಮವಾಣಿಗೆ ಹುಷಾರು ತಪ್ಪಿತು
ಎಷ್ಟೋ ಗೆಳೆಯರು ಇಲ್ಲವಾದರು.

***

ಅಪ್ಪಟ ಪ್ರೇಮಿಯ ಹೃದಯದಲ್ಲಿ ವಜ್ರವಿರುತ್ತದೆ

***

ನೆನಪುಗಳು ಒತ್ತರಿಸುತ್ತವೆ ರೋಧನವೇ, ಅತೃಪ್ತಭಾವವೇ, ಭಯವೇ ಗೊತ್ತಿಲ್ಲ
ಅಂತೂ *ಬೇಡದ* ನೆನಪುಗಳ

***

ಹಳೆಯ ಮುಸುಕಿನಲಿ ಎಲ್ಲವ ಮುಚ್ಚುವ ಸನ್ನಾಹ, ಏನನ್ನೋ ಮರೆತ ನೆನಪು

***

ಗುರುವಾರ, ಜುಲೈ 26, 2018

ಹುಚ್ಚು


ಮನದಲ್ಲೇ ಬೆತ್ತಲುಮಾಡುತ್ತಿದ್ದವ
ಬೆತ್ತಲು ಕಂಡು ಮುಖ ತಿರುವಿದ
ಹುಚ್ಯಾರಿಗೆ?

ಶನಿವಾರ, ಜುಲೈ 21, 2018

Death

When I die,
burry me
Call no friends,
relatives or
inform them,
It doesn't matter to them perhaps!

I feel deeply hurt by the spouse who argues every point like any others spouse for no good cause
Yes,
I feel no pain in heart
but only light head and art
Which makes me to think
is it
Burning heart or failing heart

I keep my fingers crossed
Till the day I am sure to declare "the game is over"
Till then I play with my favourite sport called life

ಶನಿವಾರ, ಜುಲೈ 14, 2018

ಏಕೆ

*ಏಕೆ ಹೀಗೆ ಕಾಡುವೆ*
ನಿನ್ನ,ಮರೆತು ಜೀವವರಿತು
ಬದುಕು ನೀಗುತಿದ್ದೆನಾ
ಕವನದೊಳಗೆ
ತೂರಿನೀನು
ಏಕೆ ಹೀಗೆ ಕಾಡುವೆ

ಲೇಖನಿಯೊಳಿರುವೆ
ಎಂದು
ಅಕ್ಕರವನೆ ಮರೆತೆನಾ
ಶಾಯಿಯೊಳಗೆ
ಅವಿತನೀನು
ನೆನಪ ಹಸಿರುಮಾಡಿದೆ

ಪ್ರೀತಿ ಹೇಯ
ಹಣವೆಜೀಯ
ಈ ನನ್ನ ಗುನುಗನೆಂದು 
ಕೇಳಿದೆ
ನೋಟಿನೊಳಗೆಸೇರಿದೆ
ನನ ಭಿಕಾರಿಮಾಡಿದೆ
ಏಕೆ ಹೀಗೆ ಕಾಡುವೆ
ಬಿಟ್ಟುಬಿಡು ನಿನ್ನ ಬೇಡುವೆ




ಏಕೆ ಹೀಗೆ ಮಾಡಿದೆ

ಏಕೆ ಹೀಗೆ ಮಾಡಿದೆ
ಪ್ರೀತಿ ಸಾಲದಾಯಿತೇ
ನಂಬಿ ಮೋಸ ಹೋದೆನೇ
ಬೆಸೆದು ಬೇರೆಯಾದೆನೇ

ಹಿಂದೆ ಮುಂದೆ ಓಡಿದೆ
ಮಾತಲಿ ಮರುಳು ಮಾಡಿದೆ
ಛಲ ಪ್ರತಾಪ ತೋರಿದೆ
ನನ್ನ ಮನವ ಕಾಡಿದೆ
ಎಲ್ಲೋ ಗೂಡೂ ಮಾಡಿದೆ
ಕಾಣ್ದೆ ದೂರಕೋಡಿದೆ
ಏಕೆ ಹೀಗೆ ಮಾಡಿದೆ
ಪ್ರೀತಿ ಸಾಲದಾಯಿತೇ

ಹಗಲು ಇರುಳು ನಿನ್ನದೆ
ಕನಸು ಮನಸು ನಿನ್ನದೆ
ನೀ ಇರದ ಬದುಕು ಕತ್ತಲೆ
ಇನ್ನಾರೆನಗೆ ಆಸರೆ
ಏಕೆ ಹೀಗೆ ಮಾಡಿದೆ
ಪ್ರೀತಿ ಸಾಲದಾಯಿತೇ

