ಮಂಗಳವಾರ, ಏಪ್ರಿಲ್ 3, 2018

ಸ್ಮಾರ್ಟ್ ಫೋನ್

೨೦೦೯ ರಲಿ ನನ್ನ ಗೆಳೆಯ ರಾಮ್ ಒಂದು ಸ್ಮಾರ್ಟ್ ಫೋನ್ ಕೊಂಡ. ನನ್ನಲಿ ಮಾಮೂಲು ಫೋನ್ ಇತ್ತು. ಅವನೊಂದಿಗೆ ಒಂದು ಸಂಜೆ ಬಿಯರ್ ಹೀರುತ್ತಾ ಕುಳಿತೆ.
ಹೇ doc listen ನೀವು ಒಂದು smart ಫೋನ್ ತಗೊಳ್ಳಿ, really worth of it. ಇವಾಗ ginger os ನಡೀತಿದೆ market ನಲ್ಲಿ. ಇನ್ನೂ ಎರಡು ವರ್ಷ ತೊಂದರೆ ಇಲ್ಲ ಆಮೇಲೆ ಐಸ್ ಕ್ರೀಂ, jellybean, KitKat lollipop ಹೀಗೆ ದೊಡ್ಡ ಲಿಸ್ಟ್ ಇಟ್ಟಿದ್ದಾರೆ. ಆವಾಗ upgrade ಮಾಡ್ಕೋ ಬಹುದು.

