ಮನದಿ ನಿನ್ನ ಜಪವಮಾಡಿ
ತಿಳಿದವಿದ್ಯೆಯಲ್ಲಹೂಡಿ
ಸಮಯವನ್ನು ಹುಡುಕಿಕೂಡಿ
ತಪವ ನೀಗುತಿದ್ದೆವು
ಬೊಮ್ಮಬರೆದ ಸಮಯ ಬರಲು
ಆಸೆಗಳು ಎಲ್ಲ ಬೋರಲು
ಕಲಿತವಿದ್ಯೆ ಅಣಕುವಂತೆ
ಜೀವಜಾರುತಿದ್ದಿತು
ಚಳಿಯ ಮಾಸದಲ್ಲಿ ಬಂದೆ
ಮಾಸುತಿದ್ದ ನೆನಪುಗಳನುತಂದೆ
ಉದುರಿದೆಲೆಯ ನಡುವೆನಿಂದೆ
ಕಳೆದು ಕೊಂಡ ಆಸೆಗಳನು
ಮುಟ್ಟಿ ಚಿಗುರಿಸುತಿರುವೆ ನೀ
ನೀನು ಬರುವಸುದ್ದಿ ತಿಳಿದು
ಬಳಗವೆಲ್ಲ ಸೇರಿ ನಲಿದು
ನಿನ್ನ ನೋಡಲೆಂದು ಮಂದಿ
ತವಕಿಸುತಿರಿರುವರು
ಬೇಗಬಾರ ಮೊಗವ ತೋರ
ಕಾಯ್ವಿಕೆಯು ಬಲುಭಾರ
ವಿಧಿನಿಯಮ ಮೀರಲಾಗದ
ನಾವದರ ದಾಸರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