ಮಂಗಳವಾರ, ಜನವರಿ 30, 2018

ಹನಿ ಹನಿ

ಹೇಳು ಹುಡುಗಿ
ಇನ್ನೆಷ್ಟುದಿನ
ಸ್ತುಪ್ತ ಪ್ರೇಮವನದುಮಿ
ಬದುಕುವೆ?
ಬದುಕು ವಿಷಮಚಕ್ರ
ಕಹಿ ಸಿಹಿ ಯಾಗಬೇಕು
ಸಿಹಿ ಸಪ್ಪೆಯಾಗಲೇಬೇಕು
ಮೂಢತೆಗೆ ಕಹಿಯಾದೀತು
ಹುಷಾರ್!
***

ದಿನ ರಾತ್ರಿಗಳ
ಲೆಕ್ಕಹಿಡಿದು
ನೋಡಿದೆ
ನಾವು ಸಂಧಿಸದ
ಸಮಯವೇ ಇಲ್ಲ
ನಮ್ಮಭೇಟಿ
ಇನ್ನೂ ಮಾಗಿಲ್ಲ
***
ನಾನು ನೀನು
ಹಳಿ ಗಳಿದ್ದಂತೆ
ಕಣೆ ಹುಡುಗಿ
ಪಕ್ಕದಲ್ಲಿದ್ದರೂ
ಭೇಟಿ ಇಲ್ಲವೆನಿಸುವುದು

***
ಶೂನ್ಯ ಬದುಕಿಗೆ ಕಾಮಾಕೃತಿ
ನೀಡಿ
ಸೂಜಿಗಲ್ಲ ಸೆಳೆತ
ನಿನ್ನಲಿ ತುಂಬಿತಲ್ಲ
ಪ್ರಕೃತಿ ನಲ್ಲೇ!
ನನಗೆಂದೆಂದಿಗೂ
ಸೂಜಿಗಕಣೆ,
ನೀನೆಂದರೆ ಪ್ರಕೃತಿ
ಅದಕೆ
***
ದೀಪಕ್

ಸೋಮವಾರ, ಜನವರಿ 29, 2018

ಯಾರು ನೀ?

ಮನದಿ ನಿನ್ನ ಜಪವಮಾಡಿ
ತಿಳಿದವಿದ್ಯೆಯಲ್ಲಹೂಡಿ
ಸಮಯವನ್ನು ಹುಡುಕಿಕೂಡಿ
ತಪವ ನೀಗುತಿದ್ದೆವು

ಬೊಮ್ಮಬರೆದ ಸಮಯ ಬರಲು
ಆಸೆಗಳು ಎಲ್ಲ ಬೋರಲು
ಕಲಿತವಿದ್ಯೆ ಅಣಕುವಂತೆ
ಜೀವಜಾರುತಿದ್ದಿತು

ಚಳಿಯ ಮಾಸದಲ್ಲಿ ಬಂದೆ
ಮಾಸುತಿದ್ದ ನೆನಪುಗಳನುತಂದೆ
ಉದುರಿದೆಲೆಯ ನಡುವೆನಿಂದೆ
ಕಳೆದು ಕೊಂಡ ಆಸೆಗಳನು
ಮುಟ್ಟಿ ಚಿಗುರಿಸುತಿರುವೆ ನೀ

ನೀನು ಬರುವಸುದ್ದಿ ತಿಳಿದು
ಬಳಗವೆಲ್ಲ ಸೇರಿ ನಲಿದು
ನಿನ್ನ ನೋಡಲೆಂದು ಮಂದಿ
ತವಕಿಸುತಿರಿರುವರು
ಬೇಗಬಾರ ಮೊಗವ ತೋರ
ಕಾಯ್ವಿಕೆಯು ಬಲುಭಾರ
ವಿಧಿನಿಯಮ ಮೀರಲಾಗದ
ನಾವದರ ದಾಸರು

ಸೋಮವಾರ, ಜನವರಿ 22, 2018

ಸುಳ್ಳುಗಾರ

ನೀನು ನನ್ನ ಜೊತೆ
ಸುಳ್ಳು ಹೇಳ್ತಿಯಾ?

ನಾನು ಸುಳ್ಳು ಹೇಳ್ತೀನಿ
ಸತ್ಯನು ಹೇಳ್ತೀನಿ
ನನಗೆ  ಸತ್ಯ ಸುಳ್ಳುಗಳಿಗಿಂತ
ಮಾನವ ಸಂಬಂಧ
ಮುಖ್ಯ
ಸತ್ಯ ಸುಳ್ಳು ಅಸಂಬದ್ಧ
***
ಬೆಳವಣಿಗೆಯಲಿ
ಭ್ರೂಣವು 
ಮಿಲಿಯ ವರ್ಷದ
ಮೊದಲ ಜೀವದಿಂದ
ಇಂದಿರುವ
ಆಕಾರದವರೆಗೂ 
ಬೆಳೆಯುತ್ತದೆ!
***

ಶನಿವಾರ, ಜನವರಿ 20, 2018

ನನ್ನ ನಾಳಿನ ಕೂಸಿಗೆ

ನಿನ್ನಯ ಬರುವು ನನಗೆ
ಕ್ಷಿಪ್ರ ಹಾಡಾಗುತಿದೆ
ಕಾಣದ ಕೇಳದ ದನಿಯು
ಸಾವಿರ ರೂಪ ಮೂಡಿಸಿದೆ

ಬೆಳೆಸಲೇನಿದೆ ನಿನ್ನ
ಬೆಳೆಯುವೆ ನೀನೇ ಚಿನ್ನ
ಅದ ನೋಡುವುದೇ ಚೆನ್ನ

ಸಮಾಜಪಘಾತಗಳಿಂದ
ತಡೆಯಬೇಕಿದೆ ನಿನ್ನ
ಬೆಳೆವ ಸುಮಕೆಬೇಕೆ
ಅರಳುವ ಪಾಠಪ್ರವಚನ?

