ಶುಕ್ರವಾರ, ಡಿಸೆಂಬರ್ 27, 2019

ಹೀಗೆ

ಕತೆ
ನೀನು ನನಗೆ ಕತೆ ಹೇಳುತ್ತೀಯ,
ನಾನೂ ನಿನಗೆ ಕತೆ ಹೇಳುತ್ತೇನೆ

 ಇಬ್ಬರಿಗೂ ಗೊತ್ತು ಕತೆ ಎಂದು
ಉದ್ದೇಶವ ನೋಡಿ 
 ಸುಮ್ಮನಾಗುತ್ತೇವೆ

ಒಮ್ಮೊಮ್ಮೆ ಕತೆ ಎಂದು ಜೋರು ಮಾಡಿದಾಗ,
ತಿಳಿಯಲಿಲ್ಲ ಅದು ಹಾಗಲ್ಲ ಎಂದು ಕೊಂಡಿದ್ದೆ ಎಂದು ಹಿಂಜರಿಯುತ್ತೀಯ

 ಕೆಲಸವೇನೆಂದು ನೋಡೇ ಇಲ್ಲ,
ನೋಡಿದ್ದರೆ ಹೀಗೆ ತಪ್ಪು ಮಾಡುತ್ತಿರಲಿಲ್ಲ ಎಂದು ನಿನ್ನ ನ್ನು ಮೇಲಕ್ಕೆತ್ತಿ ಕೆಳಗೆ ಬೀಳಿಸುತ್ತೇನೆ

ನನ್ನನ್ನು ಕ್ಷಮಿಸುತ್ತೀಯ
ಮತ್ತೆ, ಪರಸ್ಪರರು ಕತೆ ಹೇಳಿಕೊಳ್ಳುತ್ತೇವೆ
ಬದುಕಿಗೆ, ಅದರ ಪ್ರೀತಿಗೆ...
-ದೀಪಕ್

ಸೋಮವಾರ, ಡಿಸೆಂಬರ್ 16, 2019

ಇದು ಬರೀ ಗುಹೆ ಅಲ್ಲವಣ್ಣ

ಬಿಲಿಯಂತರ ವರ್ಷಗಳ ಹಿಂದೆ ಸಯನೊಬ್ಯಾಕ್ಟೆರಿಯ ಎಂಬ ಕೋಶ ಜೀವಿಯು ಫೋಟೋಸಿಂಥಸಿಸ್ ಮೂಲಕ ಆಮ್ಲಜನಕ ಹಾಗೂ ಇತರ ರಾಸಾಯನಿಕಗಳನ್ನು  ಹೊರಸೂಸುತ್ತಿತ್ತು. ಪರಿಣಾಮ ಇತರೆ ರಾಸಾಯನಿಕದಲ್ಲಿ ಸುಣ್ಣದಕಲ್ಲು ರೂಪಿತವಾಯಿತು. ಇದರಮೇಲೆ ಬಿದ್ದ ನೀರು  ಸುಣ್ಣದ ಕೆಲ ಭಾಗವನ್ನು ಕರಗಿಸಿ ಅಲ್ಲಲ್ಲೇ ಕುಳಿಗಳಾದವು.  ಭೂಮಿಯ ಹೊರಪದರದ  ಚಲನೆಯಿಂದ ಇವು  ಸಮುದ್ರದಾಚಿನ ನೆಲದ ಮೇಲೆ ಬಂದವು. ಸಮಯ ಕಳೆದಂತೆ ಮಳೆನೀರಿಗೆ ಸುಣ್ಣ ಪ್ರತಿಕ್ರಿಯಿಸುತ್ತ ಕಾರ್ಬಾನಿಕ್ ಆಮ್ಲ ಸೂಸಿ ತನ್ನ ರೂಪವನ್ನು ನಿರಂತರವಾಗಿ ಬದಲಾಯಿಸಿಕೊಳ್ಳುತ್ತಲೇಇದೆ. ಇಂದು ಅಂಡಮಾನಿನಲ್ಲಿ ಗುಹೆಯಾಕಾರವಾಗಿ ನಿಂತಿದೆ. 

