ಭಾನುವಾರ, ಜನವರಿ 1, 2017

ನಿಮಿತ್ತ

ಇಲ್ಲದ ಬದುಕಲಿ
ನಾನೆಂಬುದನ ತೂರಿಸಿ
ಎಲ್ಲವ,ತುರಿದು
ಭುಜಿಸಿ
ಹೆಚ್ಚಿದಾಗ ಕಕ್ಕಿ
ಗಂಟಿಟ್ಟು
ಅಜೀರ್ಣತೆಯನೂ ಜೀರ್ಣಿಸಿಕೊಂಡು
ಉಣಲು
ಮಕ್ಕಳು ಮರಿಗಳಿಗೆ
ಹಳಸಿದನು ಉಳಿಸಿ,
ಆ ಮರಿ
ಥೂ ಎಂದುಗಿದು,
ಆಸ್ತಿಯ ಕರಗಿಸಿ
ತುಚ್ಛಿಸಿದಾಗ
ಸಮಾಧಿಯೊಳು ನನ್ನಸ್ಥಿ  ಆಳಲಾಗದೆ ಇರಲಾರದೆ
ನಿರ್ಜಿವ

ನಿಮಿತ್ತವೀ ಬದುಕು
ಇಲ್ಯಾವ ಉದ್ದೇಶಗಳಿಲ್ಲ
ಕಾಲಾಹರಣ ,,,
ಮತ್ತೆ ಮಸಣ
ದೀಪಕ್

ಗುರುವಾರ, ಡಿಸೆಂಬರ್ 29, 2016

ಸುಳ್ಳರು

ಇಲ್ಲಿ ಎಲ್ಲರೂ ಸುಳ್ಳರು
ಸುಳ್ಳು ಗೋಪುರದ
ಅರಮನೆ ಕಟ್ಟಿ
ಭೃಮೆಯ ಭ್ರೂಣ
ಬಿತ್ತುವರು

ತ್ರಿಲೋಕ ಙಾನಿಗಳು
ಹಿತ್ತಾಳೆಯಲಿ ಬಂಗಾರದ ಬೊಗಣಿಮಾಡಿ
ಬಿರಿಯಾನಿ ಬಡಿಸುವರು

ಬೇಡಗಳ-ಬೇಡುವ
ದೇಶ ಭಕ್ತರು
ಮುಖನೋಡಿಯೇ
ಮಣೆಹಾಕುವ,
ಮಹಾ ಮಾಂತ್ರಿಕರು
ಇವರು
ತತ್ವಙಾನಿಗಳು!
ಮೋರಿಯಿಂದ ಮೇಲೆದ್ದು
ಸಹಪಾಟಿಗಳ ನೆತ್ತರ ಹೀರಿ
ಸಿಂಹಾಸನ ತಲುಪಿದ
ಚದುರಂಗ ಪೈಲ್ ವಾನರರು
ಮಣ್ಣೊಡನೆ ನಂಟ ಬೆಸೆದು
ಎಲ್ಲವನು ಮಣ್ಣು ಮಾಡುವ
ಚತುರ ಕಳ್ಳರು
ಮಾತಾಡಲು 
ಪದ ದಾರಿದ್ರ್ಯದಿ
ಬೆಬ್ಬರಿಸುವ
ದಡ್ಡ ಶಿಖಾಮಣಿಗಳು
ಇವರು  ಮಹಾನ್ ಸುಳ್ಳರು
-ದೀಪಕ್

ಹೊಸ್ವರ್ಸ

ಮುಚ್ಕೊಂಡೋಗೊ
ಕಂಡಿವ್ನಾನು
ನೀನ್ ಮಾಡೋ ಹೊಸ ವರ್ಸ
ಗುಂಪ್ನಲ್ ಸೇರ್ಕಂಡ್
ಗುಂಡ್ನಸೆ ಏರ್ಸಕಂಡ್
ಹನ್ನೆರ್ಡಕ್ ಹ್ಯಾಪಿನ್ಯೂಇಯರ್
ಘೋಷ್ಸೋ ನಿನ್ ಚಂದ

ಕಳ್ದಿದ್ ವರ್ಸ ಹೆಂಗಿತ್ಯೋಳು
ಬರೋದ್ನದ್ಕಿಂತ್ ಉತ್ಮಾಮಾಡು
ಗುಂಡ್ನಸೆ ವರ್ಸಾನ್ ಉಳ್ಸಾಕಿಲ್ಲ
ನಿನ್ ಮನ್ಸ್ ಭಾವ್ನೆ ನಿನ್ ಕಾಯ್ತದೆ
ನಿನ್ ಸಮಯ
ನಿನ್ ಕಾಯ್ತದೆ ನೋಡು
-ದೀಪಕ್

