ಸೋಮವಾರ, ಏಪ್ರಿಲ್ 30, 2018

ತಾಯಿ


ರಾತ್ರಿ ಇದು ರುದ್ರ ರಮಣೀ
ಮನ ಹೊರಗೆ ಆರ್ಭಟ

ನೋವಿನ ಚೀತ್ಕಾರ
ಪಕಪಕಬೆಳಕು
ಕಣ್ಣೀರು
ಕಾರಣ
ಆಕೆ ಪ್ರಕೃತಿ
ಬಸಿರಾದ ಭಾವಗಳ
ನಿಡು ಸುಯ್ಯುತ
ಹೊರ ಲಾಗದೆ
ಹೋರುತಿಹಳು
ಕಂದಮ್ಮಗಳ
ಪ್ರಸವ ಕಾಲದ
ನಾಳಿನ ಕೂಸಿಗೆ
ಇಂದಿನ ಕನಸುಗಳ
ತರಿದುಹರಿದು
ಬಡಿಸಿ
ಕಣ್ಣೀರ ಒರೆಸುತ್ತಾ
ತೃಪ್ತಿ ಭಾವ ಹೊಂದುವಳು
ಇವಳು ಮಾತೆ
ಒಣಗಿದೆಲೆ ಕಸಗಳನ್ನು
ಮಡಿಲಲಿರಿಸಿ,
ಬೀಜಗಳ ಮೊಳೆಸುವ
ಕಾಯಕ ಹಿಡಿದವಳು
ಬೇಸರಿಸದೆ
ಎಲ್ಲವನು
ಚಿಗುರಿಸುವಳು
ತಾ ಮಾತ್ರ ಮೌನದ ಸೆರಗ
ಹಿಂದೆ ನಿಂತು ಬಿಕ್ಕಿಸುವಳು

ಶನಿವಾರ, ಏಪ್ರಿಲ್ 28, 2018

ಕರುಣೆ

ಸ್ವಲ್ಪ ತಮಿಳು ಮಿಶ್ರಿತ ಕನ್ನಡ ಮಾತಾಡು ತ್ತಿದ್ದಳು ಆಕೆ. ಸೂಜಿ ಮದ್ದು ನೀಡಿ ಅಲ್ಲೇ ಬಿದ್ದಿದ್ದ ಸ್ಯಾಂಪಲ್ ಆಯ್ದು ಅವಳಿಗೆ ನೀಡಿದೆ, ಎಷ್ಟು ಸಾರ್ ಎಂದವಳಿಗೆ ೨೪೦ ಎಂದು ಹೇಳಿ ಕ್ಲಿನಿಕಲ್ ರೆಕಾರ್ಡ್ಸ್ upgradation ನಲ್ಲಿ ಮಗ್ನ ನಾದೆ. ಮಧ್ಯೆ ಎರಡುಮೂರು ಬಾರಿ ಏನೋ ಹೇಳಿದಂತಾಯಿತು, ಏನಮ್ಮ ಎಂದಿದ್ದಕ್ಕೆ ಉತ್ತರವಿಲ್ಲ. ನೋಡಿದೆ ತಲೆತಗ್ಗಿಸಿ ಹಣ ಎಣಿಸುತ್ತಿದ್ದಳು. ಮತ್ತೆ ಕಂಪ್ಯೂಟರ್ ನಲ್ಲಿ ಮಗ್ನ ನಾದೆ. ೧೦ರೂಪಾಯಿಯ ೨೪ ನೋಟುಗಳು! ನೀಡಿ ಆಕೆ ಹೊರ ಹೋದರೂ ನನ್ನ ತಲೆಯೊಳಗೆ ಹುಳ ಕೊರೆಯಾಲಾರಂಭಿಸಿತು...
ಸ್ವಲ್ಪ  ಕರುಣೆ ಬೇಡವೇ ಎಂಬ ಜಿಜ್ಞಾಸೆ.
*
ಕರುಣೆ ಯಾರ ಮೇಲೆ?  ಆಕೆಯಮೇಲೋ ಹೀಗೆ ಯೋಚಿಸಿ ಫಡ್ಚಾ ಆಗುತ್ತಿರುವ ನನ್ನಮೇಲೋ !
-ದೀಪಕ್

ಗುರುವಾರ, ಏಪ್ರಿಲ್ 12, 2018

ದೇವನ ಹೆಂಡದಿಂದ

ಇರಿಬೆಗೆ ದೇವ ರೆಕ್ಕೆ ದಯಪಾಲಿಸಿದ ನೆಂದರೆ ಆಯಿತು ಅದರ ಸಾವು ಸಾನಿಯಾ ಬಂದಿತೆಂದು ಅರ್ಥ.
**
ಸೆಟ್ಟೆರಲ್ಲಿ ಎಂಥ ಕಡುಬದವನಾಗ ಲಿ ಲಿಂಬೆ ಹಣ್ಣಿನ ಶ್ಟಾದರು ಚಿನ್ನಕ್ಕೆ ಕೊರತೆ ಇಲ್ಲ
**

ಬಡತನದಲ್ಲಿ ಹುಟ್ಟಿ, ದಟ್ಟ ದಾರಿದ್ರ್ಯ ದಲ್ಲಿ  ಬಾಳಿ ಸಾಯಲು ಅನುಕೂಲವಿ ಲ್ಲದೆ ಇನ್ನೂ ಬದುಕಿದ್ದ ನಾಗರತ್ನಮ್ಮ ಸಹನಾ ಶಕ್ತಿಯಂತೂ ಅದ್ಭುತ
**
7 ರಾತ್ರಿ ಯಾವಾಗಲೋ ಬರಬಹುದಾದ a ನಿದ್ರೆಗಾಗಿ ಅದೆಷ್ಟು ಕಾಯಬೇಕು ಹಗಲೆಲ್ಲವು
**

