ಮನದಿ ನಿನ್ನ ಜಪವ ಮಾಡಿ
ತಿಳಿದ ವಿದ್ಯೆ ಎಲ್ಲ ಹೂಡಿ
ಸಮಯವನ್ನ ಹುಡುಕಿ ಕೂಡಿ
ತಪವನೀಗುತ್ತಿದ್ದೆವು
ಬೊಮ್ಮ ಬರೆದ ಸಮಯ ಬರದೆ
ಆಸೆ ನಿರೀಕ್ಷೆಗಳೆಲ್ಲ ಬೋರಲು
ಕಲಿತವಿದ್ಯೆ ಅಣಕುವಂತೆ
ಜೀವ ಜಾರುತಿದ್ದಿತು
ಚಳಿಯ ಮಾಸದಲ್ಲಿ ಬಂದೆ
ಮಾಸುತ್ತಿದ್ದ ನೆನಪ ತಂದೆ
ಒಣಗಿದೆಲೆಯ ನಡುವೆ ನಿಂದೆ
ಮುಟ್ಟಿ ಚಿಗುರಿಸುವಂತೆ ನೀ
ನೀನು ಬರುವ ಸುದ್ದಿ ತಿಳಿದು
ಬಂಧು ಬಳಗ ಸೇರಿ ನಲಿದು
ನಿನ್ನ ಮೊಗವ ಎದುರುಗೊಳ್ಳಲೆಲ್ಲ ತವಕಿಸುತ್ತಿರುವರು
ಬೇಗ ಬಾರ ಮೊಗವ ತೋರ
ಕಾಯ್ವಿಕೆಯು ಬಲುಭಾರ
ವಿಧಿಯ ನಿಯಮ
ಮೀರಲಾಗದೆ
ನಾವದರ ದಾಸರು
-ದೀಪಕ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