ಶನಿವಾರ, ಏಪ್ರಿಲ್ 30, 2016


ಚಾತಕ ಹಕ್ಕಿಯ ಹಾಗೆ
ದಿನಬೆಳಗು ಕಾಯುವೆ
ನಿನ್ನ ಸುಂದರ ಕವನಕೆ
ವೀರಹ ಸರಸದ
ಮಾತಿಗೆ
ಮುಗಿಯದಾ ಮಮಕಾರಕೆ
ಹೃದಯ ಬೇಗೆಯ ಹಗುರಕೆ
*
ನಾ ಕಾಣದ ಕಿಡಿಯಾಗಿ ಅಡಗಿದ್ದೆ ಕಲ್ಲಿನಲ್ಲಿ
ಆ ಕಿಡಿಯ ದೀಪವಾಗಿ ಬೆಳಗಿಸಿದೆ
ನಿನ್ನೊಲವಿನಲ್ಲಿ...
         #
ದಶಕಗಳಿಂದ ಕಿಡಿ
ಇತ್ತೇ ಹುಡುಗಿ
ಉರುವಲಿಲ್ಲದೆ
ಮಿಂಚುಳವಾಗಿದ್ದೆ
ನಾನು
*

ಮೌನಿ ಮಾತು

ನನ್ನ ಮುಂಗುರುಳ ಸವರಿಹೋದ ನಿನ್ನ ಬಿಸಿಉಸಿರ ಸ್ಪರ್ಶಕ್ಕೆ ನನ್ನ ಮೈಯ ಅಗೋಚರ ತಂತಿಗಳು ಮೀಟಿದ ರಾಗಗಳು ಈಗಲೂ ಹೃದಯದಲಿ ಅಲೆಅಲೆಯಾಗಿ ಹರಿಯುತಿವೆ...
         # mouni
ತುಟಿಗಳದರುತ್ತಿವೆ
ಅಂದಿನಾ ಸವಿ ನೆನಪಿಗೆ,
ನನ್ನೆದೆಯ ಕದವಬಡಿದ
ನಿನ್ನ ಜೇನ್ನುಡಿಗಳು
ಮಂಜುಳ ಗಾನವಾಗಿ
ರಿಂಗಾಣಿಸಿಹುದೀ
ಕರಣದಿ
ಹೃದಯ ಬಡಿತವ
ಹಾರಿಸುತ್ತಿದೆ
ನಿನ್ನಯ ಸಿಹಿ ಸನಿಹಕೆ,
ಅನುರಾಗವು
ಮೀಟುವ
ಪ್ರೆಮ ರಾಗಗಳಿಗೆ
ಇಂದೂ
ಕುಣಿವ ತವಕ
ಈ ಹೃದಯಕೆ
*Maatu

ನನ್ನ ಮುಂಗುರುಳ ಸವರಿಹೋದ ನಿನ್ನ ಬಿಸಿಉಸಿರ ಸ್ಪರ್ಶಕ್ಕೆ ನನ್ನ ಮೈಯ ಅಗೋಚರ ತಂತಿಗಳು ಮೀಟಿದ ರಾಗಗಳು ಈಗಲೂ ಹೃದಯದಲಿ ಅಲೆಅಲೆಯಾಗಿ ಹರಿಯುತಿವೆ...
         # ಶ್ರೀಗೌರಿ
ತುಟಿಗಳದರುತ್ತಿವೆ
ಅಂದಿನಾ ಸವಿ ನೆನಪಿಗೆ,
ಹೃದಯ ಬಡಿತವ
ಹಾರಿಸುತ್ತಿದೆ
ನಿನ್ನಯ ಸಿಹಿ ಸನಿಹಕೆ
ಅನುರಾಗವು
ಮೀಟುವ
ಪ್ರೆಮ ರಾಗಗಳಿಗೆ
ಇಂದೂ
ಕುಣಿವ ತವಕ
ಈ ಹೃದಯಕೆ
ದೀಪಕ್

ಶುಕ್ರವಾರ, ಏಪ್ರಿಲ್ 29, 2016

ಕನವರಿಕೆ

ನಿನ್ನ ನೆನಪು ಕನವರಿಕೆಯಾಗಿ
ಭಾದಿಸುತ್ತಿದೆ ನನ್ನ,

ದರುಶನವ ನೀಡಿ
ಪಾವನನಾಗಿಸು ನನ್ನ

ನಿನ್ನ ನೆನಪು ನಿರ್ವಾತವಾಗಿ
ಉಸಿರಮುಕುತಿದೆ ನನ್ನ
ಗಾಳಿಯಾಗಿ ಉಸಿರ ನೀಡಿ
ಆಹ್ಲಾದಿಸು ನೀ

ನಿನ್ನ ನೆನಪು ನೆಪವಾಗಿ
ಬಾಧಿಸುತ್ತಿದೆ ನನ್ನ
ನೆನಪಿನಿಂದ ಮರೆಯಾಗಿ
ಬದುಕಿಸು ನೀ ನನ್ನ
***
ಹೃದಯದ ಹಾಡು

