ಶನಿವಾರ, ನವೆಂಬರ್ 24, 2018

ಮಗು ನಗು

ಇನ್ನೂ  ಯೋಚಿಸುತ್ತಿರುವೆ
ನಿನ್ನ ನಗುವಿನಲ್ಲಿ ನಾ ಮರೆಯದ್ದೇನಿದೆ ?
***

ಶನಿವಾರ, ನವೆಂಬರ್ 17, 2018

ಹಾವಿನ ಸಂರಕ್ಷಣೆ ಹಾಗೂ ತಿಳುವಳಿಕೆ ಮಾನವ ಉರಗ ಸಂಘರ್ಷಣೆಯನ್ನು ಕಡಿಮೆ ಮಾಡುತ್ತದೆ

ಹಾವುಗಳೊಂದಿಗಿನ ವ್ಯವಹಾರ ಅಪಾಯಕಾರಿಯೇ, ಹೌದೆಂದಾದರೆ ಅಪಾಯವನ್ನು ಹೇಗೆ ಕಡಿಮೆ ಮಾಡಬಹುರ್ಪ ಸಂಘರ್ಷವನ್ನು ಹೇಗೆ  ತಗ್ಗಿಸಬಹುದು ?

ಮೇಲಿನ ಪ್ರಶ್ನೆಯನ್ನು ನನ್ನ ಅನುಭವದ ಮೇಲೆ ಉತ್ತರಿಸಲು ಪ್ರಯತ್ನಿಸಿದ್ದೇನೆ . ಹಾವು ಮಾನವನ ಪರಿಸರದಲ್ಲಿದೆ ಎಂದಾಕ್ಷಣ ಆ ಎಲ್ಲಾ ಹಾವುಗಳನ್ನು  ಹಿಡಿದು ಕಾಡು, ಊರಾಚೆಯ ಪ್ರದೇಶದಲ್ಲಿ ಬಿಡುವುದು ಮಾನವ ಹಾವು ಸಂಘರ್ಷಕ್ಕೆ ಪ್ರತಿ ಬಾರಿಯೂ ಉತ್ತರವಲ್ಲ. ಪ್ರತಿಬಾರಿ ಮಾನವ ಕಾಡು ಪ್ರಾಣಿಗಳ ಸಂಘರ್ಷದಲ್ಲಿ ಪರಿಣಿತರ ಮಧ್ಯಪ್ರವೇಶ ಅನಿವಾರ್ಯ . ಮುಖ್ಯವಾದ ವಿಷಯ ಏನೆಂದರೆ ಪರಿಣಿತ ವ್ಯಕ್ತಿ ಯು ಸಂಶೋಧಿತ, ಪರಿಶೀಲಿತ, ಪ್ರಮಾಣಿತ ವಿಧಾನವನ್ನು  ಹಾವುಗಳ ಸಂರಕ್ಷಣೆ ಹಾಗೂ ಬಿಡುಗಡೆಯ ವೇಳೆಯಲ್ಲಿ ಅನುಸರಿಸಬೇಕು. ಜನರಲ್ಲಿ ಹಾವುಗಳ ಬಗ್ಗೆ ತಿಳುವಳಿಕೆ ಇದ್ದರೆ ಸಂರಕ್ಷಣೆಕಾರ್ಯ ಬಹಳಷ್ಟು ಸಮಯದಲ್ಲಿ ಬೇಕಾಗುವುದಿಲ್ಲ. ನನ್ನ ದಿನಚರಿಯ ಅನುಭವದಲ್ಲಿ ಯಾವಾಗ ಸಂರಕ್ಷಣೆಕಾರ್ಯ ಬೇಕಾಗಬಹುದು ಹಾಗೂ ಯಾವಾಗ ಸೂಕ್ಷ್ಮವಾಗಿ ಸಂವೇದಿಸುವ ಅವಶ್ಯಕತೆ  ಇದೆ ಎಂಬುದನ್ನು ಹೇಳುವೆ.

ಬುಧವಾರ, ನವೆಂಬರ್ 14, 2018

ನೀನಿಲ್ಲ

ನಿತ್ಯ ಇದೇ ಉಗಿಬಂಡಿಯಲ್ಲಿ ಕಳೆದ ಹತ್ತು ವರ್ಷಗಳಿಂದ ಓಡಾಡುತ್ತಿರುವುದು. ಹೆಚ್ಚು ಬದಲಾವಣೆ ಕಾಣದ ಬದುಕು. ನಾಕು ರೂಪಾಯಿ ಇದ್ದ ಚಾರ್ಜ್ ಹತ್ತು ರೂ ಆಗಿದೆ. ಮಾಸಿಕ ಚಂದ ಕೂಡ ಕಡಿಮೆ ಮೊತ್ತವೇ. ಈಗ ತಿಂಗಳಿಗೆ ೯೦ ರೂ ಮೊದಲು ೬೦ರೂಪಾಯಿ ಇತ್ತು. ಬಂಡಿಯಲ್ಲಿ ಪ್ರಯಾಣಿಸಲು ಕೊಡುವ ಮೊತ್ತ ಅತ್ಯಲ್ಪ. ಬಸ್ಸಿನಲ್ಲಿ ಪ್ರಯಾಣ ಎಂದರೆ ದಿನಕ್ಕೆ ೬೦ರೂಪಾಯಿ ಅಥವಾ ತಿಂಗಳಿಗೆ ೧೨೦೦ರೂಪಾಯಿಗಳು.  ಎಡರುಬದರಾಗಿ ಕೂತು ಪ್ರಯಾಣಿಸುವ ಬಂಡಿಯೆ ಬಲು ಮೋಜಿನದು.ನನ್ನ ಎದುರು ನೀನು ನಿನ್ನ ಎದುರು ನಾನು ಕುಳಿತು ಅದೆಷ್ಟು ಸಂವತ್ಸರಗಳು ಕಳೆದಿರುವೆವು.ಕೂದಲುಕಪ್ಪಿದ್ದಾಗಿನ ವಯಸ್ಸಿನಿಂದ ಕಪ್ಪು ಹಚ್ಚುವ ವೂಯಸ್ಸಿನವರೆಗೂ ಬಂಡಿಯಲ್ಲಿ ಅದೇ ಮಾರ್ಗವಾಗಿ ಪಯಣಿಸುತ್ತಿದ್ದೇವೆ.  ಎದುರಿನ ಖಾಲಿ ಸೀಟಿನಲ್ಲಿ ನೀನಿರುವೆ ಎಂದು ಭ್ರಮಿಸಿ ಪ್ರಯಾಣಿಸುವುದು ಏನೋ ಜೊತೆಗಿರುವೆ ಎನ್ನುವ ಭಾವ ಮೂಡಿಸುತ್ತದೆ.

ಶುಕ್ರವಾರ, ನವೆಂಬರ್ 9, 2018

ಜೇಡಗಳ ಬಗ್ಗೆ ಕಾರ್ಯಾಗಾರ

ಅಕ್ಟೋಬರ್ ತಿಂಗಳ ಮೊದಲನೆಯ ವಾರ ನನಗೆ what's app
ನಲ್ಲಿ ಜೇಡಗಳ ಕಾರ್ಯಾಗಾರವಿದೆ,ಆಸಕ್ತ ೩೦ಜನರಿಗೆ ಪ್ರವೇಶ ಎಂಬಾ ಸಂದೇಶ ದೊರಕಿತು. ಕಾರ್ಯಾಗಾರದ ನಿರೂಪಕರ ತಂಡದಲ್ಲಿ ನನ್ನ ಚಾರಣಮಿತ್ರ ಹೆಸರು ನೋಡುತ್ತಲೇ ಅವರಿಗೆ ಸಂದೇಶಿಸಿ  ಮನೆಗೂ ಬರುವಂತೆ ಆಹ್ವಾನಿಸಿದೆ ಹಾಗೂ ಕಾರ್ಯಾಗಾರ ಕ್ಕೆ  ನಾನೂ ಕೂಡ ಬರುವೆ ಎಂದು ತಿಳಿಸಿದೆ. ಜೇಡ ಕಂಡೊಡನೆ  ಕೋಲು ತೆಗೆದು ಕೊಳ್ಳುವ ನಾನು ಇವರನ್ನು ಭೇಟಿಯಾದ ಮೇಲೆ ಕಡಿಮೆ ಮಾಡಿದ್ದೆ. ಈ ಬಾರಿ ಕಾರ್ಯಾಗಾರದಲ್ಲಿ ತಿಳಾಯಲು ಏನೇನಿದೆಯೋ ಎಂದು ಹೊರಟೆ. Macro ಛಾಯಾಚಿತ್ರಣ ಮಾಡಲು ಅಗತ್ಯ ಪರಿಕರಗಳಿರದೆ ಇರುವುದನ್ನೇ ಹೊತ್ತೋಯ್ದೆ.