ಇದನ್ನು ನೋಡಲು  ನಾವು ಬೆಳಿಗ್ಗೆ 1.30 ಕ್ಕೆ ತಯಾರಿ ಆರಂಭಿಸಿದೆವು. ಪಾಪು ಹಾಗು ನಮಗೆ ಎಂದು ಬೆಳಗಿನ ತಿಂಡಿಯನ್ನು ಅಪರಾತ್ರಿಯಲ್ಲೇ ಸುಷ್ಮಾ ತಯಾರಿಸಿದಳು. 2.30 ರ ಸುಮಾರಿಗೆ ಸುಣ್ಣದಕಲ್ಲಿನ ಗುಹೆಗಳಿರುವ ಬರತಂಗ ದ್ವೀಪಕ್ಕೆ ಪೋರ್ಟ್ ಬ್ಲೇರಿನಿಂದ ಕಾರಿನಲ್ಲಿ ಹೊರಟೆವು. ರಾತ್ರಿ ನಿರ್ಜನ ಹಾದಿಯಲ್ಲಿ ಕಾರು ಕತ್ತಲನ್ನು ಸೀಳಿಕೊಂಡು ಸುಮಾರು 100ಕಿಲೋಮೀಟರ್ ಕ್ರಮಿಸಿದ ನಂತರ 4.30ರ ಸುಮಾರಿಗೆ ಕಾರು ಟ್ರಕ್ಕುಗಳು ಸಾಲಾಗಿ ನಿಂತಿದ್ದ  ಚೆಕ್ ಪೋಸ್ಟ್ ತಲುಪಿದೆವು. ಗೇಟ್  6 ಗಂಟೆಗೆ ತೆರೆಯುತ್ತಾರೆ, ಆಗ ಸಾಲಿನಲ್ಲಿ ಜರವಾ ಬುಡಕಟ್ಟಿಗೆ ಮೀಸಲಿರುವ ಕಾಡನ್ನು ದಾಟಿ ಅತ್ತ  ಇರುವ ಬರತಂಗ ಸೇರಬೇಕು.  ಬೆಳಿಗ್ಗೆ 6ಗಂಟೆಯಿಂದ ದಿನಕ್ಕೆ ನಾಲ್ಕು ಬಾರಿ ಮಾತ್ರ ಗೇಟನ್ನು ತೆಗೆದು ವಾಹನಗಳನ್ನು ಬಿಡುತ್ತಾರೆ. ಅಲ್ಲಿರುವ ಜರವಾ ಬುಡಕಟ್ಟು ಜನರನ್ನು ಸಂರಕ್ಷಿಸಲುಈ ಪರಿಯ ಕಟ್ಟುಪಾಡು. ಜರವಾ ಬುಡಕಟ್ಟು ಜನ ಸುಮಾರು 300 ರಷ್ಟಿರುವರು ಎಂದು ತಿಳಿಯಿತು.  ನಾನಿರುವುದು ಮೈಸೂರು, ಬಂಡೀಪುರದಿಂದ ತಮಿಳುನಾಡಿಗೆ ಹಾಗೂ ಕೇರಳಕ್ಕೆ ಹೋಗುವ ರಸ್ತೆ ನನ್ನ ಜಿಲ್ಲೆಯ ಗಡಿಯಿಂದಲೇ ಹೋಗುವುದು. ಅಪಾರ ವನ್ಯ ಸಂಪತ್ತು ಹಾಗೂ ಕಾಡು ಪ್ರಾಣಿಗಳಿವೆ. ಅವನ್ನು ಕಾಪಾಡಲು ರಾತ್ರಿ ಸಮಯ ವಾಹನಗಳನ್ನು ನಿರ್ಬಂಧಿಸಿರುವುದಕ್ಕೆ ತೆರವು ಮಾಡಿಎಂದು ಅಪಾರ ಹೋರಾಟಗಳು ನಡೆಯುತ್ತಿವೆ. ಇಲ್ಲಿ 300 ಜನ ಬುದಕಟ್ಟಿನವರನ್ನು ಕಾಪಾಡಲು ಪ್ರಶಂಸನೀಯ ಕ್ರಮ ತೆಗೆದುಕೊಂಡಿದ್ದಾರೆ ಎಂದು ಸಂತೋಷವಾಟಯಿತು. ಸ್ವವಿವರಗಳಿರರುವ ಅರ್ಜಿಯನ್ನು ಗುರುತುಪತ್ರಗಳೊಂದಿಗೆ ಚೆಕ್ ಪೋಸ್ಟಿನಲ್ಲಿ ನೀಡಿದೆವು. ಕಾಡಿನೊಳಗೆ ಉಳಿದ ವಾಹಣಗಳೊಂಸಿಗೆ ನಮ್ಮ ಪ್ರಯಾಣ ಆರಂಭವಾಯಿತು. ಮುಂದುಗಡೆ ಒಬ್ಬ ವನರಕ್ಷಕ ಕೆಂಪು ಬಾವುಟದೊಂದಿಗೆ ಹೊರಟರೆ ಕೋಣೆಗೊಬ್ಬ ವನರಕ್ಷಕ ಹಸಿರು ಬಾವುಟ ದೊಂದಿಗೆ ಹೊರಡುತ್ತಾನೆ ಮಧ್ಯದಲ್ಲಿ ಪರವಾನಿಗೆ ಹೊಂದಿರುವ ಕಾರು ಬಸ್ಸು ಲಾರಿಗಳು. ಹೀಗೆ ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರಯಾಣಿಸಿದ ನಂತರ ಬರತಂಗ ತಲುಪಲು ಸಮುದ್ರದ ಕೊಲ್ಲಿ ದಾಟಬೇಕು. ಬೃಹತ್ ದೋಣಿಯಲ್ಲಿ ಲಾರಿ ಬಸ್ಸುಗಳಜೊತೆಗೆ ಕೊಲ್ಲಿಯನ್ನು ದಾಟಿದೆವು. ಅಟ್ಟಲಿನ ಜಾಗವನ್ನು
 ನೀಲಾಂಬರು ಎಂದು ಕರೆಯುತ್ತಾರೆ. ನೀಲಾಂಬರುವಿನಲ್ಲಿ ಒಂದು ವೇಗದ ಸಣ್ಣ ದೋಣಿಯನ್ನು ಬಾಡಿಗೆ ಪಡೆದು  ನಾಯೆದರ ಎಂಬ ಸ್ಥಳಕ್ಕೆ ಹೊರಟೆವು. ಮ್ಯಾಂಗ್ರೋವ್ ಕಾಡುಗಳು ದಟ್ಟವಾಗಿ ಕಾಣುತ್ತದೆ ದೋಣಿಯಲ್ಲಿ ಹೋಗುವಾಗ. ದೋಣಿಯಲ್ಲಿ ನಮ್ಮ ಬೆಳಗಿನ ಉಪಹಾರವನ್ನು ಮುಗಿಸಿ  ನಾಯೆದರ ದಲ್ಲಿ ಇಳಿದೆವು. ಅಲ್ಲಿಂದ ಸು ನದಕಲ್ಲಿನ ಗುಹೆ ತಲುಪಲು ಕಾಡಿನಲ್ಲಿ ಎರಡು ಕಿಲೋಮೀಟರ್ ನಷ್ಟು ನಡೆಯಬೇಕು. ಜನ ಸಾಗಿ ರಸ್ತೆಯ ಗುರುತು ಸಿಗುವುದು ಕಷ್ಟವಾಗಲಿಲ್ಲ. ಅಲ್ಲಲ್ಲಿ ಸಣ್ಣ ಫಲಕಗಳು ದಾರಿ ತೋರಿದವು. ನಂತರ ಕಂಡ ಸುನ್ನಡಗುಹೆಯನ್ನು ಹೇಳಲು ನನಗೆ ಪದಗಳು ಸಾಲದು. ಕ್ವುಏಳಗಿ ಆ ಚಿತ್ರಗಳು ನಿಮ್ಮನ್ನು ಒಮ್ಮೆ ಹೋಗಿ ನೋಡಲು ಪ್ರೇರೇಪಿಸುವುದು ಎಂದು ನಂಬಿರುವೆ. 

