ಸೋಮವಾರ, ಫೆಬ್ರವರಿ 5, 2018

ಗದಾಯುದ್ಧ


ರನ್ನನ ಗದಾಯುದ್ಧ ವನ್ನು ಓದಲಾರಂಭಿಸಿದಾಗ ಗಿರಗಿಟ್ಟಲೆ ಏರಿದಂತಾಯಿತು.

ಸರಸ್ವತಿಯಾಹ್ವಾನ ಸ್ತುತಿ ಮನಸೂರೆಗೊಳ್ಳುತ್ತದೆ.

ಪದಿನಾರಲ್ಲ ಅಲಂಕ್ರಿಯಾ ರಚನೆ
ಮೂವತ್ತಾರು ನೇರ್ಪಟ್ಟವು,
ಒಂದಿದ ಶೃಂಗಾರಂ ಅದು ಅಲ್ಲಮ್ ಒಂದೆ
ರಸಮ್ ಒಂಭತ್ತು ಎಯ್ದೆ ಒಡಂಭಟ್ಟವು ಎಂದು ಸರಸ್ವತಿಯಾಹ್ವಾನ ರೋಮಾಂಚಕಾರಿ.

ಬೆಳಗುವ,ಸೊಡರೊಳ್ ಸೊಡರಂ ಬೆಳಗಿ
ಪಲರ್ ಕೊಂಡು ಪೋಗೆಯಂ ಪಜ್ಜಳಿಸುವವೊಲ್ (೧.೩೦)
ಈ ಸಾಲುಗಳು ದೇವಿಸ್ತುತಿಯ
ಪೂರ್ಣಮದಾ ಪೂರ್ಣಮಿದಂ,,,
ನೆನೆಸುತ್ತದೆ

೧.೪೪
ರತ್ನ ಪರೀಕ್ಷಕನ್
ಆಂ ಕೃತಿರತ್ನ ಪರೀಕ್ಷಕನೆನ್.ಎಂದು
ಫಣಿ ಪತಿಯಫಣಾ ರತ್ನಮುಮಂ
ಪೇಳ್ ಪರೀಕ್ಷಕಂಗೆ ಎಂಟೆರ್ದೆಯೇ?
ಇದು ರನ್ನನ ಉದ್ಧಟತನ ತೋರಿಸುತ್ತದಾದರೂ ರನ್ನ ಅಂತಹ ಉದ್ಧಟತನ ತೋರಲು ಅರ್ಹನೇ

೯ ,೧೦ ನೇ ಶತಮಾನದಲಿ ರಚಿತವಾದ ಈ ಕಾವ್ಯವನ್ನಭ್ಯಸಿಸಲು ೨೧ ಶತಮಾನದಲೂ ಅಭ್ಯಸಿಸಿ ಪೊಗಳಲು ನಾಮುಂದು ತಾಮುಂದೆಂದೆನುವಾಗ ರನ್ನ ನ ಈ ಸಾಲುಗಳು ಅವನಿಗೆ  ಫಣಾರತ್ನದಂತೆ ಸೈ.

