ಮುರಿದ ಜೀವಕೆ
ಮತ್ತೆ ಜೀವವೆರೆಯಲು
ಬೇಕು ಕೊಡುವ ಕೈ
ಅಂಧಕಾರದಲಿ
ದಾರಿ ಸವೆಯಲು
ಬೇಕು ದಿವ್ಯ ದೃಷ್ಟಿ
ನುರಿತ ಜೀವಕೆ ಎರವು ಆದೀತು
ಅನುಭವದ ಸೆಲೆಯು ಬತ್ತಿ
ಬದುಕಿನ ನಾನಾನೋಟಗಳನು
ಒಯ್ದ ದೇಹವೇ
ಚಿರಮೌನಿ
ಬೇಕುಬೇಡಗಳ ತೊಯ್ದಾಟದಲಿ
ಸಾಗದು ಬದುಕಿನೀ ದೋಣಿ
ಸಹಪಾಯಣಿಗರೆಲ್ಲ ಇಳಿದು
ಜೀವ ಒಂಟಿ ಮೌನಿ
ಯೋಚನೆಗಳ ಧಗೆಯಲ್ಲಿ ಬೆಯ್ವ ಮನ ಕರಕಲು
ಮಾಡದ ಕಾರ್ಯಗಳ ನೆನೆದು
ಜಿಗುಪ್ಸೆಯಾದಿಯಲ್ಲಿ ಬಾಳು
ಮಾಡುತ್ತಿರುವ ಕೈಂಕರ್ಯವನು
ನೆನೆದು ನಿತ್ಯ ಬಾಳು
-ದೀಪಕ್ ಭ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