ನನ್ನ ಪ್ರೀತಿಯ ಸಮಾಧಿ
ಮುಚ್ಚಿದೆ
ನೀನೆ ಕೊಟ್ಟ
ಹೂಗಳ ಕೆಳಗೆ
ನಮ್ಮ ಪ್ರೀತಿಯ
ಗೂಡಿಗೆ
ಮತ್ತೊಬ್ಬರ
ಲಗ್ಗೆ ಬೆಡವೆಂದು
ನಾನೇ ಹೂಗಳ ತೆರೆ
ಎಳೆದಿರುವೆ
ಗೆಳತಿ
ಬೆಳಕಿಗೆ ತಳಮಳ ಬೇಡ
ನನ್ನ ಕಣ್ಣೀರಲಿ
ದೀವಿಗೆಯ ಬೆಳಗಿ
ನನ್ನುಸಿರ
ನಿನದಾಗಿಸುವೆ
ಪ್ರೀತಿಿ ಗಾಳಿಯ
ವಿಶೇಷ ಗೊತ್ತೆನೆ
ಬೆಡಗಿ
ಹಸಿವು ನಿದ್ರೆ
ಬಾಯಾರಿಕೆಗಳು
ಕಾಣುವುದಿಲ್ಲ
ಇಹಪರದ ಪರಿವೆ
ಎಂದರೇನು
ತಿಳಿಯುವುದಿಲ್ಲ
ಆ ಗೆಳತಿ ಎಲ್ಲೆಲ್ಲೂ
ಇಹಳು
ನಿನ್ನಲ್ಲೂ
ಇಹಳೆ ತುಡುಗಿ
ಕಣ್ಣೀರ ಮಡುವ
ಕರಗಿಸ ಬೇಡವೋ ಗೆಳೆಯಾ
ಜರೂರತ್ತಿದೆ ನನಗೆ
ಒಂದೊಂದು ಹನಿಗಳದು
ವಿರಹದ ಜಿಹ್ವೆಯು ಸುಡುವಾಗ
ನಿನ್ನೊಡಲಲಿ ತಣ್ಣಗೆ ಮೀಯಬೇಕೆಂದಿದ್ದೇನೆ...
ಬಿಸಿಲು ಕಣೆ ತುಂಬಾ
ಮಡು ಗಟ್ಟಿದ್ದು
ಹೆಚ್ಚುಕಾಲ ಬರದು
ಇಂದಲ್ಲ ನಾಳೆ
ಕರಗಲೇ ಬೇಕು
ಮತ್ತೆ ವಿರಹಕೆ
ಮಡುಗಟ್ಟ ಬೇಕು
ಪ್ರೀತಿ ವಿಷಮವ್ರತ್ತ
ಕಣೆ ಹುಡುಗಿ
ನೀ ಅಪ್ಪದಿದ್ದರು
ಒಪ್ಪದಿದ್ದರು
ಪ್ರೀತಿ ಸವಿದರೆ ಜೇನು
ಸವೆದರೆ ಬರಡು ಕಣೋ ಹುಡುಗಾ
ಚಿಗುರೆಲೆಗೆ ವಸಂತನ
ಆಗಮನ ಸೃಷ್ಟಿಯ ನಿಯಮವಹುದು
ನೀ ಹರಿಸಿದ ಹನಿಹನಿಯ
ಮೋಡಗಟ್ಟಿಸಿ ನಿನ್ನೆದೆಯ ಸೇರುವೆ ಮತ್ತೆ ಮತ್ತೆ ಚಿಗುರುವೆ
ಮತ್ತದೇ ಪ್ರೀತಿಯಿಂದಾ
ಮಳೆಯು ಇಳೆಯ ಅಪ್ಪಿದಾಗ
ಒಡಲು ತಣಿಯದಹುದೇ
ನಿನ್ನಾಲಿಂಗನದ ನಿರೀಕ್ಷೆಯಲ್ಲಿ
ನನ್ನೆದೆ ನೆರೆತಿದೆ ನೋಡೇ
ಜೇನು ಹಾಲುಗಳು ಬೇಡ
ನಿನ್ನ ದರ್ಶನದ
ಗುಟುಕೆ ಸಾಕು ಕಣೆ
ಬರಡು ಕೊರಡುಗಳೆಲ್ಲ
ಪ್ರೆಮಾಗ್ನಿಗೆ ಬೆಂದು ಹೋದವೆ ಅಂದೆ
# ಸುರಭಿ ಶ್ರೀ ಗೌರಿ ದೀಪಕ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