ಸ್ಥಿತ ಪ್ರಜ್ಙರು

ಪರ ವಿರೋಧ ನಿರ್ಧರಿಸುವ
ಪರಾಕ್ರಮಿಗಳಿವರು
ಬೇಕೆಂಬುದಕೆ ಜೈ ಎನ್ನುತ
ಬೇಡದುದ ಕಾಲಲಿ ತುಳಿವ
ಕಾಳ ಭೈರವರು
ಢೋಂಗೀ ಖದೀಮರಿಗೆ ಸಲಾಮು ಹೊಡೆದು
ಹೊಲಸೊಳಗಿನ ಸ್ವಚ್ಛತೆ ಕಾಪಾಡುವ
ಜನಿವಾರ ಪ್ರಿಯರು
ತಿಳಿಯದಿದ್ದರೂ ತಿಳಿದ
ಓದದಿದ್ದರೂ ಓದಿದ
ಹಸಿದರೂ ಉಣ್ಣದ
ಭೋಗಿಸೆಂದು 
ಬೆತ್ತಲಾದರೂ ಭೋಗಿಸದ
ಸ್ಥಿತ ಪ್ರಜ್ಙರು
ನಮ್ಮ ನಿಮ್ಮಂಥಲ್ಲಇವರು
ಸರ್ವಙನ ಕೌಪೀನವ
ಎಳೆದುತಿಳಿದವರು
ಇವರು ಸಾರ್ವಭೌಮರು

-ದೀಪಕ್

ಶನಿವಾರ, ಜುಲೈ 30, 2016

ಕನಸು

ನಿನ್ನ ಕನಸುಗಳ
ಕಾವಲುಗಾರ
ನಾನಲ್ಲ
ಆದರ
ಆಕಾಂಕ್ಷೆ ನನಗಿಲ್ಲ
ಆದರೂ ಕಾಯುತ್ತಿದ್ದೇನೆ
ನಿದ್ರೆ
ಮುಗಿಯಲೆಂದು
ಕನಸು
ಹರಿಯಲೆಂದು
ದೀಪಕ್

ಬುಧವಾರ, ಜುಲೈ 6, 2016

ಹೀಗೇ

ಇದು ಹಿಂಗಾ ಎಂದು
ಹ್ಯಾಂಗೆ ಹೆಳೋದೇ ಗೆಳತಿ
ಚಣಚಣವು ಕಣಕಣಕೆ
ವರ್ಷಗಳಾದಿಯಾಗಿ ಬಿದ್ದಾ
ಬೆಸುಗೆ,
ಮರು ಚಣಕೇ ಅದು ಬಿರುಕಿ
ಕಿತ್ತಿದ್ದಾದರೂ ಹೇಗೆಂದು
ಮುಸುಕಾಗುಳಿದಿದೆಯೆ ಗೆಳತಿ

ಒಲವು ಪ್ರೀತಿಗಳನ್ನು
ಎತ್ತರ ಎತ್ತರಕೊಯ್ದು
ಎಲ್ಲರಿಗೂ  ಕಾಣ ಕೊಚ್ಚಿದ್ದು
ಎಂದು  ನಿಂಗ
ಹೇಗರುಹೋದೇ ಗೆಳತಿ

ಸೋಮವಾರ, ಜುಲೈ 4, 2016

ಫಿಲಾsuffer

ರಾತ್ರಿ ಚಳಿಯಲ್ಲಿ ಮಿತ್ರನೊಂದಿಗೆ ಟೀ ಕುಡಿಯಹೋಗಿದ್ದೆ. ನಶೆಯಲೊಬ್ಬ ಸವಾಲುಗಳ ಹಾಕುತ್ತಿದ್ದ,
ಅಂಗಡಿಯವನಿಂದ ಪುಕ್ಕಟೆ ಬೀಡಿ ಪಡೆಯಲು
"ಹೇಳು ಒಂದು ಒಳಹೋದರೆರಡಾಚೆ ಬರುವುವುದದೆನೆಂದು"
ಅಂಗಡಿಯವ ಪೋಲಿನಗೆನಕ್ಕ
ಹೋಗುಹೋಗೆಂದು ಬರಿಕೈಯಾಡಿಸಿದ
ಉತ್ತರನೀಡು ಯಾ ಬೀಡಿನೀಡು ಉತ್ತರಿಸುವೆ ಎಂದ
ಚಹಾ ಹೀರುತಿದ್ದ ನಾನೂ ಕಾಯುತ್ತಿದ್ದೆ ಅದೇನೆಂದು
ಕೊನೆಗೂಮಣಿದಂಗಡಿಯವ
ಒಂದು ಬೀಡಿ ನೀಡಿದ
ನಶೆಯ ಕುಡುಕ
ಕಡ್ಡಿಗೀರಿ ಹೊಗೆಯೊಂದಿಗುಗುಳಿದ
"ಹೆಣ ಭೂಮಿಯೊಳ ಹೋಗುತಲು
ಆವ್ಯಕ್ತಿಯ ಗುಣಾವಗುಣ
ಎರಡಾಚೆ ಬರುವುದೆಂದು"

(1995ಡಿಸೆಂಬರ್ ನಲ್ಲಿ ಘಟಿಸಿದ್ದು)

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.