ಗುರುವಾರ, ಅಕ್ಟೋಬರ್ 24, 2019

ಮಗಳು

ಬೆಳಗಿನ ನಡಿಗೆಯಲಿ
ನನ್ನಪ್ಪಿದವಳೇ,
ಇಟ್ಟಿಗೆ ,ಮರ ಹೂ, ಗಿಡ, ಸಪೋಟ,
ಕಾಗೆ, ಅಳಿಲು,  ಚಿಟ್ಟೆಗಳ
ಮುದ್ದಾಗಿ ಉಲಿವ ಗಿಣಿ,
ದಣಿದ ತೋಳು ವಿರಮಿಸಲೆಂದು
ಕಂಬಿ ಬಗ್ಗಿಸುವ ಪಟ್ಟಿಯಮೇಲೆ ಕುಳಿತು ಹೋಗಿ ಬರುವವರ ದಿಟ್ಟಿಸುತ
ತಾತ, ಅಣ್ಣ, ಅಕ್ಕ, ಅಜ್ಜಿ ,
ಬೌಬೌ, ಅಂಬಾ ...
ಎಂದು ಸಂಬಂಧಗಳ
ವಿಸ್ತರಿಸುವವಳೇ
ನೀ ನಿತ್ಯ ನೂತನ ಜೀವಕಳೆ

ಭಾನುವಾರ, ಆಗಸ್ಟ್ 18, 2019

ಮಳೆ

ನೀ ಬಿಟ್ಟು ಹೊರಟಾಗ
ಅತ್ತಿದ್ದೆ ಕಳೆದಬಾರಿ,
ಅದಕ್ಕೆ ಇರಬೇಕು
ನೀ ಅತ್ತರೂ
ಕಾಣ ಬಾರದೆಂದು
ಆಗಸವೇ ಅಳುತ್ತಿತ್ತು
ಈಬಾರಿ

ಮಂಗಳವಾರ, ಆಗಸ್ಟ್ 6, 2019

It's raining..


It's raining,
Is it not enough to squat and sip a cup of hot coffee held in both the hands?

It's raining, is it enough to float the boats in gutter?

It's raining, Is it not enough for spiced puffed rice delicacy?

It's raining, is it not enough for hot deep fried chili baji n pakoda?

It's raining, is it not enough to sip favorite scotch?

It's raining
Is it not cold enough to shrug and sleep in corner under a blanket?

Its raining, is it not enough to sit in front of TV hugging your love?

It's raining, is it not a valid reason to close clinic and enjoy with family?

It's raining, Is it not the occasion to plant a sapling in backyard?

It's raining, is it not enough to sit back and think about last summer?

It's raining...

-Deepak

ಗುರುವಾರ, ಮೇ 23, 2019

ಒಂದು ಎರಡು

ಒಂದು ಎರಡು
ಬಚ್ಚಲಿಗೆ ಹೊರಡು

ಮೂರು ನಾಲ್ಕು
ಬ್ರಶ್ ಗೆ ಪೇಸ್ಟ್ ಹಾಕು

ಐದು ಆರು
ಹಲ್ಲುಜ್ಜಿದ್ರೆ ಹುಳುಕಿನಿಂದ ಪಾರು

ಏಳು ಎಂಟು
ಬಾಯಿ ತೊಳೆಯೋದೂ ಉಂಟು

ಒಂಭತ್ತು ಹತ್ತು
ಹಲ್ಲುಜ್ಜೋ ಆಟ ಮುಗೀತು

ಒಂದರಿಂದ ಹತ್ತು ಹೀಗಿತ್ತು
ಬಾಯಿ ಸ್ವಚ್ಛ ಆಗಿತ್ತು

ದೀಪಕ್

ಶುಕ್ರವಾರ, ಮೇ 17, 2019

ಕಾಯುವಿಕೆ!


ಕಾಯುವಿಕೆಯಾಚೆ
ಮತ್ತೇನೂ ಇಲ್ಲ,
ನೀ ಬರದ ಹೊರತು!

ಸೋಮವಾರ, ಮೇ 6, 2019

14ವರ್ಷ

ನಮಗೆ ಪ್ರೀತಿಯನ್ನೇ ಪೂರ್ಣ ಅರ್ಥ ಮಾಡಿಕೊಳ್ಳುಲು ಆಗಿಲ್ಲ
ಈ ಸಾಮಾಜಿಕ ಜಂಝಾಟದಲಿ ಪ್ರಿಯೆ
ಬಾ ಹದಿನಾಲ್ಕುವರ್ಷ ಕಾಡುಗಳಲ್ಲಿ ಬದುಕಿ ಬರೋಣ
ಆಗಲಾದರೂ ನಿನ್ನ ನಾನು
ನನ್ನ ನೀನು ಅರಿಯಲಾದೀತು