ಬುಧವಾರ, ಏಪ್ರಿಲ್ 4, 2018

ನೆನಪಿನ ಶಾಯಿ

ನಾನು ಸಣ್ಣವನಿದ್ದಾಗ ಶಾಲೆಯಲ್ಲಿ ಬರೆಯಲು ನಮಗೆ ಪಾಠಿ ಬಳಪ ಕೊಟ್ಟರು. ದಿನವೂ ಅದರಲ್ಲಿ ಅಕ್ಷರಗಳನ್ನು
ತಿದ್ದುತ್ತಿದ್ದೆವು. ಒಂದನೇ ತರಗತಿ ಮುಗಿಯಿತು. ಎರಡನೇ ತರಗತಿಯಲ್ಲಿ ಪಾಠಿ ಬಳಪ ದೋಡನೆ ನಿತ್ಯ ತರಗತಿಗೆ ಪುಸ್ತಕ ಸೀಸದಕಡ್ಡಿ
ಸೇರಿ ಕೊಂಡವು. ಬೆಳಿಗ್ಗೆ ಶಾಲೆಯಲ್ಲಿ ಪ್ರಾರ್ಥನೆ ಮುಗಿಸಿ ತರಗತಿಗೆ ಹೋದೊಡನೆ ಹಾಜರಿ ಹಾಕುತ್ತಿದ್ದರು, ನಂತರ ಸುಮಾರು ಅರ್ಧ ಗಂಟೆ ಪುಸ್ತಕದಲ್ಲಿ ಇದ್ದ ಪದ್ಯಗಳು ಹಾಗೂ ಮಗ್ಗಿಗಳನ್ನು ಎಲ್ಲರೂ ಒಕ್ಕೊರಲಿನ ಲ್ಲಿ ಹಾಡಿ /ಹೇಳಿ ಪಾಠಿಮೇಲೆ ಬರೆದ ಮನೆಪಾಠ ತೋರಿಸಿ ನೀರು ಹಾಕಿ ಪಾಠಿ ಯನ್ನ ತೊಳೆಯುತ್ತಿದ್ದೆವು.  ಸೀಸದ ಕಡ್ಡಿ ಯಲ್ಲಿ ಬರೆಯುವುದೇ ಒಂದು ತ್ರಾಸು ನನಗೆ. ಅದರ ಮೊನಚು ಬಳು ಬೇಗ ಮೊಂಡಾಗುತ್ತಿ ತ್ತು, ಅಕ್ಷರಗಳು ದೊಡ್ಡ ದೊಡ್ಡ ದಾಗಿರುತ್ತಿದ್ದವು, ತುಂಬಾ ಚಂದ ಕಾಣಲಿ ಎಂದು ಒತ್ತಿ ಬರೆದಾಗೆಲ್ಲ  ಮೂತಿ ಮೂರಿಯುತ್ತಿತ್ತು. ಮೆಂಡರ್ ಗಳು ಕೊಂಡಿದ್ದಷ್ಟೇ ನೆನಪು, ಅದನ್ನು ಉಪಯೋಗಿಸಿದ್ದು ನೆನಪೇ ಇಲ್ಲ,
ಅದಿರುವುದೆ ಕಳೆಯಲು ಎಂಬಂತಾಗಿತ್ತು ಶಾಲಾದಿನಗಳಲ್ಲಿ. ಆವಾಗಲೇ ನನ್ನ ಬ್ಲೇಡ್ ನ ನಂಟು ಶುರುವಾಗಿದ್ದು. ಅಣ್ಣ ನ shaving blade ಗಳಿಗೆ ನನ್ನ ದಾಳಿ ನಿತ್ಯ ಹಾಗೂ ನಿರಂತರ ವಾಗಿತ್ತು. ಅಣ್ಣ ಎಷ್ಟೊ ಬಾರಿ ಬ್ಲೇಡ್ ಯಾರು ತೆಗೆದ್ರಿ ಎಂದು ಬಚ್ಚಲಿನಿಂದ ದನಿ ಮಾಡಿದರೆ ನಾನು ಮನೆಯಿಂದಾಚೆ ಓಡುತ್ತಿದ್ದೆ. ಒಮ್ಮೊಮ್ಮೆ ಅಡುಗೆ ಮನೆಯಲ್ಲಿ ಅಮ್ಮನೆದುರು ಕೂತಿದ್ದರೆ ಏನೂ ಮಾಡಲಾಗದೆ ಮೇಂಡರ್ ಕಳೆದೊಯ್ತು ಅದಕ್ಕೆ ಬ್ಲೇಡ್ ತಗೊಂಡೆ ಅಂತ ಹೇಳೋ ಹೊತ್ತಿಗೆ ಅಳುಬಂದು ಬಿಡುತ್ತಿತ್ತು.
ಹೀಗಿತ್ತು ಸೀಸದಕಡ್ಡಿಯ ಆರಂಭದ ದಿನಗಳು.