ಎನ್ನೆದೆನೋವನ್ನು ಹೆಗರುಹಲಿ
ಹೇಳೇ ಸಖಿ
ತಿರುಗಿಬಾರದು ಹೃದಯ
ನುಡಿದೈದು  ಪದಗಳಲಿ
ಹೃದಯ ವೈದ್ಯನು ಬೇಡ
ಹೃದಯ ಚೋರಿಯೂ ಬೇಡ
ಉಳಿವೆ ನಾ ಪವಾಡಿಸುತ
ಪದಗಳೊಂದಿಗಾಟವಾಡುತ
ಹೃದಯ ಬಡಿದು
ನಲಿವು ಹೊತ್ತಿ
ದೆಹಕೆಲ್ಲ ಮುದವನಿಟ್ಟು. 
ಅವಳ ನೆನಪು ಇವಳ ನೆನಪು
ಹೊಗೆಯ ರೂಪದಿ
ದೇಹ ಸೇರಿ..
ಹೆಪ್ಪ ರೂಪದಿ ಹೃದಯ ಕಟ್ಟಿ
ನಾಲ್ಕು ತಜ್ಞರ ತಂಡ ಕಟ್ಟಿ..
ಹೆಪ್ಪ ಚುಚ್ಚಿ ದೇಹ ಕುಕ್ಕಿ
ಉಳಿದ ಜೀವ
ನೋಯುತಿಹುದು...
ದಾರಿ ಮುಗಿವ ಭ್ರಾಂತಿ ಇಹುದು
ಮುಗಿಯುತಿಹುದೀ ಬಾಳ ಪಯಣ...😊
*ದೀಪಕ್

ಗುರುವಾರ, ಏಪ್ರಿಲ್ 28, 2016

ಮಾರುಕಟ್ಟೆ ಹಸಿರು ಪ್ರೇಮ

ನಿನ್ನ ಹುಸಿಮೋಹದ ಮಾಯೆಗೆ ಸಿಲುಕಿ ನನ್ನ ಆತ್ಮ ಮಾರಿಕೊಂಡು ಬದುಕ ಹಸಿವಿಗೆ ಪಶ್ಚಾತ್ತಾಪದ ಕಂಬನಿ ಮಿಡಿಯುತಿರುವೆ....
         # ಶ್ರೀಗೌರಿ

ನನ್ನಾತ್ಮದಸಿರು ಪ್ರೇಮ
ಒಣಗಿಲ್ಲ ಕಣೆ ಹುಡುಗಿ,
ನನ್ನೊಲವಿನಾ ಬೇರುಗಳು
ಜನ್ಮಾಂತರಗಳಿಗೆ ಗರಡಿ ಹಾಕಿ
ಪ್ರೀತಿಯನು ನಿತ್ಯ ಚಿಗುರಿಸುತ್ತಿವೆ,
ನಮ್ಮ ಒಲವಿನ ಕಾವ್ಯವ
ಹುಸಿ ಮೋಹವೆಂದು
ರೋಧಿಬೆಡವೆ ಸಖಿ
ಸಾಗರ ಲವಣವಿಲ್ಲದೆ ಸಿಹಿಯಾದೀತು
ಆತ್ಮಗಳ ಮಾರುಕಟ್ಟೆ
ತುಳುಕಿ ಬರಿದಾದೀತು
ದೀಪಕ್

ಮರೆವು

ನೀನಿಲ್ಲವೆಂದು
ದುಃಖಿಸುವ ಮನ.
ನಿನ್ನಿರುವಿಕೆಯಲಿ
ಸಂಭ್ರಮಿಸುವುದ
ಮರೆತಿದೆಯೇ
ಹುಡುಗಿ

ಧನ್ಯತೆ

ತೀವ್ರತೆ ;
ಅನುಭವಿಸಿದಷ್ಟು,
ನೋವು ;
ಉಂಡಷ್ಟು,
ಪ್ರೀತಿ ;
ಯಾವಾಗಲೂ ಸಿಕ್ಕಷ್ಟು,
ಧನ್ಯತೆ ;
ನಾವು ಇತರರಿಗೆ
ನೀಡಿದಷ್ಟು.
ದೀಪಕ್

ಎದೆ ಉಳಿ

ನಿನ್ನ ಕಲ್ಲೆದೆಯ ನನ್ನ
ಪ್ರೀತಿಯ ಉಳಿಯಿಂದ
ಕುಟ್ಟಿದರೂ ಉದುರಿದ್ದು
ತಿರಸ್ಕಾರದ ಜಲ್ಲಿ
ಕಲ್ಲುಗಳು
#ಶ್ರೀ ಗೌರಿ
ಹರಿವ ಪ್ರೆಮಸುಧೆಯ
ಶೀತಲಿಸಿ
ಬಂಡೆಯಾ ಮಾಡಿ
ಅಂದು ಬೇಕಿದ್ದ
ಹನಿ ಪ್ರೀತಿಯ
ಇಂದು ಉಳಿಮಾಡಿ
ಕುಟ್ಟಿದರೆ
ಹೃದಯ ಜಿನುಗದೆ ಹುಡುಗಿ;
ಏಕೆಂದರೆ
ಕರಗಲು ಬೆಕಿರುವುದು
ಕುಡಿನೋಟ
ಪಿಸುಮಾತು
ಬಿಸಿಯಪ್ಪುಗೆ
ಸರಸ ಸಲ್ಲಾಪಗಳೆ
ಹುಡುಗಿ
ಮೊನಚುಳಿಯ ಏಟಲ್ಲ
*ದೀಪಕ್