ಮೂರು ಗಂಟ ಬಿಗಿಯಬಾ
ಬೇಗೆಯಳಿಸಿ ತಬ್ಬುಬಾ
ತೋಳವ ದೂರ ತಳ್ಳು ಬಾ
ನಿನ್ನ ಮಾತ ಗೆಲಿಸು ಬಾ
ಏಕೆ ಹೀಗೆ ಮಾಡಿದೆ
ಪ್ರೀತಿ ಸಾಲದಾಯಿತೇ

ಕಂಡೆ ಸಟೆಯ ಮಂದಿಯ
ಎಲ್ಲಕೂ ಹಿಂಜರಿಕೆಯ
ಈ ಗಾಂಧಾರಿಗೆ ನೀನೇ  ಸಂಜಯ
ನಮ ಪ್ರೇಮದಲಿ ಗೆಲುವು ಅಜಯ
ಬದುಕ ದಾರಿ ತೋರೆಯ
ಏಕೆ ಹೀಗೆ ಮಾಡಿದೆ
ಪ್ರೀತಿ ಸಾಲದಾಯಿತೇ

ಕಾಡುಮೇಡು ಅಲೆದೆವು
ಸನಿಹ ಸಲಿಗೆ ಮೆರೆದೆವು
ಮದಿರೆ ಮದನ ಕಾಮನೆ
ಜೊತೆಗೆ ಸಿಂಹ ಸಿಂಚನ
ನಿನ್ನ ಖುಷಿಗೆ ದಣಿದೆನಾ
ರಭಸಕ್ಕೆ ನುಲಿದೆನಾ
ಏಕೆ ಹೀಗೆ ಮಾಡಿದೆ
ಪ್ರೀತಿ ಸಾಲದಾಯಿತೇ

ಅಂದು ಕರೆದೆ ತೋಟಕೆ
ಈಜಿ ದಣಿವ ಪರಿಪಾಠಕೆ
ತಪ್ಪು ಕಾಣ್ಕೆ ನೀಡಿದೆ
ನೀ ಎತ್ತರೆತ್ತಕೇರಿ ಕೊಚ್ಚಿದೆ
ಕಾಣದೆಲ್ಲಿ ಹೋದೆನೀ
ನನಗೆಂದು ಸಿಗದ ಊರಿಗೆ
ಏಕೆ ಹೀಗೆ ಮಾಡಿದೆ
ಧೈರ್ಯ ಸಾಲದಾಯಿತೇ

-ದೀಪಕ್

ಸೋಮವಾರ, ಜುಲೈ 9, 2018

ನಿದ್ರೆ

ಹಗಲುರುಳಿ ಇರುಳಾಗುವುದು ದಿನ
ಕಳವಳಿಸುವುದು ನನ್ನೀ ಮನ
ರಾತ್ರಿ ಮಲಗಬೇಕೆಂಬುದ ನೆನೆದು
ಏಕೆಂದರೆ ನನಗೆ ನಿದ್ರೆ ಕಡಿಮೆ

ಬೆಳಿಗ್ಗೆ ಬೆವರುವವರೆಗೆ ಓಟ
ಕುಡಿಯಲು ನೀರುತಂಬಿಗೆ ಲೋಟ
ದಣಿಯದಿದ್ದರೆ ಇದೆ ದೊಡ್ಡಕಾಟ
ಏಕೆಂದರೆ ನನಗೆ ನಿದ್ರೆ ಕಡಿಮೆ

ರಾತ್ರಿ ಓದಲು ರಾಶಿ ಹೊತ್ತಿಗೆ
ಮಾರಿ ಅವುಗಳ ಎನ್ನುವಳು
ಮಡದಿ ಮೆತ್ತಗೆ
ಜೋರು ಹೇಳಲವಳಿಗಿಲ್ಲ ಗುಂಡಿಗೆ
ಏಕೆಂದರೆ ನನಗೆ ನಿದ್ರೆ ಕಡಿಮೆ

ರಾತ್ರಿ ಮಲಗಲು  ಲೋಟಹಾಲು
ಅದರಲೆಚ್ಚು ಗಸಗಸೆಯ ಪಾಲು
ಅದಕಾರೂ ಹಾಕರು ಅಡ್ಡಗಾಲು
ಏಕೆಂದರೆ ನನಗೆ ನಿದ್ರೆ ಕಡಿಮೆ

ಮುಗಿದವೆಲ್ಲ ನಿದ್ರೆಯಸ್ತ್ರ
ಗುಳಿಗೆ ನೋಡು ಕೊನೆಯ ಶಸ್ತ್ರ
ಬೇಗ ಮುಗಿಸಬೇಕದರ ನಿತ್ಯ ಶಾಸ್ತ್ರ
ಏಕೆಂದರೆ ನನಗೆ ನಿದ್ರೆ ಕಡಿಮೆ