ಕಾರ್ಯಾಗಾರದ ಸ್ಥಳ ಇಂದ್ರಪ್ರಸ್ಥ ಮೈಸೂರಿನ ಬಳಿಯ ಕಳಲವಾಡಿ ಗ್ರಾಮದ ಬಳಿ ಇರುವುದು. ಸಹಜ ಕೃಷಿಯನ್ನು ಮಾಡುತ್ತಿರುವ ಕುಟುಂಬ. ಕುಟುಂಬದ ಹಿರಿಯರು ಇಂಜಿನಿಯರ್, ಅವರ ಪುತ್ರ ವೈದ್ಯರು,ಹಾಗೂ ಕಾರ್ಯಾಗಾರದ ಪ್ರಮುಖ ರೂವಾರಿಹಾಗೂ ಅವರ ಸಹಪಾಠಿ ಸಾಲಿಗ ಎಂಬ ತಂಡ ರಚಿಸಿಕೊಂಡು ಜೇಡಗಳ ವ್ಯವಸ್ಥಿತ ಅಧ್ಯಯನ ಕೈಗೊಂಡಿದ್ದಾರೆ. ವಿವಿಧ ಕಾರಣಗಳಿಗೆ ಬೆಂಗಳೂರು ಸೇರಿರುವ ಇನ್ನಿಬ್ಬರು ಜೇಡಾಸಕ್ತರು (ವಿಜ್ಞಾನಿಗಳು ಎಂದರೆ ಉತ್ಪ್ರೇಕ್ಷೆಯಾಗದು) ಕಾರ್ಯಾಗಾರ ನಡೆಸಿ ಕೊಡಲು ಬಂದಿದ್ದರು. ಹೋದೊಡನೆ ಸುಮಾರು೧೪ಜನ ಆಗಲೇ ಬಂದು ಎಲೆ ಗಿಡ ಹೂಕುಂದಗಳ ಚಿತ್ರಣದಲ್ಲಿ ತೊಡಗಿದ್ದರು. ಮಧ್ಯಾಹ್ನ ಸೀಮಾರು ೨.೩೦ಕ್ಕೆ ಎಲ್ಲರೂ ಒಟ್ಟಾಗಿ ಸೇರಿ ಪರಸ್ಪರ ಪರಿಚಯ ಮಾಡಿಕೊಂಡೆವು. ನಂತರ ಜೇಡಗಳ ರಚನೆಯ ಬಗ್ಗೆ ತಿಳಿಸುತ್ತಾ  ಜೇಡಗಳು ಕೀಟಗಾಳಿಗಿಂತ ಹೇಗೆ ಭಿನ್ನ ಎಂದು ಹೇಳಿದರು. ಕೀಟಗಳಿಗೆ ೬ಕಾಲುಗಳು , ಜೇಡಗಳಿಗೆ ೮ಕಾಲುಗಳು . ಕೀಟಗಳಲ್ಲಿ ಕತ್ತು ಎದೆ ಹಾಗೂ ಹೊಟ್ಟೆಯ ಭಾಗ ಎಂದು ವಿಭಜಿಸಲ್ಪಟ್ಟಿದೆ, ಜೇಡಗಳಿಗೆ ಕತ್ತು ಹಾಗು ಎದೆಯ ಭಾಗ  ಕೂಡಿದೆ. ಜೇಡಗಳಿಗೆ ನಾಲ್ಕು ಜೊತೆ ಕಣ್ಣುಗಳು ,ಕೀಟಗಳಿಗೆ ಒಂದು ಜೊತೆ ಕಣ್ಣುಗಳು   ಹೀಗೆ ಸಾಗಿತು ಜೇಡಗಳ ವಿವರಣೆ. ನಾನು ನಿದ್ರಾವಶನಾಗುವುದನ್ನು ತಪ್ಪಿಸಿಕೊಳ್ಳಲು ಆಗಾಗ ಜೇಡದಲ್ಲಿ ರುವ ರಕ್ತ (ಹೀಮೋಸೀಲ್)ಜೀರ್ಣಾಂಗ ಶ್ವಾಸಕೋಶ ದ ವಿವರಣೆ, ಆಹಾರ ಕ್ರಮ ಹಾಗೂ ವಿಸರ್ಜನಾಂಗಗಳ ಬಗ್ಗೆ ಪ್ರಶ್ನಿಸಿದೆ. ಎಲ್ಲಾ ಪ್ರಕ್ರಿಯೆಗಳು ಜೇಡದಲ್ಲಿದ್ದು ಅದರ ಬಗ್ಗೆ ಇನ್ನೂ ವಿಸ್ತ್ರತ ಅಧ್ಯಯನ ನಡೆಯಬೇಕು  ಎಂದು ಸಂಪನ್ಮೂಲವ್ಯಕ್ತಿ ತಿಳಿಸಿದರು.
ನಾನು ಎಲ್ಲಾ ಜೇಡಗಳು ದುಂಡಗೆ ಬಲೆ ಹೆಣೆಯುತ್ತವೆ ಎಂಬ ನಂಬಿಕೆ ಇತ್ತು.ಕಾರ್ಯಾಗಾರದಲ್ಲಿ orb weaver(ಹಳೆ ಆಂಗ್ಲದಲ್ಲಿ orbಎಂದರೆ ದುಂಡು) ಎಂಬ ಕುಟುಂಬದ ಜೇಡಗಳು ಮಾತ್ರ ದುಂಡಗೆ ಬಲೆ ಹೆಣೆಯುತ್ತವೆ ಹಾರು ಜೇಡಗಳು ತಾವು ಹಾರಿದ ಸ್ಥಳದ ಗುರುತಿಗೆ ಒಂದೆಳೆ ನೂಲನ್ನು ಬಿಟ್ಟುಕೊಂಡಿರುತ್ತವೆ . ಎಲ್ಲಾ ಜೇಡಗಳು ಬಲೆ ಹೆಣೆಯಲೇ ಬೇಕೆಂದಿಲ್ಲ  ಎಂದು ತಿಳಿಸಿದರು.ಜೇಡಗಳು ಬುದ್ಧಿವಂತ ಜೀವಿಗಳು ಅದರಲ್ಲಿ ಹಾರುವ ಜೇಡ ಬಲು ಬುದ್ಧಿವಂತ, ಜೇಡಗಳ ಶರ್ಲಾಕ್ ಹೋಮ್ಸ್ ಎಂದು ಕರೆಯಬಹುದು ಎಂದು ತಿಳಿಸಿದರು, ಹೋ ಹಾಗಾದರೆ ಲ಼಼ಂಡನ್ನಿನ ಬೇಕರ್ ಸ್ಟ್ರೀಟ್ ನಲ್ಲಿರುವ ಜೇಡ ಇದು ಎಂದು ಲಘು ವಿನೋದಜೊತೆಗೆ ಚಹಾಗೆ ತೆರಳಿದೆವು.