೧.೬೬
ನೀನ್ ಅಗ್ನಿ ಪುತ್ರಿಯಯ್
ಪವಮಾನತನೂಭವನೆನ್ ಆನ್
ಅಣಂ ಕೂಡೆ
ಸುಸಂಧಾನಮ್ ಅರಿನೃಪನೊಳ್ ಎಂತು
*ಅನಿಲಾನಿಲ ಸಂಯೋಗಂ
ಉರಿಪದಿರ್ಕುಮೆ ಪಗೆಯಂ!*
ನೀನು ಅಗ್ನಿಪುತ್ರಿ (ದ್ರೌಪದಿ ದ್ರುಪದ ಮಾಡಿದ ಯಜ್ಞ ದಲ್ಲಿ ಜನಿಸಿದವಳು)ನಾನು ವಾಯುಸುತ, ಗಾಳಿ ಬೆಂಕಿ ಸೇರಿದರೆ ಹಗೆಯು ಉರಿದು ಹೋಗುವುದು ಎಂದು
ದ್ರೌಪದಿ ಯನ್ನು ಸಮಾಧಾನಿಸುವ ಭೀಮ
ಇದನ್ನೋದುವಾಗ ಇಂದಿನ ಕವಿವಾಣಿ ದೀಪವು ನಿನ್ನದೆ ಗಾಳಿಯು ನಿನ್ನದೆ ನೆನಪಾಯಿತು. 
ಅಂದಿನ ಕವನದ ವೀರ್ಯತೆ ಹೇಗಿದೆ , ಚಣಕಾಲ ಇಂದಿನ ಕವನ ಒಂದು ಕೋರಿಕೆಯ ಮಟ್ಟಕ್ಕಿದೆಯೇನೋ ಎನಿಸುತ್ತದೆ . (ಎರಡೂ ಬೇರೆಬೇರೆ ಅದಿರಲಿ)

*ಒಡಲ್ ಒಡಮೆ ಎಂಬಿವರೆಡುಂ ಕೆಡಲಿರ್ಪುವು ಕೆಡದ ಕಸವರಂ ಜಸಮ್*

ಎಂಬುದು ಸೂಕ್ಷ್ಮವಾಗಿ  ಹಣ ಅಂತಸ್ತು ಎರಡನ್ನೂ  ತಿರಸ್ಕರಿಸಿ ಕೀರ್ತಿ ಉನ್ನತಿ ಹೊಂದಬೇಕೆಂಬುದು ರನ್ನನ ಆಶಯವೇನೋ ಎನಿಸುತ್ತದೆ, ತನ್ನಾಶ್ರಯದಾತನನ್ನು ವಿಜೃಂಭಿಸುವುದು ಆ ಚಿಂತನೆಯಿಂದ ನಮ್ಮನ್ನು ದೂರ ತಳ್ಳುತ್ತದೆ.

ತನ್ನ ತಂದೆಯಪೇಕ್ಷೆಯಂತೆ ಸುಯೋಧನ  ಶರಶಯ್ಯೆಯಲಿರುವ ಅಜ್ಜಭೀಷ್ಮನ ಕಾಣ ಹೋಗುವುದನ್ನು ಕವಿ ವರ್ಣಿಸಿರುವ ಪರಿ ಅಮೋಘವಾಗಿದೆ.

೪.೧೧
,,,ಅದನೆ ಕೈತವದಿಂದೆ ಐವರ ಕೈಯೊಳ್
ಎಳೆದುಕೊಂಡ ಈ ಕುರುರಾಜಂ
ಮತ್ತಂ ಅವರ್ಗೆ ಪುದುವಿತ್ತಪನೇ?
(ವ್ಯವಹಾರಿಕ ಬುದ್ಧಿಯ ತೋರುವುದು)

ಅಂಧನೃಪ ಸುತನೋಜಾತ್ಸಂಧನೋ ಮೆಟ್ಟದೇ ಅಗಲ್ತು ಪೋಗು ೪.೧೬
ಎನ್ನುವ ಸಾಲು ಸಾವು ಎಲ್ಲವನ್ನೂ ಸಮನಾಗಿಸುವುದನು ಪ್ರತಿಧ್ವನಿಸುವಂತಿದೆ.

