ರಾತ್ರಿ ಇದು ರುದ್ರ ರಮಣೀ
ಮನ ಹೊರಗೆ ಆರ್ಭಟ
ನೋವಿನ ಚೀತ್ಕಾರ
ಪಕಪಕಬೆಳಕು
ಕಣ್ಣೀರು
ಕಾರಣ
ಆಕೆ ಪ್ರಕೃತಿ
ಬಸಿರಾದ ಭಾವಗಳ
ನಿಡು ಸುಯ್ಯುತ
ಹೊರ ಲಾಗದೆ
ಹೋರುತಿಹಳು
ಕಂದಮ್ಮಗಳ
ಪ್ರಸವ ಕಾಲದ
ನಾಳಿನ ಕೂಸಿಗೆ
ಇಂದಿನ ಕನಸುಗಳ
ತರಿದುಹರಿದು
ಬಡಿಸಿ
ಕಣ್ಣೀರ ಒರೆಸುತ್ತಾ
ತೃಪ್ತಿ ಭಾವ ಹೊಂದುವಳು
ಇವಳು ಮಾತೆ
ಒಣಗಿದೆಲೆ ಕಸಗಳನ್ನು
ಮಡಿಲಲಿರಿಸಿ,
ಬೀಜಗಳ ಮೊಳೆಸುವ
ಕಾಯಕ ಹಿಡಿದವಳು
ಬೇಸರಿಸದೆ
ಎಲ್ಲವನು
ಚಿಗುರಿಸುವಳು
ತಾ ಮಾತ್ರ ಮೌನದ ಸೆರಗ
ಹಿಂದೆ ನಿಂತು ಬಿಕ್ಕಿಸುವಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