ಇಂದು ಮುಂಜಾನೆ ರವಿ ಮೂಡದೆ ಕೆಲಹನಿಗಳು ಗಿಡ ಮರ ನೆಲ ರಸ್ತೆಗಳ ತೋಯ್ಸಿದವುಹೊರ ಬಂದಾಗ ಹನಿ ಹೊತ್ತ ಹೂವು ತಗೆ ತೂಗುತ್ತಿತ್ತು
ರಸ್ತೆಯ ತುಂಬಾ ಪಾರಿಜಾತ ಆಕಾಶ ಮಲ್ಲಿಗೆ ಹೂಗಳ ಹಾಸಿತ್ತು ಬೀಸುವ ತಂಗಾಳಿಯಲಿ ಮಣ್ಣಿನ ಘಮವಿತ್ತು ಜೊತೆಗೆ ಹೂವಿನ ಪರಿಮಳವು ಬೆರೆತಿತ್ತು
ಮೈನ ಕೆಂಬೂತ ಚಿಟ್ಟು ಪಾರಿವಾಳ ಅಳಿಲುಗಳು ಕಚೇರಿಯ ನಡೆಸಿತ್ತು
ಜೊತೆಗೆ ದೂರದಲ್ಲಿ ಮಯ್ಗಾರ ಮಾದೇವ ಎಂಬ ಗಲಾಟೆ ಪ್ರಕೃತಿ ಸೊಬಗಿಗೆ ದೃಷ್ಟಿ ಬೊಟ್ಟಿನಂತಿತ್ತು
ಮಲಗಿದ್ದ ಮಗಳು ಬಟ್ಟಲುಕಂಗಳ ತೆಗೆದು ಏನದೇನೆಂದು ದೃಷ್ಟಿಯಲೇ ಕೆದಕಿತ್ತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