ಬುಧವಾರ, ಏಪ್ರಿಲ್ 27, 2016

ವಧು ವಧೆ

ನನ್ನ ಮೀರುವಕ್ಕರಗಳ
ವರಿಸಿ
ನನ್ನ ವಧಿಸಿಬಿಡೆ
ಹುಡುಗಿ
ಹೀಗೆ ಸುಮ್ಮನೆ
ವಧು;ವಧೆ
*ದೀಪಕ್

ನಿವೇದನೆ

ಹುಡುಗಿ ಸರಸದಲಿ
ವಿರಸ ಕಾಣುವಕೊಂಕೇಕೆ
ನಿನಗೆ
ಯರಾಮೇಲೀ ಮುನಿಸು

ರಮಿಸದ ಚಂದಿರನಮೇಲೋ
ಮಲ್ಲಿಗೆಯ ಘಮಕೆ ದ್ವೇಷವೋ
ಘನಿಸಿ ಸುರಿಯದ ಮೋಡದ ಮೇಲೇ ಸಿಟ್ಟೋ
ಬೆಚ್ಚನೆ ಭಾವ ಮೂಡಿಸದ ಸುಡುರವಿಯಮೇಲೆ 
ಕೋಪವೋ
ಯಾ ಸರಸಕೆ ಬಾರದ
ಇನಿಯಯನ
ಮೇಲಿನ ಮುನಿಸೋ

ಜನನಿ ನೀನು
ಮಾತೆಯಲ್ಲವೆ,
ಕ್ಷಮೆ ಮೋಕ್ಷದ
ಅನಂತ ಚಿಲುಮೆ
ನನಗೆ ಒಲುಮೆ
ತೋರು ನೀ ಗೆಳತಿ
-ದೀಪಕ್

ಮಂಗಳವಾರ, ಏಪ್ರಿಲ್ 26, 2016

ಹೀಗೆ

ನಕ್ಕು ಬಿಡೂಮ್ಮೆ
ಹುಣ್ಣಿಮೆ ಕಂಡು
ಯುಗಗಳಾದವೆ
ಹುಡುಗಿ

ವಿದಾಯ ಗಾಯ

ಹೊರಡುವುದಾದರೆ ಹೊರಟುಬಿಡು ಗೆಳೆಯ
ಈ ಅಗಲಿಕೆ ಅನಿವಾರ್ಯವಾದರೆ ಹೇಳುವೆ ವಿದಾಯ...
       #

ದಶ ದಿಕ್ಕುಗಳಲು
ನೀನೆ ತುಂಬಿರುವಾಗ
ಎಲ್ಲಿಗೆ ಹೊರಡಲಿ ಪ್ರಿಯೆ
ಹೇಳಿ ವಿದಾಯ
ಆಗುವುದು ಹೃದಯಕೆ
ಮತ್ತೊಂದು ಗಾಯ
*

ಸೋಮವಾರ, ಏಪ್ರಿಲ್ 25, 2016

ಬದುಕು

ಬದುಕೇ ಒಂದಾಟ
ನನಗೆ ಗೊತ್ತು
ಬದುಕು ಇರುವುದಿನ್ನಷ್ಟು ದಿನ

ಆದರೂ ಬದುಕುತಿಹೆನು,
ಸಾವನು ಕಾಯಲಲ್ಲ
ಬದುಕಲು
ಬದುಕಿದಮೇಲೆ
ಸುಮ್ಮನಿರಲಾಗದು ನೋಡಿ
ಅದಕೆ ಮನೆ ಕೆಲಸ ಸಾಲ ವಾಯಿದೆಗಳಾಟ
ಇಲ್ಲವೋ
ಅಪ್ಪನ ಗಂಟ ಹೊತ್ತು ಕಾಯ್ದು ಕರಾಗಿಸುವಾಟ
ಕಾಲಬರಲೆಲ್ಲ ಕಾಲವ

ಶನಿವಾರ, ಏಪ್ರಿಲ್ 23, 2016

ಪ್ರೀತಿ

ಓ ಹುಡುಗಿಯೇ
ಪ್ರೀತಿ ಜೀವದ ಗುಟ್ಟು
ಪ್ರೆಮ ಮುದುಡದು
ಮೋಹ ಮುದುಡುವುದು
ಪ್ರೀತಿ ಹಿಂಡದು
ಯೋಚನೆ ಹಿಂಡುವುದು
ಹೃದಯ ನರಳಿಕೆ
ಒಮ್ಮೆ ಪ್ರೀತಿಸಿ ನೋಡು
ನರಳಿಕೆ ಇರದು

ನಾನು ಪ್ರೀತಿಸಿರುವೆ
ನಿನ್ನ ತುಂಬಾ ತುಂಬಾ
ಪ್ರೀತಿಸಿರುವೆ
ನೋವನನುಭವಿಸುತ್ತಿರುವೆ
ದ್ವೇಷದ ಭಾವ ಎಂದು
ಬರಲಿಲ್ಲ
ಎಷ್ಟೇ ಯತ್ನಿಸಿದರು
ಮನ ನಗುವುದು
ನನ್ನ ಪಾಡು ನೋಡಿ

ಮರೆಯಬಹುದು,
ದ್ವೇಷ ಬಾರದೆ ಹುಡುಗಿ
ನಿನ್ನೊಡನೆ ಕಳೆದ ಸವಿ
ಸಮಯವೆಲ್ಲ ನನ
ಬಾಳ ಹಸಿರ ಹಾದಿ
ಹೇಳು,
ಹೇಗೆ ದ್ವೆಷಿಸಲಿ

ಮೊದಲು ನನ್ನ ನಾ ದ್ವೆಶಿಸಬೆಕು
ನಂತರವಷ್ಟೇ ನಿನ್ನನು,
ಅದೂ ನಿನ್ನ  ನೆನೆಸಿಕೊಂಡು.