ಮೂರನೇ ತರಗತಿ ತಲುಪಿದಾಗ ಪಾಠಿ ಸೀಸದ ಕಡ್ಡಿಯೊಡನೆ ball pen ಉಪಯೋಗಿಸಿ ಬರೆಯುವುದನ್ನು ಕಡ್ಡಾಯ ಮಾಡಿದರು. ಮನೆಯಲ್ಲಿ ಅಣ್ಣ ಎಬಿಸಿಡಿ ಹೇಳಿಕೊಡಲು ಆರಂಭಿಸಿದರು.
ಬಾಲ್ ಪಾಯಿಂಟ್ ಪೆನ್  ನನಗೆ ತರವರಿ ಕಿರಿಕಿರಿ ನೀಡಿದೆ. ಎಂದೂ ಒಂದೂ ದುಂಡು ಅಕ್ಷರ ಬರೆಯದೆ ಇರುವುದು ಅದರಲ್ಲಿ ಪ್ರಮುಖ ತೊಂದರೆ ಉಳಿದವು ಬರೆಯ ಹೋದರೆ ಮಧ್ಯದಲ್ಲಿ ಬಿಟ್ಟು ಹೋಗುವುದು,  ಕಟ್ ಕಟ್ ಬರೆಯುವುದು,
ಜೇಬಿನಲ್ಲಿ ಇಟ್ಟಾಗಲೆ ಶಾಯಿ ಆಚೆ ಬಂದು ಜೇಬೆಲ್ಲ ಬಣ್ಣವಾಗುವುದು, ಮುಚ್ಚಳ ಕಳೆದು ಹೋಗುವುದು, ಗೋಡೆಗಳ ಮೇಲೆ ಮೊದಲು ಮೂಡಿ ನಂತರ ಒಲ್ಲೆ ಎನ್ನುವುದು, ಯಾವ ಮಾಯೆಯಲ್ಲೋ ಗೆಳೆಯರ ಬಳಿ ಸೇರುವುದು,  ಬರೆಯುತ್ತಿಲ್ಲ ಎಂದು ದೂರಿದಾಗ ಪರೀಕ್ಷೆ ಮಾಡುವ ಅಮ್ಮನ ಕೈಯಲ್ಲಿ ಅದ್ಭುತವಾದ ದುಂಡು ದುಂಡು ಅಕ್ಷರಗಳನ್ನು ಹೊರಹಾಕಿ, ಸೋಮಾರಿ ಪಟ್ಟಕಟ್ಟಿ ಹೊಡೆಸುವುದು ಹೀಗೆ ಲೇಖನಿ ಬಹಳ ಕಾಟವನ್ನು ನೀಡಿತು. ಐವತ್ತು ಪೈಸೆ ಯಿಂದ ಶುರುವಾಗುತ್ತಿದ್ದ ಲೇಖನಿಗಳು ಹಲವಾರು ವಿಧಗಳಲ್ಲಿ ಬರುತ್ತಿದ್ದವು (ಬರುತ್ತವೆ) ಉತ್ತಮ ಲೇಖನಿ ಎಂದರೆ ಅದರೊಳಗೊಂದು ಸ್ಪ್ರಿಂಗ್ ಇರುತ್ತಿತ್ತು. ಅಮ್ಮ ಯಾವಾಗಲೂ ಲೆಕ್ಕ ಬರೆಯುವ ಪುಸ್ತಕದೊಳಗೆ ಒಂದು ಲೇಖನಿ ಇಟ್ಟಿರುತ್ತಿದ್ದರು. ನನಗೆ ಪೂಜೆಯಾದನಂತರ ತುರ್ತು ಪರಿಸ್ಥಿತಿ ಯಲ್ಲಿ ಮಾತ್ರ ಅದನ್ನ ಉಪಯೋಗಿಸಲು ಕೊಡುತ್ತಿದ್ದರು .
ಹೀಗೆ ನನಗೂ ಲೇಖನಿಗೂ ತುಂಬಾ ರಂಪಾಟ ಜಟಾಪಟಿ ನಡೆದು ನಾನು ಲೇಖನಿಯ ದ್ವೇಷಿಯಾದೆ.
ನಾಲ್ಕನೇ ತರಗತಿ ಸೇರಿದಾಗ ನಮಗೆಲ್ಲ ಶಾಯಿ ಭರಿತ ಲೇಖನಿ ಉಪಯೋಗಿಸುವುದನ್ನು ಕಡ್ಡಾಯ ಮಾಡಿದರು. ಎರಡು ರೂಪಾಯಿಯಿಂದ ಮೂರು ರೂಪಾಯಿ ಬೆಲೆ ಇತ್ತು. ಹೀರೋ ಪೆನ್ ೧೨ ರೂಪಾಯಿ ! ಮನೆಯಲ್ಲಿ ನೀನು ಮೊದಲ ಸ್ಥಾನ ಬಂದರೆ ಐದನೇ ತರಗತಿಗೆ ಹೀರೋ ಪೆನ್ ಕೊಡಿಸುವೆ ಎಂದು ಅಮ್ಮ ಹೇಳಿದರು.