ಭಾನುವಾರ, ಏಪ್ರಿಲ್ 28, 2019

ನೆನಪು ಒಂದು

81 82 ನೆ ಇಸವಿ ಇರಬೇಕು ನಾನು ಅಣ್ಣ ಅಮ್ಮನ ಜೊತೆ ಬೆಂಗಳೂರಿಗೆ ಹೋಗಿದ್ದೆ ಸಣ್ಣ ಮನೆ ಅಡಿಗೆ ಮನೆ ಹಾಗೂ ಒಂದು ಹಾಲು ಮತ್ತು ಕೋಣ ಇತ್ತು ಪ್ರತ್ಯೇಕ ದೇವರ ಕೋಣೆ ಇರಲಿಲ್ಲ ಗೋಡೆಗೆ ನೇತು ಹಾಕಿರುವ ಪಟ್ಟಕ್ಕೆ ಗಂಧದ ಕಡ್ಡಿ ಹಚ್ಚಿ ಕೈ ಮುಗಿಯುತ್ತಿದ್ದರು ಹೀಗೆ ಒಂದು ಸಂಜೆ ಕೊನೆಯಲ್ಲಿ ದೊಡ್ಡಪ್ಪ ಅಜ್ಜಿ ಹಾಗೂ ಇನ್ನೊಂದಿಬ್ಬರು ಗಂಧದ ಕಡ್ಡಿ ಯನ್ನು ಹೆಚ್ಚು ಸಮಯ ಉರಿಯುವಂತೆ ಹೇಗೆ ಮಾಡಬಹುದು ಎಂದು ಪ್ರಚಾರ ಮಾಡು ತ್ತಿದ್ದರು ಒಬ್ಬರು ಫ್ಯಾನ್ ಗಾಳಿಗೆ ಬೇಗ ಉರಿದು ಹೋಗುತ್ತದೆ ಬಾಗಿಲು ತೆರೆದಿದ್ದಾರೆ ಗಾಳಿಗೆ ಬೇಗ ಉರಿದು ಹೋಗುತ್ತದೆ ಎಂದು ವಿಚಾರ ಮಾಡುತ್ತಿದ್ದರು ದೊಡ್ಡಪ್ಪ ಗಂಧದ ಕಡ್ಡಿ ಯನ್ನು ನೀರಿನಲ್ಲಿ ಅದ್ದಿ ನಂತರ ಉಳಿಸಿದರೆ ಹೆಚ್ಚು ಸಮಯ ಉಳಿಯುತ್ತದೆ ಎಂದು ಪ್ರತಿಪಾದಿಸಿದರು ಅಷ್ಟೇ ಅಲ್ಲ ಒಂದು ಗಂಧದ ಕಡ್ಡಿ ಯನ್ನು ನೀರಿನಲ್ಲಿ ನೆನಸಿ ಇನ್ನೊಂದನ್ನು ನೆನೆಸದೆ ಎರಡನ್ನು ಒಟ್ಟಿಗೆ ಹತ್ತಿಸಿ ನೀರಿನಲ್ಲಿ ನಂದ ಗಂಧದ ಕಡ್ಡಿ ಹೆಚ್ಚು ಸಮಯ ಉಳಿಯುತ್ತದೆ ಎನ್ನುವುದನ್ನು ನಿರೂಪಿಸಿದರು ಇಂದು ಬೆಳಗ್ಗೆ ದೇವರ ಮನೆಯಲ್ಲಿ ಗಂಧದ ಕಟ್ಟಿಗೆ ಬೆಂಕಿ ಸಾಗಿಸುವಾಗ ಹೀಗೆ ನೆನಪಾಯಿತು.

ಶುಕ್ರವಾರ, ಏಪ್ರಿಲ್ 26, 2019

ಸಮಾಧಿ

ಮಸಣದ ಸಮಾಧಿಮೇಲೆ ನಡೆಯಬೇಡವೋ ಗೆಳೆಯ
ಆಸ್ಪತ್ರೆಯಲ್ಲಿ ದಣಿದವರು  
ಒಳಗೆ ಮಲಗಿದ್ದಾರೆ
***
ಪ್ರೀತಿ ಇದ್ದೂ ಕಾಣದಾಯಿತು
ಕರ್ತವ್ಯ ಪೂರೈಕೆಯಾತುರದಲ್ಲಿ
ವಾರದೊಳೆಲ್ಲವೂ ಮುಗಿದು ಬಿಟ್ಟವು
ತುರ್ತು ಘಟಕದಿಂ
ತಿಥಿಯವರೆಗೂ
ಯಾರನಾರೂ ಕಾಯರು

ಮಂಗಳವಾರ, ಏಪ್ರಿಲ್ 23, 2019

ಯಾಕಳುವೆ

ಯಾಕಳುವೆ ಹೇಳು ಮಗು
ಅಮ್ಮನಾ ಬೇಡುವೆ ನೀ
ಹೇಳಿಬಿಡು
ನಿನ್ನಪ್ಪನ ತಪ್ಪೇನು

ಅಳಬೇಡ ಸುಮ್ಮನಿರು
ಅಪ್ಪ ಮುದ್ದಾಡುವನು
ಕೇಳಿದಾಗ ನಿನ್ನಹೊರಒಯ್ವ
ಅವನ ತಲೆಮೇಲಿಹುದು
ನಿನ್ನಸಿಂಹಾಸನವು
ನೀ ತೋರಿದುದ ತರುವಲ್ಲಿ
ಅವನ ಸುಖವು

ಅವನಲ್ಲ ನಿನ್ನಮ್ಮ
ನವಮಾಸ ಹೋರದವ
ಹೇರದವ
ಹಸಿದಾಗ ನಿನಗೆ ಹಾಲುಣಿಸದವನು

ಅವನಿಗಿಲ್ಲದ ಭಾಗ್ಯ
ಆಡಿ ಹಂಗಿಸಬೇಡ
ನಕ್ಕು ತಬ್ಬಿಬಿಡು 
ನಿನಗೆ ನೆಮ್ಮದಿಯ
ಉಸಿರಾಗುವನು

ತನ್ನ ತೃಪ್ತಿಯ ಭಾವ
ನಿನ್ನ ನಗುವಿನಲೇ
ಕಾಣುವನು
ಸಾಯ್ವವರೆಗೂ ಹರಸಿ
ಕಾಪಾಡುವನು-
ನೀ ನಕ್ಕರೆ ಪ್ರೀತಿಯಲಿ
ಇಲ್ಲದಿರೆ ಕರ್ತವ್ಯದಲಿ
-ನಿನ್ನಪ್ಪ