ಮೈಸೂರಿನ ಜಿಲ್ಲಾಧಿಕಾರಿಯವರು ಬಿಡುವು ಮಾಡಿಕೊಂಡು ಕಾರ್ಯಾಗಾರದಲ್ಲಿ ಕೆಲವು ಸಮಯ ಪಾಲ್ಗೊಂಡಿದ್ದರು. ನಂತರ ಸಾಲಿಗ ತಂಡದ ಲಾಂಛನ ಬಿಡುಗಡೆ ಗೊಳಿಸಿ ಶುಭಕೋರಿ ನಿರ್ಗಮಿಸಿದರು.
ಅರಕ್ನಿಡೇ ಸಾಲ್ಟಿಡೇ ಎಂದು ಎರಡು ತಂಡಗಳಾಗಿ ಇಂದ್ರಪ್ರಸ್ಥ ದಲ್ಲಿ ಜೇಡ ಎಂಬ ನಿಧಿಯ ಬೇಟೆಗೆ ಹೊರಟೆವು. ಅರಕ್ನಿಡೆ ಎಂದರೆ ಗ್ರೀಕ್ ಭಾಷೆಯಲ್ಲಿ ಜೇಡ ಎಂದು, ಸಾಲ್ಟಿಡೇ ಎ಼ದರೆ ಹಳೆ ಲ್ಯಾಟಿನ್ ಭಾಷೆಯಲ್ಲಿ ನೃತ್ಯ ಎಂದು. ಇದು ಹಾರುವ ಜೇಡಗಳ ಕುಟು಼ಂಬಕ್ಕಿಟ್ಟಿರುವ ಹೆಸರು. ನಾನಿದ್ದ ಗುಂಪಿನಲ್ಲಿ ಇಬ್ಬರ ಬಳಿಮಾತ್ರ macro photography ಗೆ ಬೇಕಾದ ಪರಿಕರಗಳಿದ್ದವು. ಉಳಿದವರ ಕೈಯಲ್ಲಿ ಟಾರ್ಚ್, ಭೂತಗಾಜು, ಸಿಗುವ species ಗಳನ್ನು ಒಬ್ಬರು ಬರೆದು ಕೊಳ್ಳುತ್ತಿದ್ದರು. ಮೊದಲು ನಾವು ನೋಡಿದ ಜೇಡ  ಸಂಘ ಜೇಡ(social Spider). ಗುಂಪಾಗಿ ವಾಸಿಸುವ ಈ ಜೇಡಗಳು ರಾತ್ರಿವೇಳೆ ಬಲೆ ಹೆಣೆಯುತ್ತವೆ. ಹಲವಾರು ವರ್ಷಗ್ಳಿಂದ ಇದ್ದ ಅದು ನೆಲದಿಂದ ತರಸಿ ವರೆಗೂ  ಅಲ್ಲಲ್ಲಿ ಹಬ್ಬಿಕೊಂಡಿತ್ತು.
ನಂತರ ಕಂಡಿದ್ದು ಕಿಡ್ನಿ ಜೇಡ. ಎಲೆ ಮರೆಯಿಂದ ಈಚೆ ಬಂದ ಅದು ಬೇಟೆಯಲ್ಲಿ ತಲ್ಲೀನವಾಗಿತ್ತು. ಅಷ್ಟರಲ್ಲಿ ಮತ್ತೊಂದು ದಿಕ್ಕಿನಿಂದ ಕನ್ನಡಿ ಜೇಡ ಎಂಬ ಉದ್ಗಾರ.  ಪಾರದರ್ಶಕವಾಗಿ ತನ್ನ ಉದರದಲ್ಲಿರುವ ಬೇಟೆಯ ಕೆಂಪು ಬಣ್ಣವನ್ನು ಸೂಸುತ್ತಿತ್ತು. ಹೀಗೆ ಸಾಗಿತು ನಮ್ಮ ಜೇಡರಬಲೆ ಪಯಣ. ಸಮಯ 8.30ರ ಆಸುಪಾಸಿರಬೇಕು ಎರಡೂ ತಂಡದವರು ಊಟಮಾಡುವುದಕ್ಕಾಗಿ ಮೂಲ ಸ್ಥಳಕ್ಕೆ ಬಂದು ಸೇರಿದೆವು.ಮುದ್ದೆ ಹುರಳಿಸಾರು ಅನ್ನ ಗೊಜ್ಜು ಸಾಂಬಾರು ಮಜ್ಜಿಗೆ  ಪಾಯಸ ತಿನ್ನುವಾಗಿನಮಾತು ಪೂರ ಜೇಡಗಳದ್ದು. ಇನ್ನೊಂದು ತಂಡದವರು ಉಗ್ರಾಣದ ಬಳಿ ಆಕ್ರಮಣ ಸ್ವಭಾವದ ಪೋರ್ಶ್ ಜೇಡಗಳನ್ನು ಕಂಡೆವು ದು ತಿಳಿಸಿದರು. ಭೋಜನಾನಂತರ ತಂಡಗಳ ದಿಕ್ಕು ಬದಲಾದವು. ನಾವು ಹೊರಡುತ್ತಿದ್ದಂತೆಯೇ ಕೊಟ್ಟಿಗೆಯ ಬಳಿ ಸಹಿಜೇಡಗಳು ಕಂಡವು ಹಾಗೂ ಅಲ್ಲಿ ತು಼ಬಾ ಸೊಳ್ಳೆಗಳು ಕೂಡಾ ಇದ್ದವು.ಗಿಡಗಳಿಗೆ ಮುತ್ತುವ ಕೀಟಗಳ ಸಂಖ್ಯೆಯನ್ನು ಜೇಡಗಳು ಗಣನೀಯವಾಗಿ ನಿಯಂತ್ರಿಸುತ್ತವೆ,ಆದುದರಿಂದ ವಿಷಕಾರಿ ಕೀಟನಾಷಕಗಳು ಬೇಕಾಗುವುದೇ ಇಲ್ಲ! ಅಬ್ಬಾ ಎಂಥಾ ಜೈವಿಕ ನಿಯಂತ್ರಣ ಈ ಪ್ರಕೃತಿಯಲ್ಲಿ ! ಅರಿತು ತಾಳ್ಮೆಯಿಂದ ನಡೆಯಬೇಕು ನಾವು,,, ಹೀಗೆ ಯೋಚಿಸುವಾಗ ಹಾವು ಹಾವು ಎಂದು ಕ್ಯಾಮರಾವನ್ನು ಹಾವಿನೆಡೆಗೆ ತಿರುಗಿಸಿದರು. ಬಾಳೆಮರದ ಸಂದಿಯಲ್ಲಿ ನಿರುಪದ್ರವಿಯಾಗಿ ಸಣ್ಣ ಹಾವಿನ ಮರಿಇತ್ತು. ಹಾವಿದ್ದ ಮೇಲೆ ಆದರ ಆಹಾರವು ಅಲ್ಲೇ ಇರಬೇಕಲ್ಲವೆ. ಸ್ವಲ್ಪ ಆಚೀಚೆ ನೋಡಿದಾಗ ಭಾರತೀಯ ಸಾಮಾನ್ಯ ಮರಗಪ್ಪೆ ಕಂಡಿತು. ನಾನು ಮೊದಲ ಬಾರಿ ಮರಗಪ್ಪೆಯನ್ನು ನೋಡಿದ್ದು ಹೀಗೆ.ಸಾಮಾನ್ಯವಾಗಿ ನಾನು ನೋಡಿರುವ ಕಪ್ಪೆಯಗಿಂತ ಸುಮಾರು ಮೂರು ಪಟ್ಟು ಚಿಕ್ಕದಾಗಿತ್ತು. ಎಲೆಯಮೇಲೆ ಬೆಪ್ಪಿನಂತೆ ಕುಳಿತಿತ್ತು. ಅದನ್ನು   ಹಿಂದೆ ಬಿಟ್ಟು ಮುಂದುವರೆದೆವು. ಮೊದಲ ಸುತ್ತಿನಲ್ಲಿ ನೋಡಿದ್ದ 32ಜೇಡಗಳ ಸಂಖ್ಯೆ ಯಾಕೋ ಹೆಚ್ಚಾಗಿ ವೃದ್ಧಿಸಲೇ ಇಲ್ಲ. ಉಗ್ರಾಣಕ್ಕೆ ತೆರಳಿ, ಪೋರ್ಶ್ ಜೇಡಗಳ ಹುಡುಕುವ ನಮಗೆ ಮೊದಲು ಚೇಳು ಎದುರಾಯಿತು, ನಂತರ ಪೋರ್ಶ್ ಜೇಡಗಳನ್ನು ಕಂಡೆವು. ಉಗ್ರಾಣದಿಂದ ಹೊರ ಬರುತ್ತಲೇ ನೆಲದಮೇಲೆ ತೋಳ,ಜೇಡಗಳು ಕಂಡವು. 

ಸೋಮವಾರ, ನವೆಂಬರ್ 5, 2018

ಸತ್ಯಂ ಶಿವಂ ಸುಂದರಂ

ಸುಳ್ಳಾದರು ಸರಿ
ಪ್ರೀತಿಸಿಬಿಡೆ,
ಸತ್ಯಸಂಧರ ಈ ಲೋಕದಲ್ಲಿ
ಹೃದಯ ಮಿಡಿವುದೇ ಸುಳ್ಳಿಗಾಗಿ
ಕ್ಷಣಿಕ ಸುಖಕಾಗಿ

ಸುಳ್ಳು ಸುಂದರ ನೋಡು
ಸತ್ಯವಿರುವುದೇ
ಮಸಣಕೆ ದೂಡಲು ಹುಡುಗಿ
ಹೃದಯ ಮುರಿದು ನಿದ್ರೆ ಹರಿದು
ಸಟೆಯ ಸಾಲುಗಳ ಮೆಲುಕಿ
"ಅಯ್ಯೋ ಅದು ಸುಳ್ಳೇ" ಎಂದಲುಬಲಷ್ಟೇ

ಆದರೂ
ಸತ್ಯಂ ಶಿವಂ ಸುಂದರಂ
ಆದರೂ
ಸತ್ಯಂ ಶಿವಂ ಸುಂದರಂ
ಎಲ್ಲಾ ಇರುವ ಸುಳ್ಳಿಗೆ ಆತ್ಮಸಾಕ್ಷಿಯೊಂದಿಲ್ಲ

-ದೀಪಕ್

ಮಂಗಳವಾರ, ಅಕ್ಟೋಬರ್ 16, 2018

ದೂರ

ಮನೆಮಠ ಸಂಬಂಧ ಗಳಿಂದ
ದೂರ ಹೊರಟರು
ಪರದೇಸಿಗಳಾಗ ಹೊರಟರು
ಮುಂದುವರೆವ ಜಾಡಿನಲಿ
ಅಭಿವೃದ್ಧಿ ಹೆಸರಿನಲಿ
ದ್ರವ್ಯದ ಹಂಬಲದಲಿ
ಹೊಸತನದ ತವಕದಲಿ
ಬೇರು ಕಡಿದಾರಿದ ಮಾಯಾವಿಗಳು
ಆಕರ್ಷಣೆ ಹೆಚ್ಚಿರುವ ಎಲೆಕ್ಟ್ರಾನುಗಳಿವರು

someಬಂಧಗಳಿಗೆ
ಬೆಲೆ ಕಡಿಮೆ
ಕುಣಿಕೆ ಹಿಡಿಕೆ ಹಿಂಸೆ ಉಸಿರುಗಟ್ಟು
ಆದರೂ
ನೀರು ಹರಿಯುತಿರಬೇಕು
ಹೊಸತು ಹಳತು ಸಮಯ

ಶುಕ್ರವಾರ, ಅಕ್ಟೋಬರ್ 12, 2018

ಸಂಸ್ಕಾರ

ಇತರರೊಡನೆ ಕಿತ್ತಾಡದೆ ತೊಂದರೆಕೊಡದೆ, ತನ್ನನ್ನು ತಾನು ಪೋಷಿಸಿಕೊಳ್ಳುವುದೇ ಸಂಸ್ಕಾರ ನನಗನಿಸಿದಂತೆ.

ಮಂಗಳವಾರ, ಅಕ್ಟೋಬರ್ 2, 2018

ಪ್ರೀತಿ ಬಾಧೆ

ಹೀಗೆ ಸುಮ್ಮನೆ
ದೇಹ ಬಾಧೆಯನ್ನು ಹೇಡಿಮನವು ಪ್ರೀತಿ ಎನ್ನುವುದು
ಪ್ರೀತಿ ಎಲ್ಲಿದೆ ಲಾಭಗಳ ನಡುವೆ?

ಶನಿವಾರ, ಸೆಪ್ಟೆಂಬರ್ 8, 2018

ಜಾಗೃತಿ, ಉರಗ ಸಂರಕ್ಷಣೆ ; ಹಾವು ಮಾನವನ ಸಂಘರ್ಷಕ್ಕೆ ಮುಕ್ತಿ

ಹಾವುಗಳನ್ನು ಸಂರಕ್ಷಿಸುವುದು ಅಪಾಯಕರವೇ? ಹೌದೆಂದಾದರೆ ಅಪಾಯವನ್ನು ಹೇಗೆ ಕಡಿಮೆಮಾಡುವುದು?
ಮಾನವ ಉರಗಗಳ ಸಂಘರ್ಷವನ್ನು ಹೇಗೆ ನಿವಾರಿಸಬಹುದು?

