ಮಂಗಳವಾರ, ಜೂನ್ 16, 2020

ಯುದ್ಧ

ನಿರ್ಬಂಧಿತ ದಿನ
ಎಲ್ಲೆಡೆ ಹನನ
ಗಡಿಯಲ್ಲಿ 20 ಜನ ಸತ್ತರು
ನಾಡಲ್ಲಿ ಒಂದೆದಿನಕೆ 200
ರೋಗದ ಭೀತಿ ಯುದ್ಧದ ನೀತಿ
ಇನ್ನೊಬ್ಬರದು ಕಸಿದು ತಿನ್ನುವರೀತಿ
ಪುಟದ ತುಂಬೆಲ್ಲ ವೀರ ದೇಶಭಕ್ತರು
ಏನಾಯಿತಲ್ಲಿ ತುಂಬಿಹ ದೊನ್ನೆ ಭಕ್ತರು
ಎಡ ದೇಶಕ್ಕೆ ಶಸ್ತ್ರ ಚಿಕಿತ್ಸೆ 
ಬೆರೆದೇಶಕ್ಕೆ ಎಡೆಯ ಚಿಕಿತ್ಸೆ 
ಪ್ರಕ್ಷುಬ್ಧ ಮನಗಳ ಮಾರಾಮಾರಿ
ನಮ್ಮದ ಕೊಳ್ಳಿರಿ ನಿಮ್ಮದ ಬಿಸಾಡಿರಿ
ಅತಿರೇಖಗಳ ಖಿನ್ನ ಚಿತ್ರಣ
ಜಂಗಮವಾಣಿಯ ಮಾಯೆಯು ನೋಡಿ

ಬೀಸುವ ಗಾಳಿ ಸುರಿವ ಮಳೆಯೊಳು
ತೇಲುತಿದೆ ನೋಡಿ ಪ್ರೀತಿಯ ಘಮಲು
ನಾನು ನೀನೆಂಬ ಇಬ್ಬಗೆ ತೊರೆದು
ಎಲ್ಲವೂ ಸಮವೆಂಬ ಸಂದೇಶವ ಪೊರೆದು

ಕವಿತೆಯೆಂದರೆ

ಕವಿತೆಯೆಂದರೆ
ಗೆಳೆಯರ ನೆನಪನ್ನು ಆಟೋಗ್ರಾಫಿನಲ್ಲಿ ಸೆರೆ ಹಿಡಿದು ನೆನೆದು
 ಅದರ ಪುಟಗಳ ತಿರುವುವುದು
 ಹೃದಯದಲಿ ಅವರಸಿರಾಗುವುದು

ಕವಿತೆಯೆಂದರೆ
ಮೊದಲ ಪುಟದಲ್ಲೊಂದು ಉದ್ದನೆ ಗೆರೆ
ಮೂಡುವುದು ಕಲೆಯ ನೆನಪ ಬರೆ

ಕವಿತೆಯೆಂದರೆ
 ಒಲುಮೆಯ ಗೆಳೆಯರ ಹೂ ಪಕಳೆ
ಅದರಲಿನ್ನೂ ನೆನಪಾಗಿ ಅಗಲಿದವಳಕಳೆ

ಕವಿತೆಯೆಂದರೆ
ಪುಟ ಪುಟದಲ್ಲೂ ಒಲುಮೆಯ ಗೆಳತಿ
 ನನಗವಳ ನೆನಪು ತುಸು ಅತಿ

ಕವಿತೆಯೆಂದರೆ
ಭೂಷಣನ ನೆನಪು 
ಮನಸಿಗೆ ಇಂಪು
ಸೂಸುತಿಹುದು ನಂಬುಗೆಯ ಕಂಪು

ಕವಿತೆಯೆಂದರೆ
ಮುಂದಿಹನೆನ್ನ ತುಂಟ ಗೆಳೆಯ
ಬರೆದಿರುವನೆನ್ನ ಶ್ರಮ ಜೀವನದೆಳೆಯ

ಕವಿತೆಯೆಂದರೆ
ನೀ ವಿಚಿತ್ರ ವಾಚಾಳಿ 
ಇಹುದು ತಲೆ ತಿನ್ನುವ ಚಾಳಿ
 ರಸ ಶಾಸ್ತ್ರ ನಿನಗೆ ಪ್ರಿಯ
ಆದರೂ ನಿನಗಿಹುದು ಪ್ರೀತಿಸುವ ಹೃದಯ

ಕವಿತೆಯೆಂದರೆ
ತಾಳ್ಮೆ ಕಳೆದು ಕೊಳ್ಳಬೇಡ ಎನ್ನುವ ಅಪರಂಜಿ
ನೀಡುತಿಹಳು ಬರಹ ಪರಿಹಾರ ನನಗಂಜಿ

ಕವಿತೆಯೆಂದರೆ
ಬಿಡದು ಯಾರನಂಟು
ಎಲ್ಲ ಗೆಳೆಯರ ಬರಹದ ಗಂಟು

ಕವಿತೆಯೆಂದರೆ
ಪುಟ ಪುಟ ತೆರೆದಂತೆ ಉಕ್ಕುವ ಪ್ರೀತಿ
ಹಾಲು ಕಾದು ಉಕ್ಕುವ ರೀತಿ

ದೀಪಕ್







ಗುರುವಾರ, ಜೂನ್ 11, 2020

ನಾವು ನಮ್ಮ ಯಶಸ್ಸಿನ ಬಗ್ಗೆ ಧ್ಯಾನಿಸಬೇಕು. ನಮ್ಮ ದಾಹ ನಮ್ಮ ಯಶಸ್ಸಿನ ಸ್ಫೂರ್ತಿ, ಅದನ್ನು ಗುರುತಿಸುವವರು ನಮ್ಮ ಹಿತೈಷಿಗಳು. ಶತ್ರುವನ್ನು ಕಡೆಗಣಿಸೋಣ,ಎಲ್ಲರನ್ನು ಪ್ರೀತಿಸೋಣ ಸಾಧನೆಯಹಾದಿಯಲ್ಲಿ. ಸಾಧನೆಯನ್ನು ನೆನೆವಾಗ ಸಾಧನೆಗಿಂತ ಸಾಧನೆಗಾಗಿ ಸಾಗಿದ ಹಾದಿ ಬಲು ಸಂತೋಷ ನೀಡುವುದು.
ಡಾ.ದೀಪಕ್,ಭ

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.