ಗುರುವಾರ, ಏಪ್ರಿಲ್ 4, 2019

ಆರಂಭ

ಕಾರಿನಲ್ಲಿ ಒಟ್ಟಿಗೆ ಕುಳಿತಿದ್ದೆವು ಸ್ನೇಹಿತ ಚಲಾಯಾಸುತ್ತಿದ್ದ. ಎಲ್ಲಿಂದ ಆಕೆಯನ್ನು ಹಿಡಿದು ತಂದನೋ ತಿಳಿಯದು, ಸಹೋದ್ಯೋಗಿಯೇ?
ಅಷ್ಟರಲ್ಲಿ ಬ್ಯಾಂಕ್ ಎದುರು  ಕಾರ್ ನಿಂತು ಆಕೆ ಇಳಿದುಹೋದಳು

***
ಚುನಾವಣಾ ತಪಾಸಣೆ ನಡೆಯುತ್ತಿತ್ತು . ಪೇದೆ ಕಾರಿನ ಡಿಕ್ಕಿ ತೆಗೆಸುವಾಗ ಕೇಳಿದ  ಡಾಕ್ಟ್ರಾ?
"ಹ್ಹೂಂ "
ಎಂದೊಡನೆ ತಪಾಸಣೆ ಕೊನೆಗೊಂಡಿತು !

ಶನಿವಾರ, ಮಾರ್ಚ್ 30, 2019

Snake bit management protocol

Copied from WhatsApp forward:
National Snakebite Management Protocol,
India is recognised as having the highest snakebite mortality in the world.
ರಾಷ್ಟ್ರೀಯ ಹಾವುಕಡಿತ ನಿರ್ವಹಣೆ ಯ ಮಾರ್ಗಸೂಚಿ
Most of the fatalities are due to the victim not reaching the hospital in time and are preventable.

Research has shown that PHC doctors do not treat snakebite mainly due to lack of confidence.

At the secondary and tertiary care level Emergency departments, multiple protocols are followed mainly from western textbooks which are not appropriate for Indian settings.

Anti snake venom (ASV) are administered when it is not required and/or in doses well in excess of the required amount.

In response, Government of India, Health & Family Welfare Department with WHO, has prepared a National Snakebite Management Protocol to provide doctors and lay people with the best, evidence based approach to dealing with snakebite in India.

The majority of current first aid methods adopted by victims such as tourniquets, cutting and suction and herbal remedies are completely ineffective and dangerous.

It is now recommended to adopt what has been called the ‘Do it R.I.G.H.T.’ approach, stressing the need for Reassurance, Immobilisation as per a fractured limb, Getting to Hospital without delay and Telling the doctor of any symptoms that develop.

20 Minute Whole Blood Clotting Test (20WBCT) in the diagnosis and management of viperine bite- 10ml blood of victim in plain vial is checked for clotting after 20min.
If not clotted- suggest viper.

Pain management - never give NSAIDs- causes more bleeding. Never give morphine- can cause respiratory failure.

ASV Administration Criteria-ASV should be administered if there is significant envenomation i.e. incoagulable blood shown by the 20WBCT or significant limb swelling for viperine bite, neurological signs for cobra & krait bite.

ASV Dosage & Repeat Dosage-The recommended initial dose of ASV is 8-10 vials administered over 1 hour.

Mode of administration of ASV is IV only.

Dose of ASV is same in children, pregnant or elderly, because venom injected is of same amount, so ASV required is of same dose.

Repeat doses for haemotoxic viperine snakes is based on the 6 hour rule.

Repeat doses for neurotoxic snakes is based on the 1-2 hour rule.

The maximum recommended dose for haemotoxic bites in 30 vials of ASV.

The maximum recommended dose for neurotoxic bites is 20 vials of ASV.

ASV Reactions- No ASV Test Doses are to be administered.

At the first sign of an adverse reaction the ASV is halted-0.5mg Adrenaline is given IM- ASV remaining dose should be given- Avil & Effcorlin can be given to prevent ASV anaphylaxis.

Neurotoxic Bite -neostigmine test-Despite the fact that the neostigmine test (Neostigmine 0.5mg IM with atropine 0.6mg IV) was actually an Indian discovery, it is still poorly used in India.
Neostigmine works in cobra bite as cobra venom acts on post-synaptic neurons.

Hemotoxic bites with correct signs of envenomation can be treated with 8-10 vials of ASV, stabilised if any ASV reaction occurs with adrenaline and then transferred to a higher centre with the ability to carry out the required blood tests to identify occult bleeding or renal impairment.

Heparin has no role in curing DIC of snakebite, and can increase bleeding, so contraindicated in viperine bites.

Botrophase should not be used as coagulant in controlling viperine bite bleeding, as it causes consumptive coagulopathy.

Neurotoxic bites with correct signs of envenomation can be treated with 8-10 vials of ASV, stabilised if any ASV reaction occurs with adrenaline and administered the neostigmine test.

If there is no evidence of impending respiratory failure, determined by patient ability to perform a neck lift the patient can be treated locally.

If the patient is unable to perform a neck lift then they will be transferred to a higher centre with mechanical ventilatory capability.

The rational application of ASV and repeat doses has resulted in patients being discharged earlier.

Please forward this post to all groups having Doctors 🙏

ಮಂಗಳವಾರ, ಮಾರ್ಚ್ 26, 2019

ನೆನಪು

ನೆನಪುಗಳ ಬಿಟ್ಟು
ಹೋದದ್ದಾದರೂ ಎಲ್ಲಿಗೆ
ಮರಳಿ ಬಾರದೂರಿಗೆ
ಯಾತಕೀ ಘೋರತನ
ಹಗಲಿರುಳು ಸಂವಾದ
ಉತ್ತರ ದೊರಕಿಲ್ಲ

ಮೊಗ್ಗರಳಿ
ಫಸಲಾಗುವ ಸಮಯ
ತೆನೆ ಕಟ್ಟಲಿಲ್ಲ,
ಮಳೆಯಾಗದ್ದಕ್ಕೆ
ಯಾರ ಹಳಿದರೇನು
ನೆನಪ ಬುತ್ತಿಯಿಯೊಳಗ
ನೀನಾಗಲೇ ಹೆಮ್ಮರ!