ಶಾಯಿ ಲೇಖನಿ ಜೊತೆಗೆ ಶಾಯಿ ಕುಡಿಕೆ ಸೇರಿ ಕೊಂಡಿತು. ಶಾಯಿ ಲೇಖನಿಗಳ ಹಣೆಬರಹ ಬಾಲ್ ಪಾಯಿಂಟ್ ಪೆನ್ ಗಿಂತ ಭಯಾನಕವಾಗಿತ್ತು. ಕೈಗೆ ಶಾಯಿ ಹತ್ತದೆ ಎಂದೂ ಲೇಖನಿ ಮೂಡಲೇ ಇಲ್ಲ. ಆಗಾಗ ಬರೆಯಲು ಹೋದಾಗ ಮುಷ್ಕರ ಹೋಗುತ್ತಿದ್ದವು. ಅಲ್ಲಲ್ಲೇ ಒದರಿ ಕೊನೆ ಪುಟ, ಗೋಡೆ , ಸ್ನೇಹಿತರ ಅಂಗಿ ಪಾಠಿ ಚೀಲ ಎಲ್ಲವೂ ಶಾಯಿಮಯ.
ಲೇಖನಿ ಸರಿಯಾಗಿ ಬರೆಯಲಿ ಎಂದು, ನಾಲಿಗೆ ನಿಬ್ ಎಲ್ಲ ತೆಗೆದು ಆಗಾಗ service ಮಾಡುತ್ತಿದ್ದೆವು. ಒಳಗಡೆ ಶಾಯಿ ಹೆಪ್ಪುಗಟ್ಟಿ ಸರಿಯಾಗಿ ಬರೆಯಲಾಗುತ್ತಿಲ್ಲ ಎಂಬ ಗುಮಾನಿ!  ನಮ್ಮ service ಹೊಡೆತಕ್ಕೆ ಲೇಖನಿಗೆ ಯಾವಾಗಲೂ ನೆಗಡಿ!
ಕೈಗಳು ನಿತ್ಯ ಶಾಯಿ ಶಾಯಿ, ಹೆಚ್ಚು leak ಆದರೆ ತಲೆಯೆಲ್ಲಾ ಶಾಯಿಮಯ.
ಹತ್ತು ಪೈಸೆ ನೀಡಿದರೆ ಶಾಯಿ ತುಂಬಿ ಕೊಡುತ್ತಿದ್ದರು. ಆದರೆ ಶಾಯಿ ಚನ್ನಾಗಿರುವುದಿಲ್ಲ ನೀರು ಹಾಕಿರುತ್ತಾರೆ ಎಂದು ಮನೆಗೆ ಶಾಯಿ ಕುಡಿಕೆ ತರುತ್ತಿದ್ದೆವು, ಈಗ ಆ ರೀತಿ ತುಂಬುವ ಪದ್ಧತಿ ಇದೆಯೋ ಇಲ್ಲವೋ ಗೊತ್ತಿಲ್ಲ. ಇಲ್ಲಿಯ ವರೆಗೂ ನಾನು ಕುಡಿಕೆ ಖಾಲಿ ಯಾಗುವವರೆಗು ಶಾಯಿ ಬಳಸಿದ ನೆನಪಿಲ್ಲ. ಒಂದು ಶಾಯಿ ಚೆಲ್ಲಿ ಹೋಗುತ್ತದೆ, ಯಾ ಇಟ್ಟು ಇಟ್ಟು ಹಾಳಾಗುತ್ತದೆ.
ಹೀಗೆ ನಾಲ್ಕನೇ ತರಗತಿಯಲ್ಲಿ ನನ್ನ ಹಾಗೂ ಶಾಯಿ ಲೇಖನಿಯ ಒಡನಾಟ ಆರಂಭವಾಯ್ತು.
ಬಾಲ್ ಪೆನ್ ಗಿಂತ ಈ ಶಾಯಿ ಲೇಖನಿಗಳಲ್ಲಿ ನಮ್ಮ ಕೈ ಬರಹ ಓದಲು ಸಾಧ್ಯ ವಾಗುವುದು. ಬಾಲ್ ಪೆನ್ ಗಳಿಗೆ ಮನೋ ವೇಗವನ್ನು ನೀಡ ಬಹುದೋ ಏನೋ ಶಾಯಿ ಭರಿತ ಲೇಖನಿ ಗಳಿಗೆ ಆ ವೇಗ ನೀಡಲು ಹೋಗಿ ನಾನು ಬೇಕಷ್ಟು nib ಗಳನು ಮುರಿದಿದ್ದೇನೆ . Nib ಗಳನ್ನು ಬದಲಾಯಿಸಲು ಬರುತ್ತಿತ್ತು ಹಾಗೂ ಅಂಗಡಿಯಲ್ಲಿ nib ಗಳು ದೊರೆಯುತ್ತಿದ್ದವು. ಮೈಸೂರಿನ ಸಯ್ಯಾಜಿ ರಾವ್   ರಸ್ತೆಯಲ್ಲಿ ಚಾಮುಂಡಿ ಚಿತ್ರ ಮಂದಿರದ ಬಳಿ ಮೋಹನ್ ಭಂಡಾರ ಹತ್ತಿರ PEN DOCTOR ಎಂಬ ಅಂಗಡಿ ಇತ್ತು. ಎಂದೂ ಅಲ್ಲಿಗೆ ಹೋಗಿ ನಮ್ಮ ಪೆನ್ ನ ಆರೋಗ್ಯ ತಪಾಸಣೆ ಮಾಡಿಸಲಿಲ್ಲ ಅದು ಲೇಖನಿ ಗೆ ಇರುವ ಸಾಮಾಜಿಕ ಸ್ಥಾನಮಾನ ತೋರಿಸುತ್ತದೆ. ಆಕೆ ಸುತ್ತ ಮುತ್ತ ಫುಟ್ ಪಾತಿನಲ್ಲಿ ಗಡಿಯಾರದ ಗಾಜಿನ ಮೇಲಾಗಿರುವ ಗೆರೆಗಳನ್ನು ತೆಗೆದು ಪಾಲಿಶ್ ಮಾಡುವವರು ಕರಿ ಗಾಲಿಯೊಂದಿಗೆ  ಕೂತಿರುತ್ತಿದ್ದರು.  ಈಗ ಪೆನ್ ಡಾಕ್ಟರ್ ಇಲ್ಲ scratch ತೆಗೆದು ಪಾಲಿಶ್ ಮಾಡುವವರೂ ಇಲ್ಲ.

