ಸೋಮವಾರ, ಏಪ್ರಿಲ್ 4, 2022

ಹುಟ್ಟು

,

ಬುದ್ಧ ಹೇಳಿದ ಆಸೆಯೇ ದುಃಖಕ್ಕೆ ಮೂಲ
 ಗೆಳೆಯರು ಎಂಬ ಮೋಹ ತೊಡೆಯಲೊಲ್ಲದು, ಬಾಲಿಶತನಕೆ ಕೊನೆಯು ಎಲ್ಲಿದೆ ?
ಬಹುಶಃ ಇಲ್ಲೇ  ನನ್ನವರ ನಡುವೆ; ಮೆರೆವೆನು ಅಳಿದೇನು ಎಂಬುದರಲ್ಲಿದೆ.

ಹೀಗೆ ಸ್ವಗತವಿ ಜೀವನ
ನಾನು ನನ್ನವರು ನನ್ನದು ಎಂಬ ಭ್ರಮೆಯೆರಡು ದಿನವೋ,
ಸಮಯದ ಪುಟದಲ್ಲಿ ನಾ ಚುಕ್ಕಿಯ ಒಂದು ಭಾಗವಷ್ಟೇ,
ಸಮಷ್ಟಿಯಲ್ಲಿ ಇನ್ನೆಷ್ಟು ನಾನುಗಳು ತುಂಬಿರಬಹುದು?
ಸೃಷ್ಟಿ ಅದೇನನ್ನೆಲ್ಲ ಹೊತ್ತು ನಡೆದಿರಬಹುದು..
ಸೃಷ್ಟಿಗೇ ಗೊತ್ತು
ಅದರಾಘಾದತೆ,
ಆದರೂ ನಾನು ಎಂಬ ಹಮ್ಮಿನೊಳಗೆ ಮತ್ತೆ...
ನಿಮಗ್ಯಾರಿಗೂ ನೆನಪಿಲ್ಲ, ಅದು ನಿಮ್ಮ ತಪ್ಪಲ್ಲ ನನ್ನದು
-ಡಾ.ದೀಪಕ್ ಭ

ಹೆಕ್ಕು

ನಿನ್ನ ನೆನೆದಾ ಅಂದು
ಹಾದಿತುಂಬಾ ಗುಲಾಬಿ ಪಕಳೆಗಳು
ಘಮಕೆ ಸೋತು ಹೆಕ್ಕದೇ ಹಾಗೆ ಮುಂದೆಬಂದೆ

ಹೀಗೆ ಕುಳಿತಿದ್ದಾಗ

ಹೀಗೆ ಕುಳಿತಿದ್ದಾಗ...
ಎಲ್ಲಿ ಬತ್ತಿ ಹೋದವೋ ಈ ಬಿರುಬಿಸಿಲಿನಲ್ಲಿ,
ಪುಟಿಪುಟಿದು ಹುಟ್ಟುತ್ತಿದ್ದ ಭಾವನಕ್ಕರಗಳು ನೆಳಲಿನಾವಿಷ್ಕಾರದಲ್ಲಿ?

 ಇಲ್ಲಿ ಸೋಡಾಚೀಟಿಯನು ಕೊಟ್ಟು  ಹೋದದ್ಡೆಲ್ಲಿ,
 ಅಮ್ಮನ ಒಡಲಿನಲ್ಲಿ, ಕಂದನ ಮಿದುಳಿನಲ್ಲಿ, 
ಕರ್ತವ್ಯದಂಟಿನಲ್ಲಿ

ಎಲ್ಲರ ನಡುವಿದ್ದೂ ಒಬ್ಬಂಟಿ,
 ಕಾಡುವ ನೆನಪುಗಳು 
ಕಾವ್ಯವಾಗದೆ ಮುಷ್ಕರವ ಹೂಡಿವೆ ಜಂಟಿ;
ಇದು ವರವೋ ಶಾಪವೋ
 ಬಗೆಹರಿಸಬೇಕು ಕಾಲದ ತೋಟಿ
BB BB
ಕಾಲಕ್ಕೆ ಬಿಟ್ಟ ಎಷ್ಟೋ ನಿರ್ಧಾರಗಳು 
ಕಾಲವಾದವು,
  ಜಡ ಸಾಮ್ರಾ kk ii is I kk mmಜ್ಯದೊಳು ಮುಳುಗಿ ಮಿಂದು ಉಸಿರುಗಟ್ಟಿದವು

Kk cm mm kk BB gಝಾಡಿಸಿ ಏಳಬೇಕಿದೆ ಇfvvಚ್ಛೆಯ ಬತ್ತಿಯ ಹಿಡಿದು,
ನಿಷ್ಠುರತೆಗಳ ಸುಡಬೇಕಿದೆ ಕರುಳ ಬಳ್ಳಿಯಿಂದ ಹಿಡಿದು

ಮ nuj ತ್ತೆ ನಿಸ್ತೇಜವಾಗುತ್ತ ವೆ ಎಲ್ಲ ಭಾವಗಳು 
ಒರತೆಯ ಕೊರತೆಯಿಂದxde ssfs,wdezwxw,zx
ಉದಯಿಸಬೇಕು ಜ್ಞಾನಗಂಗೆ
ಹೊತ್ತಿಗೆ ಹೊತ್ತಿಗೆಯಿಂದ..

-ದೀಪಕ್

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.