ಬೆಳಗಿನುತ್ಸಾಹಕೆ
ತಣ್ಣೀರೆರಚಿತು
ಸಿಡುಕು ನುಡಿ
ಕಾರಣ ಗೊತ್ತಿಲ್ಲ
ಏಕೆ ಏನಾಯಿತು
ಉತ್ತರವಿಲ್ಲ
ಸ್ಮಶಾಣ ಮೌನ
ಅಲ್ಲೆಲ್ಲೋ ನೀರಿನ ಸದ್ದು
ತಂಗಳು ಡಬ್ಬಿ ಬಟ್ಟೆಓಗೆತದ
ಯಾಂತ್ರಿಕ ಸದ್ದು
ಕಾಫಿ ಕುಡಿದಾಯಿತೆನ್ನುವಂತೆ
ಅವಳದೊಂದು ತೇಕು
ಲೋಟವ ಒಯ್ದು
ಬಚ್ಚಲಿಗಿರಿಸಿದ ಸದ್ದು
ತಿಳಿಯದ ಕಿರಿಕಿರಿಯಲು
ಅಡುಗೆ ಯಜ್ನ್ಯ ಅವ್ಯಾಹತ
ಮೌನಕೆ ಕಳವಳಿಸಬೇಕೊ
ಕರ್ತವ್ಯವನ್ನು ಶ್ಲಾಫಿಸಬೇಕೊ
ತಿಳಿಯದು
ಅವರವರ ಭಾವಕ್ಕೆ
ಅವರವರ ಅನುಭವಕೆ
ಅವರವರ ಸಂಸ್ಕಾರಕೆ
ಹೂಣೆಯರು?
ಹೊಣೆ ಯಾ ಪ್ರಶ್ನಿಸೆ
ಮತ್ತೆ ಬಂತು ಪ್ರಶ್ನೆ
ನೀನೇನು ಮಾಡಬೇಕೀಗ
ಸಮಯವೇ ಪರಿಹಾರ
ಸಂಯಮವೆ ಆಧಾರ
ದೀಪಕ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