೪.೧೯ರಲ್ಲಿ
ತನುಜಾನುಜರ ವಿಯೋಗದ ಮನಃಕ್ಷತಂ
ನೋಯಿಸಲ್ಕೆ ನೆರೆಯವು
ಸಮರಾವನಿಯೊಳ್ ಉಡಿದಿರ್ದಕೈದುಗಳ್
ಇನುಸಂ ನೋಯಿಕುಮೆ
*ವಜ್ರಮನನಪ್ಪ ಎನ್ನಂ*

ಎಂಬುದು ನೋವು ,ಹತಾಷೆ, ಛಲ, ಹಠಗಳನ್ನು ಸಾರುತ್ತವೆ

೪.೨೫
ಭೀಭತ್ಸ ರಸ ವರ್ಣಿಸುವಾಗಲೂ *ನಸು ಮುರಿದ ಕೊರಲ್* ಎಂಬವ್ಯಾಖ್ಯಾನ ಕವಿಯ ಸೂಕ್ಷ್ಮತೆಗೆ ಕನ್ನಡಿ

೪.೩೬
ತುಂಗರಿಪುದಂತಿ ದಂತಾಲಿಂಗನಮ್
ದಿವಿಜ ಸುಂದರೀ ತುಂಗ ಕುಚಾಲಿಂಗನಮುಮ್
ಒಡನೆ ವೀರಭಟಂಗಾದುದು
ರಣದೊಳ್ ಅಣ್ಮಿದಂಗೆ ಅರಿದುಂಟೇ?!

ಶೌರ್ಯ ವೀರ್ಯಗಳನು ಸಾರಿಸಾರಿ ಹೇಳವನೀಕವಿ

೪.೩೮
"ಇನಿಸಿನಿಸು ತಿಂಬೆಮ್" ಎನ್ನುವುದು ಸೀದಶೆಟ್ಟಿ ಬುದ್ಧಿಯನ್ನು ತೋರಿಸುತ್ತದೆ

ತುಪ್ಪದ ಜಾಡಿಯನು ಮಧ್ಯವಿಟ್ಟು ತುತ್ತನದಕೆ ತೋರುತ್ತ ಉಣ್ಣುತ್ತಿದ್ದರು ಶೆಟ್ಟಿಗಳು,
ಒಮ್ಮೆ ಶೆಟ್ಟಿ ಪರ ಊರಿಗೆ ಹೋಗಬೇಕಿತ್ತು  ಕಪಾಟಿನಲಿ ತುಪ್ಪದಜಾಡಿಯನು ಭದ್ರವಾಗಿರಿಸಿಹೋದ, ಮನೆಯಲಿದ್ದ ಶೆಟ್ಟಿ ಮಗನಿಗೆ ಊಟದ ಸಮಯವಾಯಿತು
ಉಣ್ಣುವ ಸಮಯವಾಯಿತು
ತುಪ್ಪವಿಲ್ಲದೇ  ಹೇಗೆ ಊಟಮಾಡುವುದು ?ತಟ್ಟೆಯನ್ನು ಕಪಾಟಿನ ಬಳಿಗೆ ತೆಗೆದು ಕೊಂಡು ಹೋಗಿ  ಕಪಾಟಿಗೆತುತ್ತ ತೋರುತ್ತ ಉಣಲಾರಂಭಿಸಿದ ಶೆಟ್ಟಿಯ ಮಗ
ಆಸಮಯಕ್ಕೆ ಪರ ಊರಿನಿಂದ ಹಿಂತಿರುಗಿದ ಶೆಟ್ಟಿ  "ಒಂದು ಹೊತ್ತು ತುಪ್ಪವಿಲ್ಲದೇ ಊಟಮಾಡಲಾಗುವುದಿಲ್ಲವೆ ನಿನಗೆ ಎಂದು ಮಗಾನನ್ನು ಬಡಿದ" ಈ ಹಾಸ್ಯ ಪ್ರಸಂಗವನ್ನು ನೆನಪಿಸಿತು.

ಅವಿರಳ ಶವಕುಲಮಿರೆ ಎಂದಾರಂಭವಾಗುವ (೪.೩೯) ಅವಿರಳ ಪದಪ್ರಯೋಗ ಸೀದಾ ನೇ,ರ, ಪ್ರಭಾಕರ್ (ಕ್ಷಮೆ ಇರಲಿ ಗೆಳೆಯ) ಅವರನ್ನು ಅನೇರ ಮಾಡಬಹುದೆಂದು  ಮುಗುಳ್ನಗೆ ತರಿಸಿತು.