ನನ್ನ ಅನುಭವದ ಹಿನ್ನೆಲೆಯಲ್ಲಿ ಈ ಮೇಲಿನ ಪ್ರಶ್ನೆಗಳನ್ನು , ಮುಂದಿನ ಸಾಲುಗಳಲ್ಲಿ ಉತ್ತರಿಸುವ ಪ್ರಯತ್ನ ಮಾಡಿರುವೆ.  ಮಾನವ ಹಾಗೂ ಹಾವುಗಳ ಸಂಘರ್ಷ ಕೊನೆಮಾಡಲು ಯಾವಾಗಲೂ  ಹಾವುಗಳ ಸ್ಥಳಾಂತರ ಮಾಡುವುದು ಪರಿಹಾರವಲ್ಲ. ಪ್ರತಿ ಸಂದರ್ಭದಲ್ಲೂ ಯಾವುದಾದರೂ ಕಾರಣದಿಂದ ಸಂರಕ್ಷಣಾಕಾರ್ಯ ಕೈಗೊಳ್ಳ ಬೇಕಾಗುತ್ತದೆ . ಸಂರಕ್ಷಣೆಗೆ ಒಂದು ನಿಯಮ , ಸಂಶೋಧನೆ,ರೀತಿ ರಿವಾಜುಗಳನ್ನು ಅನುಸರಿಸಬೇಕು .ಅದರಲ್ಲಿ ಸಂರಕ್ಷಣೆ ಹಾಗೂ ಸುರಕ್ಷಿತವಾಗಿ ಹಾವುಗಳ ಬಿಡುಗಡೆ ಮುಖ್ಯ.  ಹಾವುಗಳ ಬಗ್ಗೆ ಸರಿಯಾದ ತಿಳುವಳಿಕೆ ಇದ್ದರೆ  ಅವಶ್ಯಕತೆ ಇರುವಲ್ಲಿ ಮಾತ್ರ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳುತ್ತೇವೆ ಅದರಿಂದ  ಅನವಶ್ಯಕ ಕಾರ್ಯಾಚರಣೆ ತಪ್ಪುತ್ತದೆ .

ಶನಿವಾರ, ಸೆಪ್ಟೆಂಬರ್ 1, 2018

ಒಂಟಿ ಮಾತು

ಅನಿಸಿದ್ದನ್ನು
ಮಾತನಾಡಿ
ಕಳೆದುಕೊಳ್ಳಬೇಕು
ಇಲ್ಲದಿರೆ ಭೂತವಾಗಿ
ಕಾಡುತ್ತದೆ
ಗಂಡ ಹೆಂಡಿರ ನಡುವೆ
ಮಾತಿನ ಸರಾಗದ ವೇಗ
ಬೇರೆಯವರೊಡನೆ
ಬರದು
ಇಬ್ಬರರಿತು ಸ್ನೇಹಿತರಾದರೆ
ಸ್ವರ್ಗ-ಕೊಂದೆ ಗೇಣು
ಅದಕ್ಕೆ ಸಂಶಯವಿಲ್ಲ
ಬೇಕು ಜೊತೆಗಾರರು
ಜಗಳವಾಡಲು ಸರಿಯೇ
ಪ್ರೀತಿ ಇರಬೇಕಲ್ಲಿ

ಆಡದ ಮಾತು
ತಲೆಯೊಳಗೆ ಪ್ರತಿಫಲಿಸಿ
ಫಲಿಸಿ
ತನ್ನೊಡನೆ ನುಡಿದಾಗ
ಜಗ ಕರೆವುದದನು
ಹುಚ್ಚೆಂದು
ಮಾತನಾಡಲು ಬೇಕು
ಜೀವ ಸಂಗಾತಿ
ಇಲ್ಲದಿರೆ
ತನ್ನೊಳಗೇ ತಾ ನುಡಿದು ಉಲಿದು
ಆಗುವವರು ಅಂತರಮುಖಿ
ಅವರೊಡನಿಲ್ಲ ಸುಖಿ

ಬುಧವಾರ, ಆಗಸ್ಟ್ 22, 2018

ಆಸೆ


ಕತ್ತಲ ರಾತ್ರಿಯಲಿ
ಎಲ್ಲವ ತೊಡೆದು
ಹೋಗುವಾಗ
ನೆನಪಾಗಲಿಲ್ಲವೆ
ನಿನ್ನಕ್ಕ ತಂಗಿಯರು
ಮಡದಿ ಕಂದಮ್ಮರು
ಸಾಧನೆಯ ಶಿಖರವನೇರಿ
ದಿವ್ಯ ದೃಷ್ಟಿಯ ಬೀರಿ
ಪ್ರವಚನದ ಸಾಲುಗಳ ಸಾರಿ
ಹುಡುಕು
ಅನಾಥ ಕಂದ
ಅಮ್ಮ ಎಲ್ಲಿಹರೆಂದು
ಹೌದು ನಿನ್ನನುಯಾಯಿಗಳ
ಸಾಲು
ದೊಂದಿ ಬೆಳಕಿನಲಿ
ಹುಡುಕುತಿಹರು
ಶತ ಶತಮಾನಗಳುರುಳಿದರೂ
ಸಿಗಲಿಲ್ಲ ನೋಡು ಸಾಸಿವೆ
ಇನ್ನೂ ರಟ್ಟಾಗಲಿಲ್ಲ
ನಿನ್ನ ಸಂಜೀವಿನಿ ವಿದ್ಯೆ
ನನಗಿನ್ನೂ ಸಂದೇಹವಿದೆ
ನೀ ನಡುರಾತ್ರಿಯಲೇ
ಮನೆತೊರೆದ ಗುಟ್ಟೇನು
ವೈರಾಗ್ಯದಿ
ಮನಸುಟ್ಟ ಪ್ರಶ್ನೆ ಏನು

ನೀ ಹಲುಬಿದೆ ಹುಡುಕಿದೆ
ಸೊರಗಿದೆ ಕಂಗೆಟ್ಟೆ
ಏನೆಂದು ಆಸೆ ಪಟ್ಟೆ
ಕೊನೆಗೆ ನೆರವೇರಿದ್ದು
ನಿನ್ನಾಸೆಯಂತೆ
ಆಸೆಯೆ ದುಃಖಕ್ಕೆ ಮೂಲ

ನಿನ್ನಾಸೆಗೆ ತೊರೆದೆ ಅಂತಸ್ತಧಿಕಾರ
ನೋಯಿಸಿ ಬೇಯಿಸಿದೆ
ಸತಿ ಸುತ ಪುರ ಜನರ
ಆಗುತ್ತಿರಲಿಲ್ಲವೇ ನಿನಗೆ
ಜವಾಬ್ದಾರಿಗಳೊಂದಿಗೆ
ಸಾಕ್ಷಾತ್ಕಾರ?
ನಿನ್ನ ಮೊಂಡಾಟಗಳೆಲ್ಲ
ನೀ ಪಡೆದ
ಫಲದ ಮುಂದೆ ಮಸಕು
ಬೆಳಕಿದ್ದಷ್ಟು ಕತ್ತಲೂ ಗಾಢ 
ಕತ್ತಲ ದೂಡಲು
ಮತ್ತೆ ಬೇಕು ನಿನ್ನ  ತತ್ವ

ದೀಪಕ್


ಮಂಗಳವಾರ, ಆಗಸ್ಟ್ 14, 2018

ತುಣುಕು

*ಮಳೆಯಾಗುತಿದೆಯಂತೆ ಹುಡುಗಿ*
ಸೂರತೂತನು ಮುಚ್ಚುಬಾರೋ ಹುಡುಗ 
*ಪಾತ್ರೆಯನಿಡೆ ಹುಡುಗಿ*
ಅಡಿಗೆಗೆ ಗಡಿಗೆತಾರೋ ವೀರ
*ಕೆರೆ ಕಟ್ಟೆ ತುಂಬ್ಯಾವೇ ಹುಡುಗಿ*
ಹೇಳು ಹಾರೋಣೇನು ಅದರೊಳಗೆ ಹೋಗಿ
*ಮಳೆ ಸೋನೆಹಿಡಿದಿಯೇ ಹುಡುಗಿ*
ಎಣ್ಣೆ ಇಲ್ಲವೋ ಮನ್ಯಾಗ ಹುಡುಗ


ಬುಧವಾರ, ಆಗಸ್ಟ್ 8, 2018

ಗೆಳತಿಗೆ

ನೆನಪುಗಳ ಕೂಡಲೇ
ಪದಗಳನು ಹಾಸಲೇ
ಮನದೊಳಗೆ ತುಡಿತ
ಕೇಳಿ ಕೂಡಿ ನುಡಿವಾಗ
ನಿನ್ನೊಳಗೆಮ್ಮ ಬಿಂಬ
ನಮ್ಮೊಳಗ ನಿನ್ನ ಬಿಂಬ
ಇದಕೆಬೇರೆ ಹೆಸರು ಬೇಕೆ
ಸ್ನೇಹ ಎಂದರಷ್ಟೇ ಸಾಕೆ
ದೀಪಕ್

ಸೋಮವಾರ, ಜುಲೈ 30, 2018

ಚುಟುಕು


ಪರಕೀಯರ
ತನ್ನವರಾಗಿಸಿಕೊಳ್ಳುತ್ತಾ
ತನ್ನವರ ಪರಕೀಯ
ಮಾಡಿದೆಯಲ್ಲ
ಗಾಲಿಬ್
ಎನಿದರ ಮರ್ಮ?
***

ಕೋಟ್ಯಾನು ಕೋಟಿ ವರ್ಷಗಳ ಕೋಟ್ಯಾನು ಕೋಟಿ ಸಂಯೋಜನೆಯ ಒಂದು ಫಲ ಈ ಬದುಕು ನೀರಮೇಲಿನ ಗುಳ್ಳೆಯಂತೆ

***

ಬೆತ್ತಲಿನ ಭ್ರಮೆ ನೀಡುವ ಉನ್ಮಾದ ಬೆತ್ತಲು ನೀಡದು

***

ತೀರದ ನೆನಪು ನದಿಗಿಂತ ಆಗಾಧ
ಎಲ್ಲೂ ಮುಗಿಯುವುದಿಲ್ಲ
***

ಓಡಿಹೋಗಿ
ಮದುವೆಯಾದ
ಗುಲಾಮನಾಗಲು

***

ಈಗ ಸಂಬಂಧಗಳನ್ನು ಕಡಿಯುವುದು ಸುಲಭ,

ಒಮ್ಮೆ ಜಂಗಮವಾಣಿಗೆ ಹುಷಾರು ತಪ್ಪಿತು
ಎಷ್ಟೋ ಗೆಳೆಯರು ಇಲ್ಲವಾದರು.