ಆಗದು ನಿ ನೆನಪಾದೊಡನೆ
ಬರುವುದು ನಿನ್ನಯ
ನಗುಮೊಗ
ಮನಃಪಟಲದಲಿ ಹುಡುಗಿ
ಸುಖವಾಗಿರು

ಹುಡುಗಿ
ನೀ ನನ್ನ ನಗುವಿನಲ್ಲಿ
ಕಳೆದು ಹೋಗಿ
ಕವಿತೆಯಲ್ಲಿ
ಮೇಲೆದ್ದೆ ಕಣೆ

ಸತ್ಯ

ಮತ್ತೆ 🐝ಮೆಟಿರಿಯಲಿಸ್ಟಿಕ್ ನಮ್ಮ ಆಯ್ಕೆ
ದಿಕ್ಕು ದೆಸೆ ತಿಳಿಯದ ನಾವು ಮೂಢತೆಯಿಂದ ಯಾವುದೋ ಒಂದು ಅನೂಹ್ಯತೆಯನ್ನು ಹಿಂಬಾಲಿಸುತ್ತಿದ್ದೆವೆ
ಸತ್ಯವೇನೆಂದು ತಿಳಿಯದೆ
ಸಿಕ್ಕ sick ಭಾವಗಳನ್ನು
ನಮ್ಮ ದಾಗಿಸಿಕೊಳ್ಳುತ್ತಿದ್ದೆವೆ
ಖಾಲಿತನವ ತುಂಬಲು
ಸತ್ಯವೇನೆಂದು ತಲಾಂತರಗಳಿಂದರಿಯದೆ

ಸತ್ಯ ತಿಳಿಸಬಂದವರು
ಹಲವಾರು
ಬಸವ ಬುದ್ಧ ಆಚಾರ್ಯರು
ಎಲ್ಲ ತಿಳಿಸಿದರು ಬದುಕುವ ರೀತಿಯನ್ನು
ಸತ್ಯದರಿವ ನೀನೆ ಅರಿ ಎಂದು
ಸತ್ಯ ಪರಿಪೂರ್ಣ ಅಂದು ಅಲ್ಲ
ಇಂದು ಇಲ್ಲ
ಬೆಳಕಿನ ಹಗ್ಗ ರಾತ್ರಿ ಹಾವು
ಅವರವರ ಭಾವಕ್ಕೆ
ಅವರವರ ತಿಳಿವಿಗೆ

ಶುಕ್ರವಾರ, ಏಪ್ರಿಲ್ 22, 2016

ದೇಹ ಭಾಷೆ


ನನಗೊಂದು ಪ್ರಶ್ನೆ
ಪದೇ ಪದೆ ಬರುವುದು

ನಾ ಸತ್ತರೆ
ನಿಮಗಾರು ತಿಳಿಸುವರು
ಎಂದು

ನೀವು ನಾ ಸತ್ತಾಗ
ನೋಡಲು ಬರುವಿರ
ಎಂದಿನ್ನೊಂದು

ತಿರುಗಿ ಮತ್ತೊಂದು
ಯೋಚನೆ
ನಗುತರಿಸುವುದು
ನಾ ಸತ್ತ ತರುವಾಯ
ಏನಿದ್ದರೆನು ಹೆಗಾದರೆನು
ಅದು ನನ್ನದಲ್ಲವೆಂದು

ಬದುಕು

ಬದುಕಿನ ರೀತಿ
ಬದುಕಿಗಿಂತಲೂ ನಿಗೂಢ
ಉಸಿರೆಳೆದೊಡೆ ಜೀವ
ಹೊರಹಾಕುವುದೆ ಮರಣವೆನುತಿದ್ದಹಾಗೆ
ನೋಡುತ್ತಿದ್ದ ಅಕ್ಷಿಗಳು ಹಸಿಯಾದವು
ಬಾಯೊಣಗಿತು
ಎದೆ ಹೊಡೆದುಕೊಂಡಿತು
ಹೊಟ್ಟೆ ನುಲಿಯಿತು
ಮೂಲಾಧಾರ ಮುಚ್ಚಿಕೊಂಡಿತು
ಎಲ್ಲವೂ ಬದುಕಪರ ನಿಲ್ಲುವ ಸೂಚನೆಗಳೆ
ದೇಹ ಹೆಳುತಿಹುದು
ನಾನಿರುವೆ ನಿನ್ನೊಡನೆ
ತೊರೆಯಬೇಡ
ಜಿಯಾ ಎಂದು

ಬುಧವಾರ, ಏಪ್ರಿಲ್ 20, 2016

ಮೌನಾರ್ಥ

ಮಾತು ಮುತ್ತು ಮೌನ ಬಂಗಾರವೇ ಹುಡುಗಿ
ನಿನ್ನಮನದ ಕ್ಲೇಶಗಳು
ಅನಂತತೆಯ ಮೀರಿದವು ಕಣೆ
ನಿನ್ನ ತಲ್ಲಣದಲೆಗಳ ಬಡಿತಕ್ಕೆ
ಕಲ್ಲಾದೆ ಶಪಿತನಂತೆ.
ನಿನ್ನ ಸನಿಹದ ಸಿಹಿ ಸಿಂಚನ ಮೆಲ್ಲುವಾಗ
ಕಲ್ಲಮೇಲೆಜ್ಜೆ ಗುರುತೆಂತು ಮೂಡುವುದೆ?
ಮರುಭೂಮಿಯಲಿ ಗಜಪ್ರಸವ!
ಬದುಕರ್ಥ ಪೂರ್ಣವಾಗುವುದು
ಸಾವಿನ ತರುವಾಯವಲ್ಲವೆ ಗೆಳತಿ
ಮೌನವನಿಷ್ಟು ವಿಪರೀತ ಅರ್ಥೈಸಬಾರದು ಗೆಳತಿ