ನನ್ನ ತಮ್ಮ ಮದುವೆ ಆಗೋ ಹುಡುಗಿ ಕೈಯಲ್ಲಿ ಸ್ಮಾರ್ಟ್ ಫೋನ್ ಇತ್ತು. ಅದನ್ನ ನೋಡೋದಕ್ಕೆ ಕುತೂಹಲ ಆದರೆ ಕೈಗೆ ಕೊಡುವವರು ಯಾರು ಇಲ್ಲ. ನನ್ನ ಕಸಿನ್ ಒಬ್ಬಳಿಗೆ ಹೊರದೇಶಲ್ಲಿದ್ದ ಅವಳ ಅಣ್ಣ ಸ್ಮಾರ್ಟ್ ಫೋನ್ ತಂದು ಕೊಟ್ಟ ಎಂದು ಕೇಳಿದೆ. ಭೇಟಿಯಾದಾಗ ನೋಡ ಹೋದರೆ ಅವಳು ನಾನದನ್ನು ಮುಟ್ಟಲು ಬಿಡಲಿಲ್ಲ.
ಕ್ಲಿನಿಕ್ ಎಂದಿನಂತೆ ಎಲ್ಲರೂ ಆರೋಗ್ಯವೇ ಎಂದು ಸಾರುತ್ತಿತ್ತು. ನಮ್ಮ ಜನ ಎಲ್ಲರೂ ಎಲ್ಲವನ್ನೂ ಕೊಳ್ಳುವ ವಸ್ತುವಿನಂತೆ ಪರಿಗಣಿಸುತ್ತಾರೆ. ಒಂದು ಕಿಲೋ ತರಕಾರಿ, ಅರ್ಧ ಲೀಟರ್ ಹಾಲು, ೧೦೦ ಗ್ರಾಂ ದ್ರಾಕ್ಷಿ ಗೋಡಂಬಿ, ಎರಡು ಇಂಜೆಕ್ಷನ್, ನಾಲ್ಕು ಮಾತ್ರೆ ಸ್ಟ್ರಾಂಗ್, ಕಮ್ಮಿ ಆಗದಿದ್ದರೆ ಮತ್ತೊಬ್ಬ ವೈದ್ಯ, ತಿಳಿಯುವ ಮನೋಭಾವನೆ ತುಂಬಾ ಕಮ್ಮಿ. ತಿಳಿಯದೆ ವರ್ತಿಸುವವರಿಗೆ ಹೇಳಿ ಹೇಳಿ ನಾನು ರೋಗಿ ಆಗುವವರನ್ನು ಕಮ್ಮಿ ಮಾಡಿಕೊಂಡಿರುವುದೇ ನನ್ನ ಹೆಗ್ಗಳಿಕೆ.
ನಮ್ಮ ಮುಂಬೈ ಗೆಳೆಯ ಕ್ಯಾ ಸರ್ ಜಿ ಏಕ್ ಮೊಬೈಲ್ ಕೆ ಲಿಯೆ ಇತ್ನ ಪರಿಷಾನಿ? ಏಕ್ ಕರೀದ್ ಲೋ ಎಂದು ಅಂಗಡಿಗೆ ಕರೆದೊಯ್ದ. ಅಂದು ನನ್ನಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವ ಇತ್ತು ಅದಕ್ಕೆ ನಾನು ಮೊಬೈಲ್ ಕೊಂಡೆ, Robin pathology ಪುಸ್ತಕದಲ್ಲಿ ಇಂತದಕ್ಕೆ ಹೇಳಿರೋದು, its irrational to expect humans to be rational!
ನಮ್ಮ ಮೊದಲ ಸ್ಮಾರ್ಟ್ ಫೋನಿನ ಮೆಮೋರಿ ೨೦೦ಎಂಬಿ  ಸಾಕಲ್ಲವೇ, ಹೆಚ್ಚು ಬೇಕೆಂದರೆ ಮೆಮೋರಿ ಕಾರ್ಡ್ ಇದೆಯಲ್ಲ ಎಂದು ಕೊಂಡೆ.. ಏನ್ ಸಮಾಚಾರ (WhatsApp)ಇನ್ನೂ ಇರಲಿಲ್ಲ ಆಗ. ಮುಖ ಪುಟ (ಫೇಸ್ಬುಕ್) ಸೇರಿದೆ ಸ್ಮಾರ್ಟ್ ಫೋನ್ ಇದೆಯಲ್ಲ ಎಂದು.
ದಿನ ಬೆಳಿಗ್ಗೆ ಹಾಗೆ ಸಂಜೆ ಒಂದು ಸಲ ಪತ್ರಗಳನ್ನು ಸಂದೇಶಗಳನ್ನು ಓದುವುದು ಹಾಗೂ ಪ್ರತಿಕ್ರಿಯಿಸುವುದು. ತಿಂಗಳಿಗೆ ಎರಡು ಜಿ ಬೀ ಡೇಟಾ! ಅದರಲ್ಲಿ ಉಪಯೋಗಿಸದೆ ಪ್ರತಿ ತಿಂಗಳು ಒಂದು ಜಿಬಿ ಗು ಹೆಚ್ಚು ಡೇಟಾ ಮಿಗುತ್ತಿತ್ತು.  ಅದಕ್ಕೆ ತೆರುತ್ತಿದ್ದ ಹಣ ೧೦೦ ರೂಪಾಯಿ. 
ನಂತರದಲ್ಲಿ service provider ಅದನ್ನು ಬದಲಿಸಿ ಒಂದು ಜಿಬಿ ೧೨೫ ರೂಪಾಯಿ ಎಂದು ಮಾಡಿದರೂ ನಾನು ಹೆಚ್ಚು ತಲೆ ಕೆಡಿಸಕೊಂಡಿರಲಿಲ್ಲ ಕೊಳ್ಳಲಿಲ್ಲ.
ಏನ್ ಸಮಾಚಾರ, ಅದರಲ್ಲಿ ಗುಂಪುಗಳು, ಗುಂಪಿನಲ್ಲಿ ಚರ್ಚೆ, ಕವನ, ಕಥೆ, ಜಗಳ ಗುಂಪು ತೊರೆಯುವುದು, ನಂತರ ದಿನಗಳಲ್ಲಿ ಫೋಟೋ ಕಳಿಸುವುದು ಆರಂಭವಾದವು. Wife ಇಲ್ಲದ ಮನೆಯಲ್ಲಿ ವೈಫೈ ರಾರಾಜಿಸುತ್ತಿತ್ತು. ಓದುತ್ತಿದ್ದ ,ಓದಲೇ ಬೇಕಾದ ಪುಸ್ತಕ ಗಳು ಧೂಳು ತಿನ್ನಲು ಆರಂಭಿಸಿದವು .  ಕೇವಲ ಕರೆ ಮಾಡಲು ಸೀಮಿತ ವಾಗಿದ್ದ ಮೊಬೈಲ್, ಜೀವನವನ್ನು ಜೀವನ ಶೈಲಿಯನ್ನು ಬದಲಿಸಿತು. ಅಭ್ಯಾಸ, ಹವ್ಯಾಸ, ಸ್ನೇಹಿತರು, ಸಂಬಂಧಗಳು, ಎಲ್ಲವನ್ನೂ ಕಿತ್ತು ಮೂರು ಇಂಚಿನ ಪರದೆಗೆ ಜೀವನ ಸೀಮಿತ ವಾಯಿತು. ೨೦೦ ಎಮ್ ಬಿ ನೆನಪು ಸಾಲದಾಯಿತು. 8gb ನೆನಪಿನ ಫೋನಿಗೆ ಬದಲಾಯಿಸಿದೆ. ಶಾಲೆಯಲ್ಲಿ ಕಲಿಯುವಾಗ ನೋಡಿದ ಭೂಪಟದ  ಅಬ್ಬರಕ್ಕೆ ಅವತರಿಣಿಕೆ maps ನನ್ನ ಫೋನಿನ ಮುಖ್ಯ ಭಾಗವಾಗಿ ಹೊರ ಹೋದಾಗಲೆಲ್ಲ ದಾರಿ ತೋರುವ ಸಾಹಸ ಮಾಡಿ ಈಗ ನನ್ನನ್ನು ಲೋಕಲ್ ಗೈಡ್ ಮಾಡಿಕೊಂಡು ನಾನು ಹೋದಲ್ಲೆಲ್ಲ ಅದು ಪ್ರಶ್ನೆ ಮಾಡಲು ಶುರು ಮಾಡಿದೆ.
ಒಮ್ಮೆ ಸ್ಮಾರ್ಟ್ ಫೋನ್ ಕೆಳಬಿದ್ದು ಒಡೆದು ಹೋಯಿತು ಅದರ ಪರದೆ ಬದಲಾಯಿಸಲು ಹೋದರೆ, ಅದಕ್ಕೆ ಫೋನಿನ ಅರ್ಧದಷ್ಟು ಬೆಲೆ ತೆರಬೇಕಾಯಿತು. ನಂತರ ದಿನಗಳಲ್ಲಿ ಫೋನನ್ನು ಸಂತೆಯಲ್ಲಿ ಕಳೆದೆ. ಚಟಕ್ಕೇನು ಬರವೆ ಬಡತನವೇ? ೫೦೦೦ ಸೈಕಲ್ ಗೆ ಯೋಚಿಸುವುದು ೧೫೦೦೦ ಸಾವಿರ ಮೊಬೈಲ್ ಅಷ್ಟೇನಾ ಎಂದು ಖರೀದಿಸುವೆವು.
8gb ಮೆಮೋರಿ ಹೋಗಿ ೬೪gb ಮೆಮೋರಿ ಬಂತು ಡುಂ ಡುಂ ಡುಂ.