ನಾನು ಪ್ರೌಢಶಾಲೆ ಸೇರಿದಾಗ ನಮ್ಮ ಹಿಂದೀ ಟೀಚರ್ ಹ ಸ್ತ್ತಕ್ಷರಗಳನ್ನು ತುಂಬಾ ಹೀಗೆಳೆಯುತ್ತಿದ್ದರು. ಹಗುರವಾದ ball pen ನಿಮ್ಮ ಅಕ್ಷರ ಗಳನ್ನ ಹಾಳು ಮಾಡಿದೆ. ಕೈಮೇಲೆ ಇಂಕ್ ಪೆನ್ ಕ್ಯಾಪ್ ತೂಕ ಬಿದ್ದರೇನೆ ಅಕ್ಷರಗಳು ದುಂಡಗಾಗುವುದು ಎಂದು ಹೇಳುತ್ತಿದ್ದರು. ಹೀಗೆ ಇಂಕ್ ಪೆನ್ ಬಾಲ್ ಪೆನ್ ಎನ್ನುತ್ತಾ ಹತ್ತನೇ ತರಗತಿ ಹನ್ನೆರಡು, ವಿಶ್ವವಿದ್ಯಾಲಯದ ಹಂತ ತಲುಪಿದೆ. ಈ ಆಯ್ಕೆಗಳು ಒಮ್ಮೊಮ್ಮೆ ಬಹಳ ತಲೆ ಕೆಡಿಸುತ್ತದೆ. ಶಾಯಿ ಲೇಖನಿಯನ್ನು ಉಪಯೋಗಿಸಬೇಕೋ ಬಾಲ್ ಪೆನ್  ಉಪಯೋಗಿಸಬೇಕೋ ಎಂಬ ಕಳವಳಳ ಉಂಟಾಗಿ ಒಮ್ಮೆ ಪರೀಕ್ಷೆ ಬರೆಯಲು ಎರಡು ಇಂಕ್ ಪೆನ್ ಒಂದು ಬಾಲ್ ಪೆನ್ ತೆಗೆದುಕೊಂಡು ಹೋದೆ. ಏನು ಓದಿರದ ವಿಷಯ, ಪುಟಕ್ಕೆ ಒಂದು ಅಂಕ ನೀಡಿದರೂ ಪಾಸ್ ಆಗಬೇಕು ಎಂದು ಬರೋಬರಿ ೪೫ಪುಟ ತುಂಬಿಸಿದೆ. ಬರೆಯಲು ಜೊತೆಗಿದ್ದ ಎರಡು ಹೀರೋಗಳು ಝೀರೋ ಆಗಿ ಬಾಲ್ ಪೆನ್ ಗೆ ಬದಲಾಯಿಸಿ ಇನ್ವಿಜೀಲೇಟರ್ ಸಹಿ ಪಡೆದೆ.
೧೯೯೮ ರಲ್ಲಿ ಓದು ಮುಗಿದು ಮೈಸೂರಿಗೆ ಬಂದೆ. ಒಮ್ಮೆ ಮೈಸೂರಿನಿಂದ ಚಿಕಿತ್ಸಾಲಯಕ್ಕೆ ಪ್ರಯಾಣಿಸುವಾಗ ಜೊತೆಯಲ್ಲಿದ್ದ ಹಿರಿಯ ವೈದ್ಯರಿಬ್ಬರು ನನ್ನ ಜೇಬಿನಲ್ಲಿದ್ದ ಹೀರೋ ಲೇಖನಿಯನ್ನು ಎರವಲು ಪಡೆದರು. ಚಿಕಿತ್ಸಾಲಯಕ್ಕೆ ಹೋಗಿ ಮತ್ತೆ ಚೀಟಿ ಬರೆಯಲು ಪೆನ್ ತೆಗೆದಾಗ nib ಮುರಿದಿದೆ ಎಂದು ತಿಳಿಯಿತು. ಆ ವೈದ್ಯರು Nib ಮುರಿದಿದ್ದಕ್ಕಿಂತ ಹೆಚ್ಚಾಗಿ ಅದನ್ನು ತಿಳಿಸದೆ ಹಿಂತಿರಿಗಿಸಿದ್ದು ಖೇದವಾಯಿತು. ಅಲ್ಲಿಗೆ ನನ್ನ ಶಾಯಿ ಲೇಖನಿ ಪರ್ವ ಕೊನೆಯಾಯಿತು.