***

ಅಪ್ಪಟ ಪ್ರೇಮಿಯ ಹೃದಯದಲ್ಲಿ ವಜ್ರವಿರುತ್ತದೆ

***

ನೆನಪುಗಳು ಒತ್ತರಿಸುತ್ತವೆ ರೋಧನವೇ, ಅತೃಪ್ತಭಾವವೇ, ಭಯವೇ ಗೊತ್ತಿಲ್ಲ
ಅಂತೂ *ಬೇಡದ* ನೆನಪುಗಳ

***

ಹಳೆಯ ಮುಸುಕಿನಲಿ ಎಲ್ಲವ ಮುಚ್ಚುವ ಸನ್ನಾಹ, ಏನನ್ನೋ ಮರೆತ ನೆನಪು

***

ಗುರುವಾರ, ಜುಲೈ 26, 2018

ಹುಚ್ಚು


ಮನದಲ್ಲೇ ಬೆತ್ತಲುಮಾಡುತ್ತಿದ್ದವ
ಬೆತ್ತಲು ಕಂಡು ಮುಖ ತಿರುವಿದ
ಹುಚ್ಯಾರಿಗೆ?

ಶನಿವಾರ, ಜುಲೈ 21, 2018

Death

When I die,
burry me
Call no friends,
relatives or
inform them,
It doesn't matter to them perhaps!

I feel deeply hurt by the spouse who argues every point like any others spouse for no good cause
Yes,
I feel no pain in heart
but only light head and art
Which makes me to think
is it
Burning heart or failing heart

I keep my fingers crossed
Till the day I am sure to declare "the game is over"
Till then I play with my favourite sport called life

ಶನಿವಾರ, ಜುಲೈ 14, 2018

ಏಕೆ

*ಏಕೆ ಹೀಗೆ ಕಾಡುವೆ*
ನಿನ್ನ,ಮರೆತು ಜೀವವರಿತು
ಬದುಕು ನೀಗುತಿದ್ದೆನಾ
ಕವನದೊಳಗೆ
ತೂರಿನೀನು
ಏಕೆ ಹೀಗೆ ಕಾಡುವೆ

ಲೇಖನಿಯೊಳಿರುವೆ
ಎಂದು
ಅಕ್ಕರವನೆ ಮರೆತೆನಾ
ಶಾಯಿಯೊಳಗೆ
ಅವಿತನೀನು
ನೆನಪ ಹಸಿರುಮಾಡಿದೆ

ಪ್ರೀತಿ ಹೇಯ
ಹಣವೆಜೀಯ
ಈ ನನ್ನ ಗುನುಗನೆಂದು 
ಕೇಳಿದೆ
ನೋಟಿನೊಳಗೆಸೇರಿದೆ
ನನ ಭಿಕಾರಿಮಾಡಿದೆ
ಏಕೆ ಹೀಗೆ ಕಾಡುವೆ
ಬಿಟ್ಟುಬಿಡು ನಿನ್ನ ಬೇಡುವೆ




ಏಕೆ ಹೀಗೆ ಮಾಡಿದೆ

ಏಕೆ ಹೀಗೆ ಮಾಡಿದೆ
ಪ್ರೀತಿ ಸಾಲದಾಯಿತೇ
ನಂಬಿ ಮೋಸ ಹೋದೆನೇ
ಬೆಸೆದು ಬೇರೆಯಾದೆನೇ

ಹಿಂದೆ ಮುಂದೆ ಓಡಿದೆ
ಮಾತಲಿ ಮರುಳು ಮಾಡಿದೆ
ಛಲ ಪ್ರತಾಪ ತೋರಿದೆ
ನನ್ನ ಮನವ ಕಾಡಿದೆ
ಎಲ್ಲೋ ಗೂಡೂ ಮಾಡಿದೆ
ಕಾಣ್ದೆ ದೂರಕೋಡಿದೆ
ಏಕೆ ಹೀಗೆ ಮಾಡಿದೆ
ಪ್ರೀತಿ ಸಾಲದಾಯಿತೇ

ಹಗಲು ಇರುಳು ನಿನ್ನದೆ
ಕನಸು ಮನಸು ನಿನ್ನದೆ
ನೀ ಇರದ ಬದುಕು ಕತ್ತಲೆ
ಇನ್ನಾರೆನಗೆ ಆಸರೆ
ಏಕೆ ಹೀಗೆ ಮಾಡಿದೆ
ಪ್ರೀತಿ ಸಾಲದಾಯಿತೇ

ಮೂರು ಗಂಟ ಬಿಗಿಯಬಾ
ಬೇಗೆಯಳಿಸಿ ತಬ್ಬುಬಾ
ತೋಳವ ದೂರ ತಳ್ಳು ಬಾ
ನಿನ್ನ ಮಾತ ಗೆಲಿಸು ಬಾ
ಏಕೆ ಹೀಗೆ ಮಾಡಿದೆ
ಪ್ರೀತಿ ಸಾಲದಾಯಿತೇ

ಕಂಡೆ ಸಟೆಯ ಮಂದಿಯ
ಎಲ್ಲಕೂ ಹಿಂಜರಿಕೆಯ
ಈ ಗಾಂಧಾರಿಗೆ ನೀನೇ  ಸಂಜಯ
ನಮ ಪ್ರೇಮದಲಿ ಗೆಲುವು ಅಜಯ
ಬದುಕ ದಾರಿ ತೋರೆಯ
ಏಕೆ ಹೀಗೆ ಮಾಡಿದೆ
ಪ್ರೀತಿ ಸಾಲದಾಯಿತೇ

ಕಾಡುಮೇಡು ಅಲೆದೆವು
ಸನಿಹ ಸಲಿಗೆ ಮೆರೆದೆವು
ಮದಿರೆ ಮದನ ಕಾಮನೆ
ಜೊತೆಗೆ ಸಿಂಹ ಸಿಂಚನ
ನಿನ್ನ ಖುಷಿಗೆ ದಣಿದೆನಾ
ರಭಸಕ್ಕೆ ನುಲಿದೆನಾ
ಏಕೆ ಹೀಗೆ ಮಾಡಿದೆ
ಪ್ರೀತಿ ಸಾಲದಾಯಿತೇ

ಅಂದು ಕರೆದೆ ತೋಟಕೆ
ಈಜಿ ದಣಿವ ಪರಿಪಾಠಕೆ
ತಪ್ಪು ಕಾಣ್ಕೆ ನೀಡಿದೆ
ನೀ ಎತ್ತರೆತ್ತಕೇರಿ ಕೊಚ್ಚಿದೆ
ಕಾಣದೆಲ್ಲಿ ಹೋದೆನೀ
ನನಗೆಂದು ಸಿಗದ ಊರಿಗೆ
ಏಕೆ ಹೀಗೆ ಮಾಡಿದೆ
ಧೈರ್ಯ ಸಾಲದಾಯಿತೇ

-ದೀಪಕ್

ಸೋಮವಾರ, ಜುಲೈ 9, 2018

ನಿದ್ರೆ

ಹಗಲುರುಳಿ ಇರುಳಾಗುವುದು ದಿನ
ಕಳವಳಿಸುವುದು ನನ್ನೀ ಮನ
ರಾತ್ರಿ ಮಲಗಬೇಕೆಂಬುದ ನೆನೆದು
ಏಕೆಂದರೆ ನನಗೆ ನಿದ್ರೆ ಕಡಿಮೆ

ಬೆಳಿಗ್ಗೆ ಬೆವರುವವರೆಗೆ ಓಟ
ಕುಡಿಯಲು ನೀರುತಂಬಿಗೆ ಲೋಟ
ದಣಿಯದಿದ್ದರೆ ಇದೆ ದೊಡ್ಡಕಾಟ
ಏಕೆಂದರೆ ನನಗೆ ನಿದ್ರೆ ಕಡಿಮೆ

ರಾತ್ರಿ ಓದಲು ರಾಶಿ ಹೊತ್ತಿಗೆ
ಮಾರಿ ಅವುಗಳ ಎನ್ನುವಳು
ಮಡದಿ ಮೆತ್ತಗೆ
ಜೋರು ಹೇಳಲವಳಿಗಿಲ್ಲ ಗುಂಡಿಗೆ
ಏಕೆಂದರೆ ನನಗೆ ನಿದ್ರೆ ಕಡಿಮೆ

ರಾತ್ರಿ ಮಲಗಲು  ಲೋಟಹಾಲು
ಅದರಲೆಚ್ಚು ಗಸಗಸೆಯ ಪಾಲು
ಅದಕಾರೂ ಹಾಕರು ಅಡ್ಡಗಾಲು
ಏಕೆಂದರೆ ನನಗೆ ನಿದ್ರೆ ಕಡಿಮೆ