ಶುಕ್ರವಾರ, ಮಾರ್ಚ್ 1, 2019

ಯಾರ್ಗುಂಟ್ ಯಾರ್ಗಿಲ್ಲ ಬರೀ ಅಲ್ಟೆ ಟೇಂಪಾಸ್

*

ಆಪ್ರೇಸನ್ ಅ಼ದ್ರೆ ಬಿಲೇಡ್ ತಕಂಡ್ ಕುಯ್ಯದಲ್ವಾ
ಸರ್ಯಾಗ್ ಕುಯ್ಲಿಲ್ಲ ಬಡ್ಡೇತ್ವು ಇಂಗ್ಲೆಂಡ್ಗೋಗ್ ಕೂತವ್ರೆ
ಕೇಕ್ ಕುಯ್ದಾಗ ಎಲ್ರುಗೂ ಕೊಡಕಿಲ್ಲೇನಣ್ಣೋ ಅಂಗೇ ಅವ್ರ್ ಬುರ್ಡೇ ಪಾರ್ಟಿ ಮಾಡ್ಕಂಡು ಗಾಡಿಯಲ್ರೂನೂ ಕರ್ದೋರೆ
ಗಾಡಿಮೊಟ್ಟೆ ಆಕಿರ್ತರೆ ಬ್ಯಾಡಾಂದ್ನಂತೆ ಉಲ್ದೋರ್ ನಂಗ್ಬೇಕು ನ಼ಂಗ್ಬೇಕು ಅಂತ್ನುಗ್ಗುದ್ರಾ  ಹಾಜಿ ಕ್ರೀಂ ತಕಂಡ್ ಒದುಗ್ದ ಹರುಗ ಕೆಳ್ಗೂಡೆದ್ ಜಾಸ್ತಿಯೆ ಸಿಕ್ತು ನಂಗೆ ಕ್ರೀಂಬೇಕು ಅಂದ್ನಾ
ಪಾಲ್ಟಿಕ್ಯಾಂಸಲ್ ಮಾಡೋಡೋದ್ರು
ಕೆಲುವ್ರು ಗಾಡಿ ವೇಸ ಆಕ್ಕಂಡು ಕ್ರೀಂ ಮಡಿಕಳಿ ಕೇಕ್ ನಂಗ್ಕೇಕು  ನಂಗ್ಕೇಕು ಅಂತ್ ಕೇಳ್ದ್ರಾ  ಅಸ್ಟೊತ್ಗೆ ಕೇಕ್ ಕುಯ್ದೋರ್ಯಾರು ಅಂತ ಸಡ್ಡಿ ಆಕಂಬಂದ್ರಾ 
ತಮಾಸಿಗೊತ್ತಾ
ಅಲ್ಕೇಕೆ ಇಲ್ವಾ ಎಲ್ಲಾ ತಿಂಕಬುಟೌರೆ

ಬುಧವಾರ, ಫೆಬ್ರವರಿ 27, 2019

ಯುದ್ಧ

ಯುದ್ಧ ಯಾರಿಗೆ ಬೇಕು
ಹೊಲದಲ್ಲಿ ದುಡಿವ ರೈತನಿಗೆ?
ಕೂಲಿ ಮಾಡುವ ಕಾರ್ಮಿಕನಿಗೆ?
ಮನೆಮನೆ ಅಲೆಯುವ ಮಾರಾಟಗಾರನಿಗೆ?
ಶಾಲೆಗೆ ಹೋಗುವ ಕಂದನಿಗೆ?
ಸಾಲಿನಲ್ಲಿ ಚಿಕೆತ್ಸೆಗೆ ಕಾಯ್ದಿಹ ರೋಗಿಗೆ
ಚಿಕಿತ್ಸೆ ನೀಡುವ ವೈದ್ಯನಿಗೆ?
ಕಟ್ಟಡಕೂಲಿ ಕಾರ್ಮಿಕನಿಗೆ?
ಕಾರಕೂನನಿಗೆ?
ಸೇತುವೆ ಸೇತುವೆ ಗಳ ಯೋಜನೆ ಸಿದ್ಧಪಡಿಸುವ ಇಂಜಿನಿಯರ್ ಗಳ  ಸಂಸ್ಥೆಗಳಿಗೆ?
ಗಡಿಕಾಯುವ ಯೋಧರಿಗೆ ?

ಯಾರಿಗೆ ಬೇಕು ಯುದ್ಧ
ಫುಡಾರಿಗಳನು ಹೊರತುಪಡಿಸಿ
ಧರ್ಮಾಂಧರನು ಹೊರತುಪಡಿಸಿ
ವಿವೇಚನಾರಹಿತರನ್ನು ಹೊರತುಪಡಿಸಿ ಇನ್ನಾರಿಗೆ ಬೇಕಿದೆ ಯುದ್ಧ?

ಮಂಗಳವಾರ, ಫೆಬ್ರವರಿ 26, 2019

ಆಟ ಊಟ

ಹೆಚ್ಚೇನು ಬೇಡದ ಕೂಸು
ನಾಲ್ಕು ಚಮಚೆ ಅನ್ನ
ಜೊತೆಗಾಡಲು ಸೊಳ್ಳೆ ಬ್ಯಾಟು
ಬಣ್ಣದ ಕಾಗದ
ಸಣ್ಣ ಚೆಂಡು
ಮೊನ್ನೆ ಅಮೆಝೋನ್ ನಿಂದ ಪ್ಯಾಕಲ್ಲಿ ಬಂದ ಸ್ಪಂಜಿನ ತುಣುಕು
ಆರತಿಯ ತಟ್ಟೆ
ಅಲ್ಲಲ್ಲೇ ಬಿದ್ದಿರುವ ಹಳೆ ಇನ್ವಿಟೇಶನ್ ಕಾರ್ಡು
ಸಮಾರಂಭದಲ್ಲಿ ಉಡುಗೊರೆಯಾಗಿ ಬಂದ ಟೆಡ್ಡಿ
ಹಳೆ ಪಾತ್ರೆ ,
ಆಭರಣದ ಪರ್ಸು,
Atm ಕಾರ್ಡು,
ಮಾತ್ರೆಯ ಸಣ್ಣ ಕವರ್ರು,
ಉಂಗುರದ ಡಬ್ಬ,
ಟಿವಿ ರಿಮೋಟ್,
ಊಟದ ಡಬ್ಬಿಯ ಮುಚ್ಚಳ ,
ಪ್ರತಿಯೊಂದನ್ನು
ಸರದಿಯಲ್ಲಿ ಕಣ್ಣಮುಂದೆ ಹಿಡಿದು
ಒಂದು ಗುಟುಕ ನಿನ್ನ ಗಂಟಲಲ್ಲಿ ಇಳಿಸುವಳು

