ನೋಡಿದಾಗಲೆಲ್ಲ
ಮನ ಕೇಳುವುದು
ಅವಳೇ ಇವಳ
ನಿನ್ನಯ ದಿನಗಳನ್ನು
ಗುಳುಂ ಮಾಡಿದವಳು
ನಿನ್ನ ಬದುಕ ದಶಕಗಳ ಕಾಲ
ಕತ್ತಲಿಗೆ ದೂಡಿದವಳು
ಪ್ರೀತಿಸಿ ರಮಿಸಿ
ನಿನ್ನಿಂದ ದೂರಾದವಳು
ಮರೆಯದ ನೆನಪುಗಳನು
ಒಟ್ಟಿ ಕಾಮನ ಸುಟ್ಟವಳು
ಹಗಳಿರುಳೆನ್ನದೆ ನಡೆಗೆ
ಹೆಜ್ಜೆ ಕೂಡಿಸಿದವಳು
ನನ್ನ ನೋವುಗಳ
ನೋಡಲಾಗದೆ
ಎಳ್ಳುನಿರ
ಬಿಟ್ಟವಳು
ಅವಳೇ ಇವಳ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