ಮುಗ್ಧತೆಯೇ ಜೀವಕಳೆ

ನೀಹುಟ್ಟಿದ ಸುಖವ
ಮೊದಲುನೀ ಅನುಭವಿಸು
ನಿನ್ನಲಿಹುದಾ ಹಂಚಿ
ಜಗವನ್ನು ಸಿಹಿಮಾಡು

ಶಾಶ್ವತರಿಲ್ಲಿಲ್ಲ
ಶಾಶ್ವತೆಇಲ್ಲಿಲ್ಲ
ಪಂಚಭೂತವೀದೇಹ
ರಸ ಕಾಮನೆಗಳತಾಣ
ಬೇಕು ಬಯಕೆಯ ಮುಂದೆ
ದುಮ್ಮಾನಗಳ ಸಂತೆ

ಹಂಚಿಕೊಳುವಾಖುಷಿಯ
ಕೂಡುವುದಕೊಡಲೊಲ್ಲ
ಕಲೆತುನಲಿ ನೀಡಿಕಲಿ
-ದೀಪಕ್

ಬುಧವಾರ, ಜನವರಿ 10, 2018

ಮನದಿ ನಿನ್ನ ಜಪವ ಮಾಡಿ

ಮನದಿ ನಿನ್ನ ಜಪವ ಮಾಡಿ
ತಿಳಿದ ವಿದ್ಯೆ ಎಲ್ಲ ಹೂಡಿ
ಸಮಯವನ್ನ ಹುಡುಕಿ ಕೂಡಿ
ತಪವನೀಗುತ್ತಿದ್ದೆವು

ಬೊಮ್ಮ ಬರೆದ ಸಮಯ ಬರದೆ
ಆಸೆ ನಿರೀಕ್ಷೆಗಳೆಲ್ಲ ಬೋರಲು
ಕಲಿತವಿದ್ಯೆ ಅಣಕುವಂತೆ
ಜೀವ ಜಾರುತಿದ್ದಿತು

ಚಳಿಯ ಮಾಸದಲ್ಲಿ ಬಂದೆ
ಮಾಸುತ್ತಿದ್ದ ನೆನಪ ತಂದೆ
ಒಣಗಿದೆಲೆಯ ನಡುವೆ ನಿಂದೆ
ಮುಟ್ಟಿ ಚಿಗುರಿಸುವಂತೆ ನೀ

ನೀನು ಬರುವ ಸುದ್ದಿ ತಿಳಿದು
ಬಂಧು ಬಳಗ ಸೇರಿ ನಲಿದು
ನಿನ್ನ ಮೊಗವ ಎದುರುಗೊಳ್ಳಲೆಲ್ಲ ತವಕಿಸುತ್ತಿರುವರು

ಬೇಗ ಬಾರ ಮೊಗವ ತೋರ
ಕಾಯ್ವಿಕೆಯು ಬಲುಭಾರ
ವಿಧಿಯ ನಿಯಮ
ಮೀರಲಾಗದೆ
ನಾವದರ ದಾಸರು
-ದೀಪಕ್

ಮಂಗಳವಾರ, ಜನವರಿ 2, 2018

ಎದಿಯೊಳಗ

ಏನಿಲ್ಲ ಎದಿಯೊಳಗೆ
ನೋಡೋ ಹೈದ
ಮಾತುಮಾತಿಗೆ
ಕೊಂಕ ತೆಗೆಯಬೇಡ

ರುಚಿಸದ ಸಾಗರದಲಿ
ನಿನ್ನ ಹಾಯಿ ದೋಣಿ
ಉಸಿರಿರದಾಗಸಕೆ
ನಿನ್ನ ಹವಾಯಿಜಹಜು

ಎಲ್ಲೆಲ್ಲು ಇರುವೆ ನಾ
ಅರಿವ ವಿಸ್ತರಿಸು
ಸೌಂದರ್ಯ ಸವಿವುದು
ನಿನ್ನಜನ್ಮಸಿದ್ಧಹಕ್ಕು

ಸಾವಿನಾಮಾತೇಕೊ
ಹುಚ್ಚು ಹೈದ
ದೇಹಭಾವಗಳ
ಬಿಡಿಬಿಡಿಸಿನೋಡೊ

ಏನೇನೂಇಲ್ಲ
ಎದಿಯೊಳಗೆ
ನೋಡೋ ಹೈದ
ಮಾತುಮಾತಿಗೆ
ಕೊಂಕ ತೆಗೆಯಬೇಡ
-ದೀಪಕ್

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.