ಮುಗಿದವೆಲ್ಲ ನಿದ್ರೆಯಸ್ತ್ರ
ಗುಳಿಗೆ ನೋಡು ಕೊನೆಯ ಶಸ್ತ್ರ
ಬೇಗ ಮುಗಿಸಬೇಕದರ ನಿತ್ಯ ಶಾಸ್ತ್ರ
ಏಕೆಂದರೆ ನನಗೆ ನಿದ್ರೆ ಕಡಿಮೆ

ಸನಿಹ ನೀನು ಬರುವೆಯೇನು
ನನ ಕೈಗೆ ತಲೆಕೊಟ್ಟು ಮಲಗುವೆಯೇನು
ನಿನ ಅಪ್ಪಿ ಮಲಗುವೆ ನಾನು
ದೂರವೆಲ್ಲಿ ಹೋದೆನೀನು
ಚಳಿಯಲಿಲ್ಲಿ ಒಂಟಿ ನಾನು
ಅದಕೆ ನನಗೆ ನಿದ್ರೆ ಕಡಿಮೆ
-ದೀಪಕ್ ಭ

ಕಾಲೇಜು ಗೆಳತಿ

ಕಗ್ಗತ್ತಲೆ ರಾತ್ರಿಯಲ್ಲಿ
ಬದುಕಿನ ಓರೆಕೋರೆಯಲ್ಲಿ
ಬೆಳಕಿನಂತೆ ಎದುರಾದೆ

ಪಯಣದಲ್ಲಿ ಸನಿಹವಾದೆ
ಸಮಯ ಬರಲು ದೂರದೆ
ರೊಚ್ಚಿಡಿಯಿತೀ ಹೃದಯ

ಜನ ತಿಳಿಸಿ
ಸಾವಧಾನದಿ
ಸಮಾಧಾನಿಸಿದರು ಅಂದು
ಈಗ ಲೆಕ್ಕ ಹಾಕಿದರೆ
ಅದಕರ್ಥವೇ ಇರಲಿಲ್ಲ
ನೀ ನನ್ನ ಜೀವನದಲಿ
ಏನೇನೂ ಅಲ್ಲ
ವಿರಹಕೂಡ!
-ದೀಪಕ್

ಭಾನುವಾರ, ಜುಲೈ 8, 2018

ತುಣುಕುಗಳು

ಗೆಳೆಯರೊಡನಾಡುತ
ಮನೆಯ ಮುದ್ದಿನ ನಡುವೆ
ವಯಸ್ಕರೆಂದಾದೆವೆಂದು
ತಿಳಿಯಲೇ ಇಲ್ಲ
ಅದಕ್ಕೋ ಏನೋ
ಬಾಲ್ಯವ ಮರು ಸ್ಥಾಪಿಸಲು ಮಕ್ಕಳಿರಬೇಕು
*
ನಡು ರಾತ್ರಿಯಲಿ
ನಾವು ಮಾತನಾಡುತಿಹೆವೆಂದರೆ
ಕಳೆದ ಜನ್ಮದ ಪುಣ್ಯ
ಇನ್ನೂ ಇರಬೇಕು
ನಿದ್ರೆ ಬರದೆ ಭೂತದಂತಿಹೆವು,
ಕೋಡಂಗಿ ಗಳಂತೆ  ವೀರಭದ್ರನ
ನಾವು ಹುಡುಕುತಿರಬೇಕು
*
ವರುಷಗಳುರುಳುತ್ತಯಾಕೋ ಕಿಲಕಿಲನಗು ಕಿಲಕ್ಕಿಲಾ ಎಂದು ಮುಗ್ಧತೆಹಾರಿದ್ದು
ಅರಿವಿಗೇ ಬರಲಿಲ್ಲ
*
ನೀ ಸನಿಹ ವಿರದೆ
ಆತ್ಮ  ಗಲ್ಲಿಗಳಲಿ
ತಿರುಗುತಿದೆ
ನಿದ್ರಿಸಲು ತತ್ವಾರ
ಸಾಕು ಹುಡುಕಾಟ
ಮರಳು ಗೂಡಿಗೆ
ಓ ಭೋಲೀ ಆತ್ಮ

ಮಂಗಳವಾರ, ಜುಲೈ 3, 2018

ನನ್ನ

ನುಡಿಯಲಾಗದ ಭಾವ
ನಂಬಿಕೆ ವಂಚನೆಯಾದಾಗ
ಮಾತು ಮೌನಕೆ ಶರಣು
**
ಹಿಂಗದಾ ಹಸಿವು
ಮುಚ್ಚಿದಾಲಿ ತುಂಬಿದಂತೆ
ಜಿಗುಪ್ಸೆ,
ಲೋಕದುಸುಬಾರಿ ಏಕೆ
**
ಬೆತ್ತಲು ನಿಂತಾಗ
ಬಟ್ಟೆಸಿಗದೆ
ಅನುಭವಿಸುವ ಯಾತನೆ
**
ಎಲ್ಲವೂ ಮಾಯ
ಮರೀಚಿಕೆ
ಭೃಮೆ
ಆದರೂ
ಕೃತಕತೆಯು 'ಸ್ವಂತ'
ಎಂಬ ಬದುಕು ,
**

ಸೋಮವಾರ, ಜೂನ್ 25, 2018

ಪಕ್ಷಿಗಳ ಪರಿಚಯ


ಆರಂಭಿಗರಿಗೆ ಪಕ್ಷಿಗಳ ಪರಿಚಯ ಮೊದಲ ಭಾಗ
ಈ ಸಣ್ಣ ಬರಹವು ನಿಮಗೆ ಪಕ್ಷಿಗಳು ಹಾಗೂ ಅವುಗಳ ಛಾಯಾಚಿತ್ರಣದ ಬಗ್ಗೆ  ತಿಳಿಸುತ್ತದೆ,, ಇದರ ಮೂಲಕ ನಿಮ್ಮಹಕ್ಕಿಗಳಭೇಟಿ, ಬೇಟೆಯು ಉಲ್ಲಾಸದಾಯಕವಾಗುವುದು ಎಂದು ಆಶಿಸುತ್ತೇನೆ. ನಾವು ಮಾನಸಿಕವಾಗಿ ದಣಿದಿದ್ದು ಒತ್ತಡ ಹೆಚ್ಚಾಗಿದ್ದರೆ ಪಕ್ಷಿ ಪ್ರಪಂಚ ಅವುಗಳನ್ನು ನಿವಾರಿಸುತ್ತದೆ.
ಪಕ್ಷಿಗಳು ರೆಕ್ಕೆ ಪುಕ್ಕವಿದ್ದು ಮೊಟ್ಟೆ ಇಟ್ಟು ಮರಿಮಾಡುವ ಬಿಸಿರಕ್ತ ಕಶೇರುಕ ಪ್ರಾಣಿಗಳು. 
ಪಕ್ಷಿಗಳ ಮುಂಗಾಲುಗಳು ರೆಕ್ಕೆಯಾಗಿ ಪರಿವರ್ತನೆ ಹೊಂದಿದ್ದುಮುಂಗಾಲಾನ ಮೂಳೆಗಳು ಟೊಳ್ಳಾಗಿದ್ದು  ಹಾರಾಟದಲ್ಲಿ ಸಹಾಯ ಮಾಡುತ್ತದೆ .

ಪಕ್ಷಿಗಳು ಎಂದೊಡನೆ ಮನ ಪಠಲದಲ್ಲಿ ಹಾರುತ್ತಿರುವ ಪಕ್ಷಿಯ ಚಿತ್ರಣ ಮೂಡಿದರೂ ಎಲ್ಲಾ ಹಕ್ಕಿಗಳು ಹಾರಲಾರವು.

ನಿಕೋಬಾರ್ ದ್ವೀಪದಲ್ಲಿ ಇತ್ತೀಚೆಗೆ ಪತ್ತೆಮಾಡಿದ ಗ್ರೇಟ್ ನಿಕೋಬಾರ್ ಕ್ರೇಕ್ (2011)ನ ಮೇಲೆ ನಡೆದಿರುವ ಅಧ್ಯಯನಗಳು ದೃಢ ಪಟ್ಟರೆ ಗ್ರೇಟ್ ನಿಕೋಬಾರ್ ಕ್ರೇಕ್
ಭಾರತದ ಏಕೈಕ  ಹಾರಲಾಗದ ಹಕ್ಕಿಯಾಗುವ ಸಂಭವವಿದೆ .

ಪಕ್ಷಿವೀಕ್ಷಣೆ; ಪಕ್ಷಿಪರಿವೀಕ್ಷಕರಿಗೆ ವ್ಯತಿರಿಕ್ತವಾಗಿ ಪಕ್ಷಿವೀಕ್ಷಕರುಹೆಚ್ಚೆಚ್ಚು ಹಕ್ಕಿ  ಪ್ರಭೇದಗಳನ್ನು ಗುರುತಿಸಿ ತಾವು ನೋಡಿರುವ,ಹಕ್ಕಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.

ಪಕ್ಷಿ ಪರಿಛಾಯಾಚಿತ್ರಣ ; ಪಕ್ಷಿಯ ಉತ್ತಮ ಛಾಯಾಚಿತ್ರ ,ಸುತ್ತಲಿನ ವಾತಾವರಣ, ಹಕ್ಕಿ ಹಾರಾಟದಲ್ಲಿರುವಾಗಿನ ಚಿತ್ರಣ,ಗೂಡು, ಆಹಾರ ಕ್ರಮಗಳ,ಚಿತ್ರಣ ಮುಂತಾದವುಗಳು ಸೇರುತ್ತವೆ ಇದರಲ್ಲಿ.