ಉಳಿಸು

Sri Gowri: ಉಳಿಸಿಕೊಳ್ಳುವ ಮನಸ್ಸು
ನಿನಗೆ ಇಲ್ಲದ ಮೇಲೆ  ,
ತೊರೆದುಹೋಗುವ
ಮನಸಿಗಾಗಿ
ನಾನೆಷ್ಟು ಬಿಕ್ಕಿ ಬಿಕ್ಕಿ ಅಳಲಿ.....
          #ಶ್ರೀಗೌರಿ

ಉಳಿಸಿಕೊಳ್ಳುವ
ಮನಸುಂಟೇ ಹುಡುಗಿ

ಉಳಿಸಿ
ಕೊಲ್ಲಬಾರದು ನೋಡು
ನಿನ್ನನು,
ಅದಕೆ ಬೀಳ್ಕೊಡುವೆ....
ಮೌನದಿ😔

ಮಂಗಳವಾರ, ಏಪ್ರಿಲ್ 19, 2016

ನೆನಪು

ನಾನು ಪ್ರೀತಿಸಿರುವೆ,
ನಿನ್ನ ತುಂಬಾ ತುಂಬಾ
ಪ್ರೀತಿಸಿರುವೆ...
ನೋವನನುಭವಿಸುತ್ತಿರುವೆ...
ದ್ವೇಷದ ಭಾವ ಎಂದು
ಬರಲಿಲ್ಲ!
ಎಷ್ಟೇ ಯತ್ನಿಸಿದರು ಬಾರದು😔
ಮನ ನಗುವುದು ನನ್ನ ಪಾಡು ನೋಡಿ😁
ಮರೆಯಬಹುದು...
ದ್ವೇಷ ಬಾರದೆ ಹುಡುಗಿ...

ನಿನ್ನೊಡನೆ ಕಳೆದ ಸವಿ ಸಮಯವೆಲ್ಲ ನನ
ಬಾಳ ಹಸಿರ ಹಾದಿ...
ಹೇಳು ...ಹೇಗೆ ದ್ವೆಷಿಸಲಿ ....
ಮೊದಲು ನನ್ನ ನಾ ದ್ವೇಷಿಸಬೆಕು
ನಂತರವಷ್ಟೇ ನಿನ್ನನು...
ಅದೂ ನಿನ್ನ  ನೆನೆಸಿಕೊಂಡು.

ಆಗದು ...
ನಿ ನೆನಪಾದೊಡನೆ
ಬರುವುದು
ನಿನ್ನಯ ನಗುಮೊಗ
ಮನಃಪಟಲದಲಿ ಹುಡುಗಿ...
ಸುಖವಾಗಿರು....
ದೀಪಕ್

ಸೋಮವಾರ, ಏಪ್ರಿಲ್ 18, 2016

ಪ್ರೆಮಗಾಥೆ

ಇವನು ಕಾದಂಬರಿ
ಅವಳು ಕವಿತೆ
ಇವ ಪಾತ್ರಗಳಿಗೆ
ಬಣ್ಣ ಹಚ್ಚುತ್ತಿದ್ದ
ಅವಳು ಕವಿತೆಗಳಿಗೆ
ಭಾವ ತುಂಬುತ್ತಿದ್ದಳು
ಭೇಟಿಯಾಗುತ್ತಿದ್ದರು
ಅವಳ ಕವಿತೆಗೆ ರಾಗ ವಾಗುತ್ತಿದ್ದ
ಇವನ ಕಾದಂಬರಿಗಳಿಗವಳು
ಬಣ್ಣವಾಗುತ್ತಿದ್ದಳು
ಅವಳೋ ಚುಟುಕು
ಇವನೋ ದೀರ್ಘ
ಅವಳು ಮುಗಿದಾಗ
ಇವನಿನ್ನು
ಮೊದಲ ಪುಟದಲಿದ್ದ

ವಿದಾಯ?

ನಿನ್ನ ನೋಡುತ್ತಾಲೇ
ವಿದಾಯ ಹೆಳುವವನಿದ್ದೆ
ಕಣೆ ಹುಡುಗಿ
ತುಂಬಿದ ಕಣ್ಣಾಲಿಗಳನು ತೋರಿ
ನಡೆವುದು ದುಸ್ತರ ವಾಗಿ
ನಿನ್ನ ಬೆನ್ನ ಹಿಂದೆ ಮಾಡಿ
ಸ್ವಲ್ಪ ತಿರುಗಿ ನೂಡಿದರೆ
ನಿನ್ನ ಹನಿಗಣ್ಣು ನನ್ನ
ಸುಟ್ಟು ಬೊಬ್ಬೆ ಮೂಡಿಸಿತು
ಗಂಟಲುಬ್ಬಿ ಮೌನತಬ್ಬಿ
ಮತಿ ಭ್ರಮಿತನಾಗಿ
ತಿರುಗಿ ಹೂಗಲಾರದೆ
ಮತ್ತೆ ನಿನ್ನ ಸೆರಲಾರದೆ
ಅಂತರ್ಪಿಶಾಚಿತ ಭಾವ
ಮಾತು ಹೊರಡಲಿಲ್ಲ
ಕಾಲು ಆಲುಗಲಿಲ್ಲ
ನಾಲಿಗೆ ಹೊರಳಲಿಲ್ಲ
ದ್ರಷ್ಟಿ ಕೀಳಲಾಗಲಿಲ್ಲ