ಮುಖ ಪುಟದಲ್ಲಿ ಈ ವಾಣಿಜ್ಯ ಜಾಹೀರಾತು. medium nib, gold plated,7 horses carved ಎಂದು ನೋಡಿದೆ. ಹಳೆಯ ನೆನಪುಗಳನ್ನು ಶಾಯಿಯಂತೆ ತುಂಬಿ ಕೊಂಡಿರುವ FOUNTAIN PEN 20 ವರ್ಷಗಳ ನಂತರ ಕೊಂಡು ಉಪಯೋಗಿಸುತ್ತಿರುವೆ. ಅದರ ಪಕ್ಕದಲ್ಲೇ ಒಂದು ಬಾಲ್ ಪಾಯಿಂಟ್ ಪೆನ್ ಕೂಡ ಇದೆ, ಯಾರಾದರೂ ಎರವಲು ಕೇಳಿದರೆ ಬೇಕಲ್ಲವೇ!
ದೀಪಕ್ ಭದ್ರ

ಮಂಗಳವಾರ, ಏಪ್ರಿಲ್ 3, 2018

ಸ್ಮಾರ್ಟ್ ಫೋನ್

೨೦೦೯ ರಲಿ ನನ್ನ ಗೆಳೆಯ ರಾಮ್ ಒಂದು ಸ್ಮಾರ್ಟ್ ಫೋನ್ ಕೊಂಡ. ನನ್ನಲಿ ಮಾಮೂಲು ಫೋನ್ ಇತ್ತು. ಅವನೊಂದಿಗೆ ಒಂದು ಸಂಜೆ ಬಿಯರ್ ಹೀರುತ್ತಾ ಕುಳಿತೆ.
ಹೇ doc listen ನೀವು ಒಂದು smart ಫೋನ್ ತಗೊಳ್ಳಿ, really worth of it. ಇವಾಗ ginger os ನಡೀತಿದೆ market ನಲ್ಲಿ. ಇನ್ನೂ ಎರಡು ವರ್ಷ ತೊಂದರೆ ಇಲ್ಲ ಆಮೇಲೆ ಐಸ್ ಕ್ರೀಂ, jellybean, KitKat lollipop ಹೀಗೆ ದೊಡ್ಡ ಲಿಸ್ಟ್ ಇಟ್ಟಿದ್ದಾರೆ. ಆವಾಗ upgrade ಮಾಡ್ಕೋ ಬಹುದು.