ಈಗ ದಿನಕ್ಕೆ ೧.೫gb ಡೇಟಾ ಉಚಿತವಾಗಿನೀಡುತ್ತಾರೆ ತಿಂಗಳ ಫೀ ಕಟ್ಟಿದ್ದರೆ ಸಾಕು. ಏನ್ ಸಮಾಚಾರ ದ ೨೫ ರಿಂದ ೩೦ ಗುಂಪುಗಳಲ್ಲಿ ಹಾಗೂ ಮುಖಪುಟದಲ್ಲಿ  ಸಂದೇಶಗಳು ಬರುತ್ತಲೇ ಇರುತ್ತವೆ.

ನನ್ನ ಪ್ರೌಢ ಶಾಲೆ ದಿನಗಳಲ್ಲಿ ಒಮ್ಮೆ ಆಂದೋಲನ ಪತ್ರಿಕೆಯ ಕಚೇರಿಗೆ ಹೋಗಿದ್ದೆ ಅಲ್ಲೊಂದು ಸುಮಾರು ಮೂರು ಅಡಿಎತ್ತರದ ಮಿಶಿನ್ ಇತ್ತು ಟಕ ತಕಾ ಅಂತ ಸದ್ದು ಮಾಡುತ್ತಾ ಹಾಳೆಯ ಮೇಲೆ ಸಂದೇಶ ಬರುತ್ತಿದ್ದವು.
ಇಂದು ಅದೇ ಟೆಲೆಕ್ಸ್ ಮಾದರಿಯಲ್ಲಿ  ಸಂದೇಶಗಳು ಎನ್ ಸಮಾಚಾರ ಮುಖ ಪುಟದಲ್ಲಿ ಬರುತ್ತಲೇ ಇರುತ್ತವೆ.
ಇವುಗಳ ಫಲವೇನು ಎಂದು ಯೋಚಿಸಿದರೆ
೧. ನಾನು ಭ್ರಮಾ ಲೋಕದ ಪ್ರಮುಖ ಸದಸ್ಯ
೨. ಮಾನವ ಸಂಬಂಧ ಕಳೆದು ಕೊಂಡು ಮರೀಚಿಕೆಯ ಹಿಂದಿರುವ ಕಲ್ಪನಾ ಜೀವಿ
೩. ಒಬ್ಬ DRUG ADDICT ನಂತೆ ನಾನು ಫೋನ್ ಅಡಿಕ್ಟ್!
ದೀಪಕ್

ಕಾಮೆಂಟ್‌ಗಳಿಲ್ಲ:

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.