ಸೀಳು

ನಿನ್ನ ಮನದಂಗಳಾದ
ಹೆಳವ ನಾನು
ಚೂರಾದ ನನ್ನ ಹೃದಯದ
ಪ್ರತಿ ಸೀಳಿನಲ್ಲೂ
ನಿನ್ನೆಸರು ಸೀಲಾಗಿದೆಯಲ್ಲೇ
ಹುಡುಗಿ

ಭಾನುವಾರ, ಏಪ್ರಿಲ್ 17, 2016

ಯಾರು

ಅಳಿಸಲು ನಾನ್ಯಾರು
ನಗಿಸಲು ಅವನ್ಯಾರು
ಅವರವರ ಭಾವಗಳ
ಬುಟ್ಟಿಯ ಆವರವರೆ
ಹೋರಬೆಕೊ ತಮ್ಮ
ಸಹ ಪಯಣಿಗಳುವರಾರೋ
ಅವರವರ ಜಿವನ  ಡೋಲು
ಬಾರಿಸುವಲ್ಲೆ ಎಲ್ಲ ನಿರತರು

ಒಪ್ಪಂದ

ನೆನ್ನೆಯೊಂದಿಗೆ
ಒಪ್ಪಂದ ಮಾಡಿದ್ದೇನೆ
ನನ್ನ ಇಂದುಗಳನ್ನು
ಇಡಿಯಾಗಿ
ನುಂಗ ಬೇಡವೆಂದು
ನಿನ್ನೆ ನಾಳೆಗಳ
ಪಾಕದಲ್ಲಿ
ಇಂದು ಕರಗಿ
ಹೋಗಬಾರದೆಂದು

ಶನಿವಾರ, ಏಪ್ರಿಲ್ 16, 2016

ಸಾವಿನ ಪದ

ಬೇಡೆoದರು
ಬಿಡದಪ್ಪುವೆನು
ಹೋಗು ಬದುಕಿಕೊ ನೀನು
ಕರೆಕರೆದು ಬರಿಕರದಿ
ತಿರುಗುವುದು ಬೇಡ
ಬದುಕನಪ್ಪು ನೀ,
ಜಗಕಲ್ಲ ಜನಕಲ್ಲ
ನಿನ್ನ ದೇಹ ಧಾರಿಯಾಗಿರಲಿಚ್ಚಿಸುವಾತ್ಮಕೆ

ಕರುಬಿದವರೆಲ್ಲ ಪಡೆದುಕೊಂಡವರಿಲ್ಲ
ನನ್ನ ಮರೆತು ಬಾಳುವರೆಲ್ಲ
ಭಗ್ನ ಪ್ರೆಮಿಗಳಿಗೆಲ್ಲ
ಉತ್ತರವೂ ನಾನಲ್ಲ
ಹೋಗು ಹೋಗೆ
ಜೀವ ಮುಖಿಯಾಗು,
ನಿನ್ನಂತೆ ಬದುಕಿ
ನಿನಗೆ ಮಾದರಿಯಾಗು
ಬರುವ ಸಮಯಕೆ ಬರುವೆ
ಅನುಭವಿಸು
ಭವಸುಖವ
*ದೀಪಕ್

ಶುಕ್ರವಾರ, ಏಪ್ರಿಲ್ 15, 2016

ಪ್ರಶ್ನೋತ್ತರ

ಕತ್ತಲಾದ ಕಣ್ಣಿಗೆ ಒಲವಿನದೀಪ ಹಚ್ಚುವೆಯೇಕೆ,         ನಿಟ್ಟುಸಿರಲಿ ಚೆಲ್ಲಿದ ಕಂಬನಿಗಳ ಮುತ್ತಾಗಿಸುವ ಹುಂಬತನವೇಕೆ,  ಅನಾಥವಾದ ದುಃಖಗಳಿಗೆ ಸಾಂತ್ವನದ ಮುಲಾಮು ಹಚ್ಚುವೆಯೇಕೆ,         ಹುಳಿಗಟ್ಟಿದ ಮನಸ್ಸಿದು ಪ್ರೀತಿಯ  ಜೇನು ಸುರಿಸುವೆಯೇಕೆ,          ಮುಡಿಕಟ್ಟದ ತುರುಬಿದು ಆಸೆಯ ಮಲ್ಲಿಗೆಯ ಮುಡಿಸುವೆಯೇಕೆ,               ರಾಗ ಮಿಡಿತಗಳಿಲ್ಲದ ದೇಹವಿದು ಚಿಟಿಕೆ ಸಿಂಧೂರವಿಟ್ಟು ಗರತಿಯ ಮಾಡಲೇಕೆ,           ನಿರ್ಮೋಹಿಯಾಗಿರುವೆ ಬದುಕಿಗೆ ಮಧುರ ಭಾವಗಳ ಓಕುಳಿ ಎರಚುವಯೇಕೆ,          ಅಲೆಮಾರಿ ಬಾಳಿದು ಭರವಸೆಯ ಗೂಡು ಕಟ್ಟುವೆಯೇಕೆ,      ಆತ್ಮದ ಹಸಿವಿಗೆ ಕಾಯದ ಜೋಳಿಗೆ ಹಿಡಿದು ಹೊರಟಿರುವೆ ಮಮಕಾರದ ಭಿಕ್ಷೆ ನೀಡುವೆಯೇಕೆ ???     ........................... ...............#ಶ್ರೀಗೌರಿ   .............. .........  .........