೪.೪೨ನವ ಪೈಶಾಚೀ ಭಾಷೆಯಂ ಕುರುಪುವೇಳ್ದು
ತಾಮ್ ಅಡ್ಡ ಗವಿತೆಯಂ ಮಾಡಿ
ಮಹಾವ್ವಸಾಯಂ ಗೆಯ್ವ
ಮರುಳ್ಗವಿಗಳ್

ಎಲ್ಲಾಕಾಲಕ್ಕೂ ಸತ್ಯವಿರಬಹುದು.ಈಗ ಬಂಡಾಯದ ಹೆಸರಲಿ ವ್ಯಾಕರಣ ಪ್ರಾಸ ಛಂದಸ್ಸು  ಗಣಗಳನ್ನು ಲೆಕ್ಕ ವಿರಿಸದೆ ಹೇರಳ ಸಾಹಿತ್ಯ ನಮಗೆ ಲಭ್ಯವಿದೆ ಆದರೆ ಗದಾಯುದ್ಧಕ್ಕೆದುರಾಗಿ ನಿಲ್ಲುವ ರಚನೆಗಳು ತುಂಬಾ ಕಡಿಮೆ ಎನಿಸುವುದು ನನಗೆ, ಬಲ್ಲವರು ಬೆಳಕ ಚೆಲ್ಲಬೇಕು.

೫.೫
ನಿಜಜೀವಂ ಪರಲೋಕದೊಳ್
ನಿಜಮಹಾಮಾಂಸಂಪಿಶಾಚಸ್ಯದೊಳ್
ನಿಜರಕ್ತಂ ರಿಪುಕುಕ್ಷಿಯೊಳ್
ನಿಜಶಿರ ರಕ್ತಂಚರೀಹಸ್ತದೊಳ್
ನಿಜಕಾಯಂ ಕುರುಭೂಮಿಯೊಳ್ ನೆಲಸೆ
ಗಾಂಧಾರೀಜ ದುರ್ಯೋಧನಾನುಜ ದುಶ್ಯಾಸನ ,
ಭೀಮ಼ಭೀಮಗದೆಯಿಂ ಪಂಚತ್ವಂ ಪೊರ್ದಿದೈ!
ಹೀಗೆ ದುಶ್ಯಾಸನ ಪಂಚಭೂತಗಳಲಿ ಲೀನನಾದ ಎಂದಿರುವುದು ಕವಿಯ ಕೌಶಲ್ಯ
ವನೆತ್ತಿ ತೋರುವುದು.
ಅಂಗಾಧಿಪತಿಯನೋಡಿ ಶೋಕಿಸುವ ಸಾಲುಗಳು ಅಪೂರ್ವವಾಗಿ ಮೂಡಿವೆ,ಗೆಳೆತನಕ್ಕೆ ತುಂಬಾ ಮಹತ್ವವನೀಯುತ್ತಿರುವುದು ಎದ್ದು ಕಾಣುವುದು.

