ಮಗು
ಮುಖವಾಡ ಬೇಕೀ
ಸಮಾಜದೊಳು
ಬದುಕಲು,
ಮುಗ್ಧ ಸ್ನೇಹ ಪ್ರೀತಿ
ಗಳಿಗಿಲ್ಲಬೆಲೆ
ಬಿಂಕ ಮಾತ್ರ ಬಲು ತುಟ್ಟಿ!
ಅದರವಾಡಿಕೆಯೆ
ಮುಖವಾಡ😊
ನಗು ಅಳು ಸ್ನೆಹ ಪ್ರೀತಿ ಕಾಮ
"ನೋವು"
ಎಲ್ಲ ಮುಖವಾಡಗಳಿವೆ
ಚಣದಲಿ ದೊರಕುವುದು ಬಿಕರಿಗೆ,
ಈ ಜಗದಲಿ ಬೆತ್ತಲಾಗುವುದಷ್ಟೆ ಕಷ್ಟ
ಮಗು
ಅದಿಲ್ಲ ಮಾರಾಟಕೆ ನೋಡು
ಅದಕ್ಕಿಲ್ಲ ಮತ್ತೊಂದು ಮುಖವಾಡ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