ಹಸಿದರೆ ಉಂಡಾಳು ಬಿಡು  ಎನುವ ನನಗೆ
ಕೂಸಿಗದೆಲ್ಲ ತಿಳಿದೀತೆ
ಎಂದು ಗದರುತ್ತಾ
ಬರದ ಹಾಡ ಗುನುಗುತ್ತ ಕಾರ್ಡಬೋರ್ಡ್ ಡಬ್ಬದಲ್ಲಿ ಸದ್ದು ಮಾಡುತ್ತಾ
ಗಾಳಿಬೀಸುತ್ತ
ಮತ್ತೆ  ಗಮನವ ತಪ್ಪಿಸಲು ನನ್ನ ಚಾಲೀಸಿನ ಮತ್ತೊಂದು ಬತ್ತಳಿಕೆ
ಅವಳೆಂದು ಓದದ ವಾರ ಪತ್ರಿಕೆ
ಹೀಗೆ ಊಟದ ಪಯಣ
ಅದರೊಂದಿಗೆ ನಿನ್ನ ಆಟ

ಶುಕ್ರವಾರ, ಫೆಬ್ರವರಿ 22, 2019

ಗುಲಾಬಿ

ಗುಲಾಬಿ ಮಾದಕತೆಯವಳೇ
ಹೇಳಿಬಿಡು
ಎಲ್ಲಿಹುದು ನಿನ್ನ ಮುಳ್ಳುಗಳು?

ಕಳೆದ ದಿನಗಳ ನಶೆಯಲಿ
ನಿನ ನೆನೆಯುತ್ತಿದೆ ಈ ಹೃದಯ
ಹೇಳಿಬಿಡು ನಿನ್ನ ನೆನಪುಗಳ ಸರಕನೆಲ್ಲಿಳಿಸಲಿ?
ಆ ಭ್ರಮೆಯ ದಿನಗಳನು
ಈ ಹೃದಯ
ನೆನೆನೆನೆದು ಬಳಲಿದೆ
ದೀಪಕ್

ಗಾಡಿ


ನೋಡಿರಿ ಇದುವೇ ನನ್ನಯ ಗಾಡಿ
ಇದರಲ್ಲಿ ಕುಳಿತು ಹೋಗುವುದೊಂದು ಮೋಡಿ
ನನ್ನಾನಂದ ಹರಿದಿದೆ ಕೋಡಿ
ಎತ್ತಿಕೊಳ್ಳುವ ಜಂಝಾಟವಿಲ್ಲ ನೋಡಿ
ಇಹುದು ಎರಡು ಚಕ್ರಗಳ ಜೋಡಿ
ತಳ್ಳಲು ಮುಂದಕ್ಕೆ ಹೋಗುವುದು ಬಂಡಿ
ಒಳಗೆ ಕೂರಲು ನಲಿವೆನು ಆಡಿ
ಅಮ್ಮಅಪ್ಪ ಅರಿತಿಹರು ನನ್ನೆದೆಬಡಿತ ನಾಡಿ

ಗುರುವಾರ, ಜನವರಿ 24, 2019

ನಿತ್ಯ


ಹಕ್ಕಿಗಳ ಸದ್ದಿಗೆ
ಸಡ್ಡು ಹೊಡೆದು
ಕಂಬಳಿಯ
ಮುಖದಮೇಲೆಳೆದು
ಕತ್ತಲ ಮಾಡಿ ಮಲಗಿದಾಗ
ಏನೋ ಸಾಧಿಸಿದ ಸುಖ
ಎದ್ದು ಸಾಧಿಸಲು ರಾಶಿ ಇರುವಾಗ!

ಎದ್ದಾಗ ಸಾಧಿಸಲು ತಲೆ ಉಪಯೋಗಿಸಬೇಕು
ಕಷ್ಟಬೀಳಬೇಕು
ಯಾಕವೆಲ್ಲ ಉಸಬಾರಿ ?

ನೆತ್ತಿ ಮೇಲೇರಿದಾಗ
ತಡವೆಂದು ತಡಬಡಾಯಿಸಿ
ಗಬಗಬ ತಿನ್ನುತ್ತಾ
ತೆಗಿದಾಗ
ರಾತ್ರಿ ತಿಂದ ಪನ್ನೀರ ವಾಸನೆ
ಹೊಟ್ಟೆಯಲ್ಲಿ ಝುಳು ಝುಳು!