ನನ್ನ ತಮ್ಮ ಮದುವೆ ಆಗೋ ಹುಡುಗಿ ಕೈಯಲ್ಲಿ ಸ್ಮಾರ್ಟ್ ಫೋನ್ ಇತ್ತು. ಅದನ್ನ ನೋಡೋದಕ್ಕೆ ಕುತೂಹಲ ಆದರೆ ಕೈಗೆ ಕೊಡುವವರು ಯಾರು ಇಲ್ಲ. ನನ್ನ ಕಸಿನ್ ಒಬ್ಬಳಿಗೆ ಹೊರದೇಶಲ್ಲಿದ್ದ ಅವಳ ಅಣ್ಣ ಸ್ಮಾರ್ಟ್ ಫೋನ್ ತಂದು ಕೊಟ್ಟ ಎಂದು ಕೇಳಿದೆ. ಭೇಟಿಯಾದಾಗ ನೋಡ ಹೋದರೆ ಅವಳು ನಾನದನ್ನು ಮುಟ್ಟಲು ಬಿಡಲಿಲ್ಲ.
ಕ್ಲಿನಿಕ್ ಎಂದಿನಂತೆ ಎಲ್ಲರೂ ಆರೋಗ್ಯವೇ ಎಂದು ಸಾರುತ್ತಿತ್ತು. ನಮ್ಮ ಜನ ಎಲ್ಲರೂ ಎಲ್ಲವನ್ನೂ ಕೊಳ್ಳುವ ವಸ್ತುವಿನಂತೆ ಪರಿಗಣಿಸುತ್ತಾರೆ. ಒಂದು ಕಿಲೋ ತರಕಾರಿ, ಅರ್ಧ ಲೀಟರ್ ಹಾಲು, ೧೦೦ ಗ್ರಾಂ ದ್ರಾಕ್ಷಿ ಗೋಡಂಬಿ, ಎರಡು ಇಂಜೆಕ್ಷನ್, ನಾಲ್ಕು ಮಾತ್ರೆ ಸ್ಟ್ರಾಂಗ್, ಕಮ್ಮಿ ಆಗದಿದ್ದರೆ ಮತ್ತೊಬ್ಬ ವೈದ್ಯ, ತಿಳಿಯುವ ಮನೋಭಾವನೆ ತುಂಬಾ ಕಮ್ಮಿ. ತಿಳಿಯದೆ ವರ್ತಿಸುವವರಿಗೆ ಹೇಳಿ ಹೇಳಿ ನಾನು ರೋಗಿ ಆಗುವವರನ್ನು ಕಮ್ಮಿ ಮಾಡಿಕೊಂಡಿರುವುದೇ ನನ್ನ ಹೆಗ್ಗಳಿಕೆ.
ನಮ್ಮ ಮುಂಬೈ ಗೆಳೆಯ ಕ್ಯಾ ಸರ್ ಜಿ ಏಕ್ ಮೊಬೈಲ್ ಕೆ ಲಿಯೆ ಇತ್ನ ಪರಿಷಾನಿ? ಏಕ್ ಕರೀದ್ ಲೋ ಎಂದು ಅಂಗಡಿಗೆ ಕರೆದೊಯ್ದ. ಅಂದು ನನ್ನಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವ ಇತ್ತು ಅದಕ್ಕೆ ನಾನು ಮೊಬೈಲ್ ಕೊಂಡೆ, Robin pathology ಪುಸ್ತಕದಲ್ಲಿ ಇಂತದಕ್ಕೆ ಹೇಳಿರೋದು, its irrational to expect humans to be rational!
ನಮ್ಮ ಮೊದಲ ಸ್ಮಾರ್ಟ್ ಫೋನಿನ ಮೆಮೋರಿ ೨೦೦ಎಂಬಿ  ಸಾಕಲ್ಲವೇ, ಹೆಚ್ಚು ಬೇಕೆಂದರೆ ಮೆಮೋರಿ ಕಾರ್ಡ್ ಇದೆಯಲ್ಲ ಎಂದು ಕೊಂಡೆ.. ಏನ್ ಸಮಾಚಾರ (WhatsApp)ಇನ್ನೂ ಇರಲಿಲ್ಲ ಆಗ. ಮುಖ ಪುಟ (ಫೇಸ್ಬುಕ್) ಸೇರಿದೆ ಸ್ಮಾರ್ಟ್ ಫೋನ್ ಇದೆಯಲ್ಲ ಎಂದು.
ದಿನ ಬೆಳಿಗ್ಗೆ ಹಾಗೆ ಸಂಜೆ ಒಂದು ಸಲ ಪತ್ರಗಳನ್ನು ಸಂದೇಶಗಳನ್ನು ಓದುವುದು ಹಾಗೂ ಪ್ರತಿಕ್ರಿಯಿಸುವುದು. ತಿಂಗಳಿಗೆ ಎರಡು ಜಿ ಬೀ ಡೇಟಾ! ಅದರಲ್ಲಿ ಉಪಯೋಗಿಸದೆ ಪ್ರತಿ ತಿಂಗಳು ಒಂದು ಜಿಬಿ ಗು ಹೆಚ್ಚು ಡೇಟಾ ಮಿಗುತ್ತಿತ್ತು.  ಅದಕ್ಕೆ ತೆರುತ್ತಿದ್ದ ಹಣ ೧೦೦ ರೂಪಾಯಿ. 
ನಂತರದಲ್ಲಿ service provider ಅದನ್ನು ಬದಲಿಸಿ ಒಂದು ಜಿಬಿ ೧೨೫ ರೂಪಾಯಿ ಎಂದು ಮಾಡಿದರೂ ನಾನು ಹೆಚ್ಚು ತಲೆ ಕೆಡಿಸಕೊಂಡಿರಲಿಲ್ಲ ಕೊಳ್ಳಲಿಲ್ಲ.
ಏನ್ ಸಮಾಚಾರ, ಅದರಲ್ಲಿ ಗುಂಪುಗಳು, ಗುಂಪಿನಲ್ಲಿ ಚರ್ಚೆ, ಕವನ, ಕಥೆ, ಜಗಳ ಗುಂಪು ತೊರೆಯುವುದು, ನಂತರ ದಿನಗಳಲ್ಲಿ ಫೋಟೋ ಕಳಿಸುವುದು ಆರಂಭವಾದವು. Wife ಇಲ್ಲದ ಮನೆಯಲ್ಲಿ ವೈಫೈ ರಾರಾಜಿಸುತ್ತಿತ್ತು. ಓದುತ್ತಿದ್ದ ,ಓದಲೇ ಬೇಕಾದ ಪುಸ್ತಕ ಗಳು ಧೂಳು ತಿನ್ನಲು ಆರಂಭಿಸಿದವು .  ಕೇವಲ ಕರೆ ಮಾಡಲು ಸೀಮಿತ ವಾಗಿದ್ದ ಮೊಬೈಲ್, ಜೀವನವನ್ನು ಜೀವನ ಶೈಲಿಯನ್ನು ಬದಲಿಸಿತು. ಅಭ್ಯಾಸ, ಹವ್ಯಾಸ, ಸ್ನೇಹಿತರು, ಸಂಬಂಧಗಳು, ಎಲ್ಲವನ್ನೂ ಕಿತ್ತು ಮೂರು ಇಂಚಿನ ಪರದೆಗೆ ಜೀವನ ಸೀಮಿತ ವಾಯಿತು. ೨೦೦ ಎಮ್ ಬಿ ನೆನಪು ಸಾಲದಾಯಿತು. 8gb ನೆನಪಿನ ಫೋನಿಗೆ ಬದಲಾಯಿಸಿದೆ. ಶಾಲೆಯಲ್ಲಿ ಕಲಿಯುವಾಗ ನೋಡಿದ ಭೂಪಟದ  ಅಬ್ಬರಕ್ಕೆ ಅವತರಿಣಿಕೆ maps ನನ್ನ ಫೋನಿನ ಮುಖ್ಯ ಭಾಗವಾಗಿ ಹೊರ ಹೋದಾಗಲೆಲ್ಲ ದಾರಿ ತೋರುವ ಸಾಹಸ ಮಾಡಿ ಈಗ ನನ್ನನ್ನು ಲೋಕಲ್ ಗೈಡ್ ಮಾಡಿಕೊಂಡು ನಾನು ಹೋದಲ್ಲೆಲ್ಲ ಅದು ಪ್ರಶ್ನೆ ಮಾಡಲು ಶುರು ಮಾಡಿದೆ.
ಒಮ್ಮೆ ಸ್ಮಾರ್ಟ್ ಫೋನ್ ಕೆಳಬಿದ್ದು ಒಡೆದು ಹೋಯಿತು ಅದರ ಪರದೆ ಬದಲಾಯಿಸಲು ಹೋದರೆ, ಅದಕ್ಕೆ ಫೋನಿನ ಅರ್ಧದಷ್ಟು ಬೆಲೆ ತೆರಬೇಕಾಯಿತು. ನಂತರ ದಿನಗಳಲ್ಲಿ ಫೋನನ್ನು ಸಂತೆಯಲ್ಲಿ ಕಳೆದೆ. ಚಟಕ್ಕೇನು ಬರವೆ ಬಡತನವೇ? ೫೦೦೦ ಸೈಕಲ್ ಗೆ ಯೋಚಿಸುವುದು ೧೫೦೦೦ ಸಾವಿರ ಮೊಬೈಲ್ ಅಷ್ಟೇನಾ ಎಂದು ಖರೀದಿಸುವೆವು.
8gb ಮೆಮೋರಿ ಹೋಗಿ ೬೪gb ಮೆಮೋರಿ ಬಂತು ಡುಂ ಡುಂ ಡುಂ.