ನಿನ್ನ ಕಣ್ಣು ದೀವಿಗೆ
ನಿನದು ಬೆಳಕಿನ ನೆರಳು
ಸುತ್ತ ಜಗವ ಬೆಳಗುವಳು ನೀನೆ,

ನಿನ್ನ ಕಂಬನಿಗಳ ಹಿಡಿಯಲು ಬಾಯ್ದೆರೆದಿರುವ ಚಿಪ್ಪು ನಾನು
ಮುತ್ತ ನೀಡದೆ ಏನು ಮಾಡಲಿ  ತುಡುಗಿ,
ದುಃಖಕಿಲ್ಲ ಯಾರು ನಾಥ ಗೆಳತಿ
ದುಃಖಿಸಬೆಡ ಪ್ರಿಯೆ,
ಹುಳಿಯೆ ಸಿಹಿಯಾಗುವುದು ಸಮಯದಲ್ಲಿ ,
ನೋಡಾ ಮಾವನ್ನು ಅದು ಅಷ್ಟೇ ಮಾಗುತ್ತ ಸಿಹಿ ಪಡೆಯುವುದು ಹುಡುಗಿ,
ನೀನನ್ನ ಪ್ರಿಯೆ
ಹೇಗಿದ್ದರೂ ಚನ್ನ ಅದಕೆ ಮುಡಿಸುವೆ ಮಲ್ಲಿಗೆ ,
ಚಿಟಿಕೆ ಸಿಂಧೂರ ಅಡುಗೆ ಉಪ್ಪಿನಂತೆ ಕಣೆ,
ನಿನ್ನ ಸೌಂದರ್ಯದಡುಗೆಗೆ
ಸಿಂಧೂರ ಉಡುಗೆಕಣೆ
ಮೋಹವ ತೊರೆಯಲಾನುಭವಿಸಬೇಕೇ ಗೆಳತಿ
ಅದಕೆ ಕಾಮನೆಗಳ ಓಕುಳಿಯಾಟ...
ಯಾರಿಲ್ಲ ಅಲೆಮಾರಿ ಇಲ್ಲಿ ಹೇಳು ಮನದನ್ನೆ,
ನಾ ನೀ ಎಲ್ಲ ಭವಾಭಾವದಲಿ ಅಲೆಮಾರಿಗಳೆ,
ಆತ್ಮಕೆ ಹಸಿವಿಲ್ಲ ಕಣೆ
ಮಮಕಾರ ತಾಯಿಯಾಸ್ತಿ
ದೀಪಕ್

ಹಂಬಲ

ಹುಡುಗಿ
ನಿನ್ನ ಮಾತುಗಳ
ಕೇಳುತನಿಸುವುದು
ಎಲ್ಲಿದ್ದಳಿಲ್ಲಿ ತನಕ
ನನ್ನ ನಾಡಿಯ ಹಿಡಿವ
ಬಲ್ಲಿದಳು
ಬಳಿಯಲಿಲ್ಲವಲ್ಲ ಎಂದು.
ಅದು ಹಾಗೆ
ಎಲ್ಲರಿಗೆಲ್ಲವೂ
ಸಿಗದಿರುವುದು
ಪಡೆಯಲಂಬಲಿಸುವುದೇ
ಬಾಳಲ್ಲವೇ

ನೆನಪಿನಲ್ಲಿ

ಕೊಟ್ಟು ಸಾವಿರ ನೆನಪು
ನನ ಬಿಟ್ಟು ಹೊರಟೆ
ಎಲ್ಲಿಗೆಅವ್ವ
ಸಂತೆಯಲಿ
ನಾ ಕದ್ದ ಹಣ್ಣ
ನನಗೆ ಕೊಡಿಸಿ
ಕದಿಿಯಬೇಡ
ಎಂದು ಪಾಠ
ಕಲಿಸಿ
***
ಹೀಗೆ ತೊರೆದರೆ
ನಮ್ಮ ಪಾಡೇನು
ಬದುಕ ದಾರಿ ದುರ್ಗಮ
ಸವೆಸಲು
ನೀನಿದ್ದೆ ಸಾಥ್
ಇಲ್ಲಿವರೆಗೂ
ನೀನ್ನಿಲ್ಲದ ಬದುಕ ಬಿಕೋ

***
ಬದುಕೇ
ಹೋದಮೇಲೇಕೆ
ಮಜ್ಜನವೋ?
ಶುಚಿಬೇಕು ಆತ್ಮಕೆ
ದೆಹಕಲ್ಲ ತಾಯಿ

***
ನಿಂತಿಹರೆಲ್ಲ ಮಸಣ
ಹಾದಿಯ
ಸರದಿಯಲ್ಲಿ
ಸರದಿ ಬರುವವರೆಗೂ
ಅಲ್ಲಿಲ್ಲಿ ಅಲೆದಾಟ
***
ಅಳುವೆಯೆಕೆ
ನಿನ್ನ ಸರದಿ
ಬರುವುದೆಂದೋ
ಹುಟ್ಟಿನೊಂದಿಗೆ
ಬರುವ ಏಕೈಕ
ಪ್ಯಾಕಜಿದು ಕಂದಾ
ಬೆಡವೆನುವಂತಿಲ್ಲ