ಸನಿಹ ನೀನು ಬರುವೆಯೇನು
ನನ ಕೈಗೆ ತಲೆಕೊಟ್ಟು ಮಲಗುವೆಯೇನು
ನಿನ ಅಪ್ಪಿ ಮಲಗುವೆ ನಾನು
ದೂರವೆಲ್ಲಿ ಹೋದೆನೀನು
ಚಳಿಯಲಿಲ್ಲಿ ಒಂಟಿ ನಾನು
ಅದಕೆ ನನಗೆ ನಿದ್ರೆ ಕಡಿಮೆ
-ದೀಪಕ್ ಭ

ಕಾಲೇಜು ಗೆಳತಿ

ಕಗ್ಗತ್ತಲೆ ರಾತ್ರಿಯಲ್ಲಿ
ಬದುಕಿನ ಓರೆಕೋರೆಯಲ್ಲಿ
ಬೆಳಕಿನಂತೆ ಎದುರಾದೆ

ಪಯಣದಲ್ಲಿ ಸನಿಹವಾದೆ
ಸಮಯ ಬರಲು ದೂರದೆ
ರೊಚ್ಚಿಡಿಯಿತೀ ಹೃದಯ

ಜನ ತಿಳಿಸಿ
ಸಾವಧಾನದಿ
ಸಮಾಧಾನಿಸಿದರು ಅಂದು
ಈಗ ಲೆಕ್ಕ ಹಾಕಿದರೆ
ಅದಕರ್ಥವೇ ಇರಲಿಲ್ಲ
ನೀ ನನ್ನ ಜೀವನದಲಿ
ಏನೇನೂ ಅಲ್ಲ
ವಿರಹಕೂಡ!
-ದೀಪಕ್

ಭಾನುವಾರ, ಜುಲೈ 8, 2018

ತುಣುಕುಗಳು

ಗೆಳೆಯರೊಡನಾಡುತ
ಮನೆಯ ಮುದ್ದಿನ ನಡುವೆ
ವಯಸ್ಕರೆಂದಾದೆವೆಂದು
ತಿಳಿಯಲೇ ಇಲ್ಲ
ಅದಕ್ಕೋ ಏನೋ
ಬಾಲ್ಯವ ಮರು ಸ್ಥಾಪಿಸಲು ಮಕ್ಕಳಿರಬೇಕು
*
ನಡು ರಾತ್ರಿಯಲಿ
ನಾವು ಮಾತನಾಡುತಿಹೆವೆಂದರೆ
ಕಳೆದ ಜನ್ಮದ ಪುಣ್ಯ
ಇನ್ನೂ ಇರಬೇಕು
ನಿದ್ರೆ ಬರದೆ ಭೂತದಂತಿಹೆವು,
ಕೋಡಂಗಿ ಗಳಂತೆ  ವೀರಭದ್ರನ
ನಾವು ಹುಡುಕುತಿರಬೇಕು
*
ವರುಷಗಳುರುಳುತ್ತಯಾಕೋ ಕಿಲಕಿಲನಗು ಕಿಲಕ್ಕಿಲಾ ಎಂದು ಮುಗ್ಧತೆಹಾರಿದ್ದು
ಅರಿವಿಗೇ ಬರಲಿಲ್ಲ
*
ನೀ ಸನಿಹ ವಿರದೆ
ಆತ್ಮ  ಗಲ್ಲಿಗಳಲಿ
ತಿರುಗುತಿದೆ
ನಿದ್ರಿಸಲು ತತ್ವಾರ
ಸಾಕು ಹುಡುಕಾಟ
ಮರಳು ಗೂಡಿಗೆ
ಓ ಭೋಲೀ ಆತ್ಮ

ಮಂಗಳವಾರ, ಜುಲೈ 3, 2018

ನನ್ನ

ನುಡಿಯಲಾಗದ ಭಾವ
ನಂಬಿಕೆ ವಂಚನೆಯಾದಾಗ
ಮಾತು ಮೌನಕೆ ಶರಣು
**
ಹಿಂಗದಾ ಹಸಿವು
ಮುಚ್ಚಿದಾಲಿ ತುಂಬಿದಂತೆ
ಜಿಗುಪ್ಸೆ,
ಲೋಕದುಸುಬಾರಿ ಏಕೆ
**
ಬೆತ್ತಲು ನಿಂತಾಗ
ಬಟ್ಟೆಸಿಗದೆ
ಅನುಭವಿಸುವ ಯಾತನೆ
**
ಎಲ್ಲವೂ ಮಾಯ
ಮರೀಚಿಕೆ
ಭೃಮೆ
ಆದರೂ
ಕೃತಕತೆಯು 'ಸ್ವಂತ'
ಎಂಬ ಬದುಕು ,
**

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.