ಈಗ ದಿನಕ್ಕೆ ೧.೫gb ಡೇಟಾ ಉಚಿತವಾಗಿನೀಡುತ್ತಾರೆ ತಿಂಗಳ ಫೀ ಕಟ್ಟಿದ್ದರೆ ಸಾಕು. ಏನ್ ಸಮಾಚಾರ ದ ೨೫ ರಿಂದ ೩೦ ಗುಂಪುಗಳಲ್ಲಿ ಹಾಗೂ ಮುಖಪುಟದಲ್ಲಿ  ಸಂದೇಶಗಳು ಬರುತ್ತಲೇ ಇರುತ್ತವೆ.

ನನ್ನ ಪ್ರೌಢ ಶಾಲೆ ದಿನಗಳಲ್ಲಿ ಒಮ್ಮೆ ಆಂದೋಲನ ಪತ್ರಿಕೆಯ ಕಚೇರಿಗೆ ಹೋಗಿದ್ದೆ ಅಲ್ಲೊಂದು ಸುಮಾರು ಮೂರು ಅಡಿಎತ್ತರದ ಮಿಶಿನ್ ಇತ್ತು ಟಕ ತಕಾ ಅಂತ ಸದ್ದು ಮಾಡುತ್ತಾ ಹಾಳೆಯ ಮೇಲೆ ಸಂದೇಶ ಬರುತ್ತಿದ್ದವು.
ಇಂದು ಅದೇ ಟೆಲೆಕ್ಸ್ ಮಾದರಿಯಲ್ಲಿ  ಸಂದೇಶಗಳು ಎನ್ ಸಮಾಚಾರ ಮುಖ ಪುಟದಲ್ಲಿ ಬರುತ್ತಲೇ ಇರುತ್ತವೆ.
ಇವುಗಳ ಫಲವೇನು ಎಂದು ಯೋಚಿಸಿದರೆ
೧. ನಾನು ಭ್ರಮಾ ಲೋಕದ ಪ್ರಮುಖ ಸದಸ್ಯ
೨. ಮಾನವ ಸಂಬಂಧ ಕಳೆದು ಕೊಂಡು ಮರೀಚಿಕೆಯ ಹಿಂದಿರುವ ಕಲ್ಪನಾ ಜೀವಿ
೩. ಒಬ್ಬ DRUG ADDICT ನಂತೆ ನಾನು ಫೋನ್ ಅಡಿಕ್ಟ್!
ದೀಪಕ್

ಸೋಮವಾರ, ಏಪ್ರಿಲ್ 2, 2018

ಮೂರು ಅಸಂಬದ್ಧ ಲಬ್ಧಗಳು

ಮಾಗಿದ ಫಲ ನೆನಪಾಯಿತು
ಭೇಟಿ ಸಂತಸ ನೀಡಿತು
ಉದ್ಗಾರಗಳಿಲ್ಲ
ಅತಿಶಯೋಕ್ತಿ ಗಳಿಲ್ಲ
ನಿಷ್ಕಲ್ಮಷ ತೆ ಸರಳತೆ
ಅನುಭವ ಹಂಚಿಕೆ
ನೀಡುವ ಹಂಬಲವಿದ್ದವರ ಭೇಟಿ
ಇಬ್ಬರೂ ಪಡೆಯಲು ತಯಾರಿಲ್ಲ
***
ಸರಿ ತಪ್ಪುಗಳಾಚೆ
ಮೌನ ಮಾತಿನಾಚೆ
ಈಚಿನವರಿಗಷ್ಟೇ ಗೋಚರ
ಆಚಿನವರ ಸುದ್ಧಿ ತಿಳಿದವರು ಇಲ್ಲ
ಗುದ್ದಿ ನುಡಿದವರಿಲ್ಲ
ಎದ್ದು ನಡೆವವರೆಲ್ಲ
ಗೊಂದಲಗಳ ನಡುವೆ
ದಿಕ್ಕು ತಪ್ಪು ವವರೆ ಎಲ್ಲ
ಆಚೆ ಈಚೆ ಛೇ ಛೇ...
***

ಮೌನ ಮಾತನಾಡಿಸಿತು
ತಿರುಗಿ ಮಾತನಾಡಲು
ತನ್ನ ಸಿರಿಯಾ ತೋರಿತು
ಬಣ್ಣ ಆಕಾರ ಒನಪು ಬಳುಕು
ನಾ ಕೂಗಿದೆ
ನಾ ಕೋಗದೆ
ಮೌನವಾಗಿದ್ದು ಬಿಡು
***

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.