ಹಕ್ಕಿ ಚಿತ್ರಣ; ಇದು ಹಕ್ಕಿ ವೀಕ್ಷಣೆಯಂತೆಯೇ, ಹಕ್ಕಿಗಳ ಛಾಯಾಚಿತ್ರ ಸಂಗ್ರಹ

ನಾವು ಯಾವುದಾದರೂ ಒಂದು ಕ್ರಮವನ್ನು ಅನುಸರಿಸಬೇಕೆಂಬ ನಿಯಮವಿಲ್ಲ ,ಅನುಸರಿಸಿದರೆ ಉತ್ತಮ . ನಾನು ಮೇಲೆ ಹೇಳಿದ ಎಲ್ಲಾ ಕಾರ್ಯದಲ್ಲೂ ತೊಡಗಿ ಕೊಂಡಿದ್ದೇನೆ. ನನ್ನ ಆಸಕ್ತಿ ಇರುವುದು ಹಕ್ಕಿಪರಿವೀಕ್ಷಣಾ ಛಾಯಾಚಿತ್ರಣ ದಲ್ಲಿ. ಹಕ್ಕಿಪರಿವೀಕ್ಷಣೆ ನನಗೆ ಹಕ್ಕಿಗಳ ಸ್ವಭಾವ ತಿಳಿಸುತ್ತದೆ,ಅದರ ಮೂಲಕ ನನ್ನ ಛಾಯಾಚಿತ್ರಗಳು ಉತ್ತಮವಾಗುತ್ತವೆ.

ನಮಗೆ ಪಕ್ಷಿಗಳು ಎಲ್ಲಿ ಕಾಣುತ್ತದೆ ಎನ್ನುವುದಕ್ಕಿಂತ ನಮ್ಮ ಪರಿಸರದಲ್ಲಿ ಎಲ್ಲೆಡೆಯೂ ಕಾಣಬಹುದು . ಅದೇ ಕಾರಣದಿಂದ ವನ್ಯ ಮೃಗ ಛಾಯಾಚಿತ್ರಗಳನ್ನು ತೆಗೆಯ,ಹೊರಟವರುಸುಲಭವಾಗಿ ಪಕ್ಷಿಪರಿವೀಕ್ಷಣೆ ಛಾಯಾಚಿತ್ರಣ ದಲ್ಲಿ ತೊಡಗಿ ಕೊಳ್ಳುತ್ತಾರೆ. ಪಕ್ಷಿಗಳೋ ನಮ್ಮ ಮನೆಯ ಹಿತ್ತಲಿನಿಂದ ಆರಂಭಿಸಿ ದಟ್ಟ ಕಾಡಿನಲ್ಲೂ ಕಾಣುತ್ತವೆ. ಹಕ್ಕಿಪರಿವೀಕ್ಷಣೆ ಆರಂಭಿಸಲು ನಮ್ಮ ಮನೆಯ ಹಿತ್ತಿಲೇ ಸೂಕ್ತವಾದ ಸ್ಥಳ ಎಂದು ಬಲು ಜನರ ಅನುಭವ ಹೇಳುತ್ತದೆ. ಮನೆಯ,ಹಿತ್ತಿಲಿಗೆ ಲಗ್ಗೆ ಇಡುವ ಹಕ್ಕಿಗಳನ್ನು ನೀವು ಗಮನಿಸಿದರೆ,ಅವುಗಳ ವಿಭಿನ್ನತೆ ನಿಮ್ಮ ಕುತೂಹಲವನ್ನು ಖಂಡಿತಾ ಹೆಚ್ಚಿಸುವುದು . ಇಷ್ಟು ದಿನ ಎಲ್ಲಿದ್ದವವು ಎನ್ನುವುದೂ ಮತ್ತೊಂದು,ನಾ ನೋಡಿರಲೇ ಇಲ್ಲ ಎನ್ನುವ  ಸಾಮಾನ್ಯ ಉದ್ಗಾರವೂ ಬರುವುದು  .

ಹಿತ್ತಿಲಲ್ಲಿ ಕಂಡುಬರುವ ಸಾಮಾನ್ಯ ಪಕ್ಷಿಗಳ ಪಟ್ಟಿ ಇಲ್ಲಿದೆ.
Jungle Myna, House Sparrow, Jungle Crow, Purple Rumped Sunbird, Pied Bushchat, White Breasted Kingfisher, Asian Koel, Common Tailorbird, Scaly Breasted Munia, Oriental Magpie Robin, White Browed Fantail Flycatcher, Red Vented Bulbul, Rose ringed parakeet, Coppersmith Barbet, Brahminy Starling, Southern Coucal, Laughing Dove, Black Drongo and Large Grey Babbler.

ಇವುಗಳನ್ನು ನನ್ನ ಆಂಟಿಯವರು ಕೇವಲ ಒಂದು ವಾರದಲ್ಲಿ ತಮ್ಮ ಮನೆಯ ಹಿತ್ತಲಿನಲ್ಲಿ ನೋಡಿರುವುದು. ಅವರ ಮನೆಯ ಸುತ್ತಲೂ ಸುಮಾರು 35ರಿಂದ 40ಪ್ರಭೇದದ ಹಕ್ಕಿಗಳಿವೆ.

ನಮ್ಮ common man ಜನಕ ಆರ್.ಕೆ. ಲಕ್ಷ್ಮಣ್  ಕಾಗೆಗಳನ್ನು ನೋಡುತ್ತಾ ಅವುಗಳ ಚಿತ್ರಣ ಮಾಡುತ್ತಿದ್ದರು.
ಒಮ್ಮೆ ಅವರು ಹೇಳಿದ್ದು
" ಸಾಮಾನ್ಯ ಕಾಗೆಯು ಒಂದು ಅಸಮಾನ್ಯ ಪಕ್ಷಿ " . ಕಾಗೆಗಳನ್ನು ನೋಡಿದರೆ ಎಲ್ಲವೂ ಒಂದೇ ಎನ್ನುವಹಾಗೆ ಕಾಣುತ್ತವೆ, ಗಮನಿಸಿದರೆ ಕೆಲವು ಕಾಗೆಗಳು ಪೂರ್ಣ ಕಪ್ಪು ಕೆಲವು ಕಾಗೆಗಳ ಕತ್ತಿನ ಭಾಗದಲ್ಲಿ ಕಂದು ಬಣ್ಣ ಇರುತ್ತದೆ. ಮೊದಲನೆಯದು ಕಾಮನ್ ಕ್ರೋ ಇನ್ನೊಂದು ಜಂಗಲ್ ಕ್ರೋ,

ಹಕ್ಕಿಗಳ ಬಗ್ಗೆ ಇನ್ನೂ ಹೆಚ್ಚಿನ ವಿಷಯವನ್ನು ಮುಂದಿನ ಭಾಗದಲ್ಲಿ ತಿಳಿಸುವೆ ,ಈಗ ಹೊರಗೆ ಹೋಗಿ  ಕೆಳಗಿನ ಪಟ್ಟಿಯಲ್ಲಿರುವ ಎಷ್ಟು ಪಕ್ಷಿಗಳು ನಿಮ್ಮ ಸುತ್ತಲೂ ಇವೆ ಎಂದು ನೋಡಿ ಹಾಗೂ ನಮಗೆ ಬರೆದು ತಿಳಿಸಿ. ನಮ್ಮ ಇ ವಿವಿಳಾಸ

Ashy Prinia

Asian Koel

Black Kite

Black Drongo

Brahminy Kite

Cattle Egret

Common Myna

Common Tailorbird

Coppersmith Barbet

Coucal

House Crow

House Sparrow

Jungle Myna

Little Cormorant

Little Egret

Magpie Robin

Pond Heron

Purple Rumped Sunbird

Purple Sunbird

Red Vented Bulbul

Rock Pigeon

Rose Ringed Parakeet

Spotted Dove

White Breasted Kingfisher

ಬುಧವಾರ, ಜೂನ್ 13, 2018

ಜೀವನ

ಜೀವನ
ಅಲ್ಲ ಬನ
ಇದು ಸಾಲು ಕವನ,
ಅನುಭವಗಳ ಹೂರಣ
ಗೆಳೆಯರ ತೋರಣ
ಯಾರಿಲ್ಲೆ ಅದು ಭಣ ಭಣ
ಜೀವನಕೆ ಇತರೆ ಗೌಣ
ದುಃಖಕ್ಯಾರು ಅಲ್ಲ ಕಾರಣ
ಗೆಲುವು ಎಲ್ಲರ ಭೂಷಣ

ಬುಧವಾರ, ಜೂನ್ 6, 2018

ಅದೊಂದು

ಹೊರಗೆ ಸೋನೆ ಮಳೆ
ಒಳಗೆ ನೆನಪ ಧಗೆ
ಅದೊಂದಿರದಿದ್ದರೆ...
ಕನವರಿಕೆ
ಮುಗಿಯದ ಹಾಡು
ಬದುಕಿಗಂತಿಕೊಳ್ಳುವ ಪರಿ
ಪ್ರೀತಿ ಸುಧೆ
ಬದುಕಾರಿಗೂ ಕಾಯದು
ಉದುರಿದ ಸಮಯ
ಸವೆದಾಸಂಬಂಧ
ಆಯಲಾಗದು
ನದಿಯ ಹರಿವು ಸಾಗರದೆಡೆಗೆ
ಲೀನ ವಾಗುಳಿಯುವುದು
ನೆನಪು
ಸಿಹಿ ಕಹಿ ಖಾರಗಳ ಮೀರಿ
ನೆನಪಿನ ಲವಣ
ಮತ್ತೆ ಮೋಡಗಳು...