ಗೋರಿ

ಮೈ ಸುಡುವ
ಬಿಸಿಲ ನಡುವೆ
ಆಳದ ಬಂದು ತೆಗೆಸಿ
ಒಳ ಮಲಗಿಸಿ
ನಾ ಬೆವರ ಒರೆಸುತ
ತಣ್ಣೀರಲಿ ಮಿಂದು
ಪಂಕ ದ ಕೆಳಗೆ ಕುಳಿತೆ
ನೀನಲ್ಲಿ ಒಂಟಿ
ಗೋರಿಯೊಳಗೆ

ಮಂಗಳವಾರ, ಏಪ್ರಿಲ್ 12, 2016

ಅಪ್ಪ

ನಿನ್ನಯಹಂಕಾರಕೆ
ಬಗ್ಗದ ನಾನು
ನಿನ್ನ ಕಂದ
ರೊಚ್ಚಿಗೆ ಬಿದ್ದು ಅಳುವುದ
ನಾ ಕಲಿತಿದ್ದು ನಿನ್ನಿಂದ
ನಿನ್ನ ಬೇಡಗಳೆ
ನನ್ನ ಬೇಕುಗಳು
ಹೇಗೆಂಬ ಪ್ರಶ್ನೆಗೆ ಉತ್ತರ
ನಾನೂ ಹುಡುಕುತಿರುವೆ.

ನಾವಲ್ಲ ಶತ್ರು
ಆದರೂ ಪೈಪೋಟಿ
ನಾನಿನಗೆ ಮೇಲೆಂಬ
ಸೋಗು
ಒಳ ಮನಕೆ ಗೊತ್ತು
ನೀನೆ ಮೇಲು,
ನೀನಲ್ಲವೆ ನನ್ನಪ್ಪ
ಜಗದ ಜನಕೆಲ್ಲ
ಆದರ್ಶ ನೀನು
ನನಗೆ ನೀ ಕರ್ಕಶ ಭಾಸ
ಒಳಗೆ
ಮಾತೃ ವಾತ್ಸಲ್ಯ
ಹೊರಗೆ
ನಿಷ್ಕರುಣಿ
ಕಟುಕ

ಸೋಮವಾರ, ಏಪ್ರಿಲ್ 11, 2016

Vayaasu

ವಯಸ್ಸು ಸವೆಯುತ್ತ
ನಾಲಿಗೆ ಹರಿತವಾಗಿತ್ತಾ
ದೇಹ ಬಡವಾಗಿತ್ತಾ
ಸರಿ ತಪ್ಪುಗಳ ವಿಮರ್ಶೆ
ತುಫಾಕಿ ಮಾತುಗಳು
ನೂವಾದೀತವಾಗೆ
ಎಂಬ ಚಿಂತಿಲ್ಲ
ಕಾಲ ಹರಣಕೆ ದಾರಿ ತಿಳಿಯುವುದಿಲ್ಲ
ಮಾತಿರುವುದು
ಮಮತೆಗೆಂಬುದ
ಮರೆಯದಿರು ಗೆಳತಿ
ವಯಸೇನಾದರೆನು
-ದೀಪಕ್

ಭಾನುವಾರ, ಏಪ್ರಿಲ್ 10, 2016

ನೆನಪುಗಳೇ ಹಾಗೆ

ನೆನಪುಗಳೇ ಹಾಗೆ
ಚಳಿಗೆ ಹೊದ್ದು
ಮಲಗಿರುವ ಅಜ್ಜನಂತೆ
ಎದ್ದು ಬರುತ್ತವೆ
ಭಾವುಕತೆಗೆ

ಶನಿವಾರ, ಏಪ್ರಿಲ್ 2, 2016

ಬದುಕು2

ವೇಷ ಭೂಷಣ
ಇರುವವವರೆಗೆ
ಜೀವನೋತ್ಸಾಹ ದ್ರವ್ಯ
ಬದುಕು ಭವ್ಯ
ನಾ ನೋಡಿದರೆ,
ಇಲ್ಲದಿರೆ ಅದೇ ಇರುತ್ತದೆ
ಇರುವವರೆಗೆ ಅದಕೆ
ಬೇಕಿಲ್ಲ ನನ್ನ ಚಿಂತೆ

ಹುಟ್ಟು ಸಾವುಗಳು
ಯಾರಾಸೆಗೂ
ಆಸರೆಯಾಗಿ ಬಾರದು
ಆಸೆ ನಮದಷ್ಟೆ
ಜೀವ ಪ್ರಕೃತಿಯದು
ಕೊಟ್ಟು ತೆಗೆವುದದರಾಟ
ಬದುಕ ಸ್ವಾದಿಸುವುದೆಮ್ಮಾಟ

ಬದುಕು1

ಬದುಕು
ಬರಡು ಭೂಮಿಯಲ್ಲಿ
ದೊರಕಿದ ಓಯಸಿಸ್ ನಂತೆ
ಬಾಯಾರಿದವನಿಗೆ ಗೊತ್ತು
ಬಾಯಾರಿಕೆ ಏನೆಂದು
ಬೆಂದವಗೆ ಗೊತ್ತು
ನೋವೆನೆಂದು
ನೊಂದವಗೆ ಗೊತ್ತು
ಬದುಕೇನೆಂದು

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.