೫.೧೧
ನಾನುನೀನುದುಶ್ಯಾಸನ ನಾವುಮೂವರು muskeeters
ಆತನುಂ(ದುಶ್ಯಾಸನ )ಕಳೆದ ಬಳಿಕ ನಾನು ನೀನು ಈಗಳ್ ನೀನು ಅಗಲ್ದುಎತ್ತಹೋದೆ ಅಂಗಾಧಿಪತಿ
ನೀನಿರದೆ ರಾಜ್ಯವಾಳುವೆನೇ
ನೀನಿರದೆ ಶತ್ರುಗಳೊಂದಿಗೆಸಂಧಾನ ಮಾಡುವೆನೆ (ಇದನ್ನೆರಡು ವಿಧದಲ್ಲಿ ಅರ್ಥೈಸ ಬಹುದು, ಕರ್ಣನ ಮಾತಿಗೆ ಬೆಲೆನೀಡಿ ಹಿಂದೆ ದುರ್ಯೋಧನ ಕೆಲ ಸಂಧಾನಮಾಡಿರಬಹುದು, ತಿಳಿದವರು ಬೆಳಗಿಸಿ) ಈಗ ನಾನು ಸಂಧಾನ ಮಾಡಿಕೊಳ್ಳುವುದಿಲ್ಲ
ನನ್ನಮಗನಸಾವಿಗೆ(ಲಕ್ಷ್ಮಣ) ನಿನು ಸಂತೈಸುವೆ. ನಿನ್ನ ಮಗನ ಸಾವಿಗೆ ನಾನಿನ್ನ   ಸಂತೈಸುವೆ ಎಂದು ಬಂದೆ ಕರ್ಣ ಆದರೆ ನೀನೆ ಇರದೆ ನನ್ನನ್ನು ಸಂತೈಸುವವರು ಯಾರು?

೫.೧೦. ಯಿಂದ೫.೩೭ ರತನಕ
ಸುಮಾರು ೩೫ಪದ್ಯಗಳಲ್ಲಿ ಸುಯೋಧನ ಕರ್ಣನನ್ನು ನೆನೆಯುವುದನ್ನು ಹೃದಯಸ್ಪರ್ಶಿಯಾಗಿ ವಿವರಿಸಿದ್ದಾನೆ ಕವಿ.
ನಂತರ ಭೀಷ್ಮ ರನ್ನು ಕಂಡು ನಿಮಗೆ ನಮಸ್ಕರಿಸಿ ಹೋಗಲು ಬಂದೆ ಸಂಧಾನಕ್ಕಲ್ಲ

*ನೆಲಕೆ ಇರಿವೇಂ ಬಗೆದಿರೆ
ಚಲಕೆ ಇರಿವೇಂ ಪಾಂಡುಸುತರೋಳ್*
ಇದು ಅಪ್ಪಟ ಶೌರ್ಯ  ಸ್ವಾಭಿಮಾನದಮಾತು.

[06/02, 3:38 PM] ‪+91 99641 80001‬: ತುಂಬಾ ಚೆನ್ನಾಗಿದೆ ವಿಮರ್ಶೆ 🙏🏻🙏🏻
[06/02, 7:10 PM] DrDeepakB: ಆರವಮಮ್
ನಿರ್ಜಿತ ಕಂಠೀರವ ರವಮಂ
ನಿರಸ್ತ ಘನರವಮಂ
ಕೋಪಾರುಣನೇತ್ರಂ ಕೇಳ್ದು
ಆ ನೀರೊಳಗಿರ್ದುಂ
ಬೆವರ್ತನುರಗ ಪತಾಕಂ!೭.೨೨
ಎಂಥಾ ಬಣ್ಣನೆ ಆಹಾ

ದೆಸೆಯಿಂ ಕಾಲಾಗ್ನಿ ರುದ್ರಮ್ ಪೊರಮಡುವವೊಲ್
ಅಂತು ಆ ಸರೋವರ ಮಧ್ಯದಿಂ
ಸಾಹಸ ಗರ್ವಾಲಂಕೃತಂ
ತೊಟ್ಟನೆ ಕೊಳೆ ಪೊರಮಟ್ಟು
ಎಲ್ಲಿದಂ ಭೀಮನೆಂದು
ಎಣ್ದೆಯಂ ನೋಡುತ್ತೆ
ಮತ್ತದ್ಭುತ ನಟ ನೀಟಲಾಲೋಲ ಕೀಲಾಕ್ಷಿವೊಲ್ ದಳ್ಳಿಸೆ
ಕೋಪಾರಕ್ತ ನೇತ್ರಂ
*ನಿಜ ಭುಜಗೆದೆಯಂ ತೂಗಿದಂ* ಧಾರ್ತರಾಷ್ಟ್ರಂ!
ಇನತನಯನ ನಣ್ಪಿಂಗೆ
ಅರ್ಜುನನಂ  ಮುಂ ಕೊಲ್ವೆನ್
ಎನ್ನ ತಮ್ಮನ ನಣ್ಪಿಂಗೆ
ಅನಿಲಜನಂ ಕೊಲ್ವೆಂ ಕಮಲ ನಾಭ...
೭.೪೭
ಇವರ್ ಎನ್ನನುವರಮಂ ನೋಡುವುದಲ್ಲದೆ
ಬೇರೆ ಪೆರವು ಮಾತಿಂಗೆಡೆಯಿಲ್ಲ