ಶನಿವಾರ, ಜೂನ್ 2, 2018

ಕಂದ

ಹೆಸರಿಡದ ನನ್ನ ಕಂದ
ಹವಾನಿಯಂತ್ರಿತ ಆಸ್ಪತ್ರೆಯಲ್ಲಿ
ಬೆಚ್ಚಗೆ ಮಲಗಿದೆ
ನೋಡಿ

ನಾಲ್ಕು ದಶಕಗಳಲ್ಲಿ ನಾನರಿಯಾದ
ಕೊಳವೆಗಳನ್ನು
ಮೂಗು ಬಾಯಿ ಹೊಟ್ಟೆಗೆ
ತೂರಿಸಿಕೊಂಡು
ಆಟವಾಡುತ್ತಿದೆ
ನೋಡಿ

ತನ್ನೆದೆಗೂಡಿನ
ಚಿತ್ತಾರಗಳೊಂದಿಗೆ
ಮೆರೆಯುತ್ತಿದೆ
ನೋಡಿ

ಬೆನ್ನ ಶೂಲಕೆ
ಬೇನೆ ತೋರದೆ
ಬೋರಲು ಮಲಗಿಹಳು
ನೋಡಿ

ಮಾತನ್ನೇ ಕಲಿಯದೆ
ತಾಳ್ಮೆ ಪಾಠವನೆಲ್ಲರಿಗೂ
ಕಳಿಸುತಿಹಳು
ನೋಡಿ

ಯಾವ ಸೇನಾ ಶಿಬಿರವ
ಸೇರದೆ
ಹೊರಡುತಿಹ
ಈ ಕಿನ್ನರಿಯ
ನೋಡಿ

ಮಗುವೇ
ನಿನ್ನ ಬದುಕುವ
ಪರಮೇಚ್ಛೆಯ ಮುಂದೆ
ನಮದೇನು ಇಲ್ಲ
ಎಲ್ಲ ನೀ ಬದುಕಿದಂತೆ
ನೀ ಮಾಡಿದಂತೆ

ಪ್ರಯತ್ನಗಳ
ಸಾಕಾರಗೊಳಿಸು
ಬದುಕು ಬಾ
ನಗುತ ಬಾ
ನಿನ್ನ ಗೆಲುವೇ
ಎಲ್ಲರ ಗೆಲುವು
ದೀಪಕ್

ಶನಿವಾರ, ಮೇ 26, 2018

ನನ್ನ ಕೂಸಿಗೆ


ನನ್ನ ಕೂಸಿಗೆ ಬದುಕಕೊಡ,
ಉಸಿರಿಗೆ ಸ್ವಲ್ಪ ಜಾಗಕೊಡ,
ಬದುಕಲು ದಾರಿನೀಡ,
ಕಾಯ್ದಿಹೆವು ನಾವೆಲ್ಲನೋಡ,
ಬಂದೆನ್ನ ತೋಳಿನಾಗೆ ನೆಮ್ಮದಿಕೊಡ,
ಅಳುವ ಆನಂದಮಾಡ ,
ಬಾರೆ ನನ್ನವ್ವ
ನಾ ಕಲಿವೆ ನಿ ಹೇಳೋ ಪಾಠ
ನಿರೀಕ್ಷೆಯಲ್ಲಿ
ನಿನ್ನಪ್ಪ
***
ಬಂದೀ ಬದುಕ ನೋಡ
ಅದಾವ ರಂಗ್ ರಂಗ್ ಮೋಡ
ಧರಿಸಲು ದಿರಿಸು ಹಲವು ಮುಖವಾಡ
ಬದುಕಲು ಪ್ರೀತಿ ಹೊನ್ನಬಾಳ
ಅರಿಯಲು ಜಗದ
ಕೋಟಿ ಕೋಟಿ ಜೀವಾಳ
ಬಂದು ನೀ ಬದುಕ ನೋಡ

ನಿನ್ನಪ್ಪ

ಸೋಮವಾರ, ಏಪ್ರಿಲ್ 30, 2018

ತಾಯಿ


ರಾತ್ರಿ ಇದು ರುದ್ರ ರಮಣೀ
ಮನ ಹೊರಗೆ ಆರ್ಭಟ

ನೋವಿನ ಚೀತ್ಕಾರ
ಪಕಪಕಬೆಳಕು
ಕಣ್ಣೀರು
ಕಾರಣ
ಆಕೆ ಪ್ರಕೃತಿ
ಬಸಿರಾದ ಭಾವಗಳ
ನಿಡು ಸುಯ್ಯುತ
ಹೊರ ಲಾಗದೆ
ಹೋರುತಿಹಳು
ಕಂದಮ್ಮಗಳ
ಪ್ರಸವ ಕಾಲದ
ನಾಳಿನ ಕೂಸಿಗೆ
ಇಂದಿನ ಕನಸುಗಳ
ತರಿದುಹರಿದು
ಬಡಿಸಿ
ಕಣ್ಣೀರ ಒರೆಸುತ್ತಾ
ತೃಪ್ತಿ ಭಾವ ಹೊಂದುವಳು
ಇವಳು ಮಾತೆ
ಒಣಗಿದೆಲೆ ಕಸಗಳನ್ನು
ಮಡಿಲಲಿರಿಸಿ,
ಬೀಜಗಳ ಮೊಳೆಸುವ
ಕಾಯಕ ಹಿಡಿದವಳು
ಬೇಸರಿಸದೆ
ಎಲ್ಲವನು
ಚಿಗುರಿಸುವಳು
ತಾ ಮಾತ್ರ ಮೌನದ ಸೆರಗ
ಹಿಂದೆ ನಿಂತು ಬಿಕ್ಕಿಸುವಳು

ಶನಿವಾರ, ಏಪ್ರಿಲ್ 28, 2018

ಕರುಣೆ

ಸ್ವಲ್ಪ ತಮಿಳು ಮಿಶ್ರಿತ ಕನ್ನಡ ಮಾತಾಡು ತ್ತಿದ್ದಳು ಆಕೆ. ಸೂಜಿ ಮದ್ದು ನೀಡಿ ಅಲ್ಲೇ ಬಿದ್ದಿದ್ದ ಸ್ಯಾಂಪಲ್ ಆಯ್ದು ಅವಳಿಗೆ ನೀಡಿದೆ, ಎಷ್ಟು ಸಾರ್ ಎಂದವಳಿಗೆ ೨೪೦ ಎಂದು ಹೇಳಿ ಕ್ಲಿನಿಕಲ್ ರೆಕಾರ್ಡ್ಸ್ upgradation ನಲ್ಲಿ ಮಗ್ನ ನಾದೆ. ಮಧ್ಯೆ ಎರಡುಮೂರು ಬಾರಿ ಏನೋ ಹೇಳಿದಂತಾಯಿತು, ಏನಮ್ಮ ಎಂದಿದ್ದಕ್ಕೆ ಉತ್ತರವಿಲ್ಲ. ನೋಡಿದೆ ತಲೆತಗ್ಗಿಸಿ ಹಣ ಎಣಿಸುತ್ತಿದ್ದಳು. ಮತ್ತೆ ಕಂಪ್ಯೂಟರ್ ನಲ್ಲಿ ಮಗ್ನ ನಾದೆ. ೧೦ರೂಪಾಯಿಯ ೨೪ ನೋಟುಗಳು! ನೀಡಿ ಆಕೆ ಹೊರ ಹೋದರೂ ನನ್ನ ತಲೆಯೊಳಗೆ ಹುಳ ಕೊರೆಯಾಲಾರಂಭಿಸಿತು...
ಸ್ವಲ್ಪ  ಕರುಣೆ ಬೇಡವೇ ಎಂಬ ಜಿಜ್ಞಾಸೆ.
*
ಕರುಣೆ ಯಾರ ಮೇಲೆ?  ಆಕೆಯಮೇಲೋ ಹೀಗೆ ಯೋಚಿಸಿ ಫಡ್ಚಾ ಆಗುತ್ತಿರುವ ನನ್ನಮೇಲೋ !
-ದೀಪಕ್

ಗುರುವಾರ, ಏಪ್ರಿಲ್ 12, 2018

ದೇವನ ಹೆಂಡದಿಂದ

ಇರಿಬೆಗೆ ದೇವ ರೆಕ್ಕೆ ದಯಪಾಲಿಸಿದ ನೆಂದರೆ ಆಯಿತು ಅದರ ಸಾವು ಸಾನಿಯಾ ಬಂದಿತೆಂದು ಅರ್ಥ.
**
ಸೆಟ್ಟೆರಲ್ಲಿ ಎಂಥ ಕಡುಬದವನಾಗ ಲಿ ಲಿಂಬೆ ಹಣ್ಣಿನ ಶ್ಟಾದರು ಚಿನ್ನಕ್ಕೆ ಕೊರತೆ ಇಲ್ಲ
**

ಬಡತನದಲ್ಲಿ ಹುಟ್ಟಿ, ದಟ್ಟ ದಾರಿದ್ರ್ಯ ದಲ್ಲಿ  ಬಾಳಿ ಸಾಯಲು ಅನುಕೂಲವಿ ಲ್ಲದೆ ಇನ್ನೂ ಬದುಕಿದ್ದ ನಾಗರತ್ನಮ್ಮ ಸಹನಾ ಶಕ್ತಿಯಂತೂ ಅದ್ಭುತ
**
7 ರಾತ್ರಿ ಯಾವಾಗಲೋ ಬರಬಹುದಾದ a ನಿದ್ರೆಗಾಗಿ ಅದೆಷ್ಟು ಕಾಯಬೇಕು ಹಗಲೆಲ್ಲವು
**

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.