ಕೆಲಸಕ್ಕೆ ಬಂದೊಡನೆ  ಗೋಣಗಾಟವಿಲ್ಲದೆ
ಕಾಯ್ದ ಕೆಲಸಗಳನ್ನು ಮುಗಿಸಿ
ರಾತ್ರಿಯ ಬಣ್ಣಕೆ ತಯಾರಿ
ಮತ್ತೆ ಆಕಡೆ ಓಣಿಯತ್ತ ದೌಡು

ಎರಡು ಚಣ
ಅತ್ತು ನಕ್ಕು
ಜೋಗುಳ ಹಾಡಿ
ಹಿಂತಿರುಗುವ ಹೊತ್ತಿಗೆ
ಎಲ್ಲ ನೀರವ, ಮೌನ

ಮನದಲಿ ಹೆಪ್ಪುಗಟ್ಟಿದ ದಿನವನು
ರಾತ್ರಿ ಚಮಚೆಯ ಹಿಡಿದು
ಐಸ್ ಕ್ರೀಮ್ ನಂತೆ ಮೆಲ್ಲುತ್ತಾ
ಮೆತ್ತ ಅಪ್ಪುಗೆಯಲ್ಲಿ
ವಕ್ರವಾಗಿ ತಲೆಯನ್ನು ತೂರಿಸಿ
ಮತ್ತಷ್ಟು ಈಡೇರದ ಕನಸುಗಳ ಕಾಣುವ ದುಸ್ಸಾಹಾಸ...
ದೀಪಕ್

ಶನಿವಾರ, ಜನವರಿ 19, 2019

ಕೃಷ್ಣ

ಶಿರದಿ ಕಿರೀಟ ನವಿಲುಗರಿ,
ಹೂ ಮಾಲೆ ತೊಳ್ಬಂದಿ,
ಬೆತ್ತಲೆದೆ ಬಾಸುರಿ
ನಿನ್ನ ಕೃಷ್ಣ ಮಾಡದು

ನಿನ್ನ ಯೋಚನೆ ಯೋಜನೆಗಳು ಯೋಜನ ಯೋಜನವಾಗಲಿ
ಮೀರು ನೀ ಕೃಷ್ಣ ಸಾಧನೆ
ಬೆಳೆದಮೇಲೆ ನಿನಗಿಹುದು ಕೃಷ್ಣಲೆಕ್ಕದ ಕಾಟ
ಸುತ್ತ ದುರುಳರ ಕೂಟ
ನೀ ಕಂಡೂ ಕಾಣದಂತಿರಬೇಕು
ಜನರು ಮಾಡುವ ಮಾಟ
ಹಸಿದು ಉಂಡಂತಿರಬೇಕು,
ಉಂಡವಗೆ ಹಸಿದವನೆಂದು ಮತ್ತೆ ನೀಡುತ್ತಿರಬೇಕು,
ಕೃಷ್ಣನಿಗಿರಲಿಲ್ಲ ಈ ಕಷ್ಟ ಕೊಟಲೆಗಳು
ನಗುಮೊಗದ ದ್ರೋಹಿಗಳು
ಗೋಸುಂಬೆ ಗೋಪಿಕೆಯರು
ನೀ ಕೃಷ್ಣನ ಮೀರಿ ಬೆಳೆಕಂದ

ಬುಧವಾರ, ಜನವರಿ 16, 2019

ನೆನಪುಗಳು

ಇನ್ನು ಯೋಚಿಸುತ್ತಿರುವೆ,
ಸಮಯ ಹೇಗೆ ಉರುಳಿತೆಂದು?
ಬಾಲ್ಯದ ಸಮಯ
ನೆನಪ ಬುಟ್ಟಿಯನೆಂದು
ಸೇರಿತೆಂದು?

ನನಾಗಿನ್ನೂ ನೆನಪಿದೆ ಜೊತೆಗಲೆದ ಸಮಯ,
ಬಾಳೆಹಣ್ಣು, ಪಾನಿಪುರಿ, ಐಸ್ ಕ್ರೀಮ್,
ಕಳೆದ ರೂಪಾಯಿ...  

ನೆನ್ನೆ ಮೊನ್ನೆಯವರೆಗೂ ನೀ
ಈ ಊರಿನಿಂದಾವೂರಿಗೆ
ಸುತ್ತುತ್ತಿದ್ದ ನೆನಪು,
ಮಾತಿನಲ್ಲಿ ಕೊಚ್ಚಿಹೋದ ರಾತ್ರಿಗಳ ನೆನಪು,
ಜೊತೆಗೆ ನೋಡಿದಾ ಪರದೇಶ
ಅರೆ ಮತ್ತೆ ನೋಡಬೇಕೇನುವ ಹೊತ್ತಿಗೆ
ನೀನೇ ಪರದೇಶದಲ್ಲಿ!
ನೆನಪುಗಳು, ನೆನಪುಗಳು
ಬರೀ ನೆನಪುಗಳು
ಕಣ್ಣ ತುಂಬಿ ಒಸರುವ ನೀರಿನಂತೆ
ಎಲ್ಲಿಹೋಯಿತಾ ಸುಂದರ ಚಣಗಳು?

ಭಾನುವಾರ, ಜನವರಿ 13, 2019

ತುಣುಕು

ಹೃದಯನುಡಿವ ಸದ್ದೇ
ಮಧುರ ಮೌನ
***
ಶತ್ರುಗಳ ಮೇಲಿರುವ ಪ್ರೇಮವನ್ನು ಸ್ವಲ್ಪ ಪ್ರೇಮಿಗೂ ನೀಡು ಅವರು ಬೆಳೆಯಲಿ
***

ಶನಿವಾರ, ಜನವರಿ 5, 2019

ಹಣ ಹೇಳವ ಸಹಾಯ

ಹಣ ಹರಿಯುತ್ತಿದೆ
ಹೇಳವನೆಂದು
ದುಡಿಯಲಾರನೆಂದು
ಆತ್ಮಹೀನನಿಗೆ
ಹಣವೇ ಎಲ್ಲ
ಬೇರೆ ಗೊಡವೆ ಇಲ್ಲ

ಕಷ್ಟ ಅರಿಯಾದವರಾರಿಹರು
ಈಸಬೇಕು ಈಸಿ ಜೈಸಬೇಕು
ಇದ್ದಾಗ ಮುಷ್ಟಿ ಕೂಳ ನೀಡಬೇಕು
ಹಸಿದವಗೇ ನೀಡಬೇಕು
ಅನಾರ್ಹರಿಗೆ
ನೀಡುವುದು ಸುಲಭ ಅದಕರ್ಹರಾಗುವುದು
ಬಲುಕಷ್ಟಬಲು ಕಷ್ಟ

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.