ಖಳ ದುಶ್ಯಾಸನ *ಲೋಹಿತ* ಜಳಮಂ ಕುಡಿದು
ಎನಿಸುಂಅಳ್ಕಿಸಲಾರದೆ
ಕಣ್ಣೊಳೆ ಕಾರುವಂತೆ
ಕೌರವ ಕುಳಾಂತಕಂ
ತರಳಸತಾಮ್ರ ಲೋಚನನಾದಂ!
೮.೫ದೃಷ್ಟಿ ಯುದ್ಧದಲ್ಲಿ ದುಶ್ಯಾಸನನನ್ನು ಕೊಂದು ಕುಡಿದರಕ್ತ ಜೀರ್ಣವಾಗದೆಕಣ್ಣಿಂದ ಹೊರ ಹರಿಯುತ್ತಿರುವುದೇನೋ ಎಂಬಂತೆ ಕೌರವ ಕುಲನಾಶಕನ ಕಣ್ಣುಗಳು ಕೆಂಪಾಗಿದ್ದವು😍
ಕುರು ರಾಜಂ ವಿದ್ಯಾಧರ ಕರಣದೆ
ನೆಗೆದಂಬರಕ್ಕೆ
ಗದೆಯಂ ಕ್ರಮದಿಂ ತಿರಿಪೆ
ಧರಾಚಕ್ರಂ ತಿರಿವ ತೆರದೆ
ತಿರಿದತ್ತೆನುಸುಂ!8.24

ಕಲಿ ಪಂದೆ ಎಂದು ಬಗೆಯದೆ
ಕುಲಜಂ ಕುಲಹೀನನೆಂದು ಬಗೆಯದೆ
ತರುಣಂ ಸಲೆ ವೃದ್ಧನೆಂದು ಬಗೆಯದೆ ನೆಲಸುವೆ!
ನಿನ್ನಿಂ ನಿಕೃಷ್ಟರೆಂಬರುಮ್ಒಳರೇ?9.6

ಇರಿಯಿಸುವೆ ತಂದೆ ಮಕ್ಕಳನ್
ಇರಿಯಿಸುವಯ್ ಸೋದರರ್ಕಳಂ ತಮ್ಮೊಳ್
ತಳ್ತೆರಿಯಿಸುವಯ್ ಗುರು ಶಿಷ್ಯರನ್
ಅರಗುಲಿ,ನಿನ್ನಿಂ ನಿಕೃಷ್ಟರಾದರುಂ ಒಳರೇ?

ಕುರುರಾಜಂ ತೊಡೆಬೇನೆಗೆ ನರಳ್ವನೆ?
ಕುರುಪಾದ ತೊಡೆಯಬೇನೆಗೆ
ಗಂಡರ್ ನರಳಲ್ ತಕ್ಕುದೆ?ನರಳಂ
ವಿರೋಧಿಯಿಂದಾದ ಮಾನಹಾನಿಗೆ ನೊಂದಂ!9.19

ಕಾಮೆಂಟ್‌ಗಳಿಲ್ಲ:

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.