ಹಾಯ್
ಹಾಯ ಬೇಡವೇ ಗೆಳತಿ
ನಿನ್ನ ಕಣ್ಣೀರಿನಿಂದ
ಮೌನ ನಿಟ್ಟುಸಿರಿನಿಂದ
ಉಪವಾಸದಿಂದ
ಇರಿಯ ಬೇಡವೇ
ಪದ ಬಾಣಗಳಲಿ
ಮೌನದ ಈಟಿಯಲಿ
ಗೆಳತಿ
ನನ್ನುಸಿರಿಗೆ
ನೀ ಗಾಳಿಯಾಗಲಿಲ್ಲ,
ನನ್ನ ಪ್ರೀತಿಯ ಹಸಿವಿಗೆ
ನೀ ಒಲವಿನ
ಗುಟುಕಾಗಲಿಲ್ಲ,
ನನ್ನ ಕನಸುಗಳಿಗೆ
ಕಣ್ಣಾಗಲಿಲ್ಲ,
ಒಲವಿಗೆ ಬಣ್ಣವಾಗಲಿಲ್ಲ,
ಬದುಕಿಗೆ ನೀ ಕಣ್ಣಾಗಲಿಲ್ಲ,
ಏನೋ ಒಂದು ಬಗೆಯ
ನೋವಿನೋನ್ಮಾದ;
ಹೋಗಲಿ ಬಿಡು ಹುಡುಗಿ
ಭಾವುಕತೆಯನೆ
ತಿನಿಸುವ ಬೆಡಗಿ
ಚಿಂತೆಯಿಲ್ಲ;
ನಿರ್ವಾತ ವಾಗಬೇಡ
ಬದುಕ ದೊಂದಿಯ
ಆರಿಸಬೇಡ
ನಿನ್ನ ಬದುಕಿಗೆ
ಬದುಕು ಅನಿವಾರ್ಯವೇ
ಹುಡುಗಿ
ನಾನಲ್ಲ
ನನ್ನ ನಗುವಲ್ಲ
ನನ್ನ ಒಲವಲ್ಲ
ಒಲುಮೆಯ ಪಿಸು ನುಡಿಗಳಲ್ಲ
ನಿನಗೆ ಬೇಕು ಗೌರವಿಸುವ ಜೀವ
ನಿನಪಾಡನು ಧಿಕ್ಕರಿಸದ ದೇಹ
ಇರುವುದನರಿತು
ವೈಭವೀಕರಿಸದ ಭಾವ
ಸ್ವೀಕರಿಸು ಗೆಳತಿ
ನನದೆಲ್ಲವು ನಮ್ಮದೇ