ಶಿವರೂಪಿ ಗುಳಿಗೆಯೆ,
ದೇಹ ಗುಳಿಗಳ ಮುಚ್ಚಿ
ರೋಗಗಳ ಕೊಚ್ಚಿ
ಅಮರತ್ವಕೆ ಹೋರಾಡುವೆ
ನೀನೊಬ್ಬ ದಾನವ
ನಿನಗಿಲ್ಲವೆಂದು
ಅಮರತ್ವಪಟ್ಟ
ನೀ ರಾಹು ಕೇತು ವಿನೊಡನೆ
ದೇವತೆಗಳ ಸಾಲಿನಲಿ
ಕುಳಿತಾಮ್ರತ
ಸೇವಿಸಲಾಗದ್ದು ಯಾರಿಗೂ ಗೊತ್ತಿಲ್ಲ
ಅಶ್ವಿನಿದೆವತೆಗಳ ಹುಟ್ಟಿದೊಡನೆ
ಅವರ ತೊರೆದು
ನೀನೇಕೆ ಸೇರಿದೆ ದಾನವರ ಪಡೆ ಹೇಳು
ಏನು ಬಲಿಚಲರವರ್ತಿಿಯಿರುವನೆಂದೊ?
ತಿಳಿ ಕಪಟಿಿಗಳ ಮುಂದೆ
ನಡೆಯದು ಧರ್ಮ ನ್ಯಾಯ
ಅವರಿಗೆ ಬೆಕವರ ಕಾರ್ಯ ಸಾಧನೆ
ಆಂತು ನೀ ಶಾಪಮುಕ್ತ ಶಾಪಗ್ರಸ್ತ
ಕೆಲಸಮಯ ಅಮರತ್ವದನುಭವ
ನೀಡಲಷ್ಟೆ ಶಕ್ತ
ದೀಪಕ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