ಎಳೆಯಮನಕೆ
ಅಕ್ಷರದೊಂದಿಯ ಬೆಳಕಿನೊಡನೆ
ಕನಸುಗಳ ಬಿತ್ತಬೇಕು
ಹಾವಭಾವಗಳಿಗನುಗುಣವಾಗಿ
ಕನಸು ಅವರದಾಗಿರಬೇಕು
ಏರುವುದವರಾಗಿರಬೇಕು
ನೀರೆವವರು ಹಿರಿಯಾರಾಗಿರಬೇಕು
ಕನಸುಗಳ ಬೆಳೆಸಬೇಕು
ಕನಸುಗಳಿಲ್ಲದ ಬಾಳು
ಗುರಿಇಲ್ಲದೇ ಹಾಳು,
ಕನಸು ನಿತ್ಯ ವೃದ್ಧಿಯಾಗಬೇಕು
ಕೊನೆಯ ಕಾಣದಂತಿರಬೇಕು
ಅಲ್ಲಲ್ಲೇ ಗೆಲುವಿನ ರುಚಿತೋರಿ
ಬದುಕ
ಆಹ್ವಾನಿಸು ವಂತಿರಬೇಕು,
ಇನ್ನೊಬ್ಬರು ಕನಸ ಕಟ್ಟಲು ಹುರಿದುಂಬಿಸುವಂತಿರಬೇಕು,
ಎಲ್ಲಕು ಮಿಗಿಲಾಗಿ
ತನ್ನನು ಪ್ರೀತಿಸಿ
ಇತರರನು ಪ್ರೀತಿಸುವುದು ರೂಢಿಯಲ್ಲಿರಬೇಕು
ಬದುಕಲು ಕನಸುಗಳು ಬೇಕು
ಆ ಕನಸುಗಳನ್ನು
ಬಲ್ಲವರು ಬೆಳೆಸಬೇಕು
-ದೀಪಕ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